Get Updates
Get notified of breaking news, exclusive insights, and must-see stories!

ಕುಂಭ ರಾಶಿ ಭವಿಷ್ಯ 2026: ಉದ್ಯೋಗ, ಹಣಕಾಸು, ಪ್ರೀತಿ, ಮದುವೆ, ಆರೋಗ್ಯ, ವ್ಯವಹಾರದ ಕುರಿತು ವರ್ಷದ ಭವಿಷ್ಯವಾಣಿ

Aquarius Yearly Horoscope 2026: ಇಡೀ ದೇಶವೇ 2026ನೇ ಹೊಸ ವರ್ಷ ಸ್ವಾಗತ ಮಾಡಿಕೊಳ್ಳಲು ಸಜ್ಜಾಗಿದೆ. ಇನ್ನೂ ಬಹುತೇಕ ಮಂದಿ ತಮ್ಮ ಭವಿಷ್ಯವಾಣಿ ನೋಡಲು ಕಾತದರಿಂದ ಕಾಯುತ್ತಿರುತ್ತಾರೆ. ಹಾಗಾದ್ರೆ, ಮುಂಬರುವ ವರ್ಷದ ಜನವರಿಯಿಂದ ಡಿಸೆಂಬರ್‌ ಅಂದರೆ, 2027ರ ವರೆಗೂ 'ಕುಂಭ ರಾಶಿ' ವರ್ಷ ಭವಿಷ್ಯ ಹೇಗಿರಲಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬಹುತೇಕ ಮಂದಿ 2026ನೇ ವರ್ಷದ ತಮ್ಮ ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇಲ್ಲಿ ಮುಂಬರುವ ವರ್ಷದಲ್ಲಿ 'ಕುಂಭ ರಾಶಿ' ಅವರ ಭವಿಷ್ಯ ಹೇಗಿರಲಿದೆ ಎಂದು ವಿವರಿಸಲಾಗಿದೆ. ಕ್ಷೇತ್ರವಾರು ಜಾತಕದ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಉದಾಹರಣೆಗೆ ಉದ್ಯೋಗ, ಆರೋಗ್ಯ, ವ್ಯಾಪಾರ, ವಿವಾಹ ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಕುರಿತು ಇದರಲ್ಲಿ ಕಾಣಬಹುದು.

Aquarius Yearly Horoscope 2026 Prediction on Career Finance Love Health amp amp Business

ಪ್ರೇಮಿಗಳು, ವಿವಾಹಿತರು ಗಮನಿಸಿ: ಇಡೀ ವರ್ಷ ನಿಮ್ಮ ರಾಶಿಗೆ ಎರಡನೇ ಮನೆ ವಾಕ್ ಸ್ಥಾನ, ಧನ ಸ್ಥಾನ, ಕುಟುಂಬ ಸ್ಥಾನವಾದ ಮೀನ ರಾಶಿಯಲ್ಲಿ ಶನಿ ಗ್ರಹದ ಸಂಚಾರ ಇರುತ್ತದೆ. ಮಾತಿನ ಮೇಲೆ ಇರಿಸಿಕೊಳ್ಳುವುದು ಉತ್ತಮ. ಪ್ರಮುಖವಾಗಿ ಪ್ರೇಮಿಗಳು ಹಾಗೂ ವಿವಾಹವಾದ ದಂಪತಿ ಮಧ್ಯೆ ಅಥವಾ ಒಂದು ವೇಳೆ ವಿವಾಹ ನಿಶ್ಚಿತಾರ್ಥ ಆಗಿದ್ದರೆ, ಅಂತಹವರು ಮಾತಿನ ಮೇಲೆ ಹಿಡಿತ ಸಾಧಿಸಬೇಕಾಗುತ್ತದೆ.

ಹಣಕಾಸು: ಉತ್ತಮ ಆದಾಯ ಬರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನಿಮ್ಮ ಕೈ ಸೇರದ ಹಣವನ್ನು ನಂಬಿಕೊಂಡು ಮುಂಚಿತವಾಗಿ ಯಾರಿಗೂ ಮಾತು ಕೊಡುವುದಕ್ಕೂ ಪ್ರಯತ್ನ ಮಾಡಬೇಡಿ. ಕಳೆದ ಎರಡೂವರೆ ವರ್ಷಗಳಲ್ಲಿ ಪಟ್ಟಷ್ಟು ಹಿಂಸೆ, ಕಿರಿಕಿರಿ ಇರುವುದಿಲ್ಲ. ಆದರೆ, ಮೇಲಿಂದ ಮೇಲೆ ಪ್ರಯತ್ನ ಮಾಡಿದರೂ ನಿರೀಕ್ಷಿಸಿದಷ್ಟೂ ಫಲಿತಾಂಶ ದೊರೆಯದೆ, ಬೇಸರಕ್ಕೆ ಕಾರಣ ಆಗಬಹುದು.

ಅನವಶ್ಯಕ ಹಣವನ್ನು ದುಂದುವೆಚ್ಚ ಮಾಡಬೇಡಿ. ಆಲಸ್ಯತವವನ್ನು ಕಡಿಮೆ ಮಾಡದಿದ್ದರೆ ದೊಡ್ಡ ತೊಂದರೆಗೆ ಸಿಲುಕುತ್ತೀರಿ. ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕ, ತೆರಿಗೆ ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ. ಒಂದು ಕಡೆ ಉದ್ಯೋಗ ಮಾಡುತ್ತಾ, ಮತ್ತೊಂಡೆ ಆದಾಯ ಬರಲಿ ಎಂದು ಕೆಲಸದಲ್ಲಿ ತೊಡಗಿಕೊಂಡು, ಸಮಸ್ಯೆಗೆ ಒಳಗಾಗುತ್ತೀರಿ. ಆದ್ದರಿಂದ ಅತೀ ಆಸೆಯಿಂದ ದೂರ ಇರುವುದು ಒಳಿತು.

ಜನವರಿಯಿಂದ ಜೂನ್ ತಿಂಗಳವರೆಗೂ 5ನೇ ಮನೆಯಲ್ಲಿ ಗುರು ಗ್ರಹ ಸಂಚರಿಸುತ್ತದೆ. ಈ ವೇಳೆ ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮ ಸಮಯವಾಗಿರುತ್ತದೆ. ಆದಾಯದಲ್ಲಿ ಹೆಚ್ಚು ಆತಂಕಪಡುವಷ್ಟರ ಮಟ್ಟಿಗೆ ಕುಸಿತ ಆಗುವುದಿಲ್ಲ. ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡಿ ಒಪ್ಪಿಗೆ ಪಡೆದುಕೊಳ್ಳಲಿದ್ದೀರಿ.

ವ್ಯಾಪಾರ: ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಹೆಚ್ಚು ಲಾಭ ಪಡೆಯಲಿದ್ದೀರಿ. ಪುಸ್ತಕ ಪ್ರಕಾಶಕರು, ಮುದ್ರಕರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಕನ್ಸಲ್ಟೇಷನ್ ಮಾಡುವ ಮೂಲಕ ಆದಾಯ ಪಡೆಯುತ್ತಿರುವವರಿಗೆ ಸೂಕ್ತ ಸಮಯ ಇದಾಗಲಿದೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ತಕ್ಕಂತೆ ಹುದ್ದೆ- ಸ್ಥಾನಮಾನಗಳು ದೊರೆಯುವ ಸಾಧ್ಯತೆ ಹೆಚ್ಚಿದೆ.

ಆರೋಗ್ಯ: ಜೂನ್‌ನಿಂದ ಅಕ್ಟೋಬರ್ ಕೊನೆವರೆಗೂ 6ನೇ ಮನೆಯಲ್ಲಿ ಗುರು ಸಂಚಾರ ಮಾಡುತ್ತದೆ. ಆರೋಗ್ಯದಲ್ಲಿ ಏರಿಳಿತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದೇಹದ ತೂಕದಲ್ಲಿ ದಿಢೀರ್ ಏರಿಕೆಯಾಗುತ್ತದೆ. ಸಾಲದ ಪ್ರಮಾಣ ಹೆಚ್ಚಾಗಲಿದ್ದು, ಈಗಾಗಲೇ ಸಾಲ ಪಡೆದುಕೊಂಡಿದ್ದಲ್ಲಿ ಅದನ್ನು ಹಿಂತಿರುಗಿಸುವಂತೆ ಭಾರೀ ಒತ್ತಡಕ್ಕೆ ಒಳಗಾಗುತ್ತೀರಿ.

ಉತ್ತಮ ಅವಕಾಶಗಳು: ನವೆಂಬರ್- ಡಿಸೆಂಬರ್ ತಿಂಗಳಲ್ಲಿ 7ನೇ ಮನೆಯಲ್ಲಿ ಗುರು ಸಂಚಾರ ಕಾಲದಲ್ಲಿ ವಿದೇಶ ಪ್ರಯಾಣದ ಅವಕಶ ಸಿಗಬಹುದು. ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೆ, ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಇದು ಉತ್ತಮ ಸಮಯ ಆಗಿರಲಿದೆ. ಈ ವೇಳೆ ಹಲವು ರೀತಿಯ ಶುಭ ಸೂಚನೆಗಳು ಸಿಗಲಿವೆ.

ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ: ನಿಮ್ಮದೇ ರಾಶಿಯಲ್ಲಿ ರಾಹು ಸಂಚಾರ ಮಾಡುವುದರಿಂದ ಭಾವನಾತ್ನಕವಾಗಿ ಯಾರಿಗೆ ಹತ್ತಿರ ಆಗಿರುತ್ತೀರೋ ಅವರಿಂದ ದೂರ ಆಗುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇದನ್ನು ಪಾಲಿಸದಿದ್ದರೆ, ಆರ್ಥಿಕ ನಷ್ಟಕ್ಕೆ ಒಳಗಾಗುತ್ತೀರಿ. ಹಣದ ವಿಚಾರಗಳಲ್ಲಿ ದುರಾಸೆ ಬೇಡ. ಯಾಕಂದ್ರೆ, ದೊಡ್ಡ ಮಟ್ಟದ ಲಾಭ ಕೊಡಿಸುವುದಾಗಿ ನಿಮಗೆ ಆಮಿಷ ತೋರಿಸಿ, ವಂಚನೆ ಮಾಡುವ ಅಪಾಯ ಹೆಚ್ಚಿರುತ್ತದೆ.

ವ್ಯವಹಾರ-ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಹಣವನ್ನು ಕಳೆದುಕೊಳ್ಳುತ್ತೀರಿ. ಹೊಸಬರ ಜೊತೆಗೆ ವ್ಯವಹಾರ- ವ್ಯಾಪಾರ ಮಾಡುವಾಗ ಜಾಗ್ರತೆಯಿಂದ ಇರಬೇಕಾಗುತ್ತದೆ ಇಲ್ಲದಿದ್ದರೆ, ಸಂಕಷ್ಟಕ್ಕೆ ಸಿಲುಕುವುದು ತಪ್ಪಿದ್ದಲ್ಲ. ಹೀಗೆ 'ಕುಂಭ ರಾಶಿ' ವರ್ಷ ಭವಿಷ್ಯ ಇದೆ. ಈ ರಾಶಿವರಿಗೆ ಯಾವ್ಯಾವ ಕ್ಷೇತ್ರಗಳಲ್ಲಿ ಏನೆಲ್ಲಾ ಆಗಲಿದೆ ಎನ್ನುವ ಸಂಪೂರ್ಣ ವಿವರ ಈ ಭವಿಷ್ಯವಾಣಿಯಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+