ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಟಿಬಿ ಇದೆ ಎಂದಾಗ ಸಾವು ಸಮೀಪಿಸಿತು ಎನ್ನಿಸಿತ್ತು!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಅಮೇರಿಕಾ ದಲ್ಲಿ ಇದ್ದಂತೆ ಜಗಮಗಿಸುವ ಕಟ್ಟಡ , ಜೀವನ ಶೈಲಿ , ನೀವು ಯುರೋಪಿನಲ್ಲಿ ಹುಡುಕಿದರೆ ಸಿಗಲಾರದು. ಮುಕ್ಕಾಲು ಪಾಲು ಯೂರೋಪು ಪೂರ ಹೀಗೆ, ಹಳತನ್ನು ಉಳಿಸಿಕೊಂಡು , ಹೊಸ ಕಟ್ಟಡಗಳು ಕೂಡ ಕಟ್ಟಿದ್ದಾರೆ. ಇಲ್ಲಿ ಜೀವನ ತೀರಾ ಲೇ ಬ್ಯಾಕ್ ತರದ್ದು, ಅಮೇರಿಕಾ ಅಥವಾ , ಇಂಗ್ಲೆಂಡ್ ತರದ ಒತ್ತಡ ಇಲ್ಲಿ ಇಲ್ಲ . ಮನೆ ಸುತ್ತ ಮುತ್ತ ಅಂದರೆ ಎರಡು ಕಿಲೋ ಮೀಟರ್ ಒಳಗೆ ಕೆಲಸ ಹುಡುಕಿ ಕೊಳ್ಳುತ್ತಾರೆ. ಐನೂರು ಯುರೋ ಹೆಚ್ಚಿಗೆ ಕೊಡುತ್ತೇವೆ ಹದಿನೈದು ಕಿಲೋ ಮೀಟರ್ ಪ್ರಯಾಣ ಮಾಡಬೇಕು ಅಂದರೆ , ಸ್ವಾಮಿ , ನಿಮ್ಮ ಕೆಲಸ ನಮಗೆ ಬೇಡ ಎನ್ನುವರ ಸಂಖ್ಯೆ ಬಹಳ ದೊಡ್ಡದು , ಇರಲಿ .

ಬಾರ್ಸಿಲೋನಾ ದಲ್ಲಿ ಇರುವ ಕೆಲವೇ ಕೆಲವು skyscraper / tower ನಲ್ಲಿ agbar ಒಂದು , ಇದನ್ನು ಇಲ್ಲಿಯ ಜನ torre agbar ಎನ್ನುತ್ತಾರೆ , torre ಎಂದರೆ ಹೈ ರೈಸ್ , ಅಥವಾ ಟವರ್ ಎನ್ನುವ ಅನ್ನುವ ಅರ್ಥ ಕೊಡುತ್ತದೆ. 38 ಮಹಡಿ ಎತ್ತರದ ಈ ಟವರ್ 50,693 square metres, ವಿಸ್ತಿರ್ಣತೆ ಹೊಂದಿದೆ , ಒಂದು auditorium ಕೂಡ ಇದೆ . ಇಲ್ಲಿನ ಜಾಗದ 60 ಭಾಗ ಆಫೀಸ್ ಗಳು ಬೀಡಾರ ಹೂಡಿವೆ . ag , agua (ನೀರು ) bar , ಬಾರ್ಸಿಲೋನಾ , ಸೇರಿ , ಆಗ್ಬಾರ್ ಆಗಿದೆ , ಇದಕ್ಕೆ ಕಾರಣ , ಈ ಟವರ್ ನ ಹೋಲ್ಡಿಂಗ್ ಕಂಪನಿ ಇಲ್ಲಿನ ಜಲ ಮಂಡಳಿ ! ರಾತ್ರಿ ಹೊತ್ತು , ವಿವಿಧ ಬಣ್ಣ ದಿಂದ ಜಗಮಗಿಸುವ ಇದನ್ನು ನೋಡುವುದೇ ಅಂದ ., ನೀವು ವಿಮಾನದಿಂದ ರಾತ್ರಿ ಇಳಿಯುವರಿದ್ದರೆ .., ಖಂಡಿತ ತೋರ್ರೆ ಆಗ್ಬಾರ್ ನೋಡಲು ಮರಿಬೇಡಿ .

ಒಂಟಿತನ ಎನ್ನುವುದು ಸಮುದ್ರದ ಮೇಲಿನ ಪ್ರಯಾಣವಿದ್ದಂತೆ! ಹುಷಾರುಒಂಟಿತನ ಎನ್ನುವುದು ಸಮುದ್ರದ ಮೇಲಿನ ಪ್ರಯಾಣವಿದ್ದಂತೆ! ಹುಷಾರು

ಕಾಸ ಮಿಲಾ (casa mila) , ಈ ಮನೆಯ ಹೆಸರು , ಕಲ್ಲಿನ ಕಟ್ಟಡ , ಹಾಗಾಗಿ ಬಾರ್ಸಿಲೋನಾದ ಜನ ಲ ಪೆದ್ರೆರ (la pedrera ) ಎಂದರು . ಇಂದಿಗೂ ಇದು ಲ ಪೆದ್ರೆರ ಎಂದೇ ಹೆಸರುವಾಸಿ , ಕಾಸ ಮಿಲಾ ಎಂದರೆ ಬಹು ಜನ ಏನದು ಎಂದರೆ ಆಶ್ಚರ್ಯವಿಲ್ಲ . ಭಾರತೀಯರು ಹೇಗೆ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೋ ಹಾಗೆ ಸ್ಪ್ಯಾನಿಷ್ ಜನ ಕೂಡ ( ಕಳೆದ 30/40 ವರ್ಷಗಳ ಹಿಂದಿನವರೆಗೆ ) ಜರ್ಮನಿ , ಅಮೇರಿಕಾ ಗಳಿಗೆ ವಲಸೆ ಹೋಗುತ್ತಿದರು .

Barcelona Memories Column By Rangaswamy Mookanahalli Part 76

ಜೋಸೆಪ್ ಗ್ವಾರ್ದಿಯೋಲ (Josep Guardiola) ಅಮೇರಿಕಾಗೆ ವಲಸೆ ಹೋಗಿ ಅಪಾರ ಹಣ ಸಂಗ್ರಹಿಸಿ , ಮರಳಿ ಬಂದ , ಆದರೆ ಅದನ್ನು ಅನುಭವಿಸಲಾಗದೇ ಸತ್ತ . ಆತನ ಹೆಂಡತಿ ರೋಸೆರ್ ಸೇಗಿಮೊನ್ (Roser Segimon) ಮರು ಮದುವೆ ಆದದ್ದು ಪೆರೇ ಮಿಲ (Pere Milà) ನೊಂದಿಗೆ , ಇವರಿಬ್ಬರಿಗಾಗಿ ಕಟ್ಟಿದ ಮನೆಯೇ ಕಾಸ ಮಿಲಾ ಅಥವಾ ಲ ಪೆದ್ರೆರ . ಅಂತೋನಿ ಗೌದಿ
(Antoni Gaudi ) ಸ್ಪೇನ್ ನ ಪ್ರಖ್ಯಾತ ಆರ್ಕಿಟೆಕ್ಟ್ ಇದರ ವಿನ್ಯಾಸಗಾರ . ಈ ಮನೆಯನ್ನು ಸುತ್ತುವುದು ಒಂದು ಒಂದು ಅಮೋಘ ಅನುಭವ , ಬಾರ್ಸಿಲೋನಾ ಭೇಟಿ ಕೊಟ್ಟರೆ , ಲ ಪೆದ್ರೆರ ಮರೆಯಬೇಡಿ . 1906-1912ರಲ್ಲಿ ನಿರ್ಮಿತ ಈ ಮನೆಯಲ್ಲಿ ಏನಿಲ್ಲ ? ಅಬ್ಬಾ ಹೇಗೆ ಬದುಕಿದ್ದರು ಇವರು ಎಂದು ಹುಬ್ಬು ಮೇಲೆ ಏರಿದರೆ ಅದು ಉತ್ಪ್ರೇಕ್ಷೆ ಅಲ್ಲ ನಾರ್ಮಲ್.

ಇಂತಹ ಹಲವು ಹತ್ತು ಸ್ಥಳಗಳು ಬಾರ್ಸಿಲೋನಾ ದಲ್ಲಿ ನೋಡಲಿವೆ. ಅವುಗಳ ಬಗ್ಗೆ ಕೂಡ ನಿಧಾನವಾಗಿ ಬರೆಯುತ್ತ ಹೋಗುವೆ. ಇಂದು ಇಲ್ಲಿನ ವೈದ್ಯಕೀಯ ವ್ಯವಸ್ಥೆ ಬಗ್ಗೆ ನನ್ನ ಅನುಭವವನ್ನ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಅದು 2002ರ ಸಮಯ . ಸ್ಪೇನ್ ನ ಬಾರ್ಸಿಲೋನಾ ದಲ್ಲಿ ಕೆಲಸ ಮಾಡುತ್ತಿದ್ದೆ . ನನ್ನೊಂದಿಗೆ ಇದ್ದವರೆಲ್ಲ ಸ್ಪಾನಿಷರು ಜೊತೆಗೆ ನನ್ನ ಬಿಟ್ಟು ಇನ್ನು ಮೂವರು ಭಾರತೀಯರು ಕೆಲಸ ಮಾಡುತ್ತಿದ್ದರು .

ಟಾಯ್ಲೆಟ್ ಉಪಯೋಗಿಸಬೇಕೇ ? ಹಾಗಾದರೆ ಕಾಫಿ ಖರೀದಿಸಿ !!ಟಾಯ್ಲೆಟ್ ಉಪಯೋಗಿಸಬೇಕೇ ? ಹಾಗಾದರೆ ಕಾಫಿ ಖರೀದಿಸಿ !!

ಅದರಲ್ಲಿ ಒಬ್ಬಾತ ಕೇರಳದ ಕ್ರಿಶ್ಚಿಯನ್. ಆತನಿಗೆ ಟಿಬಿ ಇದೆ ಎಂದು ವಾರ್ಷಿಕ ರಕ್ತ ತಪಾಸಣೆ ವೇಳೆಯಲ್ಲಿ ತಿಳಿದು ಬಂತು . ತಕ್ಷಣ ಆತ ಭಾರತಕ್ಕೆ ಹೊರಟು ಹೋದ . ಇಲ್ಲಿನವರಿಗೆ ನಮ್ಮ ದೇಹ ಪ್ರಕೃತ್ತಿ ತಿಳಿಯುವುದಿಲ್ಲ ಎನ್ನುವುದು ಆತನ ನಂಬಿಕೆಯಾಗಿತ್ತು . ಇದಾಗಿ ಎರಡು ದಿನ ಕಳೆದಿಲ್ಲ . ನನ್ನ ಮನೆಯ ಸಮೀಪದ ಆಸ್ಪತ್ರೆಯಿಂದ ಫೋನ್ ಬಂತು. ನನ್ನ ತಕ್ಷಣ ಆಸ್ಪತ್ರೆಗೆ ಬರುವಂತೆ ಹೇಳಿದರು. ನಾನು ಏಕಿರಬಹದು ಎಂದು ಕೊಂಡು ಹೋದರೆ , ನಿಮ್ಮ ರಕ್ತ ಪರೀಕ್ಷೆ ಮಾಡಬೇಕು ಎಂದರು.

ನಾನು ಏಕೆ ಏನಾಯ್ತು ? ಎಂದು ಕೇಳಿದೆ . ಏನಿಲ್ಲ ಭಾರತೀಯರಲ್ಲಿ ಟಿಬಿ ಹೆಚ್ಚು , ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಒಬ್ಬರಿಗೆ ಇದಾಗಿದೆ , ಹೀಗಾಗಿ ನಿಮ್ಮನ್ನ ಪರೀಕ್ಷೆಗೆ ಒಳಪಡಿಸಬೇಕು ಎಂದರು . ನಾನು ಓಕ ಎಂದೆ . ಅದೇನೋ ಒಂದು ಸಣ್ಣ ಇಂಜೆಕ್ಷನ್ ಅನ್ನು ಮೊಣಕೈಯಿಂದ ಸ್ವಲ್ಪ ಕೆಳಗೆ ಕೊಟ್ಟರು . ಈ ಭಾಗ ಅರ್ಧ ಗಂಟೆಯಲ್ಲಿ ಊದಿಕೊಂಡರೆ ನಿಮಗೂ ಟಿಬಿ ಇದೆ ಅಂತ ಅರ್ಥ ಎಂದರು . ಅರ್ಧ ಗಂಟೆಯಲ್ಲಿ ನನ್ನ ಕೈ ಊದಿಕೊಂಡಿತು . ಅಲ್ಲಿನ ವೈದ್ಯರುಗಳು ಗಾಬರಿ ನೋಡಿ ನನಗೆ ನನ್ನ ಸಾವು ಸಮೀಪಿಸಿದೆ ಎನ್ನುವ ನಂಬಿಕೆ ಹೆಚ್ಚಾಗತೊಡಗಿತು .

Barcelona Memories Column By Rangaswamy Mookanahalli Part 76

ಮುಂದಿನ ಅರ್ಧ ಗಂಟೆಯಲ್ಲಿ ನನ್ನೆಲ್ಲಾ ಭಾರತೀಯ ಸಹೋದ್ಯೋಗಿಗಳನ್ನ ಆಸ್ಪತ್ರೆಗೆ ಕರಿಸಿ ಪರೀಕ್ಷೆ ಮಾಡಿ ಅವರಿಗೂ ಟಿಬಿ ಎನ್ನುವ ಪಟ್ಟವನ್ನ ಕಟ್ಟಲಾಯಿತು . ನಮಗೆ ಯಾವ ಮೆಡಿಕೇಷನ್ ಕೊಡಬೇಕು ಅಂತ ಅವರು ಚರ್ಚಿಸುತ್ತಿದ್ದರು . ಈ ಮಧ್ಯೆ ಮನಸ್ಸಿನಲ್ಲಿ ಇವರೇನೋ ತಪ್ಪು ಮಾಡುತ್ತಿದ್ದಾರೆ ಎನ್ನುವ ಆತಂಕ ಬೇರೆ ಶುರುವಾಯ್ತು . ಒಬ್ಬರಿಂದ ಒಬ್ಬರು ದೂರವಿದ್ದೂ ಭಾರತೀಯರಿಗೆ ಮಾತ್ರ ಟಿಬಿ? ಇದೇಕೋ ಜಾಸ್ತಿ ಆಯ್ತು ಅನ್ನಿಸಿತು . ಭಾರತದಲ್ಲಿನ ನನ್ನ ಮನೆ ವೈದ್ಯರಿಗೆ ಫೋನ್ ಮಾಡಿ ಆಗಿದ್ದ ಕತೆಯನ್ನ ಪೂರ್ಣ ಅರುಹಿದೆ .

500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!

ಆಕೆ ನಿನಗೆ ಬಿಸಿಜಿ ಲಸಿಕೆ ಹಾಕಿದ್ದಾರೆ ಅಲ್ಲವೇ ? ಎಂದರು . ನನಗೆ ನೆನಪಿಲ್ಲ ಎಂದೆ . ಅಂಗಿ ತೆಗೆದು ಎಡಗೈ ಭುಜವನ್ನ ನೋಡು ಅಲ್ಲಿ ಐವತ್ತು ಪೈಸೆ ಗಾತ್ರದ ಒಂದು ಮಚ್ಚೆ ಇರುತ್ತೆ ಅದಲ್ಲ , ಅದರ ಮೇಲೆ ಅಥವಾ ಕೆಳಗೆ ಇನ್ನೊಂದು ಅದರ ಕಾಲು ಭಾಗದ ಮಚ್ಚೆ ಇರಬೇಕು ಇದೆಯಾ ? ನೋಡು ಎಂದರು . ನಾನು ನೋಡಿ ಹೌದು ಇದೆ ಎಂದೇ . ಗುಡ್ ಅದೇ ಬಿಸಿಜಿ ಲಸಿಕೆಯ ಗುರುತು . ಭಾರತದಲ್ಲಿ ಅದನ್ನ ಇಂದಿಗೂ ಹಾಕುತ್ತೇವೆ , ಅಮೆರಿಕಾ ಮತ್ತು ಯೂರೋಪಿನಲ್ಲಿ ಅದನ್ನ ಹಾಕುವುದಿಲ್ಲ ಹಾಗಾಗಿ ಅವರಿಗೆ ಅದು ಗೊತ್ತಿಲ್ಲ .

ಅವರಿಗೆ ಹೇಳು ನಿನಗೆ ಬಿಸಿಜಿ ಲಸಿಕೆ ಹಾಕಲಾಗಿದೆ ಎಂದು ಅಂದರೆ ನಮ್ಮಲ್ಲಿ ಆಗಲೇ ಟಿಬಿ ಹರಡುವ ಕೀಟಾಣು ಇದೆ . ನಮಗೆ ಟಿಬಿ ತಗಲುವುದಿಲ್ಲ . ಆದರೆ ಅವರು ಮಾಡುವ ಟೆಸ್ಟ್ ನಲ್ಲಿ ಟಿಬಿ ಕೀಟಾಣು ಇದೆ ಎಂದು ತೋರಿಸುತ್ತೆ , ಅದು ಲಸಿಕೆಯ ಮಹಿಮೆ . ಹೆದರ ಬೇಡ ಸರಿಯಾಗಿ ವಿವರಿಸು . ಯಾವುದೇ ಮಾತ್ರೆ ತೆಗೆದುಕೊಳ್ಳಬೇಡ ಎಂದರು . ಅಲ್ಲಿನ ವೈದ್ಯರಿಗೆ ಎಲ್ಲವನ್ನೂ ವಿವರವಾಗಿ ವಿವರಿಸಿದೆ . ಅವರೂ ನಮ್ಮಲ್ಲಿ ಯಾವ ಸಿಮ್ಟಮ್ ಇಲ್ಲದ್ದ ನೋಡಿ ಹೋಗಲು ಬಿಟ್ಟರು.

ಇಲ್ಲಿ ಸಾಮಾನ್ಯವಾಗಿ ಜ್ವರ , ನೆಗಡಿ , ಕೆಮ್ಮು ಬಂದರೆ ನೇರವಾಗಿ ಆಸ್ಪತ್ರೆಗೆ ಹೋಗುವಂತಿಲ್ಲ. ಮೊದಲಿಗೆ ಕರೆ ಮಾಡಿ ನಾವು ಸಮಯವನ್ನ ಕಾದಿರಿಸಬೇಕಾಗುತ್ತದೆ. ಏನಾಗಿದೆ ಎಂದು ಕೇಳುತ್ತಾರೆ. ಹೀಗೀಗೆ ಎಂದರೆ ಅವರು ಸಮಯವನ್ನ ನೀಡುತ್ತಾರೆ. ನೆಗಡಿ , ಕೆಮ್ಮಿನಂತ ತೊಂದರೆಗೆ ಕೂಡ ವಾರಕ್ಕೆ ಮುಂಚೆ ನಮಗೆ ಅಪಾಯಂಟ್ಮೆಂಟ್ ಸಿಕ್ಕುವುದಿಲ್ಲ. ಹೀಗೆ ಸಮಯ ಕಾದಿರಿಸಿರುವ ಪ್ರಕ್ರಿಯೆಗೆ ಇಲ್ಲಿ 'ಸಿತಾ' ಎನ್ನುತ್ತಾರೆ. ನಮಗೆ ಸಿತಾ ಸಿಕ್ಕುವುದರಲ್ಲಿ ನೆಗಡಿ ಕೆಮ್ಮು ಎಲ್ಲವೂ ವಾಸಿ ಆಗಿಬಿಟ್ಟಿರುತ್ತದೆ.

ಇದು ನಮಗೆಂದು ನಿಗದಿ ಯಾಗಿರುವ ಆಸ್ಪತ್ರೆಯಲ್ಲಿ ಆಗುವ ಕಥೆ. ಪ್ರತಿಯೊಬ್ಬ ಪ್ರಜೆಗೂ ಅವನು ವಾಸಿಸುವ ಜಗದ ಸುತ್ತಮುತ್ತ ಇರುವ ಆಸ್ಪತ್ರೆ ಮತ್ತು ವೈದ್ಯರನ್ನ ನಿಗದಿ ಮಾಡಲಾಗಿರುತ್ತದೆ. ಇಲ್ಲಿನ ವೈದ್ಯರು ಹೇಳಿದರೆ ಮಾತ್ರ ಸ್ಪೆಷಲಿಸ್ಟ್ ನೋಡಲು ಸಾಧ್ಯ. ನಮಗೆ ತೊಂದರೆ ಹೆಚ್ಚಿದ್ದರೆ ಮಾತ್ರ ನೇರವಾಗಿ ಎಮೆರ್ಜೆನ್ಸಿ ಗೆ ಹೋಗಬಹುದು. ಆಗ ನಮ್ಮ ವೈದ್ಯರು ಹೇಳದಿದ್ದರೂ ಸ್ಪೆಷಲಿಸ್ಟ್ ನೋಡಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಎಲ್ಲವೂ ನಮ್ಮ ಬೆರಳ ತುದಿಯಲ್ಲಿ ಸಿಗುತ್ತದೆ. ಹೀಗಾಗಿ ಇಲ್ಲಿ ವೈದ್ಯಕೀಯ ಸೇವೆಯ ಬಗ್ಗೆ ಎಲ್ಲಾ ಭಾರತೀಯರು ಗೊಣಗುವುದು ಸಾಮಾನ್ಯ. ಸಾಮಾನ್ಯವಾಗಿ ಇಲ್ಲಿನ ಬಹುತೇಕ ಪ್ರಜೆಗಳು ಇದೆ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಇದು ಬೇಡ , ನಮಗೆ ತಕ್ಷಣದ ಸೇವೆ ಬೇಕು ಎನ್ನುವವರು ಖಾಸಗಿ ಆಸ್ಪತ್ರೆಗೆ ಹೋಗಬಹುದು. ಆದರೆ ಇದಕ್ಕೆ ವಿಮೆ ಇರಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ 120ಯುರೋ ಮಾಸಿಕ ವಿಮೆಯ ಕಂತು ಇರುತ್ತದೆ.

ಮನೆಯಲ್ಲಿ ನಾಲ್ಕು ಜನರಿದ್ದರೆ ಹತ್ತಿರತ್ತಿರ ಐನೂರು ಯುರೋ ಅಂದರೆ ಭಾರತೀಯ ರೂಪಾಯಿಯಲ್ಲಿ 40ಸಾವಿರಕ್ಕೂ ಸ್ವಲ್ಪ ಹೆಚ್ಚು ಹಣವನ್ನ ಕೇವಲ ಜೀವ ವಿಮೆಗೆ ಪ್ರತಿ ತಿಂಗಳೂ ವ್ಯಯಿಸಬೇಕಾಗುತ್ತದೆ. ಹೀಗಾಗಿ ಇದು ಖರ್ಚಿನ ಬಾಬತ್ತು. ರಮ್ಯಳಿಗೆ ಮತ್ತು ಅನನ್ಯಳಿಗೆ ಆರೋಗ್ಯ ವಿಮೆ ಕೊಂಡಿದ್ದೆ , ನಾನು ಮಾತ್ರ ಸ್ಥಳೀಯ ಆಸ್ಪತ್ರೆಗೆ ಜೈ ಎಂದಿದ್ದೆ . ಇದರಿಂದ ಒಂದು ಅನುಕೂಲವಾಯ್ತು.

ಸಣ್ಣಪುಟ್ಟ ನೆಗಡಿ , ಜ್ವರ ಮತ್ತು ಕೆಮ್ಮಿಗೆ ಮಾತ್ರೆಯ ಬಳಕೆ ಕಡಿಮೆಯಾಯ್ತು. ಬಾರ್ಸಿಲೋನಾ ದಲ್ಲಿ ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಸಮಯದಲ್ಲಿ ಆಸ್ಪತ್ರೆಗೆ ಎಡತಾಕುವ ಪ್ರಮೇಯ ಬಂದದ್ದು ಬಹಳ ಕಡಿಮೆ ಎನ್ನಬಹುದು. ಮೂರ್ನಾಲ್ಕು ದಿನ ನಿತ್ಯವೂ ಆಸ್ಪತೆಗೆ ಹೋದದ್ದು ಅನನ್ಯ ಹುಟ್ಟಿದ್ದಾಗ ಮಾತ್ರ. ಆ ದಿನಗಳ ಅನುಭವವನ್ನ ಕೂಡ ಬರೆಯುವೆ. ಅಲ್ಲಿಯವರೆಗೆ ಆದೇವ್.

English summary
Barcelona Memories Column By Rangaswamy Mookanahalli Part 76,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X