ಈ ರಾಶಿಯವರಿಗೆ ಇತರರನ್ನು ನೋಯಿಸುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ.. ಇವರಿಂದ ದೂರವಿರುವುದು ಉತ್ತಮ!
ನಾವು ಒಳ್ಳೆಯ ವ್ಯಕ್ತಿಗಳು ಮತ್ತು ಕೆಟ್ಟ ವ್ಯಕ್ತಿಗಳಿಂದ ತುಂಬಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಕೆಲವರು ಒಳ್ಳೆಯವರಾಗಿರುತ್ತಾರೆ, ಇನ್ನೂ ಕೆಲವರು ಸ್ವಾರ್ಥಿಗಳು ಮತ್ತು ಇತರರನ್ನು ನೋಯಿಸುವಂತವರಾಗಿರುತ್ತಾರೆ. ಇಂತಹ ಜನರನ್ನು ಗುರುತಿಸುವುದರಿಂದ ಅವರ ಬಗ್ಗೆ ಎಚ್ಚರದಿಂದಿರಬಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ಅಂತಹ ರಾಶಿಯವರ ಬಗ್ಗೆ ಮಾಹಿತಿ ಇದೆ. ಇದರಿಂದ ಕೆಲವರು ಎಂಥವರು ಎಂದು ಅರ್ಥಮಾಡಿಕೊಳ್ಳಲು ಸುಲಭಗೊಳಿಸುತ್ತದೆ. ಆದ್ದರಿಂದ ಈ ಲೇಖನದಲ್ಲಿ ವಿಷತ್ವವನ್ನು ತೋರಿಸುವ ಮತ್ತು ಇತರರನ್ನು ನೋಯಿಸುವ ರಾಶಿಯವರ ಬಗ್ಗೆ ತಿಳಿಯಿರಿ.

ಮೇಷ ರಾಶಿ
ಮೇಷ ರಾಶಿಯವರು ತಮ್ಮದೇ ನಿರ್ಧಾರ ಅಂತಿಮ ಆಗಬೇಕು ಎನ್ನುವ ಹಠವುಳ್ಳವರು. ಅವರು ತುಂಬಾ ಸ್ಪರ್ಧಾತ್ಮಕವಾಗಿ ಇರಲು ಒಲವು ತೋರುತ್ತಾರೆ. ಅವರ ಈ ಸ್ವಭಾವವು ಕೆಲವೊಮ್ಮೆ ಕೆಟ್ಟ ನಡವಳಿಕೆ ಅಥವಾ ಇತರರ ಬಗ್ಗೆ ಸಹಾನುಭೂತಿಯ ಕೊರತೆಯಾಗಿ ಹೊರಬರುತ್ತದೆ. ಇವರು ಅಂದುಕೊಂಡಿದ್ದು ಆಗಿಲ್ಲ ಅಂತಾದರೆ ಇವರು ಬಾಯಿಂದ ಬರುವ ಮಾತುಗಳು ಇತರರನ್ನು ನೋಯಿಸಬಹುದು. ಹೀಗಾಗಿ ಮೇಷ ರಾಶಿಯವರು ಜಾಗರೂಕರಾಗಿ ವರ್ತಿಸಬೇಕು.

ಮಿಥುನ ರಾಶಿ
ಮಿಥುನ ರಾಶಿಯವರು ದ್ವಿಮುಖ ಸ್ವಾಭಾವದವರಾಗಿರುತ್ತಾರೆ. ಅವರು ಕೆಲವೊಮ್ಮೆ ಅನಿಯಮಿತ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ ಮತ್ತು ದುರುದ್ದೇಶಪೂರಿತ ಗಾಸಿಪ್ ಅನ್ನು ಹರಡುತ್ತಾರೆ. ಈ ಲಕ್ಷಣಗಳು ಇತರರನ್ನು ಭಾವನಾತ್ಮಕವಾಗಿ ನೋಯಿಸಬಹುದು.

ಸಿಂಹ ರಾಶಿ
ಸಿಂಹ ರಾಶಿಯವರು ಯಾವಾಗಲು ನಾಯಕರಾಗಿರಲು ಬಯಸುತ್ತಾರೆ. ಜೊತೆಗೆ ಮೂಡಿಯಾಗಿರುತ್ತಾರೆ. ಆದರೆ ಅವರು ತುಂಬಾ ಅಹಂಕಾರಿಗಳಾಗಿರುತ್ತಾರೆ. ತಮ್ಮ ಬಗ್ಗೆ ತಾವೇ ಸರಿ ಎಂದು ಹೆಮ್ಮೆಪಡುತ್ತಾರೆ. ಅವರು ಕೆಲವೊಮ್ಮೆ ಸೊಕ್ಕು ತೋರುತ್ತಾರೆ. ಅವರ ಬಗ್ಗೆ ಯಾರೂ ಮೆಚ್ಚುಗೆ ವ್ಯಕ್ತಪಡಿಸದೇ ಇದ್ದರೆ ಮತ್ತೊಬ್ಬರಿಗೆ ಬೇಸರವಾಗುವಂತೆ ಮಾತನಾಡುತ್ತಾರೆ. ಅವರು ಇತರರನ್ನು ಅತ್ಯಲ್ಪವೆಂದು ಭಾವಿಸುತ್ತಾರೆ. ಇದರಿಂದ ಇವರೊಂದಿಗೆ ಬೆರೆಯಲು ಯಾರೂ ಇಷ್ಟ ಪಡುವುದಿಲ್ಲ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಅವರು ಕೆಲವೊಮ್ಮೆ ಉಗ್ರರಾಗಿ ವರ್ತಿಸುತ್ತಾರೆ. ಅವರ ಭಾವನೆಗಳು ಅಸಮತೋಲನಗೊಂಡಾಗ ಬೇರೆಯವರನ್ನು ನೋಯಿಸಬಹುದು. ಸಣ್ಣ ವಿಚಾರಕ್ಕೆ ಕೋಪಗೊಳ್ಳಬಹುದು. ಊಟಕ್ಕೆ ಕರೆದಿಲ್ಲ, ತಮ್ಮೊಂದಿಗೆ ಮಾತನಾಡಿಲ್ಲ ಎಂದು ಮತ್ತೊಬ್ಬರನ್ನು ನೋಯಿಸಬಹುದು.

ಮಕರ ರಾಶಿ
ಮಕರ ರಾಶಿಯವರು ಬಹಳ ಮಹತ್ವಾಕಾಂಕ್ಷೆಯುಳ್ಳವರು. ಆದರೆ ಅವರ ಕೆಲಸ ಒತ್ತಡವನ್ನು ಮತ್ತೊಬ್ಬರ ಮೇಲೆ ಹಾಕುವ ಗುಣವನ್ನು ಹೊಂದಿದ್ದಾರೆ. ಅವರು ಬೇರೆಯವರನ್ನು ನಿರ್ಲಕ್ಷಿಸುತ್ತಾರೆ. ಮಾತುಗಳನ್ನು ನಿಯಂತ್ರಣದಲ್ಲಿ ಇಡಲಾರರು. ಹೀಗಾಗಿ ಇತತರಿಗೆ ಬೇಸರವನ್ನು ಮಾಡುತ್ತಾರೆ.

ಇತರ ರಾಶಿಚಕ್ರ ಚಿಹ್ನೆಗಳು
ವೃಷಭ, ಕರ್ಕ, ಕನ್ಯಾ, ತುಲಾ, ಧನು ರಾಶಿ, ಕುಂಭ ಮತ್ತು ಮೀನ ರಾಶಿಯವರು ಇತರರ ಬಗ್ಗೆ ತುಂಬಾ ಕಾಳಜಿ, ಬೆಂಬಲ ಮತ್ತು ಭಾವನಾತ್ಮಕವಾಗಿರುತ್ತಾರೆ. ಒಬ್ಬ ವ್ಯಕ್ತಿಯನ್ನು ಕೀಳರಿಮೆ ಅನುಭವಿಸಲು ಅವರು ಎಂದಿಗೂ ಅನುಮತಿಸುವುದಿಲ್ಲ. ಅವರ ಮಾತುಗಳು ಅಥವಾ ಕಾರ್ಯಗಳು ಇತರರನ್ನು ನೋಯಿಸಿದರೆ, ಇವರು ತುಂಬಾ ನಿರಾಶೆಗೊಳ್ಳುತ್ತಾರೆ.











Click it and Unblock the Notifications