• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ್ಮಿ ಎಲ್ಲಿದ್ದಾಳು ?

By ಶಿಕಾರಿಪುರ ಹರಿಹರೇಶ್ವರ
|

ಬೇರೆಯವರಿಗೆ ಹೇಗೋ ಏನೋ ಗೊತ್ತಿಲ್ಲ. ಸ್ವಲ್ಪ ಸರಸ್ವತಿಯನ್ನ, ತುಂಬಾ ಲಕ್ಷ್ಮಿಯನ್ನ, ಅಥವಾ ಇಬ್ಬರನ್ನೂ ಸಮ ಸಮವಾಗಿ ಆದರೆ ಶ್ರದ್ಧಾಪೂರ್ವಕವಾಗಿ ಹುಡುಕಿಕೊಂಡು ಕಡಲಾಚೆಯಿಂದ ಇತ್ತ ವಿದೇಶಕ್ಕೆ ಬಂದ ನಮ್ಮಲ್ಲಿ ಬಹಳ ಜನರಿಗೆ ಈ ಪ್ರಶ್ನೆ ಅ-ಪ್ರಸ್ತುತ ಆಗಲಾರದು; ಅ-ಸಂಗತ ಎನಿಸದು. ಈ ಅಕ್ಕ-ತಂಗಿಯರ (?) ವಿಚಾರ ಎಲ್ಲ ಹೆಂಗಸರ ಮನದ ಇಂಗಿತಗಳಂತೆ ನಿಗೂಢ. ಆದರೂ ಈ ಒಗಟನ್ನು ಒಡೆಯಲು, ಬಿಡಿಸಲು ತಲೆತಲಾಂತರಗಳಿಂದ ಪ್ರಯತ್ನ ನಡೆದೇ ಇದೆ; ಮುಂದೆಯೂ ನಡೆಯುತ್ತಲೇ ಇರುವ ಸಂಭವವೇ ಹೆಚ್ಚು. ಹೀಗಾಗಿ ನಾವೂ ನಮ್ಮ ಹಿಂದಿನವರೂ ಲಕ್ಷ್ಮಿಯ ಹುಟ್ಟು, ಇರವು, ಗೊತ್ತು, ಗುರಿಯ ಬಗ್ಗೆ ಚರ್ಚಿಸಿದುದನ್ನ ಮತ್ತೆ ಮೆಲುಕು ಹಾಕುವುದರಲ್ಲಿ ಅರ್ಥವಿದೆ, ಹೌದು 'ಅರ್ಥ" ಇದೆ . !

ಲಕ್ಷ್ಮಿಗೆ ಹಲವು ಅಭಿಧಾನಗಳು. ನೂರಾ ಎಂಟು ನಾಮಗಳು ಇರಲಿ, ಸಾವಿರದ ಒಂದು ಅಂಕಿತಗಳೂ ಹಾಗಿರಲಿ, ಅವಳಿಗೆ ಮಾತ್ರಾ ಹೆಚ್ಚು ಮೀಸಲಾದ ಬಹು ಪರಿಚಿತವಾದ ಹೆಸರುಗಳು ಬೇಕೆಂದರೆ ನಮ್ಮ ಅಮರಸಿಂಹನ ಕೋಶಕ್ಕೆ ಶರಣು ಹೋಗಬೇಕು:

ಲಕ್ಷ್ಮೀ, ಪದ್ಮಾಲಯಾ, ಪದ್ಮಾ, ಕಮಲಾ, ಶ್ರೀಃ, ಹರಿ-ಪ್ರಿಯಾ,

ಇಂದಿರಾ, ಲೋಕಮಾತಾ, ಮಾ, ರಮಾ, ಮಂಗಳ-ದೇವತಾ,

ಭಾರ್ಗವೀ, ಲೋಕ-ಜನನೀ, ಕ್ಷೀರ -ಸಾಗರ -ಕನ್ಯಕಾ.

ಇವಲ್ಲದೆ ಇನ್ನೂ ಹೆಸರುಗಳು ಇವೆ. ಅವನ್ನು ಮುಂದೆ ನೋಡೋಣ.

ಸಮುದ್ರ-ಮಥನವಾದಾಗ ಕಮಲದ ರೂಪದಲ್ಲಿ ಲಕ್ಷ್ಮಿ ಆರ್ವಿಭವಿಸಿದಳು- ಎಂದು ವಿಷ್ಣು ಪುರಾಣ ಹೇಳಿದರೆ, ಅದೇನೇ ಮುಂದುವರಿದು, ತಾವರೆಯ ಹೂವನ್ನು ಕೈಯ್ಯಲ್ಲಿ ಹಿಡಿದುಕೊಂಡು ಬಂದವಳು ಎಂದೂ ಹೇಳುತ್ತದೆ (ನೋಡಿ ಮತ್ಸ್ಯ ಪುರಾಣ ಮತ್ತು ಭಾಗವತ ಪುರಾಣಗಳನ್ನೂ.) ಬೇರೆ ಬೇರೆ ಜನ್ಮಗಳಲ್ಲಿ ಅವಳು ಬೇರೆ ಬೇರೆ ಹೆಸರುಗಳಿಂದ ಪ್ರಸಿದ್ಧಳು. ಹಾಗಾಗಿ ಭೃಗು ಮಹರ್ಷಿಯ ಮಗಳೆಂದು ಇವಳು ''ಭಾರ್ಗವಿ"" (ವಾಯು ಪುರಾಣದಲ್ಲಿ, ಆಗ ಇವಳ ತಾಯಿ, ಕರ್ದಮನ ''ಖ್ಯಾತಿ"" ಎಂಬ ಮಗಳು!) ಕುಶಧ್ವಜನ ಹೆಂಡತಿ ಮಾಲವತಿಯ ಗರ್ಭದಲ್ಲಿ ಇದ್ದಾಗಲೇ ವೇದಗಳನ್ನು ಅರಿತವಳು ಇವಳೆಂದು ಲಕ್ಷ್ಮಿ ''ವೇದವತಿ"". ಹೆಸರು ''ಜನಕ"" ಆದರೂ ಅವನ ಸ್ವಂತ ಮಗಳಲ್ಲ; ವಿದೇಹದ ಆ ರಾಜ ನೇಗಿಲ ಮೊನೆಯಿಂದ ನೆಲವನ್ನು ಬಗೆಯುತ್ತಿದ್ದಾಗ ಸಿಕ್ಕು, ಆಮೇಲೆ ಶ್ರೀರಾಮನನ್ನು ವರಿಸಿದ ಇವಳು '' ಸೀತೆ"". ಧರ್ಮಧ್ವಜನ ಪತ್ನಿ ಮಾಧವಿಗೆ ಇವಳು '"ತುಳಸಿ""ಯಾಗಿ ಹುಟ್ಟಿದಳು. (ಪೂರ್ವ ಕತೆ ಬೇಕೆಂದರೆ , ಹೀಗಾಗಲು ಸರಸ್ವತಿ ಇವಳಿಗೆ ಏಕೆ ಶಾಪಕೊಟ್ಟಳು - ಎಂದು ತಿಳಿಯಲು ಬ್ರಹ್ಮವೈವರ್ತ ಪುರಾಣ ನೋಡಿ.) ನಮ್ಮ ಕೃಷ್ಣನಿಗೆ ಇವಳು ''ರುಕ್ಮಿಣಿ""ಯಾದಾಗ ವಿದರ್ಭರಾಜ ಭೀಷ್ಮಕನ ಮಗಳು. ಚೋಳದೇಶದ ದೊರೆ ಅಕ್ಷರಾಜ ಮತ್ತು ಧರಣೀದೇವಿಯರು ಯಜ್ಞಕ್ಕಾಗಿ ಅಗೆದ ನೆಲದೊಳಗೆ ಕಮಲದ ಮೇಲೆ ಮಲಗಿದ ಮಗುವಾಗಿ ಸಿಕ್ಕು ಕೊನೆಗೆ ಶ್ರೀನಿವಾಸನೊಡನೆ ಕಲ್ಯಾಣವಾದ ''ಪದ್ಮಾವತಿ""ಯೂ ಇವಳೇ. ವಿಷ್ಣುರೂಪೀ ಕೃಷ್ಣನ ದೇಹದ ಎಡಭಾಗದಿಂದ ಒಡಮೂಡಿದವಳು ಮಹಾಲಕ್ಷ್ಮಿಯೆಂದು ಬ್ರಹ್ಮವೈವರ್ತ ಪುರಾಣ ಬಣ್ಣಿಸುತ್ತದೆ. ಪುರಂದರ ದಾಸರಂತೂ '' ಕ್ಷೀರಾಬ್ಧಿಕನ್ನಿಕೆ ಅಂಬುಜಾಕ್ಷಿ ಶ್ರೀ ಮಹಾಲಕ್ಷ್ಮಿ ಯಾರಿಗೆ ನೀ ವಧುವಾದೆ ""- ಎಂದು ಕೇಳಿದ್ದುಂಟು ! ಎಲ್ಲರಿಗೂ ಗೊತ್ತಿರುವಂತೆ, ನಾರಾಯಣ, ವಿಷ್ಣು , ಹರಿ- ಎಂಬ ಹೆಸರಾಂತ ಭಗವಂತನ ಪ್ರಿಯ-ಪತ್ನಿ ಎಲ್ಲ ಜಗತ್ತಿನ ತಾಯಿ ಈ ಲಕ್ಷ್ಮಿ!

English summary
Everything you wanted to know about divine God of Mundane Money. An article by Late Shikaripura Harihareshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X