ನಿಮ್ಮನ್ನ ನಗಿಸೋಕೆ ನಮ್ದುಕೆ ತಂಡದಿಂದ fbಪ್ರಸಂಗಿ ವಿಡಿಯೋ

Posted By:
Subscribe to Oneindia Kannada

ಈಗೆಲ್ಲ ವೆಬಿಸೋಡ್ ಗಳ ಕಾಲ. ಮನೆಯಲ್ಲಿ ಕೂತು ಕಲರ್ಸ್ ವಾಹಿನಿ, ಸುವರ್ಣ, ಕಸ್ತೂರಿ, ಉದಯ, ಜೀ ಟಿವಿಯಲ್ಲಿ ಬರುವ ಸೀರಿಯಲ್ ಗಳನ್ನು ನೋಡುತ್ತಿದ್ದ ಪ್ರೇಕ್ಷಕ ವರ್ಗವನ್ನು ಸೆಳೆಯಲು ಆನ್ ಲೈನ್ ನಲ್ಲಿ ಯೂಟ್ಯೂಬಿನಲ್ಲಿ ಸರಣಿ ಎಪಿಸೋಡುಗಳ ಧಾರಾವಾಹಿಗಳು ಶುರುವಾಗುತ್ತಿವೆ. ನಿಮ್ಮನ್ನ ನಗಿಸೋಕೆ ನಮ್ದುಕೆ ತಂಡ ಮತ್ತೊಂದು ಹಾಸ್ಯಮಯ ವಿಡಿಯೋ ಹೊರ ತಂದಿದೆ.

ಹಾಸ್ಯಮಯ ವೆಬಿಸೋಡ್: ಎಕ್ಸಾಂ ನಿಮಿತ್ತಂ ಬಹುಕೃತ ವೇಷಂ

ವೆಬ್ ನಲ್ಲಿ ಪ್ರಸಾರವಾಗುವ ಎಪಿಸೋಡುಗಳನ್ನು ನಿರ್ಮಾಣ ಮಾಡಲು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮುಂದೆ ಬಂದಿದ್ದಾರೆ. ನಟ ಅನೀಶ್ ತೇಜೇಶ್ವರ್ ಅವರು ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ.

NamduK team is back with new episode on Facebook addiction.

ಮಿಮಿಕ್ರಿ, ಚಹಾದಂಗಡಿ -ನೋಟ್ ಬ್ಯಾನ್ ಮೂಲಕ ಜನಪ್ರಿಯತೆ ಗಳಿಸಿರುವ ಜಯಂತ್ ಬೆಳ್ಳೂರು ಅವರು ಕೂಡಾ ವೆಬಿಸೋಡು ಆರಂಭಿಸಿದ್ದಾರೆ. ನಮ್ದುಕೆ ತಂಡದ ಶ್ರವಣ್ ಅವರು ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಹೆಸರಿನಲ್ಲಿ ವೆಬ್ ಸರಣಿ ಆರಂಭಿಸ ಬಳಿಕ ಫೇಸ್ ಬುಕ್ ಚಟ ಬೆಳೆಸಿಕೊಂಡವರ ಬಗ್ಗೆ ಹೊಸ ಸರಣಿ ಆರಂಭಿಸಿದ್ದಾರೆ.

fbಪ್ರಸಂಗಿ ಅಂದರೆ ಮೂರು ಹೊತ್ತು ಫೇಸ್ಬುಕ್ನಲ್ಲೇ ಇರುವ ವ್ಯಕ್ತಿ. ನಮ್ಮ ಅಮಿಕೊಂಡಿರಪ್ಪ ಸೀರೀಸ್ ನ ಮೊದಲ ಕಂತು "fbಪ್ರಸಂಗಿ" ಇದೋ ನಿಮ್ಮ ಮುಂದೆ.

ಎಲ್ಲರೂ ವೀಡಿಯೊ ನೋಡಿ, ಇಷ್ಟ ಆದಲ್ಲಿ ಲೈಕ್ ಮಾಡಿ ಹಾಗು ಶೇರ್ ಮಾಡಿ .ಮುಂದಿನ ಕಂತು ಗಳಿಗಾಗಿ ನಮ್ಮ ಚಾನೆಲ್ ಗೆ subscibe ಆಗಿ ಹಾಗೆ ನಮ್ಮ ಫೇಸ್ಬುಕ್ ಪೇಜ್ Namdu Kannada ಕೂಡ ಲೈಕ್ ಮಾಡಿ ಎಂದು ನಮ್ದುಕೆ ತಂಡ ಶ್ರವಣ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
NamduK team is back with new episode on Facebook addiction.Amikondirappa is a Web Series . FB prasangi is the first episode where recruiter interviews Facebook obsessed candidate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ