ಜನಸಾಮಾನ್ಯರ ಪ್ರಕಾರ ಕನ್ನಡ ನ್ಯೂಸ್ ಚಾನೆಲ್ ಅಂದ್ರೆ? ಹೀಗೂ ಉಂಟು!

Posted By:
Subscribe to Oneindia Kannada

''ಅಯ್ಯೋ...ಎದ್ದು ರೆಡಿ ಆಗಿದ್ದು ಲೇಟ್ ಆಯ್ತು, ಅಸೈನ್ಮೆಂಟ್ ಗೆ ಟೈಮ್ ಆಗೋಯ್ತಲ್ಲಾ'' ಅಂತ ಅರ್ಧಂಬರ್ಧ ತಿಂಡಿ ತಿಂದು, ನೀರು ಕುಡಿಯೋಕೂ ಪುರುಸೊತ್ತು ಇಲ್ಲದೆ, ವಾರದಿಂದ ಸೋಪು-ನೀರು ಕಾಣದ ಪ್ಯಾಂಟು-ಶರ್ಟ್ ಹಾಕೊಂಡು, ಬೆನ್ನಿಗೆ ಒಂದು ಬ್ಯಾಗ್ ನೇತು ಹಾಕೊಂಡು ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ಕ್ಯಾಮರಾಮ್ಯಾನ್ (ಯಾವ ನ್ಯೂಸ್ ಚಾನೆಲ್ ಅಂತ ಕೇಳ್ಬೇಡಿ) ಗಡಿಬಿಡಿಯಿಂದ ರೂಮ್ ಬಾಗಿಲಿಗೆ ಬೀಗ ಹಾಕಿ ಹೊರಟ.

ಸಮಯಕ್ಕೆ ಸರಿಯಾಗಿ ಓನರ್ ಅಂಕಲ್ ಅಡ್ಡ ಬಂದ್ರು.

Hello, TV Cameraman cover my daughter's marraige also

ಅಂಕಲ್ : ಏನಪ್ಪಾ, ಹೊರಟ್ರಾ ಆಫೀಸಿಗೆ?

ಕ್ಯಾಮರಾಮ್ಯಾನ್ : ಹ್ಹೂಂ ಅಂಕಲ್, ಇವತ್ತು ಲೇಟ್ ಆಗೋಯ್ತು

ಅಂಕಲ್ : ಒಂದ್ನಿಮಿಷ ಇರಪ್ಪಾ, ಮುಂದಿನ ವಾರ ನನ್ ಮಗಳ ಮದುವೆ. ನೀವು ತಪ್ಪದೆ ಬರಬೇಕು.

ಕ್ಯಾಮರಾಮ್ಯಾನ್ : ಓಕೆ ಅಂಕಲ್, ಗ್ಯಾರೆಂಟಿ ಬರ್ತೀನಿ.

ಅಂಕಲ್ : ನೀನ್ ಮಾತ್ರ ಅಲ್ಲ, ಬೇರೆ ಚಾನೆಲ್ ನಲ್ಲಿ ಇರೋ ಕ್ಯಾಮರಾಮ್ಯಾನ್, ರಿಪೋರ್ಟರ್ ಗಳನ್ನೂ ಕರ್ಕೊಂಡು ಬಾರಪ್ಪ.

ಕ್ಯಾಮರಾಮ್ಯಾನ್ : ಏನ್ ವಿಶೇಷ ಅಂಕಲ್?

ಅಂಕಲ್ : ನೀವೆಲ್ಲಾ ಚೆನ್ನಾಗಿ ಮದುವೆ ಕವರೇಜ್ ಮಾಡ್ತೀರಾ. ನನ್ ಮಗಳ ಮದುವೆನೂ ಚೆನ್ನಾಗಿ ಕವರ್ ಮಾಡಿ.

ಕ್ಯಾಮರಾಮ್ಯಾನ್ : ಅಯ್ಯೋ...ನಾವು ಮದುವೆ ಎಲ್ಲಾ ಕವರ್ ಮಾಡಲ್ಲ ಅಂಕಲ್.!

ಅಂಕಲ್ : ಏಯ್..ನನಗೆ ಗೊತ್ತಿಲ್ವಾ? ವಾರ ಎಲ್ಲಾ ಶಿವಣ್ಣನ ಮಗಳ ಮದುವೆ ತೋರಿಸಿದ್ರೀ, ಯಶ್ ನಿಶ್ಚಿತಾರ್ಥ ಮಾಡಿಕೊಂಡಿದನ್ನ ಇಡೀ ದಿನ ಹಾಕಿದ್ರಿ....

ಕ್ಯಾಮರಾಮ್ಯಾನ್ : ಅದು ಹಾಗಲ್ಲ ಅಂಕಲ್.

ಅಂಕಲ್ : ನನ್ನ ಮಗಳ ಮದುವೆ ದಿನ ಪೂರ್ತಿ ಹಾಕೋದು ಬೇಡ. ಆಗಾಗ ಒಂದೊಂದು ನಿಮಿಷ ಬಂದ್ರೆ ಸಾಕು.

ಕ್ಯಾಮರಾಮ್ಯಾನ್ : ಇದೆಲ್ಲ ಮಾಡೋಕೆ ಆಗಲ್ಲ ಅಂಕಲ್

ಅಂಕಲ್ : ಶಿವಣ್ಣ ಮಗಳ ಮದುವೆ, ಯಶ್ ಎಂಗೇಜ್ಮೆಂಟ್ ಎಲ್ಲಾ ಫ್ರೀ ಆಗಿ ಕವರ್ ಮಾಡಿದ್ದೀರಾ, ಯಶ್ ಕರೆಯದೆ ಇದ್ರೂ ಗೋವಾಗೆ ಹೋಗಿದ್ರಿ? ನಾನು ಬಾಯ್ಬಿಟ್ಟು ಕರೀತಿದ್ದೀನಿ. ನಿಮ್ಮ ಓನರ್ ಮಗಳು ಮದುವೆ ಕವರ್ ಮಾಡಿಕೊಡಲ್ವಾ? ಜೊತೆಗೆ ಮದುವೆಗೆ ಬಂದವರನ್ನೆಲ್ಲರನ್ನೂ ಮಾತಾಡಿಸ್ತೀರಾ ತಾನೆ.?

ಓನರ್ ಅಂಕಲ್ ಮಾತು ಕೇಳಿ ಕ್ಯಾಮರಾಮ್ಯಾನ್ ಸ್ತಬ್ಧ.!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hello, TV Cameraman, Cover my daughter's marriage also - asks a Common Man. Here is a hilarious conversation between TV Cameraman and a Common Man
Please Wait while comments are loading...