Ugadi Horoscope 2025: ವೃಷಭ ರಾಶಿಯ ಯುಗಾದಿ ಜಾತಕ- ಯಾರಿಗೆ ಸಿಹಿ? ಯಾರಿಗೆ ಕಹಿ?

ಭಾರತೀಯರಿಗೆ ಅಥವಾ ಹಿಂದೂ ಸಂಪ್ರದಾಯವನ್ನು ಪಾಲಿಸುವವರಿಗೆ ನಿಜವಾದ ಹೊಸ ವರ್ಷ ಅಂದರೆ ಅದು ಯುಗಾದಿ. ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಈಗಾಗಲೇ ನಾವು ಮೇಷ ರಾಶಿಯ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಂಡಿದ್ದೇವೆ. ಇದೀಗ ಶೋಭಾಕೃತಿ ನಾಮ ಸಂವತ್ಸರ ಕಳೆದು ವಿಶ್ವವಸು ನಾಮ ಸಂವತ್ಸರದಲ್ಲಿ ವೃಷಭ ರಾಶಿಯ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಮಾರ್ಚ್‌ ತಿಂಗಳಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಶನಿ ಪ್ರವೇಶ ಮಾಡಲಿದೆ. ಗುರು ಐದನೇ ತಿಂಗಳಲ್ಲಿ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚಾರ ಮಾಡಲಿದೆ. ಐದನೇ ತಿಂಗಳು ರಾಹು ಕುಂಭ ರಾಶಿಗೆ ಪ್ರವೇಶ ಮಾಡಿದರೆ, ಕೇತು ಸಿಂಹ ರಾಶಿಗೆ ಪ್ರವೇಶ ಮಾಡಲಿದೆ. ಈ ಎಲ್ಲಾ ಗ್ರಹಗಳ ಗೋಚರದ ಫಲ ವೃಷಭ ರಾಶಿಯವರ ಮೇಲೆ ಹೇಗಿದೆ ಎಂದು ಈಗ ತಿಳಿಯೋಣ.

Ugadi Taurus Yearly Horoscope 2025 in Kannada Check Ugadi Varsha Bhavishya 2025 for 12 Zodiac Signs

ಗ್ರಹಗಳ ಸ್ಥಾನಪಲ್ಲಟ

ಜ್ಯೋತಿಷ್ಯದ ಪ್ರಕಾರ ಈ ವರ್ಷ ಮಂಗಳ ಗ್ರಹ ವೃಷಭ ರಾಶಿಯಲ್ಲಿ ಎಂಟನೇ ಮನೆಯಿಂದ ಸಾಗಲಿದೆ. ಗುರು ವೃಷಭ ರಾಶಿಯ ಹನ್ನೆರಡನೇ ಮನೆಯ ಮೂಲಕ ಪ್ರಯಾಣಿಸಲಿದೆ. ಗುರುವಿನ ಪ್ರಭಾವ ಸಂಪೂರ್ಣವಾಗಿ ನಿಮ್ಮ ಮೇಲೆ ಇದೆ. ಈ ಗ್ರಹಗಳ ಸಕಾರಾತ್ಮಕ ಪ್ರಭಾವದಿಂದಾಗಿ ವೃಷಭ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಹಾಗೂ ವಿದೇಶ ಪ್ರಯಾಣದ ಸಾಧ್ಯತೆಯಿದೆ.

ವೃಷಭ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ

ವೃಷಭ ರಾಶಿಯವರು ಯುಗಾದಿಯ ನಂತರ ಆದಾಯದಲ್ಲಿ ಸುಧಾರಣೆಯನ್ನು ಕಾಣುವರು. ಆದರೆ ನಿರೀಕ್ಷಿತ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ಹೂಡಿಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಯಾವುದೇ ಹೂಡಿಕೆ ಮಾಡುವ ಮೊದಲು, ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಬೇಕು.

Ugadi Taurus Yearly Horoscope 2025 in Kannada Check Ugadi Varsha Bhavishya 2025 for 12 Zodiac Signs

ಮತ್ತೊಂದೆಡೆ ಈ ಅವಧಿಯಲ್ಲಿ ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗಲಿದೆ. ಆದ್ದರಿಂದ ಖರ್ಚುಗಳ ಮೇಲೆ ನಿಗಾ ಇರಿಸಿ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಗಮನ ಹರಿಸುವ ಮೂಲಕ ನೀವು ಹಣಕಾಸಿನ ಸಮಸ್ಯೆಗಳನ್ನು ತಪ್ಪಿಸಬಹುದು.

ವೃಷಭ ರಾಶಿಯ ಯುಗಾದಿ ಕೌಟುಂಬಿಕ ಜಾತಕ

ವೈವಾಹಿಕ ಜೀವನದಲ್ಲಿ ತಾಳ್ಮೆಯಿಂದಿರಿ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಈ ಸಮಯದಲ್ಲಿ ವಿವಾದ ಅಥವಾ ಚರ್ಚೆಯನ್ನು ತಪ್ಪಿಸಬೇಕು. ಈ ಅವಧಿಯಲ್ಲಿ ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

Ugadi Taurus Yearly Horoscope 2025 in Kannada Check Ugadi Varsha Bhavishya 2025 for 12 Zodiac Signs

ವೃಷಭ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ

ವೃಷಭ ರಾಶಿಯ ವಿದ್ಯಾರ್ಥಿಗಳು ಯುಗಾದಿಯ ನಂತರ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಯಾವುದೇ ವಿಷಯದ ಸ್ವಯಂ ಅಧ್ಯಯನಕ್ಕೆ ಇದು ಉತ್ತಮ ಸಮಯ. ಶನಿಯ ಪ್ರಭಾವದಡಿಯಲ್ಲಿ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ಪರಿಶ್ರಮದಿಂದ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ.

ವೃಷಭ ರಾಶಿಯ ಯುಗಾದಿ ವೃತ್ತಿ ಭವಿಷ್ಯ

ವೃಷಭ ರಾಶಿಯವರಿಗೆ ಯುಗಾದಿ ಹಬ್ಬದ ನಂತರ ಅವರ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ನಿಮಗೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸಲು ಅವಕಾಶ ಸಿಗುತ್ತದೆ. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ಈ ಸಮಯ ಸ್ವಂತ ವ್ಯವಹಾರ ಅಥವಾ ಉದ್ಯಮವನ್ನು ಪ್ರಾರಂಭಿಸಲು ಬಯಸುವವರಿಗೆ ಸೂಕ್ತವಾಗಿದೆ.

ವೃಷಭ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ

ಯುಗಾದಿಯ ನಂತರ ವೃಷಭ ರಾಶಿಯ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ಅವಧಿಯಲ್ಲಿ ಸರಿಯಾಗಿ ತಿನ್ನುವುದು, ಸಾಕಷ್ಟು ವ್ಯಾಯಾಮ ಮಾಡುವುದು ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ವೃಷಭ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ

ಯುಗಾದಿಯ ನಂತರ ವೃಷಭ ರಾಶಿಯವರು ದಾಂಪತ್ಯ ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಸಂಬಂಧಗಳ ಬಗ್ಗೆ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬಾರದು. ಅವಿವಾಹಿತರು ಸಂಗಾತಿಯನ್ನು ಹುಡುಕಲು ಅಥವಾ ಮದುವೆಯಾಗಲು ಈ ಸಮಯ ತುಂಬಾ ಅನುಕೂಲಕರವಾಗಿದೆ. ಸಂಬಂಧಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ವೃಷಭ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ

ವಾಹನ ಖರೀದಿ ಮಾಡುವಿರಿ. ಶನಿ ಪ್ರಭಾವ ಹೇಗಿದೆ ಎಂದು ನೋಡುವುದಾದರೆ, ಶನಿ ಮಾರ್ಚ ತಿಂಗಳಲ್ಲಿ ಕುಂಭದಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಿದೆ. ಇದು ವೃಷಭ ರಾಶಿಯವರಿಗೆ ತುಂಬಾ ಉತ್ತಮ ಫಲ ತಂದುಕೊಡಲಿದೆ. ವ್ಯಾಪಾರದಲ್ಲಿ ಅದ್ಭುತ ಫಲ ಇದೆ. ಮಾಡುವ ಕೆಲಸ ವೇಗ ಪಡೆದುಕೊಳ್ಳಲಿವೆ. ವಿರೋಧಿಗಳಿಗೆ ಮುಖಭಂಗವಾಗುತ್ತದೆ. ಸಂಘ-ಸಂಸ್ಥೆಗಳಲ್ಲಿ ನಿಮಗೆ ಪ್ರಾಮುಖ್ಯತೆ ಸಿಗುತ್ತದೆ. ವಾಹನ, ಆಸ್ತಿ ಖರೀದಿ ಮಾಡುವಿರಿ. ದಾನ ಧರ್ಮ ಮಾಡುವಲ್ಲಿ ನಿಸ್ಸೀಮರಾಗಿರುತ್ತೀರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+