ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್
ಟಾರೋ ಕಾರ್ಡ್ ರೀಡಿಂಗ್ ಬಹಳ ಕುತೂಹಲಕರವಾದ ಭವಿಷ್ಯ ನುಡಿಯುವ ಪದ್ಧತಿ. ಇದರ ಪ್ರಕಾರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಪೈಪೋಟಿ ಇರುವಂಥ ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬುದನ್ನು ಟಾರೋ ಕಾರ್ಡ್ ರೀಡಿಂಗ್ ಮೂಲಕ ಮುಂಬೈ ಮೂಲದ ಪ್ರಕಾಶ್ ದಳವಿ ತಿಳಿಸಲಿದ್ದಾರೆ.
ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಕ್ಕೆ ಒನ್ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ. -ಸಂಪಾದಕ
ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಗೆಲುವಿನ ಅವಕಾಶ ಹೆಚ್ಚು ಎಂದು ಸರಣಿ ಆರಂಭಿಸಿದ ನಂತರ ವಿಪರೀತ ಫೋನ್ ಕರೆಗಳು ನನಗೆ ಬರಲಾರಂಭಿಸಿವೆ. ಒಂದೋ ಆ ಅಭ್ಯರ್ಥಿಯ ಪರವಾಗಿರುವವರು ಬಹಳ ಸಂತೋಷ ಎಂದು ಮಾತನಾಡಿ, ತಮ್ಮ ಭವಿಷ್ಯ ಏನು, ನಮ್ಮ ನಾಯಕರು ಮುಂದೆ ಮಂತ್ರಿ ಆಗುತ್ತಾರಾ ಎಂದೆಲ್ಲ ಕೇಳುತ್ತಾರೆ.
ಇನ್ನು ಕೆಲ ಅಭ್ಯರ್ಥಿಗಳ ವಿರುದ್ಧವಾಗಿರುವವರು ಸಹ ಕರೆ ಮಾಡಿ, ಅದು ಹೇಗೆ ಈ ರೀತಿ ಆಗಲು ಸಾಧ್ಯ ಎಂದು ಕೇಳುತ್ತಾರೆ, ದಬಾಯಿಸುತ್ತಾರೆ, ಗದರುತ್ತಾರೆ. ನಾನೊಬ್ಬ ಮನುಷ್ಯ. ಟಾರೋ ಕಾರ್ಡ್ ರೀಡಿಂಗ್ ಅನ್ನೋದು ಒಂದು ವಿದ್ಯೆ. ಅದರ ಮೂಲಕ ಗೋಚರಿಸಿದ್ದನ್ನು ಹೇಳುವವನು ಮಾತ್ರ ನಾನು. ಇದು ನೂರಕ್ಕೆ ನೂರು ಹೀಗೇ ಆಗುತ್ತದೆ ಎಂದು ಹೇಳುವ ದೇವರು ನಾನಲ್ಲ.

ಈ ವಿಚಾರವನ್ನು ಸ್ಪಷ್ಟಪಡಿಸಿ, ಇಂದಿನ ಲೇಖನದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಏನಾಗಬಹುದು ಎಂಬುದರ ಬಗ್ಗೆ ತಿಳಿಸುತ್ತಿದ್ದೇನೆ: ಅದು ಟಾರೋ ಕಾರ್ಡ್ ರೀಡಿಂಗ್ ಅನ್ವಯ. ಈ ಕ್ಷೇತ್ರದಲ್ಲಿ ಘಟಾನುಘಟಿಗಳೇ ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಹಾಗೂ ಕಾಂಗ್ರೆಸ್ ನಿಂದ ಎಚ್.ಎಂ.ರೇವಣ್ಣ ಇದ್ದಾರೆ.
ಯಾರೂ ಊಹಿಸದಂಥ ಫಲಿತಾಂಶವನ್ನು ಈ ಕ್ಷೇತ್ರದಲ್ಲಿ ಕಾಣಬಹುದು. ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ನ ಎಚ್.ಎಂ.ರೇವಣ್ಣ ಅವರಿಗೆ ಹೆಚ್ಚು ಅನುಕೂಲಕರವಾದ ಸನ್ನಿವೇಶ ಗೋಚರಿಸುತ್ತಿದೆ. ಬಹಳ ಜಿದ್ದಾಜಿದ್ದಿಯಿಂದ ಕೂಡಿದ ಇಲ್ಲಿನ ಪೈಪೋಟಿಯು ಅನಿರೀಕ್ಷಿತ ಫಲಿತಾಂಶ ನೀಡುತ್ತದೆ.
ಹಿಂದಿನ ಆರು ಚುನಾವಣೆಗಳ ಪೈಕಿ ಐದರಲ್ಲಿ ಇಲ್ಲಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ಒಮ್ಮೆ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಆದರೆ ಈ ಸಲದ ವಿಧಾನಸಭೆ ಚುನಾವಣೆ ಫಲಿತಾಂಶ ಅಚ್ಚರಿಗೆ ದೂಡುವುದರಲ್ಲಿ ಅನುಮಾನವಿಲ್ಲ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications