ಕಾಲಿಲ್ಲದ ಹುಡುಗ ಸ್ಕೇಟಿಂಗ್ ಪ್ರವೀಣ!

ಇದಕ್ಕೆ ಉತ್ತರವಿಷ್ಟೆ : ಒಂದೇ ಒಂದು ನ್ಯೂನತೆಯೂ ಇರುವುದಿಲ್ಲವಲ್ಲ? ಅದು ಮನುಷ್ಯನಿಗೆ ವರ ಮತ್ತು ಶಾಪ. ಏಕೆಂದರೆ, ಯಾವುದೇ ತೊಂದರೆಯಿಲ್ಲ ಎಂಬ ಕಾರಣದಿಂದ ಮನುಷ್ಯ ಹತ್ತು ಮಂದಿಯ ಮುಂದೆ ಅವಮಾನಗಳಿಂದ ತಪ್ಪಿಸಿಕೊಳ್ಳುತ್ತಾನೆ. ಅನುಕಂಪದ ಮಾತುಗಳಿಂದ ಬಚಾವಾಗುತ್ತಾನೆ. ಮಿಸ್ಟರ್ ಪರ್‌ಫೆಕ್ಟ್ ಎಂಬ ಅಭಿದಾನಕ್ಕೆ ಪಾತ್ರನಾಗುತ್ತಾನೆ. ವಿಪರ್‍ಯಾಸವಿರುವುದೇ ಇಲ್ಲಿ. ಏನೆಂದರೆ, ನನಗೆ ಯಾವುದೇ ಕೊರತೆಯೂ ಇಲ್ಲ ಎಂಬ ಅಹಮಿಕೆಯೇ ಎಷ್ಟೋ ಸಂದರ್ಭಗಳಲ್ಲಿ ಮನುಷ್ಯನನ್ನು ಹಾಳು ಮಾಡುತ್ತದೆ. ತನ್ನ ಹಲವು ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಲೂ ಈ ಅಹಮಿಕೆಯೇ ಕಾರಣವಾಗುತ್ತದೆ.
ಆದರೆ, ಅಂಗವಿಕಲರ ವಿಷಯದಲ್ಲಿ ಹಾಗಾಗುವುದಿಲ್ಲ. ಅವರು ಬದುಕಿಡೀ ಸವಾಲುಗಳೊಂದಿಗೆ, ಸಂಕಟಗಳೊಂದಿಗೆ, ನೋವಿನೊಂದಿಗೆ ಮತ್ತು ಅವಮಾನದೊಂದಿಗೇ ಜೀವಿಸಬೇಕಾಗುತ್ತದೆ. ಹಾಗಾಗಿ, ಅವಮಾನವನ್ನು ಮೀರಿ ನಿಲ್ಲಬೇಕಾದಂಥ; ಸ್ವಾವಲಂಬಿಯಾಗಿ ಬದುಕಬೇಕಾದಂಥ ಅನಿವಾರ್ಯತೆ ಅವರಿಗಿರುತ್ತದೆ. ಹುಟ್ಟುತ್ತಲೇ ಜತೆಯಾದ ಅಂಗವೈಕಲ್ಯದೆಡೆಗೆ ಅವರಿಗೊಂದು ತಿರಸ್ಕಾರವಿರುತ್ತದೆ. ತಮ್ಮನ್ನು ಅಣಕಿಸುವವರ ಮುಂದೆ ತಲೆ ಎತ್ತಿ ಬದುಕಬೇಕು ಎಂಬ ಹಿರಿಯಾಸೆಯಿರುತ್ತದೆ. ಈ ಕಾರಣದಿಂದಲೇ ಅವರು ಸವಾಲಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ನೂರು ಅಡೆತಡೆಗಳ ಮಧ್ಯೆಯೂ ಕಡೆಗೊಮ್ಮೆ ಗುರಿ ತಲುಪುತ್ತಾರೆ. ಆ ಮೂಲಕ ಸದ್ದುಮಾಡುತ್ತಾರೆ. ಸುದ್ದಿಯಾಗುತ್ತಾರೆ. ಹತ್ತು ಮಂದಿಗೆ ಮಾದರಿಯೂ ಆಗುತ್ತಾರೆ.
***
ಅಂಗವೈಕಲ್ಯಕ್ಕೆ ಸವಾಲು ಹಾಕಿ ಗೆದ್ದಿರುವ; ಅಮೆರಿಕದ ಜನರಿಂದ ರೋಗ್‌ಮಾಡೆಲ್' ಸೂರ್ತಿ ದೇವತೆ' ಎಂದೆಲ್ಲ ಕರೆಸಿಕೊಂಡಿರುವ ನಿಕ್ ಸ್ಯಾಂಟೋನಸ್ಟಾಸೋ ಎಂಬ ಬಾಲಕನ ಬಗ್ಗೆ ಬರೆಯುವ ಮುನ್ನ ಹೀಗೆಲ್ಲ ಹೇಳಬೇಕೆನಿಸಿತು'. ಕೇಳಿ : ಈ ಹುಡುಗನಿಗೆ ಎರಡೂ ಕಾಲುಗಳಿಲ್ಲ, ಒಂದು ಕೈ ಇಲ್ಲ, ಇರುವ ಇನ್ನೊಂದು ಕೈಯಲ್ಲಿ ಎರಡು ಬೆರಳುಗಳೇ ಇಲ್ಲ. ಹಾಗಿದ್ದರೂ ಈತ ಬೇಸ್‌ಬಾಲ್ ಆಡುತ್ತಾನೆ, ಫುಟ್‌ಬಾಲ್ ಆಡುತ್ತಾನೆ, ಕೀ ಬೋರ್ಡ್ ನುಡಿಸುತ್ತಾನೆ, ಡ್ರಮ್ಸ್ ಬಾರಿಸುತ್ತಾನೆ. ಪಿಯಾನೋ ನುಡಿಸುತ್ತಾನೆ. ಈಜು ಹೊಡೆಯುತ್ತಾನೆ. ಸ್ಕೇಟಿಂಗ್‌ಗೆ ಹೋಗುತ್ತಾನೆ, ಕವಿತೆ ಬರೆಯುತ್ತಾನೆ, ಪೇಂಟಿಂಗ್ ಮಾಡುತ್ತಾನೆ. ಅಷ್ಟೇ ಅಲ್ಲ, ಬೆಸ್ಟ್ ಆರ್ಟಿಸ್ಟ್ ಎಂಬ ಹೆಗ್ಗಳಿಕೆಗೂ ಪಾತ್ರನಾಗಿ ಬಹುಮಾನವನ್ನು ಪಡೆದುಕೊಂಡಿದ್ದಾನೆ!
ಅರೆ, ಇದೆಲ್ಲ ನಿಜವಾ? ಇದೆಲ್ಲ ಸತ್ಯವಾ? ಕಾಲುಗಳೇ ಇಲ್ಲ ಅಂದ ಮೇಲೆ ಆ ಹುಡುಗ ಈಜು ಹೊಡೆಯಲು ಹೇಗೆ? ಸ್ಕೇಟಿಂಗ್ ಹೋಗುವುದು ಹೇಗೆ? ಒಂದು ಕೈ ಇಲ್ಲ; ಇರುವ ಇನ್ನೊಂದು ಕೈ ಕೂಡ ಪರಿಪೂರ್ಣವಾಗಿಲ್ಲ ಅಂದ ಮೇಲೆ ಈ ಹುಡುಗ ಆ ಮೋಟು ಕೈಯಿಂದಲೇ ಹೇಗೆ ಚಿತ್ರ ಬರೆದ? ಹೇಗೆ ಡ್ರಮ್ ಬಾರಿಸಿದ? ಇರುವ ಮೂರೇ ಬೆರಳುಗಳಿಂದ ಕೀಬೋರ್ಡ್‌ನಲ್ಲಿ ಅಷ್ಟೂ ರಾಗಗಳನ್ನು ಹೇಗೆ ನುಡಿಸಿದ? ಇಂಥದೊಂದು ಸಾಧನೆ ಮಾಡಲು ಅವನಿಗೆ ಹೇಗೆ ಸಾಧ್ಯವಾಯಿತು? ಈ ಹುಡುಗನ ಬೆನ್ನಹಿಂದೆ ನಿಂತು- ನಾವಿದ್ದೇವೆ ಹೆದರಬೇಡ ಎಂದು ಕ್ಷಣಕ್ಷಣವೂ ಪ್ರೋತ್ಸಾಹ ನೀಡಿದ ಮಹನೀಯರಾದರೂ ಯಾರು? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿರುವ ಸ್ಟೇಸಿ-ಮೈಕೇಲ್ ದಂಪತಿಗೆ ಮೂರು ಮಕ್ಕಳು. ಮೂರನೆಯವನೇ ನಮ್ಮ ಕಥಾನಾಯಕ ನಿಕ್ ಸ್ಯಾಂಟೋನಸ್ಟಾನೋ. ಮೂರನೇ ಬಾರಿ ರೂಟೀನ್ ಚೆಕಪ್‌ಗೆ ಹೋದಾಗಲೇ ಸ್ಟೇಸಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ನಿಮಗೆ ಅಂಗವಿಕಲ ಮಗು ಹುಟ್ಟಲಿದೆ. ಅದನ್ನು ಸ್ವೀಕರಿಸಲು ಈಗಿಂದಲೇ ಮಾನಸಿಕವಾಗಿ ಸಿದ್ಧರಾಗಿ' ಎಂದಿದ್ದರಂತೆ. ಅಂಗವಿಕಲ ಮಗು ಎಂದರೆ ಬಹುಶಃ ಒಂದು ಕೈ ಇರುವುದಿಲ್ಲ ಅಥವಾ ಒಂದು ಕಾಲಿರುವುದಿಲ್ಲ ಅಥವಾ ಅದಕ್ಕೆ ಕಣ್ಣು ಕಾಣಿಸುವುದಿಲ್ಲ... ಹೀಗೆಲ್ಲ ಅಂದಾಜು ಮಾಡಿಕೊಂಡಿದ್ದರಂತೆ ಸ್ಟೇಸಿ-ಮೈಕೇಲ್. ಆದರೆ, ಮುಂದೊಂದು ದಿನ ದೇಹದ ಅರ್ಧ ಬಾಗವೇ ಇಲ್ಲದ ಮಗು ಹುಟ್ಟಿದಾಗ ಏನು ಮಾಡಬೇಕೆಂದೇ ತೋಚಲಿಲ್ಲ ಎನ್ನುತ್ತಾರೆ ಮೈಕೇಲ್-ಸ್ಟೇಸಿ.
ಮುಂದೆ ಒಂದೊಂದೇ ದಿನ ಕಳೆದಂತೆಲ್ಲ ಈ ಅಂಗವಿಕಲ ಮಗುವನ್ನು ಸ್ವಾವಲಂಬಿಯನ್ನಾಗಿ ರೂಪಿಸಲೇಬೇಕು. ಹಾಗೆ ಮಾಡದೆ, ಅನುಕಂಪದಿಂದ ನೋಡಲು ಹೋದರೆ, ಮಗುವೂ ಹಾಳಾಗುತ್ತದೆ; ಅದರ ಭವಿಷ್ಯವೂ ಮಸುಕಾಗುತ್ತದೆ' ಅನ್ನಿಸಿತಂತೆ. ಅವತ್ತೇ ಹೆಂಡತಿಯನ್ನು ಎದುರು ಕೂರಿಸಿಕೊಂಡು ಮೈಕೇಲ್ ಹೇಳಿದನಂತೆ : ನೋಡೂ, ಈ ಮಗುವಿಗೆ ಯಾವುದೇ ವಿಶೇಷ ಸವಲತ್ತು ಒದಗಿಸಬೇಡ. ಅತಿಯಾಗಿ ಮುದ್ದು ಮಾಡಬೇಡ. ಅಯ್ಯೋ ಪಾಪ' ಎಂಬಂಥ ಮಾತಾಡಬೇಡ. ಆ ಮಗುವಿನ ಮುಂದೆ ಕಂಬನಿ ಸುರಿಸುತ್ತಾ ಕೂರಬೇಡ. ನನ್ನ ಕೆಲಸವನ್ನು ನಾನೇ ಮಾಡ್ಕೋಬೇಕು ಎಂಬ ಭಾವನೆ ನಿಕ್‌ಗೆ ಬರಬೇಕು. ಅಂಥ ಸಂದರ್ಭಗಳು ಮೇಲಿಂದ ಮೇಲೆ ಒದಗುವಂತೆ ಮಾಡು. ಇಷ್ಟಾಗಿಬಿಟ್ಟರೆ ಅವನು ಉಳಿದೆಲ್ಲರಂತೆ ಬದುಕಲು ಕಲಿಯುತ್ತಾನೆ...'
ಮುಂದೇನಾಯಿತು ನಿಕ್ ತಾಯಿ ಹೇಳ್ತಾರೆ ಓದಿ »












Click it and Unblock the Notifications