Get Updates
Get notified of breaking news, exclusive insights, and must-see stories!

ಭರಣಿ ನಕ್ಷತ್ರ ವಿಶೇಷ : ಬೆಂಕಿಯೊಂದಿಗೆ ಸರಸ!

"ಭರಣಿ ನಕ್ಷತ್ರದಾಗ ಹುಟ್ಟಿದೋರಿಗೆ ಭರಣಿ ತುಂಬ ಬಂಗಾರ ಜೀವನಪರ್ಯಂತ" ಎಂಬ ಮಾತೊಂದಿದೆ. ಆದರೆ ಬುದ್ಧಿವಂತಿಕೆಯಿಂದ ತಮ್ಮ ಬದುಕನ್ನು ಬಂಗಾರದಂತೆ ಮಾಡಿಕೊಳ್ಳಬೇಕು ಭರಣಿ ನಕ್ಷತ್ರದವರು. ಯಾಕೆಂದರೆ ಭರಣಿ ನಕ್ಷತ್ರದಲ್ಲಿ ಹುಟ್ಟಿದವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ! ಒಂಥರಾ ಬೆಂಕಿಯೊಂದಿಗೆ ಸರಸವೆಂಬಂತೆ ಇವರ ನಡವಳಿಕೆ ಇರುತ್ತದೆ.

ಈ ನಕ್ಷತ್ರದ ಎಲ್ಲ ಪಾದಗಳಲ್ಲಿ ಜನಿಸಿದವರು ಮೇಷ ರಾಶಿಯವರಾಗುತ್ತಾರೆ. ಇವರಿಗೆ ಜನ್ಮನಾಮವಾಗಿ ಲಿ, ಲೂ, ಲೇ, ಲೋ ಎಂಬಕ್ಷರಗಳು ಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಜನ್ಮನಾಮದ ಬದಲು ಬೇರೆ ಹೆಸರನ್ನು ಇಡುತ್ತಿದ್ದಾರೆ. ಏಕೆಂದರೆ ಜನ್ಮನಾಮವನ್ನೇ ಇಟ್ಟರೆ, ಅವರ ರಾಶಿ ಸುಲಭವಾಗಿ ಎಲ್ಲರಿಗೂ ಗೊತ್ತಾಗುತ್ತದೆ. ಇತರರು ಅವರ ರಾಶಿಗತವಾದ ಎಲ್ಲ ಒಳಗುಟ್ಟುಗಳನ್ನು ಹಾಗೂ ಗುಣಾವಗುಣಗಳನ್ನು ತಿಳಿದುಕೊಳ್ಳಬಹುದಾಗಿರುತ್ತದೆ. ಆದ್ದರಿಂದ ಕೆಲವರು ಬುದ್ಧಿವಂತಿಕೆಯಿಂದ ಜನ್ಮನಾಮವನ್ನು ಇಡುತ್ತಿಲ್ಲ. ಇದು ಒಂಥರಾ ದೂರಾಲೋಚನೆ ಕೂಡ ಆಗಿರಬಹುದು. ಅಥವಾ ದುರಾಲೋಚನೆಯೂ ಆಗಿರಬಹುದು!

ಈ ಬಗ್ಗೆ ಹೇಳಿದರೆ ಕೆಲ ಪೆದ್ದರು "ಗೇಲಿ ಮಾಡಬೇಡಿ ಸಾಮಿ" ಎಂದು ಗೋಲಿ ಆಡೋ ಹುಡುಗರ ತರಹ ಆಡತಾರೆ. ಇರಲಿ, ನಾಯಿ ಬೊಗಳಿದರೆ ದೇವಲೋಕವೇನೂ ಹಾಳಾಗಲ್ವಲ್ಲ? ಅಲ್ಲದೇ, ಅವಳಿ ಜವಳಿ ಮಕ್ಕಳೆನಾದರೂ ಇದೇ ನಕ್ಷತ್ರದಲ್ಲಿ ಹುಟ್ಟಿದರೆನ್ನಿ. ಆಗ ನಕ್ಷತ್ರದ ಪಾದಗಳ ಮೂಲಕ ಅವರ ವಿಶೇಷತೆ ತಿಳಿದುಕೊಳ್ಳಬಹುದು. ಇಲ್ಲಾಂದ್ರೆ ಇಬ್ಬರೂ ಒಂದೇ ತರಹ ಇರಬೇಕಾಗುತ್ತಿತ್ತು. [ಮೇಷ ರಾಶಿ ವಿಶೇಷತೆ]

Birth star series : Bharani nakshatra Aries zodiac sign

ಈ ನಕ್ಷತ್ರದವರು ಸಿಟ್ಟಿಗೆದ್ದರೆ ಮುಗೀತು. ಯಾರಿಂದಲೂ ಇವರ ಕೋಪವನ್ನು ಶಮನ ಮಾಡಲಾಗುವುದಿಲ್ಲ. ಹೀಗಾಗಿ ಇವರನ್ನು ಮೇಲ್ವಿಚಾರಣೆ ಕೆಲಸಕ್ಕೆ ನಿಯೋಜಿಸಬಹುದು. ಇವರ ಹೆದರಿಕೆಗೆ ಉಳಿದವರು ಅಚ್ಚುಕಟ್ಟಾಗಿ ಕೆಲಸ ಮಾಡಬಹುದು. ಇವರು ಎಂಥವರಿಂದಲೂ ಬೇಕಾದಂತಹ ಕೆಲಸ ಮಾಡಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೆ. ಇವರ ಆರೋಗ್ಯ ಹೆಚ್ಚು ಕಡಿಮೆ ಒಂದೇ ತರಹನೇ ಇರುತ್ತದೆ. ಕೈ ಕೋಡೋದು ಕಮ್ಮಿನೆ ಎನ್ನಬಹುದು. ಇವರದು ಮನುಷ್ಯ ಗಣವಾಗುವುದರಿಂದ ಸ್ವಲ್ಪ ಆಸ್ತಿಕರು ಎನ್ನಬಹುದು. ಹೀಗೆಂದರೆ ದೇವರ ಬಗ್ಗೆ ಭಯ, ಭಕ್ತಿ ಇರುತ್ತದೆ. ರಾಕ್ಷಸ ಗಣದವರದು ಎಲ್ಲಿಯ ದೇವರು ಎನ್ನುತ್ತ ರಾಕ್ಷಸತನವನ್ನೇ ಪ್ರದರ್ಶಿಸುತ್ತಾರೆ. [ಕೇಳಿಕೊಂಡು ಬಿದ್ದಿರೋಕೆ ಯಾರು ಒಪ್ತಾರೆ?]

ತಮ್ಮಲ್ಲಿ ಭಾರಿ ಬುದ್ಧಿವಂತಿಕೆಯಿದೆ ಎಂದುಕೊಳ್ಳುವುದೇ ಇವರಲ್ಲಿರುವ ನ್ಯೂನ್ಯತೆ. ಹೀಗಾಗಿ ಇವರು ಚಿಕ್ಕಮಕ್ಕಳ ತರಹ ಅಪರಿಮಿತ ಕೆಲಸ ಮಾಡುತ್ತ ದಣಿವೆಯನ್ನೇ ಮರೆತು ಬಿಡುತ್ತಾರೆ. ಶಿಸ್ತು ಸ್ವಲ್ಪ ಕಮ್ಮಿನೇ ಇದ್ದರೂ ಸಾಹಸದ ಕೆಲಸ ಮಾಡಲು ಹುರುಪಿರುತ್ತಾರೆ. ಜನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಎಲ್ಲರಿಗೂ ಇವರು ಅಚ್ಚುಮೆಚ್ಚು. ಹೀಗಾಗಿ ಇವರು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ. ಕೆಲವರು ಸ್ತ್ರೀರೋಗ ತಜ್ಞರಾಗುತ್ತಾರೆ. ಇನ್ನಷ್ಟು ಮಂದಿ ಭೂಗರ್ಭ ಶಾಸ್ತ್ರಜ್ಞರಾಗುತ್ತಾರೆ. ಯಾವುದಕ್ಕೂ ಜನ್ಮಜಾತಕದ ಮೂಲಕ ಮಾಡುವ ಉದ್ಯೋಗದ ಬಗ್ಗೆಯೂ ಕೂಡ ಗೊತ್ತು ಮಾಡಿಕೊಳ್ಳಬಹುದು.

ಇವರ ಬಾಡಿ ಯಾವಾಗಲೂ ಹೀಟ್ ಆಗಿರುವುದರಿಂದ ಇವರಿಗೆ ಚಳಿಯೆಂದರೆ ಮುಜುಗರವಾಗುತ್ತದೆ. ಈ ನಕ್ಷತ್ರಕ್ಕೆ ಶುಕ್ರನು ಅಧಿಪತಿಯಾಗಿರುತ್ತಾನೆ. ಶುಕ್ರನಂತೆ ಇವರ ಗುಣಗಳೂ ಕೂಡ ಇರುತ್ತವೆ. ಅಂದರೆ ಹೆಚ್ಚಾಗಿ ಮನರಂಜನೆ, ಎಂಜಾಯ್ ಬೇಕಿವರಿಗೆ.

ಇವರಿಗೆ "ಪೆಹಲಾ ಪೆಠೋಬಾ ನಂತರ ವಿಠೋಬಾ" ಎನ್ನುವವರನ್ನು ಕಂಡರೆ ತುಂಬಾ ಕೋಪ. ದೇವರಿಗೆ ಪೂಜೆ ಆದ ಮೇಲೆಯೇ ಹೊಟ್ಟೆಗೇನಾದರೂ ಹಾಕಬೇಕು ಎನ್ನುವ ಆಸಕ್ತಿ ಇವರದು. ದೇವರ ಬಗ್ಗೆ ಇರುವ ನಂಬಿಕೆಗಳನ್ನ "ಮೂಢನಂಬಿಕೆ" ಎಂದು ಅಪಹಾಸ್ಯ ಮಾಡುವವರಿಗೆ ಇವರು, "ಹಾಗಿದ್ದರೆ ನೀವು ಸತ್ತ ಮೇಲೆ ನಿಮ್ಮ ದೇಹದ ಎಲ್ಲ ಅಂಗಗಳನ್ನು ದಾನ ಕೊಡುವಂತೆ ಈಗಲೇ ಬರೆದಿಡಿ" ಎಂದು ಹೇಳುವಂತ ಮಹಾನ್ ಧೈರ್ಯವಂತರು. ಏಕೆಂದರೆ ನೀವು ಸತ್ತ ಮೇಲೆ ವಿಧಿವಿಧಾನ ಪೂರ್ವಕವಾಗಿಯೇ ನಿಮ್ಮ ದೇಹವನ್ನು ಪಂಚಭೂತಗಳಲ್ಲಿ ವಿಲೀನ ಮಾಡುತ್ತಾರೆ ಎಂದು ಅವರಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸುತ್ತಾರೆ.

ಮನೆಯಲ್ಲಿರುವ ಚಿಕ್ಕಪುಟ್ಟ ರಿಪೇರಿ ತಾವೇ ಮಾಡಿಕೊಳ್ಳುವ ಇವರು, ದೇವರು ಯಾರಿಗೆಲ್ಲಿ ಇಡಬೇಕೋ ಅಲ್ಲಿಟ್ಟಿದ್ದಾನೆ ಎನ್ನುತ್ತಾರೆ. ಕಲ್ಲಂಗಡಿ ನೆಲದಲ್ಲಿದ್ದರೆ ಮಾವಿನಕಾಯಿ ಮರದಲ್ಲಿರುತ್ತದೆ. ಯಾಕೆಂದರೆ ಮರದಿಂದ ಕಲ್ಲಂಗಡಿ ಯಾರದಾದರೂ ತಲೆಯ ಮೇಲೆ ಬಿದ್ದರೆ? ಎಂಬುದು ದೇವರ ತರ್ಕ ಎಂದು ದೇವರ ಮಹತ್ವದ ಬಗ್ಗೆ ತಿಳಿಸಿ ಹೇಳುತ್ತಾರೆ. ದೇವರು ಎಲ್ಲೆಡೆ ಇರಲಾರದೆ ತನ್ನ ಪ್ರತಿನಿಧಿಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿಸುತ್ತಿರುತ್ತಾನೆ. ಆದರೆ ಅದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸುವವರು ಉತ್ತಮರು. ಇಲ್ಲಾಂದ್ರೆ ಅಧಮರು.

ದೇವಸ್ಥಾನದ ಹೊರಗಡೆ ಕುಳಿತುಕೊಳ್ಳುವ ಭಿಕ್ಷುಕರು ದೇವಸ್ಥಾನದೊಳಗೆ ಹೋಗೋದಿಲ್ಲ. ಅವರಿಗೆ ಶನಿಕಾಟದಿಂದಲೇ ಆ ರೀತಿಯಾಗುತ್ತಿರುತ್ತದೆ. ಇಲ್ಲಾಂದ್ರೆ ಬಯಸಿದ್ದನ್ನು ಬೇಡಿಕೊಳ್ಳಲು ಬರುವ ಭಕ್ತರ ಭಕ್ತಿಯೆಲ್ಲಿ? ದಿನನಿತ್ಯ ದೇವಸ್ಥಾನದ ಮುಂದೆಯೇ ಇರುವ ಭಿಕ್ಷುಕರ ಭಕ್ತಿಯೆಲ್ಲಿ? ಇದರಲ್ಲೇ ಅರ್ಥವಾಗಿರಬೇಕು ನಮ್ಮ ದೇವರು ಎಲ್ಲರನ್ನೂ ಹೇಗಿಟ್ಟಿದ್ದಾನೆ ಎಂದು ಹಾಗೂ ಯಾರಿಗೆಷ್ಟು ಭಕ್ತಿ ಇರುತ್ತದೆಯೆಂದು.

"ಕೃತ್ತಿಕಾ ನಕ್ಷತ್ರ" ವಿಶೇಷ ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಭರಣಿ ನಕ್ಷತ್ರದ ಗಂಡಸರು ಸಿಗರೇಟ್ ಚಟ ಬಿಡಬೇಕು.

ದೈವಕೃಪೆಗೆ : 14-12-2013 ಶನಿವಾರದಂದು ಶನಿಪ್ರದೋಷ ಮತ್ತು ಹನುಮ ಜಯಂತಿ ಇದೆ. ಅಂದು ಈಶ್ವರನ ದರ್ಶನ ಮಾಡಬೇಕು. ಹನುಮನ ದೇವಸ್ಥಾನದಲ್ಲಿ ಕನಿಷ್ಠ ಒಂದಾದರೂ ಬೂಂದಿ ಲಾಡು ತೆಗೆದುಕೊಂಡು ಹೋಗಿ ಬಂದವರಿಗೆ ಹಂಚಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+