ವಿಡಿಯೋ: ಆಫೀಸ್ ನಲ್ಲಿ ಯಾವಾಗ ಯಾವ ಹಾಡು ಚೆಂದ!

Posted By:
Subscribe to Oneindia Kannada


Namduk ತಂಡದಿಂದ ಹೊಸ ಹಾಸ್ಯ ಕಿರುಚಿತ್ರ "ಆಫೀಸ್, ಆಫೀಸ್, ಆಫೀಸ್" ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಈ ಮುಂಚೆ 'ಪರೀಕ್ಷೆ, ಪರೀಕ್ಷೆ, ಪರೀಕ್ಷೆ' ಎಂಬ ಕಿರುಚಿತ್ರದಲ್ಲಿ ಎಕ್ಸಾಂ ಹಾಲ್ ನಲ್ಲಿ ನಡೆಯುವ ಗೊಂದಲಗಳನ್ನು ಹಾಡಿನ ಮೂಲಕ ಪರಿಚಯಿಸಿದ್ದ ತಂಡ ಈಗ ಕಚೇರಿಗೆ ನುಗ್ಗಿದೆ.

ಪರೀಕ್ಷೆ ಕಿರುಚಿತ್ರ ಅಥವಾ ಹಾಸ್ಯಗೀತಾ ರೂಪಕದ ಮಾದರಿಯಲ್ಲೇ ಆಫೀಸ್ ಕೂಡಾ ಸಾಗಿದೆ. ನಿಮ್ಮ ಮ್ಯಾನೇಜರ್ ಗೆ ಬಕೆಟ್ ಹಿಡಿಯಬೇಕಾದರೆ ಯಾವ ಹಾಡಬೇಕು? ನಿಮ್ಮ ಟೀಂ ನಲ್ಲಿ ಯಾವುದಾದರೋ ಮಹಿಳಾ ಉದ್ಯೋಗಿ ಹೆಲ್ಪ್ ಎಂದರೆ ಯಾವ ಹಾಡು ಗುನುಗಬಹುದು? ಅದೇ ಪುರುಷ ಉದ್ಯೋಗಿ ಹೆಲ್ಪ್ ಕೇಳಿದರೆ ಹೇಗೆ ಯಾರು ಕೂಡಾ ಹೆಲ್ಪ್ ಮಾಡಲ್ಲ?[ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್]

Namduk Team presents Office Office Office new comedy short film

ತಿಂಗಳ ಆರಂಭದಲ್ಲಿ ಸಿಗುವ ಸ್ಯಾಲರಿ ಸ್ಲಿಪ್ ನಲ್ಲಿ ಎಲ್ಲಾ ಕಳೆದು ಸಿಗುವ ಮೊತ್ತ ನೋಡಿದರೆ ಕಣ್ಣೀರ ಕೋಡಿ ಹರಿಯುವುದೊಂದೆ ಬಾಕಿ, ಒಂದು ದಿನದ ರಜೆ ಬೇಕಾದರೆ ಬಾಸ್ ಗೆ ಮಸ್ಕಾ ಹಚ್ಚಬೇಕು? ಅದೇ ಬಾಸ್ ಎಂಬ ರಾಕ್ಷಸ ಮಾಯಾ ಆದಾಗ ಏನು ಮಾಡಬಹುದು. [ನಮ್ದುಕೆ ಟೆಕ್ಕಿಗಳ ಕಥೆ ವ್ಯಥೆ ತಿಳಿಸುವ ಅಣ್ತಮ್ಮ ಸಾಂಗ್]

ಅದೇ ಬಾಸ್ ಮುಂದೆ ಬೇಜಾನ್ ನಿಗರಾಡಿದಾಗ, ಬಾಸ್ ಗೆ ಅವಾಜ್ ಹಾಕುವ ಉದ್ಯೋಗಿ ಹುಟ್ಟಿ ಕೊಂಡಾಗ ಹೀಗೆ ಕಚೇರಿ ಕಲಾಪಗಳಿಗೆ ತಕ್ಕಂತೆ ಹಾಡು ಹೊಂದಿಸಿ ನಿಮ್ಮ ಮುಂದಿಟ್ಟಿದ್ದಾರೆ ನಮ್ದುಕೆ ತಂಡ..[ನಮ್ದುಕೆ ನಿಮ್ದುಕೆ ಅವರ್ದುಕೆ ನೋಡ್ಬೇಕಾದ್ ವಿಡಿಯೋ]

ಈ ವಿಡಿಯೋದಲ್ಲಿ ಗೌತಮ್ ಶಶಿಧರ್, ಗೌತಮ್ ಅನೇಶ್, ಭರದ್ವಾಜ್ ಡಿ ಜಗನ್ನಾಥ್, ಅರ್ಜುನ್ ಎ ಆರ್,ಸಚಿನ್, ಶ್ರವಣ್ ನಾರಾಯಣ್ ಇದ್ದಾರೆ.

ಈ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ಅಷ್ಟೇ ಅಲ್ಲಾ ನಮ್ಮ ನಮ್ದುK ಚಾನೆಲ್ ಗೆ subscribe ಆಗಿ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Namduk Team presents Office Office Office new comedy short film about the day to day activities of corporate life in a humorous manner
Please Wait while comments are loading...