ವಿಶ್ವದ ಎರಡನೆ ಶ್ರೀಮಂತ ಶ್ರೀಸಾಮಾನ್ಯನಂತೆ ಸುಖವಂತ!


ತನ್ನ ಮಾತು, ಕೃತಿ, ಸಾಧನೆಯಿಂದಲೇ ಇಡೀ ಜನಾಂಗಕ್ಕೆ ಆದರ್ಶವಾಗಿರುವ ವಾರೆನ್‌ ಎಡ್ವರ್ಡ್‌ ಬಫೆ ಎಂಬ ಈ ಅಜ್ಜನಿಗೆ ‘ನಿನ್ನ ಸಂದೇಶವೇನು’ ಅಂತಕೇಳಿದರೆ, ‘ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೋಗಿ ಸಾಕು’ ಅಂತಾನೆ.

  • ವಿಶ್ವೇಶ್ವರ ಭಟ್‌
  • Warren Edward Buffett, a wealthy American investor and businessman‘‘ನಾನು ಅತ್ಯಂತ ಶ್ರೀಮಂತನಾಗುತ್ತೇನೆಂಬ ಸಂಗತಿ ನನಗೆ ಚೆನ್ನಾಗಿ ತಿಳಿದಿತ್ತು. ಈ ಬಗ್ಗೆ ಒಂದೇ ಒಂದು ಕ್ಷಣ ನನ್ನಲ್ಲಿ ಸಂದೇಹ ಸುಳಿಯಲಿಲ್ಲ’’ ಎಂದ ಆ ವ್ಯಕ್ತಿ ಕಳೆದ ಒಂದು ವಾರದಿಂದ ತಲೆಯಾಳಗೆ ಕುಳಿತಿದ್ದಾನೆ. ಅವನದೇ ಯೋಚನೆ. ಅವನ ಕುರಿತ ಪುಸ್ತಕ ಓದುತ್ತಿದ್ದರೆ ಈ ಕಾಲದಲ್ಲಿ ಹೀಗೆಲ್ಲ ಆಗಲು ಸಾಧ್ಯವಾ, ಇವೆಲ್ಲ ನಿಜವಾ ಎಂದೆನಿಸುತ್ತದೆ. ಆದರೆ ಒಪ್ಪಿಕೊಳ್ಳದೇ ಬೇರೆ ದಾರಿಯಿಲ್ಲ. ಅವೆಲ್ಲವನ್ನೂ ಸಾಧಿಸಿದ ಅವನೇ ನಮ್ಮ ಮುಂದಿದ್ದಾನೆ.

    ಅವನ ಹೆಸರು ವಾರೆನ್‌ ಎಡ್ವರ್ಡ್‌ ಬಫೆ! ಜಗತ್ತಿನ ಎರಡನೆಯ ಶ್ರೀಮಂತ. ಮೈಕ್ರೊಸಾಫ್ಟ್‌ ಕಂಪನಿಯ ಬಿಲ್‌ಗೇಟ್ಸ್‌ ನಂತರದ ಸ್ಥಾನ ಇವನಿಗೇ. ಆದರೆ ಬಿಲಗೇಟ್ಸ್‌ಗೂ ಇವನಿಗೂ ಅಜಗಜಾಂತರ. ಆತ ದುಡ್ಡು ಮಾಡಿದ್ದೇ ಬೇರೆ. ಈತಮಾಡಿದ ರೀತಿಯೇ ಬೇರೆ. ಶ್ರೀಮಂತಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಗೇಟ್ಸ್‌ ಎಲ್ಲರಿಗೂ ಗೊತ್ತು. ಎರಡನೆ ಸ್ಥಾನದಲ್ಲಿರುವ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿಲ್ಲ.

    ಅವೆಲ್ಲಕ್ಕಿಂತ ಮುಖ್ಯವಾಗಿ ಬಫೆ ಹಣ ಮಾಡಿದ ರೀತಿಯಿದೆಯಲ್ಲ ಅದ್ಭುತಅದ್ಭುತ. ಬಬ್ಬ ವ್ಯಕ್ತಿ ಧೈರ್ಯ ಹಾಗೂ ಬುದ್ಧಿವಂತಿಕೆಯಿಂದ ಎಂಥ ಎತ್ತರಕ್ಕೆ ಏರಬಲ್ಲ ಎಂಬುದಕ್ಕೆ ಬಫೆ ಸಾಕ್ಷಿ. ಅವನ ಕುರಿತಪುಸ್ತಕ ಓದಿ (Buffett : The Making of an American Capitalist) ಕೆಳಗಿಟ್ಟ ಬಳಿಕ ಸಹ ನಂಬಲು ಸಾಧ್ಯವಾಗುತ್ತಿಲ್ಲ, ಇವೆಲ್ಲ ಸಾಧ್ಯಾನಾ? ಇವೆಲ್ಲ ಹೇಗೆ ಸಾಧ್ಯವಾಯಿತು? ವೃತ್ತಪತ್ರಿಕೆಯನ್ನು ಮನೆಮನೆಗೆ ಹಾಕುತ್ತಿದ್ದ ಹುಡುಗನೊಬ್ಬ 46 ಶತಕೋಟಿ ಡಾಲರ್‌ ಕಂಪನಿಗೆ ಒಡೆಯನಾಗಬಹುದಾ? ಬಬ್ಬ ಸಾಮಾನ್ಯ ಬ್ರೋಕರ್‌ನ ಮಗ 63 ಕಂಪನಿಗಳ ಮಾಲೀಕನಾಗಬಹುದಾ?

    ಬಹಳ ಕಷ್ಟಪಟ್ಟು ಇವೆಲ್ಲವನ್ನೂ ನಂಬುತ್ತಿದ್ದೇನೆ. ಆತ ಅಷ್ಟೊಂದು ಹಣ ಗಳಿಸಿದ ಬಳಿಕ ಅನುಮಾನವಿಲ್ಲ. ಆದರೆ ಗಳಿಸಿದ ರೀತಿ, ವಿಧಾನ ಮಾತ್ರ ಅಬ್ಬಬ್ಬಾ. ಹಾಗಂತ‘ದೋ ನಂಬರ್‌ ಬಿಸಿನೆಸ್‌’ ಅಲ್ಲ. ಎಲ್ಲವೂ ಪ್ರಾಮಾಣಿಕವಾಗಿ ಗಳಿಸಿದ್ದು. ತಲೆಹೊಡೆದು ಹಣ ಮಾಡಿದ್ದಲ್ಲ.

    ಅಷ್ಟಕ್ಕೂ ವಾರೆನ್‌ ಬಫೆ ಮೂಲತಃ ಸ್ಟಾಕ್‌ ಬ್ರೋಕರ್‌. ಸ್ಟಾಕ್‌ ಬ್ರೋಕರ್‌ನ ಮಗ. ಅಮೆರಿಕದ ನೆಬ್ರಸ್ಕಾದವನು. ತನ್ನ ತಂದೆಯ ಜತೆ ಬ್ರೋಕರ್‌ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಪತ್ರಿಕೆ ವಿತರಣೆ , ಅನಂತರ ಶಾಲೆ ಹಾಗೂ ಮಧ್ಯಾಹ್ನದ ನಂತರ ತಂದೆ ಬಳಿ ಬಂದು ಕುಳಿತುಕೊಳ್ಳುತ್ತಿದ್ದ. ಆತ ಮೊದಲ ಷೇರನ್ನು ಖರೀದಿಸಿದಾಗ ಹನ್ನೊಂದು ವರ್ಷ ವಯಸ್ಸು.

    ಮೂವತ್ತೆಂಟು ಡಾಲರ್‌ಗೆ ಖರೀದಿಸಿ ನಲವತ್ತಕ್ಕೆ ಮಾರಾಟ ಮಾಡಿದ. ಷೇರು ವಹಿವಾಟಿನಲ್ಲಿ ಎರಡು ಡಾಲರ್‌ ಗಳಿಸಿದಾಗ, ಈ ದಂಧೆಯಲ್ಲಿ ವಿಪರೀತ ಹಣ ಮಾಡಹುದೆಂದು ಅನಿಸಿತು. ಆ ಷೇರು ವ್ಯವಹಾರವನ್ನೇ ತನ್ನ ಜೀವನದ ಗುರಿಯಾಗಿಸಿಕೊಳ್ಳಲು ಅಂದೇ ನಿರ್ಧರಿಸಿದ. ಈ ಎರಡು ಡಾಲರ್‌ ಲಾಭದಿಂದ ಚಿಗುರಿದ ಆಸೆ ಮತ್ತ್ತಷ್ಟು ಷೇರು ಖರೀದಿಸುವಂತೆ ಪ್ರೇರೇಪಿಸಿತು. ಅದು ಅವನಿಗೆ ಇನ್ನೂರು ಡಾಲರ್‌ಲಾಭತಂದುಕೊಟ್ಟಿತು. ಹಾಗಂತ ಪತ್ರಿಕೆ ಹಂಚುವುದನ್ನು ಬಿಟ್ಟಿರಲಿಲ್ಲ. ಹದಿನಾಲ್ಕನೇ ವಯಸ್ಸಿನಲ್ಲಿ ಪತ್ರಿಕೆ ಹಂಚುವುದರಿಂದ ಕೂಡಿಟ್ಟ 1200 ಡಾಲರ್‌ ಹಣದಿಂದ ಸ್ವಲ್ಪ ಜಮೀನನ್ನು ಖರೀದಿಸಿ ಅದನ್ನು ರೈತರಿಗೆ ಬಾಡಿಗೆಗೆ ಕೊಟ್ಟ. ಹಣ ಮಾಡುವ ಅದಮ್ಯ ಆಸೆ ಆಗಲೇ ಆಕಾಶಕ್ಕೆ ಚಾಚಲಾರಂಭಿಸಿತ್ತು.

    ಆದರೆ ತಂದೆಯ ಒತ್ತಾಯಕ್ಕೆ ಬಿದ್ದು ಬಫೆ ವಿದ್ಯಾಭ್ಯಾಸದತ್ತ ಗಮನಹರಿಸಿದ. ಆದರೂ ಷೇರು ವ್ಯವಹಾರದ ಮೇಲೆಯೇ ಮನಸ್ಸು ಹೋಗಿ ಕುಳಿತುಕೊಳ್ಳುತ್ತಿತ್ತ್ತು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್‌ ಸ್ಕೂಲ್‌ ಹಾಗೂ ನ್ರೆಸ್ಕಾ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಓದಿದ. ಈ ಸಂದರ್ಭದಲ್ಲಿ ಬೆಂಜಮಿನ್‌ ಗ್ರಾಹಮ್‌ ಬರೆದ ‘ದಿ ಇಂಟೆಲಿಜೆಂಟ್‌ ಇನ್ವೆಸ್ಟರ್‌’ ಎಂಬ ಕೃತಿ ಓದಿದ.

    ಗ್ರಾಹಮ್‌ ಆಗ ಕೊಲಂಬಿಯಾ ಬಿಜಿನೆಸ್‌ ಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಹಾಗೂ ಜಿ.ಇ.ಐ.ಸಿ.ಓ ಎಂಬ ವಿಮಾ ಕಂಪನಿಯಲ್ಲಿ ನಿರ್ದೇಶಕರಲೊಬ್ಬನಾಗಿದ್ದ. ಅರ್ಥಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಪಡೆದ ಬಳಿಕ ಸ್ವತಃ ಗ್ರಾಹಮ್‌ ತನ್ನ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ. ಆದರೆ ಬಫೆ ಒಪ್ಪಿಕೊಳ್ಳಲಿಲ್ಲ. ತನ್ನ ತಂದೆಯ ಬ್ರೋಕರ್‌ ಕಂಪನಿಯಲ್ಲಿ ಸೇಲ್ಸ್‌ಮನ್‌ ಆಗಿ ಕೆಲಸ ಮಾಡಲಾರಂಭಿಸಿದ. ಗ್ರಾಹಮ್‌ ನಿವೃತ್ತ್ತನಾದ ನಂತರ ಅವನ ಕಂಪನಿ ಸೇರಿದ ಬಫೆ ಅಲ್ಲಿ ಎರಡು ವರ್ಷ ಕೆಲಸ ಮಾಡಿ ಅಲ್ಲಿ ತನಕ ಕೂಡಿಟ್ಟ 1.40 ಲಕ್ಷ ಡಾಲರ್‌ನಿಂದ ‘ಬಫೆ ಅಸೋಸಿಯೇಟ್ಸ್‌ ಲಿಮಿಟೆಡ್‌’ ಆರಂಭಿಸಿದ. ಆಗ ಬಫೆಗೆ 26 ವರ್ಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+