ಸೀಸನ್ನಲ್ಲಿ ಹಿಂಗೂ ಇರುತ್ತೆ.. ಮಿಸ್ಸಾದ್ರೆ ಹಂಗೂ ಇರುತ್ತೆ..

By: * ಕಾಲ್ಪನಿಕ ಸಂದರ್ಶನ: ಮೋಹನ್ ಎಚ್, ಬೆಂಗಳೂರು
Subscribe to Oneindia Kannada
A mock interview with BS Yeddyurappa
ಕುಂತ್ರೆ ನಿಂತ್ರೆ ಕುರ್ಚಿಯದೇ ಧ್ಯಾನ, ಜೀವಕ್ಕಿಲ್ಲ ಸಮಾಧಾನ. ಇದು ಮುಖ್ಯಮಂತ್ರಿ ಕುರ್ಚಿಯ ಮೇಲೆ ಒಂದು ಗಿಡುಗನ ಕಣ್ಣು ಇಟ್ಟೇ ಇರುವ ಮಾಜಿ, ಕ್ಷಮಿಸಿ, ನಿಕಟಪೂರ್ವ ಮುಖ್ಯಮಂತ್ರಿ ಯಡ್ಡ್ಯೂರಪ್ಪನವರ ಸದ್ಯದ ಪರಿಸ್ಥಿತಿ. ಛಲ ಬಿಡದ ಜೇಡದಂತೆ ಕುರ್ಚಿಯ ಸುತ್ತ ತಮ್ಮ ಬಲೆಯನ್ನು ಸುತ್ತುತ್ತಲೇ ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡ್ಡ್ಯೂರಪ್ಪನವರೊಂದಿಗೆ ನಡೆಸುವ ಕಿರುಸಂದರ್ಶನ ಹಿಂಗೂ ಇರಬಹುದೇ..

ಪ್ರಶ್ನೆ: ಮಾಜಿ ಮುಖ್ಯಮಂತ್ರಿ ಯಡ್ಡ್ಯೂರಪ್ಪ ಅವರೇ ಹೇಗಿದೆ ಜೀವನ..?
ಬಿಎಸ್‌ವೈ: ಬೇಕಾದ್ರೆ ಹಿಡ್ಕೊಂಡು ಪೈಡ್ ಪೈಡ್ ಅಂತಾ ನಾಲಕ್ ಹೊಡಿರಿ, ಮಾಜಿ ಅಂತಾ ಮಾತ್ರ ಕರೀಬೇಡಿ. ಹೌದೂ.. ಕಿತ್ತಾಕೊಂಡು(ತಲೆ ಕೂದ್ಲುನ) ಕನ್ನಡ ಡಿಕ್ಷನರಿಲಿ ಹುಡುಕ್ಸಿ ಹೆಸ್ರು ಮುಂದೆ ನಿಕಟ ಪೂರ್ವ ಅಂತಾ ಹಾಕೊಂಡಿರೋದ್ ಸುಮ್ನೇನಾ, ನಿಕಟಪೂರ್ವ ಮುಖ್ಯಮಂತ್ರಿ ಅನ್ನೋಕೆ ಏನ್ರಿ ನಿಮ್ಗೆ..?

ಪ್ರಶ್ನೆ: ಅಷ್ಟೊಂದ್ ಅಭಿಮಾನನ ಸರ್ ಕನ್ನಡ ಮೇಲೆ..! ಒಂದ್ ಐಡಿಯಾ, ಬಿಎಸ್‌ವೈ: ನಿಮ್ ಹೆಸ್ರು ಬೂಕನಕೆರೆ ಸಿದ್ದಲಿಂಗಪ್ಪ ಯಡ್ಡ್ಯೂರಪ್ಪ ಅಲ್ವಾ, ಬೂಕನಕೆರೆಯಿಂದ (ಬೂ) ತಗೊಂಡು ಸಿದ್ದಲಿಂಗಪ್ಪಯಿಂದ (ಸಿ) ತಗೊಂಡು ಬೂ.ಸಿ.ಯಡ್ಡ್ಯೂರಪ್ಪ ಅಂತಾ ಇಟ್ರೆ ಹೆಂಗೆ..?
ಬಿಎಸ್‌ವೈ: ನೋ ಕಾಮೆಂಟ್ಸ್..! ಜನ ಡಿಸೈಡ್ ಮಾಡ್ಲಿ ಅದನ್ನ..

ಪ್ರಶ್ನೆ: ಸಿಎಂ ಸದಾನಂದಗೌಡರ ಬಗ್ಗೆ ಒಂದೆರಡು ಮಾತು.
ಬಿಎಸ್‌ವೈ: ಇವಾಗ್ ತಾನೇ ಡಾಕ್ಟ್ರು ಬಿಪಿ ಚೆಕ್ ಮಾಡಿ ನಾರ್ಮಲ್ ಅದೆ ಅಂತಾ ಹೇಳಿದಾರೆ, ಬೇಕಾ ಅದೆಲ್ಲಾ ಈಗ.

ಪ್ರಶ್ನೆ: ನಿಮ್ಮ ಬಣದ ಶಾಸಕರು ಅಧಿವೇಶನಕ್ಕೆ ಗೈರಾಗುತ್ತಿದ್ದಾರಲ್ಲ, ಇದರ ಹಿಂದಿನ ಮರ್ಮ..?
ಬಿಎಸ್‌ವೈ: ಮರ್ಮ ಹೇಳೋಕೆ ನಾನೇನ್ ಸಸ್ಪೆನ್ಸ್ ಡೈರೆಕ್ಟ್ರು ಸುನೀಲ್ ಕುಮಾರ್ ದೇಸಾಯಿನಾ? ಮಜಬೂತಾಗಿ ಗಡ್ಡ ಬಿಟ್ಕೊಂಡ್ ಆಡೋ ಹುಡ್ಗನ್ ತರ ಇರೋ ನಮ್ ಲಕ್ಷ್ಮಣ ಸವದಿ ಹತ್ರನೇ ಫೋನ್ ಕಿತ್ಕೊಂಡವ್ರೆ. ಇನ್ನೇನಿದೆ ಅಲ್ಲಿ ಕಿಸಿಯಕ್ಕೆ?

ಪ್ರಶ್ನೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಪುಟ್ಟಸ್ವಾಮಿ ಅವರನ್ನು ಬಿಜೆಪಿಯಿಂದ ಸಸ್ಪೆಂಡ್ ಮಾಡಿರುವುದು ನಿಮಗೆ ಬೇಸರ ತಂದಿದೆಯಾ..?
ಬಿಎಸ್‌ವೈ: ಛೇ.. ಇಲ್ಲ ಇಲ್ಲ.. ಇವಾಗ್ ಇವಾಗ ನಂಗೇ ಮಾಡೋಕ್ ಕೆಲ್ಸ ಇಲ್ಲ ಅಂದ್ರೆ ಸುಮ್ನೆ ಯಾವ್ದಾದ್ರು ಪೋಸ್ಟಿಂಗ್ ಮಾಡ್ಸಿ ಅಂತಾ ಪ್ರಾಣ ತಿಂತಿದ್ದ ಮನುಷ್ಯ.. ಅದಕ್ಕೆ ರಾಜ್ಯಸಭೆ ರೆಬೆಲ್ ಕ್ಯಾಂಡಿಡೇಟ್ ಮಾಡ್ಸೋ ಪ್ಲಾನ್ ಮಾಡ್ಸಿದ್ದು. Now I am happy.

ಪ್ರಶ್ನೆ: ಅಕ್ರಮ ಫಾರಿನ್ ಮದ್ಯ ಶೇಖರಣೆಗಾಗಿ ಅಬಕಾರಿ ಸಚಿವ ರೇಣುಕಾಚಾರ್ಯರ ಮೇಲೆ ಮೊಕದ್ದಮೆ ದಾಖಲಾಗಿರುವುದರ ಬಗ್ಗೆ..?
ಬಿಎಸ್‌ವೈ: ಲೋಕಲ್ ಎಣ್ಣೆ ಸಾಕು ಅಂದಿದ್ರು ನಮ್ ಕಡೆವ್ರು. ಅಲ್ಲೇ ಸುತ್ತಾ ಮುತ್ತಾ ಸಿಗೋ ಬ್ರ್ಯಾಂಡ್‌ನ ಕಳ್ಸು ಅಂತಾ ಹೇಳಿದ್ರೆ, ಫಾರಿನ್ ಎಣ್ಣೆ ಇಡ್ಸಿದ್ರಾ..? ಸಂಜೆ ಸಿಗಿ ಕೇಳಿ ಹೇಳ್ತೀನಿ.

ಪ್ರಶ್ನೆ: ಈ ಬಾರಿಯ 1 ಲಕ್ಷ ಕೋಟಿ ರೂಪಾಯಿ ಬಜೆಟ್‌ನ್ನು ನೀವೇ ಮಂಡಿಸಬೇಕೆಂದು ಹಠ ಹಿಡಿದಿದ್ದರ ಕಾರಣ..?
ಬಿಎಸ್‌ವೈ: ನನ್ ಕ್ಯಾರೆಕ್ಟ್ರೇ ಅರ್ಥ ಮಾಡ್ಕೊಂತಲ್ವಲ್ಲ ಯಾರುನೂ, ಆಕ್ಚುಲಿ, ರಾಜಕೀಯಕ್ಕೆ ಬರೋ ಮುಂಚೆ ಶಿಕಾರಿಪುರದಲ್ಲಿ ಕ್ಲರ್ಕ್ ಆಗಿ ಕೆಲ್ಸ ಮಾಡ್ತಿದ್ದಿಂದ್ರಿಂದ I Am Always ಪಕ್ಕಾ in ಲೆಕ್ಕ.
So, ಕರೆಕ್ಟಾಗಿ ವ್ಯವಾರ ಮಾಡಿ ಮುಗ್ಸಣ ಅಂತಾ ಒಂದೇ ಒಂದು ರೀಸನ್ ಇಂದಾ ಕೇಳಿದ್ದು ಬಿಟ್ರೆ ಮತ್ತೇನಿಲ್ಲ. ಅವೆಲ್ಲಾ ಯಾಕೀಗ ಸುಮ್ನೆ.. ಬಿಡಿ.. [ಸೃಷ್ಟಿ : ಮೋಹನ್ ಎಚ್.]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A mock interview with BS Yeddyurappa, who refuses to be called former Chief Minister of Karnataka. If at all BSY is available for an interview, how it could be.
Please Wait while comments are loading...