Get Updates
Get notified of breaking news, exclusive insights, and must-see stories!

ಮಕರ ರಾಶಿ ಭವಿಷ್ಯ 2026: ಇಡೀ ವರ್ಷದ ಉದ್ಯೋಗ, ಹಣಕಾಸು, ಮದುವೆ, ಆರೋಗ್ಯ, ವ್ಯವಹಾರದ ಕುರಿತು ಸಂಪೂರ್ಣ ಭವಿಷ್ಯವಾಣಿ

Capricorn Yearly Horoscope 2026: ಇನ್ನೇನು 2026ನೇ ಹೊಸ ವರ್ಷ ಸ್ವಾಗತಕ್ಕೆ ಕೆಲವೇ ವಾರಗಳು ಮಾತ್ರ ಬಾಕಿಯಿವೆ. ಹಾಗಾದ್ರೆ, ಮುಂಬರುವ ಜನವರಿಯಿಂದ ಡಿಸೆಂಬರ್‌ ಅಂದರೆ, 2027ರವರೆಗೂ 'ಮಕರ ರಾಶಿ' ವರ್ಷ ಭವಿಷ್ಯ ಹೇಗಿರಲಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮಕರ ರಾಶಿಯಲ್ಲಿ ಜನಿಸಿದವರಿಗೆ 2026ನೇ ವರ್ಷ ಯಾವ ರೀತಿ ಫಲ ಕೊಡಲಿದೆ, ಯಾವೆಲ್ಲಾ ಕೆಲಸಗಳನ್ನು ಮಾಡಿದರೆ ಉತ್ತಮ? ಏನು ಮಾಡಬಾರದು ಹಾಗೂ ಏನೆಲ್ಲಾ ಸಮಸ್ಯೆಗಳು ಎದುರಾಹಬಹುದು? ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಹಾಗಾದ್ರೆ, ಸಂಪೂರ್ಣ ವಿವರ ಕೆಳಗೆ ನೀಡಲಾಗಿದೆ ಕಣ್ಣಾಡಿಸಿ.

Capricorn Yearly Horoscope 2026 Complete Predictions on Career Finance Marriage Health Business

ಹಳೆಯ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಬಹಳ ಲಾಭದಾಯಕ ಆಗಬಹುದು. ಬಹುಕಾಲದಿಂದ ಎದುರಿಸುತ್ತಿದ್ದ ಅಡಚಣೆಗಳು ಮಾಯ ಆಗಲಿವೆ. ಕುಟುಂಬದಲ್ಲಿನ ಕಲಹಗಳು ದೂರವಾಗಲಿವೆ. ಉದ್ಯೋಗ, ವೃತ್ತಿ ಅಥವಾ ಕೆಲಸ ಬದಲಾಯಿಸಲು ಪ್ರಯತ್ನಿಸಿದರೆ ಅದಕ್ಕೂ ಸಹ ಸಮಯಗಳು ಒದಗಿಬರಬಹುದು. ವ್ಯವಹಾರ ಕ್ಷೇತ್ರದಲ್ಲೂ ಬದಲಾವಣೆ ಕ್ರಾಂತಿಯಾಗಲಿದ್ದು, ಹೊಸ ಉದ್ಯಮ ಆರಂಭಿಸಲು ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇರುತ್ತದೆ.

ನಿಮ್ಮ ಆಲೋಚನೆಗಳು ದೂರದೃಷ್ಟಿಯಿಂದ ಕೂಡಿರುತ್ತವೆ. 2026ರಲ್ಲಿ ಯಾವಾಗಲಾದರೂ ಶುಭಸುದ್ದಿಗಳು ಕೇಳಿಬರುವ ಸಾಧ್ಯತೆಯಿದೆ. ಮೇ ತಿಂಗಳ ನಂತರ ಕುಟುಂಬ ಹಾಗೂ ಹಣಕಾಸು ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಒಳಿತು. ಶನಿ ಗ್ರಹ ನಿಮ್ಮ ರಾಶಿಗೆ 3ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಗುರು ಗ್ರಹವು ಜನವರಿಯಿಂದ ಜೂನ್ 1ರವರಗೂ 6ನೇ ಮನೆ, ಅಂದರೆ ರಿಪು- ಶತ್ರು ಸ್ಥಾನದಲ್ಲಿ ಇರುತ್ತದೆ. ಬಳಿಕ ಅಕ್ಟೋಬರ್ 31ರ ವರೆಗೆ ಕಳತ್ರ ಸ್ಥಾನ, ಅಂದರೆ 7ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ.

ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ಆಯುಷ್ಯ ಸ್ಥಾನ ಅಂದರೆ, 8ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಮಾಡುತ್ತದೆ. ಇನ್ನುಳಿದಂತೆ ವರ್ಷವಿಡೀ ರಾಹು ಗ್ರಹವು ನಿಮ್ಮ ರಾಶಿಗೆ 2ನೇ ಮನೆ ಆಗುವಂತಹ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು 8ನೇ ಮನೆಯಲ್ಲಿ ಸಂಚಾರ ಮಾಡುತ್ತದೆ.

ಡಿಸೆಂಬರ್ 5ರವರೆಗೆ ರಾಹು ಗ್ರಹವು ಜನ್ಮ ಸ್ಥಾನವಾದ 1ನೇ ಮನೆಯಾದ ನಿಮ್ಮ ಜನ್ಮ ರಾಶಿ ಮತ್ತು ಕೇತು ಗ್ರಹ ನಿಮ್ಮ ರಾಶಿಗೆ 7ನೇ ಮನೆ ಕರ್ಕಾಟಕ ರಾಶಿಗೂ ಪ್ರವೇಶಿಲಿದೆ. ಉತ್ತರಾಷಾಢ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ನಾಲ್ಕೂ ಪಾದ, ಧನಿಷ್ಠಾ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ಮಕರ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶನಿ.

ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ?: ನಿಮ್ಮ ಮಕರ ರಾಶಿಯಿಂದ ಮೂರನೇ ಮನೆಯಲ್ಲಿ ಶನೈಶ್ಚರನ ಸಂಚಾರ ಇರುತ್ತದೆ. ಉದ್ಯೋಗ, ವೃತ್ತಿ, ವ್ಯಾಪಾರದಲ್ಲಿ ಅಂದುಕೊಂಡಂತಹ ಕೆಲಸಗಳು ನೆರವೇರುತ್ತವೆ. ಕುಟುಂಬದವರೊಂದಿದೆ ಏನಾದರೂ ಮನಸ್ತಾಪಗಳಿದ್ದಲಿ ಅವುಗಳು ಕೂಡ ದೂರ ಆಗಲಿದೆ. ಆರೋಗ್ಯ ಸಮಸ್ಯೆಗಳು ಸುಧಾರಣೆ ಕಾಣುತ್ತವೆ. ನಿಮ್ಮ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ಮಾತನಾಡುತ್ತಿರುವವರ ಬಳಿಯೇ ನೀವು ಮೆಚ್ಚುಗೆಯನ್ನು ಪಡೆಯುತ್ತೀರಿ.

ಹಣಕಾಸು: ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ಒಂದು ವೇಳೆ ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ಹಣಕಾಸಿನ ವಿಷಯಕ್ಕೆ ಜಗಳ, ಮನಸ್ತಾಪಗಳಿದ್ದಲ್ಲಿ ಅವಗಳು ಕೂಡ ದೂರ ಆಗುವ ಸಾಧ್ಯತೆಯಿದೆ. ವೃತ್ತಿ, ಉದ್ಯೋಗ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚು ಲಾಭ ಸಿಗಲಿದೆ. ನಿವೇಶನ, ಮನೆ, ಫ್ಲ್ಯಾಟ್ ಖರೀದಿ ಮಾಡಬೇಕೆಂಬ ಆಸೆಯಿದ್ದರೆ, ಅವುಗಳು ನೆರವೇರುತ್ತವೆ. ಈ ಸಮಯದಲ್ಲಿ ಸಾಲಗಳನ್ನು ತೀರಿಸಿಕೊಳ್ಳಲು ಸಾಧ್ಯ ಆಗಲಿದೆ. ಆದ್ದರಿಂದ ಉಳಿತಾಯ, ಹೂಡಿಕೆಯತ್ತ ಆಸಕ್ತಿ ತೋರುತ್ತೀರಿ.

ವ್ಯಾಪಾರದಲ್ಲಿ ಆದಾಯ ಮೂಲಗಳು ಹಾಗೂ ಲಾಭ ಹೆಚ್ಚಾಗಲಿದೆ. ಇದು ನಿಮ್ಮ ನಿರ್ಧಾರಗ ಮೇಲೇ ನಿಂತಿರುತ್ತದೆ. ಯಾವುದೇ ಲಾಭದಾಯಕ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಯಾವುದೇ ಅನುಮಾನ, ಹಿಂಜರಿಕೆ ಬೇಡ. ಹೊಸದಾಗಿ ವ್ಯಾಪಾರ, ವ್ಯವಹಾರ ಆರಂಭಿಸಬೇಕೆಂಬ ಆಲೋಚನೆಯಲ್ಲಿರುವವರಿಗೆ ಉತ್ತಮ ಸಮಯ.

ಜನವರಿಯಿಂದ ಜೂನ್ 1ರವರೆಗೆ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಎಂಹಥದ್ದೇ ಮಸ್ತಾಪಗಳಿದ್ದರೂ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳ ಜೊತೆಗೆ ವೈರತ್ವ ಬೆಳೆಯಬಹುದು. ದೇಹದ ತೂಕದಲ್ಲಿ ಹೆಚ್ಚಳ ಆಗದಂತೆ ಹಾಗೂ ಬೊಜ್ಜು ಬಾರದಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ರಾಶಿಗೆ ವ್ಯಯ ಸ್ಥಾನದ ಅಧಿಪತಿಯೀ ಆದಂತಹ ಗುರು ಗ್ರಹ ಆರನೇ ಮನೆಯಲ್ಲಿ ಸಂಚರಿಸುವುದರಿಂದ ವೈದ್ಯಕೀಯ ವೆಚ್ಚದ ಪ್ರಮಾಣ ಹೆಚ್ಚಾಗಲಿದೆ.

ಕೋರ್ಟ್, ಕಚೇರಿ ವ್ಯಾಜ್ಯ, ಪೊಲೀಸ್ ಠಾಣೆಗೆ ಅಲೆದಾಟ ಇಂತಹವುಗಳಿಂದ ಖರ್ಚಿನ ಪ್ರಮಾಣ ಹೆಚ್ಚಾಗುತ್ತದೆ. ಹೊಸದಾಗಿ ಯಾವುದೇ ಪ್ರಾಜೆಕ್ಟ್ ಶುರು ಮಾಡುವ ಮುಂಚಿತವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವದು ಸೂಕ್ತ. ಗ್ಯಾಜೆಟ್- ಮೊಬೈಲ್ ಫೋನ್, ಲ್ಯಾಪ್ ಟಾಪ್ ಇಂತಹ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಯ ಅಗತ್ಯವಿದ್ದರೆ ಮಾತ್ರ ಹಣ ವ್ಯಯ ಮಾಡಿ.

ವಿವಾಹಕ್ಕೆ ಉತ್ತಮ ಸಮಯ: ಜೂನ್‌ 1ರಿಂದ ಅಕ್ಟೋಬರ್ ಅಂತ್ಯದವರೆಗೂ ಏಳನೇ ಮನೆಯಲ್ಲಿ ಗುರು ಸಂಚಾರ ಮಾಡುತ್ತದೆ. ಹಲವು ರೀತಿಯಲ್ಲಿ ಅನುಕೂಲಕರ ಆಗಿರುತ್ತದೆ ಹಾಗೂ ಶುಭ ಕಾರ್ಯಗಳು ನಡೆಯುತ್ತವೆ. ವಿವಾಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯುವುದು, ವಿದೇಶ ಪ್ರಯಾಣ ಅನುಕೂಲಕರ, ಲಾಭದಾಯಕ ಆಗಲಿದೆ. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೂ ಶುಭ ಸುದ್ದಿ ಕಾದಿದೆ.

ಉದ್ಯೋಗ: ಉದ್ಯೋಗ, ವ್ಯಾಪಾರ, ವ್ಯವಹಾರ ಎಲ್ಲದರಲ್ಲೂ ಯಶಸ್ಸು ಕಾಣುತ್ತೀರಿ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಉದ್ಯೋಗ ಬಿಡುವಂತೆ ಆಗಬಹುದು ಅಥವಾ ಕೆಲಸದಿಂದ ತೆಗೆಯಬಹುದು. ನೆರೆಹೊರೆಯವರ ಜೊತೆಗೆ ಜಗಳ, ಪೊಲೀಸ್ ಠಾಣೆಗೆ ಅಲೆದಾಟ ಈ ರೀತಿಯ ಫಲಗಳಿವೆ. ಎರಡನೇ ಮನೆಯಲ್ಲಿ ರಾಹು ಸಂಚಾರದ ಅವಧಿ ಆದಾಯದ ವಿಚಾರದಲ್ಲಿ ಭಾರೀ ಏರಿಳಿತ ಆಗಬಹುದು.

ದಂಪತಿ ಮಧ್ಯೆ ಸಣ್ಣಪುಟ್ಟ ವಿಚಾರಕಗಕೆ ಜಗಳಗಳು ಆಗುತ್ತದೆ. ಈ ವೇಳೆ ಸಾಲ ತೆಗೆದುಕೊಂಡು, ಚಿನ್ನ-ಬೆಳ್ಳಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಬೇಡಿ. 8ನೇ ಮನೆಯಲ್ಲಿ ಕೇತು ಗ್ರಹ ಸಂಚಾರದಲ್ಲಿ ಚರ್ಮ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ, ಸೋರಿಯಾಸಿನ್‌ನಂತಹ ಆರೋಗ್ಯ ಸಮಸ್ಯೆ ಇರುವವರು ಬಹಳ ಜಾಗ್ರತೆ ವಹಿಸಬೇಕು. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ತೀವ್ರತರವಾದ ಮಾನಸಿಕ ಖಿನ್ನತೆ ಕಾಡಲಿದೆ. ಸುಸ್ತು, ದೇಹದಲ್ಲಿ ವಿಟಮಿನ್ ಕೊರತೆ ಕಾಣಲಿದೆ. ಆದ್ದರಿಂದ ಪೌಷ್ಠಿಕ ಆಹಾರ ಸೇವನೆ, ವ್ಯಾಯಮ ಮಾಡುವುದು ಅತ್ಯಗತ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+