ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಕಾರಣಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಸಲ್ಲ - ಮೊಯ್ಲಿ

By Staff
|
Google Oneindia Kannada News

Don't bring politics in elections : Moily
ತುರುವೇಕೆರೆ, ಡಿ.8 : ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತೆಯ ಮೇಲುಸ್ತುವಾರಿಗಾಗಿ ಪಟ್ಟಣಕ್ಕೆ ಆಗಮಿಸಿರುವ ಮೊಯ್ಲಿಯವರು, ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. "ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿರುವುದು ಅತ್ಯಂತ ದುರದೃಷ್ಟಕರ" ಎಂದ ಅವರು, "ಚುನಾವಣೆ ಗೆಲ್ಲಬೇಕೆಂಬ ಉದ್ದೇಶದಿಂದ ಅಭ್ಯರ್ಥಿಗಳನ್ನು ನಿಲ್ಲಿಸುವುದು ತಪ್ಪು. ಗೆಲ್ಲುವ ಅಭ್ಯರ್ಥಿಗಳನ್ನೇ ನಿಲ್ಲಿಸತೊಡಗಿದರೆ ಚುನಾವಣೆಯ ಅವಶ್ಯಕತೆಯಾದರೂ ಏನು?" ಎಂದು ಪ್ರಶ್ನಿಸಿದರು.

ಮಾರ್ಗರೆಟ್ ಆಳ್ವ ಕುರಿತು ಮಾತನಾಡಿದ ಅವರು, "ಮ್ಯಾಗಿ ಹೇಳಿದ್ದು ಪೂರ್ತಿ ತಪ್ಪೇನಲ್ಲ. ನವೆಂಬರ್ ಮಕ್ಕಳ ದಿನಾಚರಣೆಯ ತಿಂಗಳು. ಆದ್ದರಿಂದ ತಮ್ಮ ಮಗ ನಿವೇದಿತ್‌ಗೆ ಟಿಕೆಟ್ ಕೊಡದಿದ್ದಕ್ಕೆ ಆಕೆ ಆಕ್ರೋಶ ವ್ಯಕ್ತಪಡಿಸಿದ್ದು ಅರ್ಥವಾಗುವ ಸಂಗತಿ. ಆದರೆ ಜಾಫರ್ ಷರೀಫ್ ಮೊಮ್ಮಗನಿಗೂ ಟಿಕೆಟ್ ಕೊಡಬೇಕು ಅಂದಿದ್ದು ದೊಡ್ಡ ತಪ್ಪು. ನವೆಂಬರ್ 14 ಮಕ್ಕಳ ದಿನಾಚರೆಣೆಯೇ ಹೊರತು ಮೊಮ್ಮಕ್ಕಳ ದಿನಾಚರಣೆ ಅಲ್ಲ. ಕಾಂಗ್ರೆಸ್ ನಾಯಕಿಯಾಗಿ ಈ ವಿಚಾರ ಆಕೆಗೆ ತಿಳಿಯದಿರುವುದು ಆಶ್ಚರ್ಯದ ವಿಚಾರ" ಎಂದರು.

*
ಉಪಚುನಾವಣೆ ನನ್ನ ಇಮೇಜ್‌ಗೆ ಕಡಿಮೆ : ಜಗ್ಗೇಶ್ : ಕನ್ನಡ ಚಿತ್ರರಂಗದ ಕಾಮಿಡಿ ಸೂಪರ್‌ಸ್ಟಾರ್ ಜಗ್ಗೇಶ್, ಈ ಬಾರಿ ತುರುವೇಕೆರೆಯಿಂದ ಸ್ಪರ್ಧಿಸದಿರುವುದಕ್ಕೆ ಅದು ಉಪಚುನಾವಣೆಯಾಗಿರುವುದೇ ಕಾರಣ ಎಂದಿದ್ದಾರೆ.

"ಹಿಂದೆ ನಾನು ಸೆಕೆಂಡ್ ಹೀರೋ ಆಗಿ ನಟಿಸುತ್ತಿದ್ದೆ. ನಿಜ. ಆದರೆ ಈಗ ನನ್ನ ಇಮೇಜ್ ಬದಲಾಗಿದೆ. ಇದೇನಾದರೂ ಜೆನರಲ್ ಎಲೆಕ್ಷನ್ ಆಗಿದ್ದಿದ್ದರೆ ಅದರ ಮಾತೇ ಬೇರೆ" ಎಂದಿರುವ ಜಗ್ಗೇಶ್, "ಈ ಉಪ-ಗಿಪ ಎಲ್ಲಾ ಡಬ್ಬಾಗಳಿಗೆ ಬಿಟ್ಟಿದ್ದೇನೆ" ಎಂದಿದ್ದಾರೆ.

(ಪಿ.ಟಿ.ಹೈ. ಇನ್ ಕೊಲಾಬೊರೇಷನ್ ವಿತ್ ಮಜಾವಾಣಿ.ನೆಟ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X