97595manmohan singhಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg97595manmohan singhಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg97595manmohan singhಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg97595manmohan singhನಿಮ್ಮ ಸಲಹೆ ಬೇಕಿಲ್ಲ, ಮುಷರಫ್ ಗೆ ಮದಾನಿ ತಿರುಗೇಟು/news/2009/03/09/we-donot-need-musharraf-advice-says-madani.htmlನವದೆಹಲಿ, ಮಾ. 9 : ಭಾರತದಲ್ಲಿರುವ ಮುಸ್ಲಿಂ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವಷ್ಟು ಶಕ್ತರಿದ್ದಾರೆ. ಇಲ್ಲಿನ ಮುಸ್ಲಿಂರನ್ನು ಒಡೆಯಲು ಪ್ರಯತ್ನಿಸಬೇಡಿ. ನಿಮ್ಮ ಪುಕ್ಕಟೆ ಸಲಹೆ ನಮಗೆ ಬೇಕಿಲ್ಲ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಜಮಾತ್-ಇ-ಉಲೇಮಾ-ಇ-ಹಿಂದ್ ನ ಮುಖಂಡ ಮೆಹಮೂದ್ ಮದಾನಿ ಅವರು ಮುಷರಫ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನವದೆಹಲಿಗೆ ಭೇಟಿ ನೀಡಿ ಸಂವಾದವೊಂದರಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ 35098http://kannada.oneindia.com/img/2009/03/09-maulana-mahmood-madani1.jpg97595manmohan singhಮನಮೋಹನ್ ಸಿಂಗ್ ಮೇಲೆ ಭಾರಿ ಬೆಟ್ಟಿಂಗ್/news/2009/03/14/bookies-back-manmohan-for-another-term.htmlಮುಂಬೈ, ಮಾ.14: ಲೋಕಸಭೆ ಚುನಾವಣೆಗಳು ಬಂತೆಂದರೆ ಸಾಕು ದೇಶದೆಲ್ಲೆಡೆ ಹಬ್ಬದ ಸಂಭ್ರಮ ಸಡಗರ ನೆಲೆಸುತ್ತದೆ. ಚುನಾವಣೆಯಲ್ಲಿ ಕಪ್ಪುಹಣದ ಚಲಾವಣೆ, ಪ್ರಸ್ತುತ ಆರ್ಥಿಕ ಹಿಂಜರಿತದಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಪ್ರಚಾರಕ್ಕಾಗಿ, ಬ್ಯಾನರ್, ಬಂಟಿಂಗ್ ಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ವಾಹನಗಳ ಬಾಡಿಗೆ... ಹೀಗೆ ಪ್ರತಿ ಹಂತದಲ್ಲೂ ಝಣ ಝಣ ಎಂದು ಕುರುಡು ಕಾಂಚಾಣ ಕುಣಿಯಲಿದೆ. 35215http://kannada.oneindia.com/img/2009/03/14-manmohan.jpg135847vishweshwar bhatಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg135847vishweshwar bhatಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ/column/bhat/2009/0129-meet-yajnanarayana-founder-mtr-bengaluru.htmlಆ ಪುಸ್ತಕ ಓದುತ್ತಿದ್ದಾಗ ನನಗೆ ಹೋಟೆಲ್ ಮಾಲೀಕರೊಬ್ಬರ ಜೀವನಕಥನ ಓದುತ್ತಿದ್ದೇನೆಂದು ಅನಿಸಲೇ ಇಲ್ಲ. ಅದು ಕೇವಲ ಹೋಟೆಲ್ ಉದ್ಯಮಿಯೊಬ್ಬರ ಕತೆಯೋ, ಕೈಫಿಯತ್ತೋ ಆಗಿದ್ದಿದ್ದರೆ ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಲೂ ಇರಲಿಲ್ಲ. ಒಬ್ಬ ಅಪರೂಪದ ಸಾಧಕ,ದಣಿವರಿಯದ ಶ್ರಮಿಕ, ಹಿರಿಯಣ್ಣನಂಥ ಬೋಧಕ ಹಾಗೂ ಹಲವು ತಲೆಮಾರುಗಳನ್ನು ಮುನ್ನಡೆಸುವ ಮಾರ್ಗದರ್ಶಕ ಹೀಗೆ ಏಕಕಾಲಕ್ಕೆ ಅನೇಕ ಗುಣಗಳಿಂದ ಬದುಕಿಗೆ ಸ್ಫೂರ್ತಿ ನೀಡುವ ಒಬ್ಬ 34361http://kannada.oneindia.com/img/2009/01/29-yn-maiya-kc-reddy.jpg135847vishweshwar bhatಜಾಲಿಯ ಮರವು ನೆರಳಲ್ಲ, ಗೌರವ ಡಾಕ್ಟರೇಟ್ ಸ್ಥಿರವಲ್ಲ/column/bhat/2009/0226-bs-yeddyurappa-and-honorary-doctorate.htmlರುಂಡ ಮುಂಡಗಳನ್ನು ಒಂದು ಮಾಡುವಂತೆ ಮುಚ್ಚುವ ಉಸಿರುಗಟ್ಟಿಸುವ ಹಾರಗಳು, ಅರ್ಹರನ್ನೂ ಅನರ್ಹರನ್ನಾಗಿ ಮಾಡುವ ಗೌರವ ಡಾಕ್ಟರೇಟ್ ಬಿರುದುಬಾವಲಿಗಳನ್ನು ಒಲ್ಲೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಕಿವಿತುಂಬಿ ತೂತುಬೀಳುವಂತೆ ಮಾಡುವ ಬಹುಪರಾಕ್ ಗಳನ್ನು ಕೂಡ ನಿರಾಕರಿಸಲಿ. ಇವನ್ನೆಲ್ಲ ನಿರಾಕರಿಸಿ ದೊಡ್ಡವರಾಗುವುದಕ್ಕಿಂತ ನಿಸ್ವಾರ್ಥ ಸೇವೆಯಿಂದ ದೊಡ್ಡವರೆನ್ನಿಸಿಕೊಳ್ಳಲಿ. ಜೊತೆಗೆ ಎಂಟನಿ ಮತ್ತು ಫರ್ನಾಂಡಿಸ್ ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ತುಸುವಾದರೂ ಸಾಗಲಿ.* ವಿಶ್ವೇಶ್ವರ ಭಟ್ 34883http://kannada.oneindia.com/img/2009/02/26-yeddyurappa12.jpg135847vishweshwar bhatದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpg135847vishweshwar bhatಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpgnews"> ಅವರು ದುರ್ಬಲ ಮಾತ್ರವಲ್ಲ ಹೇಡಿಯೂ ಹೌದು! | Manmohan Singh | Weak | Coward | Lok Sabha Election 2009 - ಅವರು ದುರ್ಬಲ ಮಾತ್ರವಲ್ಲ ಹೇಡಿಯೂ ಹೌದು! - Kannada Oneindia

ಅವರು ದುರ್ಬಲ ಮಾತ್ರವಲ್ಲ ಹೇಡಿಯೂ ಹೌದು!

Manmohan Singh, Prime Minister of India
ವಿಷಯದಲ್ಲಿ ಮಾತ್ರ ಡಾ. ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಅಂತ ಅನಿಸಿದ್ದು ನಿಜ. ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಸತತವಾಗಿ ಡಾ. ಮನಮೋಹನ್ ಸಿಂಗ್ ಈ ದೇಶ ಕಂಡ ದುರ್ಬಲ ಪ್ರಧಾನಿ' ಎಂದು ಜರೆಯುತ್ತಿದ್ದಾಗ, ಮೇಲ್ನೋಟಕ್ಕೆ ಇದು ರಾಜಕೀಯ ಹೇಳಿಕೆಯಿದ್ದಿರಬಹುದು ಎಂದು ಅನೇಕರಿಗೆ ಅನಿಸಿರಲಿಕ್ಕೆ ಸಾಕು. ಡಾ. ಸಿಂಗ್ ದುರ್ಬಲ ಪ್ರಧಾನಿ ಹೇಗೆ ಮತ್ತು ಏಕೆ ಎಂಬ ಬಗ್ಗೆ ಆಡ್ವಾಣಿಯವರು ಅನೇಕ ಕಾರಣಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ನಿಜವಿರಬಹುದು, ಕೆಲವು ರಾಜಕೀಯ ಪ್ರೇರಿತವಾಗಿರುವುದರಿಂದ ಉತ್ಪ್ರೇಕ್ಷಿತವೂ ಆಗಿರ ಬಹುದು. ಇನ್ನು ಕೆಲವು ಅವರ ಮೂಗಿನ ನೇರಕ್ಕೂ ಇರಬಹುದು. ಕಾಂಗ್ರೆಸ್ಸಿನ ಪ್ರತಿ ನಡೆಯಲ್ಲೂ ದೋಷ ಹುಡುಕುವ ಬಿಜೆಪಿ ನಾಯಕರ ನಿಂದನೆಯ ಹೊಸ ವರಸೆ ಇರಬಹುದು. ಆದರೆ ಒಂದು ವಿಷಯದಲ್ಲಿ ಮಾತ್ರ ಡಾ. ಸಿಂಗ್ ದುರ್ಬಲ ಪ್ರಧಾನಿ ಅಲ್ಲ' ಅಂತ ಹೇಳಿದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ.

ಯಾವಾಗ ತಾವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ರಾಜ್ಯಸಭೆ ಸದಸ್ಯನಾಗಿಯೇ ಪ್ರಧಾನಿಯಾಗುತ್ತೇನೆ ಎಂದು ಪುನರುಚ್ಚರಿಸಿದರೋ, ಆ ಕ್ಷಣದಲ್ಲಿ ಡಾ. ಸಿಂಗ್ ದುರ್ಬಲ ವ್ಯಕ್ತಿ' ಎಂದು ಅನಿಸಿದ್ದು ಮಾತ್ರ ಸುಳ್ಳಲ್ಲ. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಕರೆಸಿಕೊಳ್ಳುವ ಭಾರತದ ಪ್ರಧಾನಮಂತ್ರಿ ಜನರಿಂದ ನೇರವಾಗಿ ಚುನಾಯಿತರಾಗದೇ, ಹಿಂಬಾಗಿಲಿನಿಂದ ಸಂಸತ್ತನ್ನು ಪ್ರವೇಶಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇಲ್ಲಿ ಒಂದು ಸೂಕ್ಷ್ಮ ಸಂಗತಿಯಿದೆ. ಸಂವಿಧಾನದಲ್ಲಿ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿಲ್ಲದವರು ಅಥವಾ ರಾಜ್ಯಸಭೆಯ ಸದಸ್ಯರಾದವರು ಪ್ರಧಾನಿಯಾಗಲು ಅವಕಾಶವಿದೆ. ರಾಜ್ಯಸಭೆಯ ಸದಸ್ಯರಾಗುವುದರ ಮೂಲಕ ಪ್ರಧಾನಿಯಾದವರಲ್ಲಿ ಡಾ. ಮನಮೋಹನ್ ಸಿಂಗ್ ಅವರೇ ಮೊದಲಿಗರೇನೂ ಅಲ್ಲ. ಇಲ್ಲಿ technicalityಗಿಂತ morality ಪ್ರಶ್ನೆ ಪ್ರಮುಖವಾಗುತ್ತದೆ. ಪ್ರಧಾನಿಯಂಥ ಉನ್ನತ ಹುದ್ದೆಗೇರುವವರು ಜನರಿಂದಲೇ ಆಯ್ಕೆಯಾಗಬೇಕು. ಹಾಗಾದರೆ ಅವರು ಲೋಕಸಭೆ ಸದಸ್ಯರಾಗಬೇಕು. ಯಾಕೆಂದರೆ ಪ್ರಧಾನಿಯಾದವರು ಲೋಕಸಭೆಗೆ ಉತ್ತರದಾಯಿಯಾಗಿರುತ್ತಾರೆ.

ನೈತಿಕವಾಗಿ, ಲೋಕಸಭೆ ಸದಸ್ಯನೇ ಪ್ರಧಾನಿಯಾಗಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಲೋಕಸಭೆಗೆ ಆಯ್ಕೆಯಾದವರು ನೇರವಾಗಿ ಜನರಿಂದಲೇ ಆಯ್ಕೆಯಾಗಿರುತ್ತಾರೆ. ಅವರಿಗೆ ಬಹುಶ್ರುತರ ಕಷ್ಟ-ಸುಖ, ನೋವು-ನಲಿವು ಗೊತ್ತಿರುತ್ತದೆ. ನಾಯಕನಾದವನು ಜನರಿಂದಲೇ ಆಯ್ಕೆಯಾಗಬೇಕು, ಜನರ ಮಧ್ಯದಿಂದಲೇ ಮೂಡಿಬರಬೇಕೆಂಬ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಇದು ಕಳಶವಿಟ್ಟಂತೆ. ಈ ಪೈಕಿ ಬಹುಮತ ಪಡೆದ ಪಕ್ಷದ ಲೋಕಸಭೆ ಸದಸ್ಯರ ನಾಯಕ ಪ್ರಧಾನಿಯಾಗುವುದು ಜನತಂತ್ರದ ಉನ್ನತ ಹಾಗೂ ಉಜ್ವಲ ಸಂಪ್ರದಾಯ.

ಸಂವಿಧಾನ ರಚಿಸುವಾಗಲೂ ಈ ಪ್ರಶ್ನೆ ಗಹನವಾಗಿ ಕಾಡಿತ್ತು. ಪ್ರಧಾನಿಯಾಗುವವರು ಲೋಕಸಭೆ ಅಥವಾ ರಾಜ್ಯಸಭೆ ಸದಸ್ಯರಾಗಿರಬೇಕೋ? ಕೇವಲ ಲೋಕಸಭೆಯ ಸದಸ್ಯರಾಗಿರಬೇಕೋ? ಉಭಯ ಸದನಗಳ ಸದಸ್ಯರಾಗಿಲ್ಲ ದವರೂ ಪ್ರಧಾನಿಯಾಗಬಹುದಾ? ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಕಾನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿ' ಸದಸ್ಯರಾದ ಕೆ.ಟಿ. ಶಹಾ ಅವರಂತೂ ಲೋಕಸಭೆಯ ಸದಸ್ಯರು ಮಾತ್ರ ಪ್ರಧಾನಿಯಾಗಬೇಕು ಎಂಬ ಅಂಶಕ್ಕೆ ಕಟ್ಟುಬಿದ್ದಿದ್ದರು. ಅಷ್ಟೇ ಅಲ್ಲ, ಅದನ್ನು ಸಂವಿಧಾನದಲ್ಲಿ ಲಿಖಿತವಾಗಿ ಸ್ಪಷ್ಟಪಡಿಸಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಈ ವಿಷಯದಲ್ಲಿ ಎದುರಾಗಬಹುದಾದ practical ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಗೆ ಡಾ. ಅಂಬೇಡ್ಕರ್ ಅವರ ವಾದಕ್ಕೆ ಎಲ್ಲರೂ ತಲೆಯಾಡಿಸಿದರು. ಆ ಪ್ರಕಾರ ಲೋಕಸಭೆ, ರಾಜ್ಯಸಭೆಯ ಸದಸ್ಯರಲ್ಲದ ಹೊರಗಿನವರೂ ಪ್ರಧಾನಿಯಾಗಬಹುದು ಹಾಗೂ ಆರು ತಿಂಗಳೊಳಗೆ ಒಂದಿಲ್ಲೊಂದು ಸದನದ ಸದಸ್ಯರಾಗಬೇಕು ಎಂದು ಸಂವಿಧಾನದಲ್ಲಿ ಅಳವಡಿಸಲಾಯಿತು.

ಮೊದಲ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಹೇಳಿದ ಮಾತನ್ನು ಗಮನಿಸಬೇಕು- ವಿಶಾಲ ಅರ್ಥದಲ್ಲಿ ನಮ್ಮ ಸಂವಿಧಾನ ನಿರ್ಮಾತೃರು ಲೋಕಸಭೆ, ರಾಜ್ಯಸಭೆ ಸದಸ್ಯರಲ್ಲದವರೂ ಸಹ ಪ್ರಧಾನಿಯಾಗಬಹುದು ಎಂಬ ನಿಯಮ ರೂಪಿಸಿದ್ದರೂ, ಪ್ರಧಾನಿಯಾಗುವವರು ಜನರಿಂದಲೇ ನೇರವಾಗಿ ಆಯ್ಕೆಯಾಗಬೇಕು. ಅಂದರೆ ಲೋಕಸಭೆ ಸದಸ್ಯರಾಗಿರಬೇಕು. ಆಗಲೇ ಜನತಂತ್ರದ ಆಶಯದಂತೆ ಪ್ರಧಾನಿ ಆಯ್ಕೆ ನೈತಿಕವಾಗಿ ಸಮರ್ಥನೀಯ ಎಂದೆನಿಸಿಕೊಳ್ಳುತ್ತದೆ."

ಆರಂಭದಲ್ಲಿ ಈ ಪ್ರಜಾಸತ್ತಾತ್ಮಕ ಸನ್ನಡತೆ ನೈತಿಕಪ್ರಜ್ಞೆಯ ತಳಹದಿಯಲ್ಲಿಯೇ ಆಚರಣೆಗೆ ಬಂದಿತು. ಜವಾಹರಲಾಲ್ ನೆಹರು ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿ ಲೋಕಸಭೆಯಲ್ಲಿ ಬಹುಮತ ಹೊಂದಿದ ಪಕ್ಷದ ನಾಯಕರಾಗಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದರು. ಮೊದಲಬಾರಿಗೆ ಅಡ್ಡದಾರಿ ಹಿಡಿದವರು ಇಂದಿರಾಗಾಂಧಿ, 1965ರಲ್ಲಿ ಶಾಸ್ತ್ರಿಯವರು ಹಠಾತ್ ನಿಧನರಾದಾಗ, ಇಂದಿರಾ ಮುಂದಿನ ಪ್ರಧಾನಿಯಾದರು. ಆಗ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು. 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕಾದ ಅಗತ್ಯವಿರಲಿಲ್ಲ. ಯಾಕೆಂದರೆ ಅವರ ರಾಜ್ಯಸಭೆ ಸದಸ್ಯತ್ವ ಅವಧಿ ಕೊನೆಗೊಂಡಿರಲಿಲ್ಲ. ಆದರೆ ಇಂದಿರಾಗಾಂಧಿಯವರನ್ನು ಇಲ್ಲಿ ಕಾಡಿದ್ದು ನೈತಿಕತೆ ಪ್ರಶ್ನೆ. ಹೀಗಾಗಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಪುನಃ ಪ್ರಧಾನಿಯಾದರು. ಅನಂತರವೂ ಅವರು ಲೋಕಸಭೆಗೆ ಸೆಣಸಿಯೇ (1972 ಹಾಗೂ 1980) ಪ್ರಧಾನಿಯಾದದ್ದು.

ತರುವಾಯ ಪ್ರಧಾನಿಯಾದ ಮೊರಾರ್ಜಿ ದೇಸಾಯಿ (1977), ಚರಣ್ ಸಿಂಗ್ (1979), ರಾಜೀವ್ ಗಾಂ (1984), ವಿ.ಪಿ. ಸಿಂಗ್ (1989), ಚಂದ್ರಶೇಖರ್ (1990) ನರಸಿಂಹರಾವ್ (1991) ಹಾಗೂ ಅಟಲ್ ಬಿಹಾರಿ ವಾಜಪೇಯಿ (1996) ಲೋಕಸಭೆ ಮೂಲಕವೇ ಪ್ರಧಾನಿ ಕಾರ್ಯಾಲಯಕ್ಕೆ ಪ್ರವೇಶ ಪಡೆದರು. ನರಸಿಂಹರಾವ್ ಪ್ರಧಾನಿಯಾದಾಗ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿರಲಿಲ್ಲ. ಹಾಗೆಯೇ ನಮ್ಮ ಎಚ್.ಡಿ. ದೇವೇಗೌಡರು ಕೂಡ. ಆದರೆ ನರಸಿಂಹರಾಯರು ಆರು ತಿಂಗಳೊಳಗೆ ಆಂಧ್ರದ ನಂದ್ಯಾಲ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ದಾಖಲೆ ಮತಗಳ ಅಂತರದಿಂದ ಗೆದ್ದರು. ಅದೇ ನಮ್ಮ ಗೌಡರು ಉಸಾಬರಿ ಯಾಕೆಂದು ಹಿಂಬಾಗಿಲ ಮೂಲಕ ಪ್ರಧಾನಿಯಾದರು.

ಗೌಡರ ಬಳಿಕ ಪ್ರಧಾನಿಯಾದ (1997ರಲ್ಲಿ) ಐ.ಕೆ. ಗುಜ್ರಾಲ್, ಆ ಉನ್ನತ ಹುದ್ದೆ ಸ್ವೀಕರಿಸುವಾಗ ರಾಜ್ಯಸಭೆ ಸದಸ್ಯರಾಗಿದ್ದರು. ಹೀಗಾಗಿ ಅವರು ಲೋಕಸಭೆ ಸದಸ್ಯರಾಗುವ ಗೋಜಿಗೆ ಹೋಗಲಿಲ್ಲ. 2004ರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗುವ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. ಹೀಗಾಗಿ ಲೋಕಸಭೆಗೆ ಸೆಣಸಲಿಲ್ಲ. ಅನಂತರವೂ ಅವರು ಮುಗುಮ್ಮಾಗಿ ಉಳಿದುಬಿಟ್ಟರು. ರಾಜ್ಯಸಭೆ ಸದಸ್ಯತ್ವ ಅವ ಮುಗಿದಾಗಲೂ ಅವರು ಸದಸ್ಯತ್ವ ನವೀಕರಿಸಿಕೊಂಡರೇ ಹೊರತು ಲೋಕಸಭೆಗೆ ಸೆಣಸುವ ಗೋಜಿಗೆ ಹೋಗಲಿಲ್ಲ. ನರಸಿಂಹರಾಯರ ಸಂಪುಟದಲ್ಲಿ ಅವರು ಹಣಕಾಸು ಸಚಿವರಾದಾಗಲೂ ಡಾ. ಸಿಂಗ್ ಆಯ್ದುಕೊಂಡ ಮಾರ್ಗ ರಾಜ್ಯಸಭೆ. ಹಾಗೆ ನೋಡಿದರೆ, ಅವರು ನೇರ ಚುನಾವಣೆಯಲ್ಲಿ ಸೆಣಸಿ ಜನರಿಂದ ಚುನಾಯಿತರಾಗಿಯೇ ಇಲ್ಲ. ಮೊದಲ ಬಾರಿಗೆ ಚುಂಬಿಸಲು ಹೋಗಿ ಹಲ್ಲುಮುರಿದುಕೊಂಡ' ಎಂಬಂತೆ 1999ರಲ್ಲಿ ಡಾ. ಸಿಂಗ್ ದಕ್ಷಿಣ ದಿಲ್ಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ವಿಜಯಕುಮಾರ್ ಮಲ್ಹೋತ್ರ ವಿರುದ್ಧ 30 ಸಾವಿರ ಮತಗಳಿಂದ ದಯನೀಯವಾಗಿ ಸೋತಿದ್ದರು! ಅನಂತರ ಅವರು ಆ ತಂಟೆಗೇ ಹೋಗಲಿಲ್ಲ- ಈ ಸಲವಾದರೂ ಡಾ. ಸಿಂಗ್ ಚುನಾವಣೆಗೆ ನಿಲ್ಲಬಹುದು ಅಂದುಕೊಂಡರೆ... ಪ್ಚ್... ನಾಲಿಗೆ ಕಡಿಯಿತು... ಉಹುಂ, ಚುನಾವಣೆಗೆ ನಿಲ್ಲುವುದಿಲ್ಲ, ರಾಜ್ಯಸಭೆ ಸದಸ್ಯತ್ವ ಇನ್ನೂ ಇದೆ ಅಂತಿದಾರೆ ಭಂಡ ಧೈರ್ಯದಿಂದ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಂತೂ ಈಗಾಗಲೇ ಘೋಷಿಸಿಬಿಟ್ಟಿದ್ದಾರೆ- ಡಾ. ಸಿಂಗ್ ಅವರೇ ನಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು. ಎಂಥ ವಿಪರ್ಯಾಸ ನೋಡಿ, ಮಂತ್ರಿಯಾಗುವವರೆಲ್ಲ ಚುನಾವಣೆ ಕಣದಲ್ಲಿದ್ದಾರೆ. ಪ್ರಧಾನಿ ಅಭ್ಯರ್ಥಿ ಮಾತ್ರ ಚುನಾವಣೆಗೂ, ತಮಗೂ ಏನೇನೂ ಸಂಬಂಧವೇ ಇಲ್ಲ ಎಂಬಂತೆ ದೂರ ಉಳಿದುಬಿಟ್ಟಿದ್ದಾರೆ. ಈಗ ಹೇಳಿ ಡಾ. ಮನಮೋಹನ್ ಸಿಂಗ್ ಬಲಿಷ್ಠರಾ? ದುರ್ಬಲರಾ?

ಮನಮೋಹನ್ ಸಿಂಗ್ ಬಲಿಷ್ಠರಾ? ದುರ್ಬಲರಾ? ಮುಂದೆ ಓದಿ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+