ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆವರಣ : ಸತ್ಯ ಮತ್ತು ಸೌಂದರ್ಯದ ನಡುವೆ ತಾಕಲಾಟ

By Staff
|
Google Oneindia Kannada News


ಎಸ್‌.ಎಲ್‌.ಭೈರಪ್ಪನವರ ಬಹುಚರ್ಚಿತ ಕಾದಂಬರಿ ‘ಆವರಣ’. ಇದು ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿಸುವ ನಿರೀಕ್ಷೆ ಹುಟ್ಟಿಸಿದೆ! ಏನು ‘ಆವರಣ’ದ ವಿಶೇಷ? ಇದನ್ನು ಇಷ್ಟೊಂದು ಆತುರದಿಂದ ಜನ ಏಕೆ ಓದುತ್ತಿದ್ದಾರೆ? ಏನಿದೆ ‘ಆವರಣ’ದಲ್ಲಿ? ಏನನ್ನು ಹೇಳಲು ಭೈರಪ್ಪ ಪ್ರಯತ್ನಿಸಿದ್ದಾರೆ?

Avarana : Mental Disturbance between Truth and Beauty!ಕನ್ನಡ ಪುಸ್ತಕಗಳು ಮಾರಾಟವಾಗುವುದಿಲ್ಲ ಎಂಬ ಕಟು ಸತ್ಯದ ನಡುವೆಯೂ ಕಾದಂಬರಿಯಾಂದು ಒಂದರ ಹಿಂದೆ ಒಂದರಂತೆ ನಾಲ್ಕು ಮುದ್ರಣ ಕಂಡು ಐದನೆಯದಕ್ಕೆ ಕಾಲಿಡುತ್ತಿದೆ ಎಂಬ ಸಮಾಚಾರ ಈಗಾಗಲೇ ಹಳೆಯದಾಗಿದೆ. ಕನ್ನಡದ ಖ್ಯಾತ ಕಾದಂಬರಿಕಾರರಾದ ಡಾ. ಎಸ್‌.ಎಲ್‌.ಭೈರಪ್ಪನವರ ಕಾದಂಬರಿಗಳು ಹಿಂದೆಯೂ ಜನಪ್ರಿಯವಾಗಿದ್ದವು. ಅವರ ಅನೇಕ ಕಾದಂಬರಿಗಳು ಹಲವಾರು ಆವೃತ್ತಿಗಳಲ್ಲಿ ಪ್ರಕಟವಾಗಿರುವುದೇ ಅಲ್ಲದೇ ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿವೆ.

ಆದರೆ, ಅವರ ಇತ್ತೀಚಿನ ಕಾದಂಬರಿ ‘‘ಆವರಣ’’ ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿಸುವ ನಿರೀಕ್ಷೆ ಹುಟ್ಟಿಸಿದೆ! ಏನು ಆವರಣದ ವಿಶೇಷ? ಇದನ್ನು ಇಷ್ಟೊಂದು ಆತುರದಿಂದ ಜನ ಏಕೆ ಓದುತ್ತಿದ್ದಾರೆ? ಈಗಾಗಲೇ ಭಾರತದ ಇತರ ಭಾಷೆಗಳಿಗೆ ತರ್ಜುಮೆ ನಡೆಯುತ್ತಿದ್ದು, ಆವರಣ ಕಾದಂಬರಿಯ ಓದುಗ-ಪ್ರಪಂಚ, ಕರ್ನಾಟಕವನ್ನು ದಾಟಿ ಭಾರತದ ಇತರ ಪ್ರದೇಶಗಳಿಗೂ ಹರಡುವುದಕ್ಕೆ ಹೆಚ್ಚು ಕಾಲ ಬೇಕಾಗುವುದಿಲ್ಲ ಎನ್ನಿಸುತ್ತಿದೆ.

ಈ ಮಧ್ಯೆ ಪುಸ್ತಕವನ್ನು ಮುಟ್ಟಗೋಲು ಹಾಕುವ ಊಹಾಪೋಹವನ್ನೂ (ಅಥವಾ ಪ್ರಚೋದನೆಯನ್ನು) ಈ ಪುಸ್ತಕದಬಗ್ಗೆ ಇಲ್ಲಿಯವರೆಗೆ ಪ್ರಕಟವಾದ ಕೆಲವು ಲೇಖನಗಳಲ್ಲಿ ಕಾಣಬಹುದಾಗಿದೆ. ಹಾಗಾಗುವ ಮೊದಲೇ ಸಹಸ್ರಾರು ಪ್ರತಿಗಳು ವಿತರಣೆ ಆಗಿಬಿಟ್ಟಿವೆ. ಆದ್ದರಿಂದ ಅಂಥ ಪ್ರಸಂಗ ಬರಲಾರದು, ಬರಬಾರದು, ಸಹ. ಈ ತಂತ್ರಜ್ಞಾನದ ಯುಗದಲ್ಲಿ, ಒಂದು ಪುಸ್ತಕದ ಮುದ್ರಣವನ್ನು ತಡೆದರೆ ಅದರ ಪ್ರತಿಗಳು ಪ್ರತಿಯಾಂದು ಗಣಕಯಂತ್ರದಮೇಲೂ ರಾರಾಜಿಸಬಹುದು! ಈ ವಿಷಯವನ್ನು ಮನಗಂಡರೆ, ಮುಟ್ಟಗೋಲುಹಾಕುವಂತಹ ಮೂರ್ಖತನಕ್ಕೆ ಯಾರೂ ಕೈಹಾಕುವುದಿಲ್ಲ.

ಕಳೆದ ಸೆಪ್ಟೆಂಬರ್ನಲ್ಲಿ ಬಾಲ್ಟಿಮೋರಿನಲ್ಲಿ ಕಾವೇರಿ ಆಶ್ರಯದಲ್ಲಿ ನಡೆದ ಅಕ್ಕ-ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಭೈರಪ್ಪನವರೊಂದಿಗೆ ಒಂದು ಸಂವಾದ ಏರ್ಪಾಟಾಗಿತ್ತು. ಆ ಸಂದರ್ಭದಲ್ಲಿ ಭೈರಪ್ಪನವರು ಸಾಹಿತ್ಯದಲ್ಲಿ ಸತ್ಯಾನ್ವೇಷಣೆಯ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ, ಟಿಪ್ಪೂ ಸುಲ್ತಾನನನಿಗೆ ಸಂಬಂಧಪಟ್ಟಂತೆ ಚರ್ಚೆ ನಡೆದಾಗ ಕೂಡ ಭೈರಪ್ಪನವರು ತಮ್ಮ ಇತಿಹಾಸ ಸಂಶೋಧನೆಯ ವಿಷಯಗಳನ್ನು ವಿಷದಪಡಿಸಿದ್ದರು.

ನಮ್ಮೊಂದಿಗೆ ನಡೆಸಿದ ಖಾಸಗೀ ಸಂಭಾಷಣೆಯಲ್ಲಿ ಸಹ ವಿಶ್ವದ ನಾನಾ ಮೂಲೆಗಳಲ್ಲಿ ನಡೆಯುತ್ತಿರುವ ಧರ್ಮಾಂಧತೆ ಮತ್ತು ಉಗ್ರವಾದಿಗಳ ವಿಧ್ವಂಸಕ ಕೃತ್ಯದಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇವೆಲ್ಲ ನನ್ನ ಮನಸ್ಸಿನಲ್ಲಿ ಹಸಿಯಾಗಿರುವಾಗಲೇ ‘‘ಆವರಣ’’ ಕಾದಂಬರಿ ಲೋಕಾರ್ಪಣೆಗೊಂಡಿತು. ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನೂ ಓದಿರುವ ಹಾಗೂ ಅವರ ಅಭಿಮಾನಿಯೂ ಆದ ನನಗೆ ಆವರಣವನ್ನು ಕೂಡ ಆದಷ್ಟು ಬೇಗ ಓದಬೇಕೆಂಬ ಉತ್ಕಟ ಇಚ್ಛೆ ಆಗಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಅದರ ಸುತ್ತಲಿನ ಬಿಸಿಬಿಸಿ ಚರ್ಚೆಯೂ ನನ್ನ ಕುತೂಹಲವನ್ನು ಇಮ್ಮಡಿಸಿತ್ತು.

ಈ ಮಧ್ಯೆ ಬೆಂಗಳೂರಿಗೆ ಭೇಟಿ ಇತ್ತ ಸೋದರಿಯಾಬ್ಬರು ನನ್ನ ಕೋರಿಕೆಯಮೇರೆಗೆ ಆವರಣದ ಪ್ರತಿಯಾಂದನ್ನು ನನಗೆ ತಂದು ತಲುಪಿಸಿದರು. ಲಂಚುಬ್ರೇಕುಗಳೂ ಸೇರಿದಂತೆ ಆದಷ್ಟು ಬೇಗ ಓದಿ ಮುಗಿಸಿದೆ. (ಭೈರಪ್ಪನವರ ಕಾದಂಬರಿಗಳ ಸರಾಸರಿ ಗಾತ್ರದ ದೃಷ್ಟಿಯಿಂದ ಇದು ಅಂಥಾ ದಪ್ಪ ಪುಸ್ತಕವೇನಲ್ಲ.

ಸುಮಾರು ಹದಿನೈದು ಪುಟಗಳ ಗ್ರಂಥಋಣವನ್ನು ಬಿಟ್ಟರೆ, ಕಾದಂಬರಿ ಸುಮಾರು 250 ಪುಟಗಳು, ಅಷ್ಟೆ.) ಪುಸ್ತಕವನ್ನೋದಿದ ಮೇಲೆ ನನ್ನ ಮೊದಲ ಪ್ರತಿಕ್ರಿಯೆ ಎಂದರೆ, ಭೈರಪ್ಪನವರ ಇತರ ಅನೇಕ ಪುಸ್ತಗಳನ್ನು ಓದಿದಾಗ ಆದ ತೀವ್ರವಾದ ಅನುಭವ ಆವರಣವನ್ನು ಓದಿದಾಗ ಆಗಲಿಲ್ಲ ಎಂಬುದು. ಇದಕ್ಕೆ ಕಾರಣ ಇನ್ನೂ ನನಗೆ ಸ್ಪಷ್ಟವಾಗಿಲ್ಲ.

ಪುಸ್ತಕ ಮುಗಿದಮೇಲೂ ಇದು ಅಪೂರ್ಣವಾಗೇ ಉಳಿದಿರುವ ಕಥೆಯೇ ಎನ್ನಿಸಿದ್ದು ಒಂದು ಕಾರಣವಿರಬಹುದಾದರೂ ಅದು ಮುಖ್ಯಕಾರಣವಿರಲಾರದು. ಪ್ರಜ್ಞಾಪೂರ್ವಕವಾಗೇ ಇದನ್ನು ಅಪೂರ್ಣಸ್ಥಿತಿಯಲ್ಲಿ ಲೇಖಕರು ಬಿಟ್ಟಿರಲೂಬಹುದು. ಏಕೆಂದರೆ ಆವರಣಶಕ್ತಿಯಿಂದ ಬಿಡಿಸಿಕೊಳ್ಳುವ ಕ್ರಿಯೆ ಪ್ರಾಯಶಃ ಎಂದೆಂದೂ ಮುಗಿಯದ ಕಥೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X