38243manikanthಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38243manikanthಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38243manikanthಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38243manikanthಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg38243manikanthಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpg38244ಮಣಿಕಾಂತ್ಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38244ಮಣಿಕಾಂತ್ಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38244ಮಣಿಕಾಂತ್ಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38244ಮಣಿಕಾಂತ್ಹೊಸ ನಿರ್ದೇಶಕರ ಕಥೆಗಳ ಕಗ್ಗೊಲೆ/movies/headlines/2009/01/08-young-kannada-movie-director-speaks-satyam.htmlನಾನು ಒಬ್ಬ ಸಿನೆಮಾ ನಿರ್ದೇಶಕ. ನಿಮ್ಮ ವೆಬ್ಬಿನಲ್ಲಿ ಬಂದ 'ಹೊಸ ನಿರ್ದೇಶಕರಿಗೆ ಕಿವಿಮಾತು' ಲೇಖನವನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿದ್ದೇನೆ. ನೀವು ನಿಷ್ಪಕ್ಷಪಾತವಾಗಿ ನನ್ನ ಅಭಿಪ್ರಾಯವನ್ನು ಪ್ರಕಟಿಸುತ್ತೀರೆಂದು ನಂಬಿದ್ದೇನೆ.ಇಂತು ವಿಶ್ವಾಸಿವಿಜಯ್ಸ್ವಾಮಿ. ನಿಮ್ಮ ಕಿವಿಮಾತಿಗೆ ಧನ್ಯವಾದಗಳು. ಆದರೆ ಇಲ್ಲಿ ಕೆಲವೊಂದು ಅಂಶ ನಿಮ್ಮ ಗಮನ ಬಿಟ್ಟು ಹೋಗಿರುವಂತೆ ಕಾಣುತ್ತದೆ. ಅದನ್ನೂ ಹೇಳಿ ಬಿಡೋಣ ಅಂತ ಬರೀತಿದೇನೆ. ನನ್ನದು ತಪ್ಪಾದರೆ ಕ್ಷಮಿಸಿಬಿಡಿ. 33951http://kannada.oneindia.com/img/2009/01/08-director-cut-action1e.jpg38244ಮಣಿಕಾಂತ್ಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg124247ಉಭಯ ಕುಶಲೋಪರಿಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg124247ಉಭಯ ಕುಶಲೋಪರಿಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg124247ಉಭಯ ಕುಶಲೋಪರಿಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg124247ಉಭಯ ಕುಶಲೋಪರಿಜಿಯಾಂಗ್-ಕ್ವಿನ್‌ರ ಅಮರ ಪ್ರೇಮದ ಕತೆ/column/manikanth/2009/0205-a-chinese-immoral-love-story.htmlಹತ್ತು ವರ್ಷ ದೊಡ್ಡವಳಾದ ಪ್ರಿಯತಮೆ ಬೆಟ್ಟ ಇಳಿಯಲು ಅನುವಾಗಲೆಂದು ಸಾವಿರಾರು ಮೆಟ್ಟಿಲುಗಳನ್ನು ಕಡಿದು ಎಲ್ಲ ವೈರುದ್ಧ್ಯಗಳನ್ನು ಮೆಟ್ಟಿನಿಂತ ಸಾಹಸಿಯ ಕಥೆಯಿದು. ಸಮಾಜದಿಂದ ದೂರವೇ ಉಳಿದು ಅರ್ಧ ಶತಮಾನ ಕಾಡಿನ ಗುಹೆಯಲ್ಲೇ ಪ್ರೇಮ ಜೀವನ ನಡೆಸಿದ ಅಮರ ಪ್ರೇಮಿಗಳ ಕಥಾನಕವಿದು. ಈ ಪ್ರೇಮಕ್ಕೆ ಸಾಕ್ಷಿಯಾಗಿ ಕಥಾನಾಯಕಿ ಇಂದಿಗೂ ಚೀನಾದಲ್ಲಿ ಜೀವಂತವಿದ್ದಾಳೆ. ಆಕೆಗೊಂದು ಪ್ರೇಮೋನ್ನಮಃ.* ಎಆರ್ ಮಣಿಕಾಂತ್ಪ್ರೀತಿಸಿದವಳಿಗಾಗಿ ಹೆತ್ತವರನ್ನು ತೊರೆದವರಿದ್ದಾರೆ. 34496http://kannada.oneindia.com/img/2009/02/05-guo-jiang-qu1.jpg124247ಉಭಯ ಕುಶಲೋಪರಿಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpgnews"> ತ್ರಿಕಾಲ ಜ್ಞಾನಿ ಕಣ್ವರ ಕಣ್ಣಲ್ಲಿ ಶಕುಂತಲೆ ಕಥೆ | Maharshi Kanva | Divine Vision | Dushyant Shankuntala story | ತ್ರಿಕಾಲ ಜ್ಞಾನಿ ಕಣ್ವರ ಕಣ್ಣಲ್ಲಿ ಶಕುಂತಲೆ ಕಥೆ - Kannada Oneindia

ತ್ರಿಕಾಲ ಜ್ಞಾನಿ ಕಣ್ವರ ಕಣ್ಣಲ್ಲಿ ಶಕುಂತಲೆ ಕಥೆ

ಪುರಾಣದಲ್ಲಿ ಬರುವ ಋಷಿಗಳನ್ನಾಗಲಿ, ದೇವತೆಗಳನ್ನಾಗಲಿ ಪ್ರತ್ಯಕ್ಷ ಕಂಡವರಿಲ್ಲ. ಆದರೆ, ಋಷಿ ಮುನಿಗಳು ಹಾಗೂ ದೇವತೆಗಳಿಗೆ ದೂರದೃಷ್ಟಿ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿದ್ದರೂ, ಅದೆಷ್ಟೋ ಸಂದರ್ಭದಲ್ಲಿ ಋಷಿಗಳು ಮತ್ತು ದೇವತೆಗಳು ನಮ್ಮ ನಿಮ್ಮಂತೆಯೇ ವರ್ತಿಸುವುದು ಏಕೆ? ತಿಳಿವವರಿಗೆ ತಿಳಿದವರು ಹೇಳಲಿ...

* ಎ.ಆರ್. ಮಣಿಕಾಂತ್

ಕಣ್ವರ ದೂರದೃಷ್ಟಿಗೆ ಕಷ್ಟವೇಕೆ ಕಾಣಿಸಲಿಲ್ಲ?

ವಿಶ್ವಾಮಿತ್ರ, ಋಷಿಯಾಗುವ ಮೊದಲು ರಾಜನಾಗಿದ್ದ. ಅವನಿಗೆ ಕೌಶಿಕ ದೊರೆ ಎಂದೇ ಹೆಸರಿತ್ತು. ದೊರೆಯ ಆಸ್ಥಾನಕ್ಕೆ ಒಮ್ಮೆ ವಶಿಷ್ಠ ಮಹರ್ಷಿಗಳು ಬಂದಿದ್ದರು. ಅವರ ಬಳಿ ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವಿತ್ತು. ಕೌಶಿಕ ದೊರೆ ಅದನ್ನೇ ಬಯಸಿದ. ವಶಿಷ್ಠರು ನಿರಾಕರಿಸಿದರು. ಇದರಿಂದ ಅಪಮಾನಿತನಾದ ದೊರೆ, ವಶಿಷ್ಠರಂತೆಯೇ ಋಷಿಯಾಗಬಯಸಿದ. ರಾಜ್ಯ ತೊರೆದ. ತಪಸ್ಸಿಗೆ ಕೂತ. ಕಡೆಗೆ ವಶಿಷ್ಠ ಮಹರ್ಷಿಗಳಿಂದಲೇ ವಿಶ್ವಾಮಿತ್ರ ಅನ್ನಿಸಿಕೊಂಡ.

ಆನಂತರವೂ ವಿಶ್ವಾಮಿತ್ರ ಆಗಿಂದಾಗ್ಗೆ ತಪಸ್ಸಿಗೆ ಕೂರುತ್ತಲೇ ಇದ್ದ. ಈ ಋಷಿಯ ತಪಸ್ಸಿನಿಂದ ತನ್ನ ಇಂದ್ರ ಪದವಿಗೆ ಭಂಗ ಉಂಟಾದರೆ ಎಂಬ ಭಯ ಇಂದ್ರನಿಗೆ. ಋಷಿಯ ತಪಸ್ಸು ಕೆಡಿಸಲು ಆತ ಹತ್ತು ಹಲವು ಬಗೆಯಲ್ಲಿ ಪ್ರಯತ್ನಿಸಿ, ವಿಫಲನಾದ. ಕಡೆಯ ಪ್ರಯತ್ನ ಎಂಬಂತೆ- ಸುರ ಸುಂದರಿ ಮೇನಕೆಯನ್ನು ಕಳಿಸಿದ. ತನ್ನೆದುರು ನಿಂತ ಮೇನಕೆಯನ್ನು, ಆಕೆಯ ತುಂಬು ಸೌಂದರ್ಯವನ್ನು ಕಂಡ ವಿಶ್ವಾಮಿತ್ರನಿಗೆ ಮೋಹ ಜತೆಯಾಯಿತು. ಆಸೆ ಕೈ ಹಿಡಿಯಿತು ಆತ ಮರುಕ್ಷಣವೇ ತಪಸ್ಸು ಮರೆತ. ಲೋಕ ಮರೆತ. ಮೈಮರೆತ. ಮೇನಕೆಯ ಮೈಮಾಟ, ಕುಡಿಮಿಂಚಿನ ಕಣ್ಣ ನೋಟ, ತುಂಬು ಲಾವಣ್ಯದ ಚೆಲುವಿಗೆ ವಿಶ್ವಾಮಿತ್ರ ಮನಸೋತ. ದಾಂಪತ್ಯ ಬದುಕು ಆರಂಭಿಸಿದ.

ನಂತರದ ಕೆಲವೇ ದಿನಗಳಲ್ಲಿ ಮೇನಕೆ ಗರ್ಭಿಣಿಯಾದಳು. ಆಕೆಗೆ ಹೆಣ್ಣು ಮಗು ಜನಿಸಿತು ಮಗಳನ್ನು ಕಂಡಾಗ ವಿಶ್ವಾಮಿತ್ರನಿಗೆ ಋಷಿಯಾಗಲಿಲ್ಲವಾ? ಊಹುಂ, ಅಂಥ ಯಾವ ವಿವರಣೆಯೂ ಪುರಾಣ ಕತೆಗಳಲ್ಲಿ ಇರುವಂತೆ ಕಾಣೆ. ಆದರೆ, 'ಓಹ್, ನನ್ನ ತಪೋಭಂಗವಾಯಿತು" ಎಂಬ ಅರಿವು ವಿಶ್ವಾಮಿತ್ರನಿಗೆ ಬಂದದ್ದಂತೂ ಆಗಲೇ. ತಕ್ಷಣವೇ ಆತ ಮೇನಕೆಯಿಂದ ದೂರವಾದ. ಈ ಮೇನಕೆ, ನಾನು ಬಂದ ಕೆಲಸವಾಯ್ತು ಅಂದುಕೊಂಡವಳೇ, ತನ್ನ ಮಗುವನ್ನು ಕಾಡಿನಲ್ಲಿ, ಒಂದು ಮರದ ಕೆಳಗೆ ಮಲಗಿಸಿ ಏನಾದ್ರೂ ಮಾಡ್ಕೋ? ಅಂತ ದೇವಲೋಕಕ್ಕೆ ಹೋಗಿಬಿಟ್ಟಳು.

ಮರದ ಕೆಳಗೆ ಅನಾಥವಾಗಿ ಮಲಗಿದ್ದ ಮಗುವಿಗೆ ಅಲ್ಲಿದ್ದ ಶಕುಂತ ಪಕ್ಷಿಗಳೇ ತಾಯ್ತಂದೆಯರಾದವು. ಮಗುವಿಗೆ ಗುಟುಕು ತಿನ್ನಿಸಿದವು. ಹುಶಾರಾಗಿ ನೋಡಿಕೊಂಡವು. ಕೆಲದಿನಗಳ ನಂತರ ಕಾರ್ಯನಿಮಿತ್ತ ಆ ದಾರಿಯಲ್ಲಿ ಬಂದ ಕಣ್ವ ಋಷಿಗಳು ಮುದ್ದಾದ ಆ ಮಗುವನ್ನು ನೋಡಿದರು. ಅದು ವಿಶ್ವಾಮಿತ್ರ-ಮೇನಕೆಯರ ಪ್ರಣಯದ ಫಲ ಎಂದು ದಿವ್ಯದೃಷ್ಟಿಯಿಂದ ತಿಳಿದರು. ಶಕುಂತ ಪಕ್ಷಿಗಳು ಸಾಕುತ್ತಿದ್ದವಲ್ಲ ಅದೇ ಕಾರಣಕ್ಕೆ ಆಕೆಗೆ 'ಶಕುಂತಲೆ" ಎಂದು ಹೆಸರಿಟ್ಟರು. ಆ ಮಗುವನ್ನು ತಾವೇ ಸಾಕಲು ನಿರ್ಧರಿಸಿದರು.

ಆ ನಂತರ ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಶಕುಂತಲೆಯನ್ನು ನೋಡಿಕೊಳ್ಳುತ್ತಾರೆ ಕಣ್ವ ಮಹರ್ಷಿ. ಆಕೆಗೆ ವಿದ್ಯೆ ಕಲಿಸುತ್ತಾರೆ. ನಾಟ್ಯ ಕಲಿಸುತ್ತಾರೆ. ಹಾಡು ಹೇಳಿ ಕೊಡುತ್ತಾರೆ. ಮುಂದೆ ಆಕೆ ಪ್ರಾಪ್ತ ವಯಸ್ಕಳಾಗುತ್ತಾಳೆ. ಮುಂದೊಮ್ಮೆ ಕಣ್ವರು ಆಶ್ರಮದಲ್ಲಿ ಇಲ್ಲದಿದ್ದಾಗ ಅಲ್ಲಿಗೆ ಬಂದ ದುಷ್ಯಂತ ಮಹಾರಾಜ, ಶಕುಂತಲೆಯನ್ನು ಮೋಹಿಸುತ್ತಾನೆ. ಆಕೆಯ ಒಪ್ಪಿಗೆ ಪಡೆದೇ ಗಾಂಧರ್ವ ವಿವಾಹವಾಗುತ್ತಾನೆ. ಆಕೆಯ ಸಂಗಸುಖ ಪಡೆದು, ಶೀಘ್ರವೇ ಆಕೆಯನ್ನು ಕರೆಸಿಕೊಳ್ಳುವುದಾಗಿ ಹೇಳಿ, ತನ್ನ ನೆನಪಿಗೆ ಉಂಗುರವೊಂದನ್ನು ನೀಡಿ ಹೋಗಿಬಿಡುತ್ತಾನೆ.

ಇದೂ ಸಹ ಕಣ್ವ ಮಹರ್ಷಿಗಳಿಗೆ ದಿವ್ಯ ದೃಷ್ಟಿಯಿಂದ ತಿಳಿಯುತ್ತದೆ. ಕೆಲ ದಿನಗಳ ನಂತರ ಶಕುಂತಲೆ ಗರ್ಭವತಿಯಾದಾಗ ಕಣ್ವರು ಆಕೆಯನ್ನು ದುಷ್ಯಂತನ ರಾಜ್ಯಕ್ಕೆ ಕಳಿಸಿಕೊಡುತ್ತಾರೆ. ಆಗ ಶಕುಂತಲೆ ನದಿ ದಾಟುವಾಗ ದುಷ್ಯಂತನ ನೆನಪಿನಲ್ಲೇ ಮೈಮರೆತು, ನದಿಯ ನೀರೊಳಗೆ ಕೈ ಆಡಿಸುತ್ತಾ ಉಂಗುರ ಕಳೆದುಕೊಳ್ಳುವುದು, ಅದನ್ನು ಒಂದು ಮೀನು ನುಂಗುವುದು, ದುಷ್ಯಂತನಿಗೆ ಶಕುಂತಲೆಯ ಗುರುತೇ ಸಿಗದಿರುವುದು, ಆಕೆಯನ್ನು ವಾಪಸ್ ಕಳಿಸುವುದು... ಮತ್ತು ಆನಂತರ ಆಕಸ್ಮಿಕವಾಗಿ ದುಷ್ಯಂತ ಮಹಾರಾಜನಿಗೆ ಉಂಗುರ ಸಿಕ್ಕಿ ಎಲ್ಲವೂ 'ಶುಭಂ" ಆಗುವುದು ಲೋಕಕ್ಕೇ ಗೊತ್ತಿರುವ ಕಥೆ.

ಇಲ್ಲಿ ಪ್ರಶ್ನೆಯೆಂದರೆ - ಕಣ್ವರು ಋಷಿಗಳು. ಅವರು ದೈವಾಂಶ ಸಂಭೂತರು. ಹಿಂದೆ ನಡೆದದ್ದು ; ಮುಂದೆ ನಡೆಯಲಿರುವುದು ಎರಡನ್ನೂ ತಿಳಿಯಬಲ್ಲ ಶಕ್ತಿ ಇದ್ದವರು. ಶಕುಂತಲೆಯನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡವರು. ಇಷ್ಟಿದ್ದೂ, ತಮ್ಮ ಮುದ್ದಿನ ಮಗಳಿಗೆ ದುಷ್ಯಂತ ಹೇಗೆ ಅನುಮಾನಿಸಬಹುದು. ನಂತರ ಆಕೆಗೆ ಯಾವ ಯಾವ ಕಷ್ಟ ಎದುರಾಗಬಹುದು ಎಂಬುದು ಅವರಿಗೇಕೆ ಅರ್ಥವಾಗಲಿಲ್ಲ?

ಅಥವಾ, ಕಣ್ವರಿಗೆ ಇದ್ದ ದಿವ್ಯದೃಷ್ಟಿ ಹಿಂದೆ ನಡೆದದ್ದನ್ನು ಅರಿಯುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿತ್ತೆ? ಕಣ್ವರೇ ಹಿಂದಿನದು ಮತ್ತು ಮುಂದಿನದನ್ನೆಲ್ಲ ಗ್ರಹಿಸಿ ಬಿಟ್ಟರೆ ದುಷ್ಯಂತ - ಶಕುಂತಲೆಯರ ಅಮರಾ ಮಧುರ ಕತೆ ಲೋಕದ ಮಂದಿಗೆ ಸಿಗಲಾರದು ಎಂಬ ನೆಪದಿಂದಲೇ 'ಕವಿ" ಹೀಗೆ ಗೊಂದಲ ಸೃಷ್ಟಿಸಿದನೆ? ಇದ್ದರೂ ಇರಬಹುದು!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+