ವರ್ಲ್ಡ್ ವೈಡ್ ವೆಬ್ ಡೇ- ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಸೃಷ್ಟಿಯ ಮಹತ್ವ

ಇಂದು ಆಗಸ್ಟ್ 1, ವರ್ಲ್ಡ್ ವೈಡ್ ವೆಬ್ ದಿನ. ಅಂತರ್ಜಾಲದಲ್ಲಿ ಜನರು ಮುಕ್ತವಾಗಿ ಅನ್ವೇಷಣೆ ನಡೆಸಲು ಸಾಧ್ಯವಾಗಿಸಿದ ತಂತ್ರಜ್ಞಾನಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ದಿನ ಇದೆ.

ಅಂತರ್ಜಾಲ ಅಥವಾ ವೆಬ್ ಎಂಬುದು ಜಾಗತಿಕವಾಗಿ ಕಂಪ್ಯೂಟರ್ ಸಿಸ್ಟಂಗಳನ್ನು ಒಂದೊಕ್ಕೊಂದು ಸಂಪರ್ಕ ಮಾಡುವ ಜಾಲ. ಇಡೀ ವಿಶ್ವದಲ್ಲಿ ಕೋಟ್ಯಂತರ ಕಂಪ್ಯೂಟರ್‌ಗಳು ಇಂಟರ್ನೆಟ್ ಮೂಲಕ ಪರಸ್ಪರ ಸಂಪರ್ಕ ಹೊಂದಿದೆ ಎಂದರೆ ಈ ವೆಬ್ ಶಕ್ತಿಯ ಆಳ ಅಗಲ ಎಷ್ಟಿರಬಹುದು..!

ಇಂಟರ್ನೆಟ್ ಎಂಬುದು ಮಾಹಿತಿಯ ಅತಿದೊಡ್ಡ ಕಣಜ. ಮಾಹಿತಿ ಮಾತ್ರವಲ್ಲ ನಮ್ಮ ದೈನಂದಿನ ಸೇವೆಗಳಿಗೆ ಸಂಪರ್ಕ ಕೊಂಡಿಯೂ ಹೌದು. ನಮ್ಮ ಬಹುತೇಕ ದಿನನಿತ್ಯದ ಚಟುವಟಿಕೆಗಳಿಗೆ ಇಂಟರ್ನೆಟ್ ಅನಿವಾರ್ಯ ಎನ್ನುವ ಮಟ್ಟಕ್ಕೆ ಅದು ಬೆಳೆದುಹೋಗಿದೆ.

ಈ ಇಂಟರ್ನೆಟ್‌ನ ಅಗಾಧ ಶಕ್ತಿಯ ಮಾಧ್ಯಮವಾಗಿದ್ದು ವರ್ಲ್ಡ್ ವೈಡ್ ವೆಬ್. ವಿಶ್ವದ ಜ್ಞಾನಕೋಶವನ್ನು ಜನರ ಬೆರಳ ತುದಿಗೆ ತಂದು ನಿಲ್ಲಿಸಿದ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಆವಿಷ್ಕಾರದ ಸಂಭ್ರಮಾಚರಣೆಗೆ ಆಗಸ್ಟ್ 1 ನಿಗದಿಯಾಗಿದೆ. ಅಷ್ಟಕ್ಕೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಮಹತ್ವ ಏನು? ಎಂಬಿತ್ಯಾದಿ ಕುತೂಹಲಗಳಿಗೆ ಒಂದಷ್ಟು ಸಮಾಧಾನ ಇಲ್ಲಿದೆ.

 ವರ್ಲ್ಡ್ ವೈಡ್ ವೆಬ್ ಮಹತ್ವ

ವರ್ಲ್ಡ್ ವೈಡ್ ವೆಬ್ ಮಹತ್ವ

ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ ಮೊದಲು ರಚನೆಯಾಗಿದ್ದು 1989ರಲ್ಲಿ. ಅದಾಗಿ ಕೆಲವೇ ವರ್ಷಗಳಲ್ಲಿ ಜಗತ್ತಿನಾದ್ಯಂತ ಅಸಂಖ್ಯಾತ ವೆಬ್ ಸೈಟ್‌ಗಳ ಸೃಷ್ಟಿಗೆ ಇದು ನಾಂದಿ ಹಾಡಿತು. ಇಂದು ಕೋಟ್ಯಂತರ ವೆಬ್‌ಸೈಟ್‌ಗಳು ಸೃಷ್ಟಿಯಾಗಿ ಅದನ್ನು ನಾವೆಲ್ಲರೂ ಇಂಟರ್ನೆಟ್‌ನಲ್ಲಿ ವೀಕ್ಷಿಸುತ್ತಿದ್ದೇವೆ ಎಂದರೆ ಅದಕ್ಕೆ ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ ಎಂಬುದೇ ಕಾರಣ.

 ಡಬ್ಲ್ಯೂ ಡಬ್ಲ್ಯೂ ಡಬ್ಲ್ಯು ಸೃಷ್ಟಿ ಹೇಗೆ?

ಡಬ್ಲ್ಯೂ ಡಬ್ಲ್ಯೂ ಡಬ್ಲ್ಯು ಸೃಷ್ಟಿ ಹೇಗೆ?

ಒಂದು ವಿಚಾರ ಇಲ್ಲಿ ಸ್ಪಷ್ಟಪಡಿಸಬೇಕು. ಇಂಟರ್ನೆಟ್ ಬೇರೆ ವರ್ಲ್ಡ್ ವೈಡ್ ವೆಬ್ ಬೇರೆ. ಇಂಟರ್ನೆಟ್ ಎಂಬುದು ವಿವಿಧ ಕಂಪ್ಯೂಟರ್‌ಗಳನ್ನು ಸಂಪರ್ಕಿಸುವ ಜಾಲ. ಆದರೆ, ವರ್ಲ್ಡ್ ವೈಡ್ ವೆಬ್ ಎಂಬುದು ಇಂಟರ್ನೆಟ್ ಮೂಲಕ ಬೇರೆ ಸರ್ವರ್, ಜಾಲತಾಣಗಳನ್ನು ತಲುಪಲು ಇರುವ ಮಾಧ್ಯಮ.

ಇಂಗ್ಲೆಂಡ್‌ನ ಕಂಪ್ಯೂಟರ್ ವಿಜ್ಞಾನಿ ಟಿಮ್ ಬರ್ನರ್ಸ್ ಲೀ 1989ರಲ್ಲಿ ಮೊದಲ ಬಾರಿಗೆ ವರ್ಲ್ಡ್ ವೈಡ್ ವೆಬ್ ಪರಿಕಲ್ಪನೆ ಸೃಷ್ಟಿಸಿದ್ದು. ಹೈಪರ್ಲಿಂಕ್‌ಗಳ ಮೂಲಕ ತಮ್ಮ ಸಹೋದ್ಯೋಗಿಗಳೊಂದಿಗೆ ಸಂವಾದ ಮಾಡಲು ಅವರು ಈ ವಿಧಾನ ಕಂಡುಕೊಂಡಿದ್ದರು. ಅದೀಗ ವ್ಯಾಪಕವಾಗಿ ಬೆಳೆದು ನಿಂತಿದೆ.

ಒಂದು ವೆಬ್‌ಸೈಟ್‌ನ ಯುಆರ್‌ಎಲ್‌ನಲ್ಲಿ ನೀವು ನೋಡುವ ಹೆಚ್‌ಟಿಟಿಪಿ, ಡಬ್ಲ್ಯೂಡಬ್ಲ್ಯೂಡಬ್ಲ್ಯೂ, ಹೆಚ್‌ಟಿಎಂಎಲ್ ಅನ್ನು ಅಭಿವೃದ್ಧಿಪಡಿಸಿದ್ದು ಟಿಮ್ ಬರ್ನರ್ಸ್ ಲೀ ಅವರೆಯೇ. ಮೊದಲ ವೆಬ್‌ಸೈಟ್ ಆವಷ್ಕರಿಸಿದ್ದೂ ಅವರೆಯೇ.

 ಉಚಿತ ಹಂಚಿಕೆ

ಉಚಿತ ಹಂಚಿಕೆ

ಬರ್ನರ್ಸ್ ಲೀ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅನ್ನು ಅಭಿವೃದ್ಧಿಪಡಿಸಿ ಎರಡು ವರ್ಷದ ಬಳಿಕ ಇತರ ಸಂಸ್ಥೆಗಳಿಗೆ ಅದನ್ನು ಹಂಚಿಕೊಂಡರು. ಇವರು ಕೆಲಸ ಮಾಡುತ್ತಿದ್ದ ಸಿಇಆರ್‌ಎನ್ ಸಂಸ್ಥೆ ಕೂಡ 1993ರಲ್ಲಿ ಡಬ್ಲ್ಯೂಡಬ್ಲ್ಯೂಡಬ್ಲ್ಯೂದ ಕೋಡ್ ಅನ್ನು ಸಾರ್ವಜನಿಕವಾಗಿ ಹಂಚಿಕೊಂಡಿತು. ಯಾವುದೇ ರಾಯಧನ ಕೂಡ ಕೇಳದೆ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಮಾಡಿತು.

ಯಾವಾಗ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಕೋಡ್ ಮುಕ್ತವಾಗಿ ಲಭ್ಯವಾಯಿತೋ ಒಂದೆರಡು ವರ್ಷದಲ್ಲಿ ನೂರಾರು ವೆಬ್‌ಸೈಟ್‌ಗಳು ನಿರ್ಮಾಣಗೊಂಡವು. ಈಗ ಲೆಕ್ಕವಿಲ್ಲದಷ್ಟು ಜಾಲತಾಣಗಳಿಗೆ ಇದು ದಾರಿ ಮಾಡಿಕೊಟ್ಟಿದೆ.

 1992ರಲ್ಲಿ ಮೊದಲ ಇಮೇಜ್

1992ರಲ್ಲಿ ಮೊದಲ ಇಮೇಜ್

ಕುತೂಹಲ ಎಂದರೆ ಟಿಮ್ ಬರ್ನರ್ಸ್ ಲೀ ಅವರು 1992ರಲ್ಲಿ ಇಂಟರ್ನೆಟ್‌ಗೆ ಮೊದಲ ಇಮೇಜ್‌ವೊಂದನ್ನು ಅಪ್‌ಲೋಡ್ ಮಾಡಿದ್ದರು. ಇನ್ನೂ ಕುತೂಹಲ ಇರುವುದು ಅಪ್‌ಲೋಡ್ ಆದ ಆ ಫೋಟೋದ್ದು. ಸ್ವಿಟ್ಜರ್ಲೆಂಡ್‌ನಲ್ಲಿ ಟಿಮ್ ಕೆಲಸ ಮಾಡುತ್ತಿದ್ದ ಸಿಇಆರ್‌ಎನ್ ಸಂಸ್ಥೆಯ ಉದ್ಯೋಗಿಗಳು ಸೇರಿ ಆರಂಭಿಸಿದ್ದ ಲೆಸ್ ಹಾರಿಬಲ್ಸ್ ಸೆರ್ನೆಟ್ಸ್ ಎಂಬ ಪರೋಡಿ ಪಾಪ್ ತಂಡದ ಫೋಟೋ ಅದು.

ಆಗಲೇ ಹೇಳಿದಂತೆ 1993ರಲ್ಲಿ ಸಿಇಆರ್‌ಎನ್ ಸಂಸ್ಥೆ (CERN Institute) ಟಿಮ್ ಅಭಿವೃದ್ಧಿಪಡಿಸಿದ ಡಬ್ಲ್ಯೂಡಬ್ಲ್ಯೂಡಬ್ಲ್ಯೂ, ಹೆಚ್‌ಟಿಟಿಪಿ ಇತ್ಯಾದಿ ತಂತ್ರಜ್ಞಾನದ ಕೋಡ್‌ಗಳನ್ನು ಸಾರ್ವತ್ರಿಕಗೊಳಿಸಿತು. 1993ರಲ್ಲಿ ವಿಶ್ವಾದ್ಯಂತ 50 ಸರ್ವರ್‌ಗಳಿದ್ದವು. ಕೆಲವೇ ತಿಂಗಳಲ್ಲಿ ಸರ್ವರ್‌ಗಳ ಸಂಖ್ಯೆ 500 ದಾಟಿತ್ತು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+