ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್ಸಿಲೋನಾ ಮತ್ತು ಬೇಸಿಗೆ ಎಂಬ ವೈಭೋಗ!

By ಜಯನಗರದ ಹುಡುಗಿ
|
Google Oneindia Kannada News

ಸೂರ್ಯ ನಮ್ಮೆಲ್ಲರ ಆದಿ ದೇವ. ಅವನ ಪ್ರಕಾಶ ಈಗಿನ ದಿನಗಳಲ್ಲಿ ತುಂಬಾ ಹೆಚ್ಚಿದೆ. ಭೂಮಿಯ ಚಲನೆಯಿಂದ ಬದಲಾಗುವ ವಸಂತಗಳಲ್ಲಿ ನನ್ನ ಪ್ರೀತಿಯದ್ದು ಬೇಸಿಗೆ. ಛಳಿ, ಮಳೆ ನನ್ನ ದೇಹ ಪ್ರಕೃತಿಗೆ ಅಷ್ಟು ಒಗ್ಗುವುದಿಲ್ಲ. ಆಗಾಗ ಆಗುವ ಶೀತ ನೆಗಡಿ ನನ್ನನ್ನು ಮನೆಯಲ್ಲಿಯೇ ಇರುವಂತೆ ಚಿಕ್ಕವಯಸ್ಸಿನಲ್ಲಿ ಮಾಡುತ್ತಿತ್ತು. ಮಳೆ ಬಹಳ ಇಷ್ಟವಾದರೂ ಸಹ, ಆಗಾಗ ನೆನೆಯೋಕೆ ಆಸೆಯಾದ್ರೂ ಬೇಸಿಗೆಯಲ್ಲಿ ಶಾಲೆ ಇರುತ್ತಿರಲ್ಲಿಲ್ಲ ಎಂಬ ಕಾರಣಕ್ಕೆ ಬೇಸಿಗೆಗೆ ಕಾದಿರುತ್ತಿದ್ದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ವಿಪರೀತ ಆಟ ಆಡುವ ಹುಚ್ಚಿರದಿದ್ದ ಕಾರಣ ಮನೆಯಲ್ಲಿನ ಒಂದು ಕುರ್ಚಿಯ ಮೇಲೆ ಕೂತು ಅಲ್ಲೇ ಲೈಬರಿಯಿಂದ ತಂದ ಪುಸ್ತಕ, ಅಥವಾ ಮನೆಯಲ್ಲಿ ಇದ್ದ ಪುಸ್ತಕವನ್ನ ಓದೋ ಆಸೆ ಇರ್ತಿತ್ತು. ಆಗ ಬರುತ್ತಿದ್ದ ಉಷೆ ಚಾನೆಲ್ ನ ದಿನದ 4 ಸಿನೆಮಾವನ್ನು ನೋಡಲು ಪ್ರಯತ್ನ ಪಡುತ್ತಿದ್ದೆ. ಆಗಾಗ ಒಮ್ಮೆ ಅಮ್ಮ ಸೇರಿಸುತ್ತಿದ್ದ ಬೇಸಿಗೆ ಕ್ಯಾಂಪ್, ಸ್ವಿಮ್ಮಿಂಗ್ ಕ್ಲಾಸ್ ಗಳಲ್ಲಿ ಏನೋ ಮಾಡಿ ಬರುತ್ತಿದ್ದೆ.

ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?

ನಾನೂ ನನ್ನ ಪುಸ್ತಕವಂತಿದ್ದ ಸಮ್ಮರ್ ನಲ್ಲಿ ಆ ವರ್ಷದ ಹೊಸ ಬೇಡಿಕೆಗಳ ಪ್ರಸ್ತಾವನೆಯನ್ನ ಸಲ್ಲಿಸುವ ಕೆಲಸವಾಗುತ್ತಿತ್ತು. ಹೊಸ ಬ್ಯಾಗ್ ಬೇಕು, ಹೊಸ ಬುಟ್ಟಿ ಬೇಕು, ಸಾಕ್ಸ್ ಹಳೇದಾಗಿದೆ. ಟಾಮ್ ಅಂಡ್ ಜರಿ ಇರುವ ಲೇಬಲ್ ಬೇಕು ಹಿಂಗೆಲ್ಲ ಶುರುವಾಗುತ್ತಿತ್ತು. ಅಪ್ಪಿ ತಪ್ಪಿ ಹೋದ ವರ್ಷ ನಾ ಹೇಳಿದಷ್ಟು ಮಾರ್ಕ್ಸ್ ಬಂದಿದ್ದರೆ ಈ ವರ್ಷ ಅದಕ್ಕೆ ಬಹುಮಾನವೂ ಬರುತ್ತಿತ್ತು. ನಮ್ಮ ವಾತಾವರಣ ಅಷ್ಟು ಭಿನ್ನವಾಗಿರುತ್ತಿರಲ್ಲಿಲ್ಲ ಕಾರಣ ಸಮ್ಮರ್ ಅನ್ನೋದು ಅಷ್ಟೇನೂ ಮುಖ್ಯವಾಗುತ್ತಿರಲ್ಲಿಲ್ಲ. ನಾ ಬಾರ್ಸಿಲೋನಾಗೆ ಹೋಗುವವರೆಗೂ.

I love summer more than any other season

ಮೊನ್ನೆ ನನ್ನ ಗೆಳತಿಯರು ಮ್ಯೂನಿಕ್, ಬಾರ್ಸಿಲೋನಾ ಮತ್ತು ಲಕ್ಸೆಂಬರ್ಗಿಂದ ಕರೆ ಮಾಡಿದ್ದರು. ಒಟ್ಟಿಗೆ ಹೋದ ವರ್ಷ ನಾವೆಲ್ಲ ಸ್ನಾತಕೋತ್ತರ ಪದವಿಯ ಥೀಸಿಸ್ ಗೆ ಲೈಬ್ರರಿಯಲ್ಲಿ ಗುದ್ದಾಡುತ್ತಿದ್ದನ್ನ ನೆನಸಿಕೊಳ್ಳುತ್ತಿದ್ದೆವು. ಫ್ಯಾನ್ ಶಬ್ದ ಜಾಸ್ತಿ ಆಯಿತೆಂದು ಆರಿಸಲು ಹೋದಾಗ ಅವರೆಲ್ಲಾ ಓಹ್ ಆಗಲೇ ಅಲ್ಲಿ ಸಮ್ಮರ್ ಆ. ಎಂದು ಬಾಯಿ ಬಿಟ್ಟಿದ್ದು ನನಗೆ ವಿಚಿತ್ರ ಅನ್ನಿಸಿತ್ತು.

ಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪ

ಬಾರ್ಸಿಲೋನಾದಲ್ಲಿ ಮಳೆ, ಮ್ಯೂನಿಕ್ ನಲ್ಲಿ ಇನ್ನು ಮಂಜು, ಲಕ್ಸಂಬರ್ಗ್ ನಲ್ಲಿ ಕೊರೆಯುವ ಛಳಿ. ಒಂದಷ್ಟು ವರ್ಷದ ನಂತರ ಬಾರ್ಸಿಲೋನಾದಲ್ಲಿ ವಿಪರೀತ ಹಿಮಪಾತವಾಯಿತೆಂದು ಗೆಳತಿಯರು ಹೇಳುತ್ತಿದ್ದರು. ದಿನಾ ಸೂರ್ಯನನ್ನು ನೋಡುವ ನಾವು ಪುಣ್ಯವಂತರೆಂದು ಅವರೆಲ್ಲಾ ತಿಳಿಸುತ್ತಿದ್ದರು. ವಾಟ್ ಪ್ಲಾನ್ ಫಾರ್ ಬೇಸಿಗೆ ಅಂದಾಗ ನನಗೇನೂ ವಿಶೇಷವೆನಿಸಲ್ಲಿಲ್ಲ. ಬೆಂಗಳೂರಿನಲ್ಲಿ ಇದ್ದವರಿಗೆ ಸಮುದ್ರವಿಲ್ಲ, ನನ್ನಂತಹ ಸೋಂಬೇರಿಗೆ ಆರಾಮ ಖುರ್ಚಿಯ ಸುಖವಷ್ಟೆ.

ಆದ್ರೆ ನಾ ಬಾರ್ಸಿಲೋನಾದಲ್ಲಿ ಇದ್ದಾಗ ಬೇಸಿಗೆ ಅಂತಾನೆ ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನ ನಮ್ಮ ಮನೆ ಒಡತಿ ಹಾಗೂ ಗೆಳೆಯರು ಗೆಳತಿಯರು ಹಮ್ಮಿಕೊಂಡಿದ್ದರು. ಬೇಸಿಗೆ ಶುರುವಾಗುವ ಹಿಂದಿನ ಶನಿವಾರ ಎಲ್ಲಾ ಛಳಿಗಾಲದ ಬಟ್ಟೆಯನ್ನ ಡ್ರೈ ಕ್ಲೀನ್ ಮಾಡಿಸಿ ಅಟ್ಟದ ಮೇಲೆ ತುಂಬಾ ಚೆನ್ನಾಗಿ ಇಡುತ್ತಾರೆ.

I love summer more than any other season

ಬೇಸಿಗೆ ಶುರುವಾಗುವ ಮುನ್ನ ನನ್ನ ಮನೆ ಒಡತಿ "cualquier ropa" ಅಂದರೆ ಬಟ್ಟೆಗಳು ಇವೆಯೇ ಎಂದು ಕೇಳಿದಳು. ನನಗೆ ಇವೆಲ್ಲಾ ಹೊಸದು. ನಾವು ಛಳಿಗೆ ಜ್ಯಾಕೆಟ್ ಹಾಕೋತೀವಿ, ಬೇಸಿಗೆಗೆ ತೆಗೀತೀವಿ. ಇವರೆಲ್ಲ ಒಳ ಬಟ್ಟೆಗಳಿಂದ ಹಿಡಿದು ಎಲ್ಲವನ್ನು ಪ್ರತಿ ಹವಾಮಾನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಇದೊಂಥರಾ ವಿಚಿತ್ರವಾಗಿ ನನಗೆ ಕಂಡಿತು. ನಾಲಕ್ಕು ಬಟ್ಟೆಯಲ್ಲಿ ಜೀವನ ಇವರೆಲ್ಲಾ ಹೇಗೆ ಸಾಗಿಸುತ್ತಾರೆ ಎಂದು ನಾನು ಯೋಚಿಸುತ್ತಿದ್ದೆ.

ಬೆಂಗಳೂರಿನ ಯುವ ಸಾಹಿತ್ಯ ಪ್ರೇಮಿಗಳ ಕನ್ನಡ 'ಕಹಳೆ'!ಬೆಂಗಳೂರಿನ ಯುವ ಸಾಹಿತ್ಯ ಪ್ರೇಮಿಗಳ ಕನ್ನಡ 'ಕಹಳೆ'!

ಇಡೀ ಮನೆಗೆ ಗಾಢವಾದ ಬಣ್ಣದ ಕರ್ಟನ್ಗಳನ್ನೆಲ್ಲಾ ತೆಗೆದು, ವರಾಂಡದಲ್ಲಿನ ಶೂಸ್ಗಳನ್ನೆಲ್ಲಾ ತೆಗೆದು ಮತ್ತೆ ಅಟ್ಟದ ಮೇಲೆ ಹಾಕಿದಳು. ಇವಷ್ಟು ಜೀವನದಲ್ಲಿ ಕಂಡುಕೊಂಡ ಬದಲಾವಣೆ. ನಂತರ ಗಡಿಯಾರದ ಸಮಯ ಹೊಂದಿಸಿಕೊಳ್ಳೋದು. ಈ ಗ್ರೀನ್ ವಿಚ್ ಮೆರಿಡಿಯನ್ ಸಮಯಕ್ಕಿಂತ 2 ಘಂಟೆ ಮುಂದಕ್ಕಿರುವ ಸಮಯ ಛಳಿಗಾಲದಲ್ಲಿ ಭಾರತಕ್ಕಿಂತ 3.5 ಘಂಟೆ ಹಿಂದಕ್ಕಿರುತ್ತದೆ. ಬೇಸಿಗೆಯಲ್ಲಿ 4.5 ಘಂಟೆ. ಇದೆಲ್ಲಾ 25 ಮಾರ್ಚಿಗೆ ಬೇರೆ ಸರಿಹೊಂದಿಸಿಕೊಳ್ಳಬೇಕು. ಡೇ ಲೈಟ್ ಸೇವಿಂಗ್ಸ್ ಬೇರೆ. ಇದೆಲ್ಲಾ ಏನಪ್ಪ ಎಂದು ಸುಮ್ಮನಾದೆ.

ನಂತರ ಮನೆಯೊಡತಿಯ ಅಕ್ಕ ಬಂದು ಬೀಚಿಗೆ ಹೋಗೋಣ ನಡಿ ಎಂದಳು. ನಾನು ಆರಾಮಾಗಿ ಒಂದು ಪ್ಯಾಂಟ್ ಶರಟು ಹಾಕಿಕೊಂಡು ಬಂದೆ. ಅಲ್ಲಿ ಹೋದ ನಂತರ ಬಿಕಿನಿಯಲ್ಲಿ ಅವಳು, ಅವಳ ಮಗಳು ನೀರಿಗಿಳಿದರು. ನಾನು ಶರಟು ಪ್ಯಾಂಟಿನಲ್ಲಿ ಇಳಿಯೋಕೆ ಹೋದಾಕ್ಷಣ ಅವಳು 'ನಾದಾ' ಎಂದು ಕೂಗಿಕೊಂಡಳು. ನಾನು ಏನಪ್ಪ ಅಲ್ಲಿ ಆಕ್ಟೋಪಸ್ ಅಥ್ವಾ ಶಾರ್ಕ್ ಬಂತೆಂದು ಅಂದುಕೊಂಡ್ರೆ ಇದೇ ಬಟ್ಟೆಯಲ್ಲಿ ಇಳಿಯಬೇಡ ಎಂದು ತಾಕೀತು ಮಾಡಿದಳು.

I love summer more than any other season

ಅದೆಲ್ಲಾ ನನ್ನ ಹತ್ತಿರ ಇಲ್ಲ ಎಂದು ಮನವರಿಕೆ ಮಾಡಿ, ಒಂದಷ್ಟೊತ್ತು ಸಮುದ್ರ ಸ್ನಾನ ಮಾಡಿದ ನಂತರ ಮತ್ತೊಂದು ಕಡೆ ಬೀಚಿನ ಆ ಕಡೆ ಕರೆದುಕೊಂಡು ಹೋದಳು. ಅಲ್ಲಿ ಎಲ್ಲರೂ ಬೆತ್ತಲೆಯಾಗಿ ಮಲಗಿದವರೆ. ಮೈ ಮೇಲೆ ಒಂದಿಂಚೂ ಬಟ್ಟೆಯಿಲ್ಲ. ಇದು ನ್ಯೂಡ್ ಬೀಚ್ ನೋಡು ಎಂದಳು. ನಗ್ನತೆಯ ಬಗ್ಗೆ ಒಂದುಚೂರು ನಾಚಿಕೆಯಿಲ್ಲದೆ ಮಲಗಿದ್ದರು. ನನಗೆ ಆಶ್ಚರ್ಯವಾಗಿದ್ದು ಅವ್ರೆಲ್ಲಾರೂ ಮೈ ಮೇಲೆ ಪೂರ್ತಿ ಬಟ್ಟೆ ಹಾಕಿಕೊಂಡಿದ್ದ ನನ್ನ ಗುರಾಯಿಸಿದ್ದು. ಬಿಳಿ ಚರ್ಮದವರು ಟ್ಯಾನ್ ಆಗೋದಕ್ಕೆ ಇಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂದು ಗೊತ್ತಾಯಿತು.

ಬೆಂಗಳೂರಿನ ಬೇಸಿಗೆಯಲ್ಲಿ ಅಮ್ಮ ತರುತ್ತಿದ್ದ ಹತ್ತಿ ಬಟ್ಟೆ ಹಾಕಿಕೊಂಡು ಈಸಿ ಚೇರಿನಲ್ಲಿ ಕಾದಂಬರಿಗಳನ್ನ ಓದುತ್ತಿದ್ದದ್ದೇ ಸುಖ ಎಂದು ಅನ್ನಿಸಿತ್ತು. ಬಾರ್ಸಿಲೋನಾದ ಬೇಸಿಗೆ ತುಂಬಾ ಮೆಥಾಡಾಲಾಜಿಕಲ್ ಅನ್ಸ್ತು ನೋಡಿ!

English summary
Meghana Sudhindra writes why she loves summer more than any other season. For school going children summer means, no school and only holidays. For some it is forced summer camp. But, how people would celebrate summer in Barcelona? Read this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X