ಜ್ಯೋತಿಷ್ಯ: ಮರುವಿವಾಹ ಯಾರಿಗೆ, ಯಾಕೆ ಆಗುತ್ತದೆ?

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಸಾಮಾನ್ಯವಾಗಿ ಯಾರೂ ತಮ್ಮ ಜೀವನದಲ್ಲಿ ಅವಶ್ಯವಾಗಿ ಮರುಮದುವೆ ಆಗಬೇಕೆಂದು ಮೊದಲೇ ತೀರ್ಮಾನಿಸಿರುವುದಿಲ್ಲ. ಆದರೆ ಕೆಲವರಿಗೆ ಪರಿಸ್ಥಿತಿ ಪ್ರಭಾವಗಳಿಂದ ಜೀವನಾಂಶದ ಅನಿವಾರ್ಯದಿಂದ ಅಥವಾ ಸಂತಾನದ ಪಾಲನೆ- ಪೋಷಣೆಗಾಗಿ ಮರುಮದುವೆಯಾಗಲೇ ಬೇಕಾದ ಸ್ಥಿತಿ ಉಧ್ಭವಿಸುತ್ತದೆ.

ಈ ಕಾರಣಗಳು ಗಂಡು ಹಾಗೂ ಹೆಣ್ಣು ಇಬ್ಬರಿಗೂ ಸಮವಾಗಿ ಇರುತ್ತವೆ. ಸಾಮಾನ್ಯವಾಗಿ ಮರುಮದುವೆ ಅವಶ್ಯಕತೆಗಳು ಬರುವುದು ಹೆಣ್ಣಿಗೆ ವೈಧವ್ಯ ಹಾಗೂ ಗಂಡಿಗೆ ವಿದುರತ್ವ ಪ್ರಾಪ್ತವಾದಾಗ ಅಥವಾ ವಿವಾಹ ವಿಚ್ಛೇದನ ಆದಾಗ. ಇವುಗಳಲ್ಲಿ ಯಾವುದಾದರೂ ಸಂಭವಿಸಲು ಹಲವು ಕಾರಣಗಳು ಗಂಡು- ಹೆಣ್ಣಿನ ಜಾತಕದಲ್ಲಿಯೇ ಇರುತ್ತವೆ.[ಜ್ಯೋತಿಷ್ಯ: ನನಗೆ ಆಗಿಬರುವುದು ಉದ್ಯೋಗವೋ ವ್ಯಾಪಾರವೋ?]

ಮೊದಲನೇ ವಿವಾಹ ಮಾಡುವ ಮೊದಲು ಗಂಡು ಹಾಗೂ ಹೆಣ್ಣಿನ ಜಾತಕಗಳನ್ನು ಸರಿಯಾಗಿ ಪರಿಶೀಲಿಸದೆ ಆಶಾಸ್ತ್ರೀಯವಾಗಿ ಕೇವಲ ಹೆಸರು ಬಲದ ಮೇಲೆ ವಿವಾಹ ಮಾಡುವುದರಿಂದ ಅಥವಾ ಗಂಡು- ಹೆಣ್ಣಿನ ಜಾತಕಗಳನ್ನು ಪರಿಶೀಲಿಸದೆ ಕೇವಲ ಜನ್ಮ ನಕ್ಷತ್ರಗಳಿಂದ ಒಟ್ಟು ಬರುವ ಗುಣ-ಕೂಟಗಳನ್ನು ಎಣಿಸಿ ಮದುವೆ ಮಾಡುವುದು.

Which planet is responsible for Remarriage?

-ಹೀಗೆ ಮಾಡಿದಾಗ ಗಂಡಿಗಾಗಲಿ ಅಥವಾ ಹೆಣ್ಣಿಗಾಗಲಿ ಮೂಲ ಜಾತಕದಲ್ಲಿ ಜನ್ಮ ಲಗ್ನ, ಜನ್ಮ ರಾಶಿಯ ಸಪ್ತಮ ಅಥವಾ ಅಷ್ಟಮ ಭಾವಗಳಲ್ಲಿ ದುರದೃಷ್ಟವಶಾತ್ ಪಾಪಗ್ರಹಗಳು ಇದ್ದರೆ ಆ ದಂಪತಿಗಳು ಸುಖಿ ದಾಂಪತ್ಯ ಜೀವನ ನಡೆಸುವುದು ಕಷ್ಟಕರವಾಗಿಬಿಡುತ್ತದೆ ಹಾಗೂ ದ್ವಿಕಳತ್ರ ಯೋಗ ಸಂಭವಿಸುತ್ತದೆ. ಅಂದರೆ ಅನಿವಾರ್ಯ ಕಾರಣಗಳಿಂದ ಮರುವಿವಾಹ ಎಂದು ತಿಳಿಯಬಹುದು.[ಜ್ಯೋತಿಷ್ಯ: ಎಲ್ಲ ವಿಧದ ಭಯ ನಿವಾರಣೆಗಾಗಿ ದೈವಿಕ ಉಪಾಯ]

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಶಾಸ್ತ್ರಗಳಲ್ಲಿ ಸ್ತ್ರೀಯರಿಗೆ ಮರು ವಿವಾಹದ ಬಗ್ಗೆ ತಿಳಿಸದೆ ಇದ್ದರೂ ಕೇರಳದ ಪುರಾತನ 'ಪ್ರಶ್ನ ಮಾರ್ಗಮ್' ಗ್ರಂಥದ 20ನೇ ಅಧ್ಯಾಯದ 55 ಶ್ಲೋಕದಲ್ಲಿ "ಪುಮ್ಸಾಮ್ ತಥೈವ ನಾರೀಣಾಂ ಕರ್ತವ್ಯಮ್ ಭರ್ತೃಚಿಂತನಂ" ಎಂದು ತಿಳಿಸಿದಂತೆ ಪುರುಷರ ಭಾರ್ಯಾ ಚಿಂತನೆ ಮಾಡಿದಂತೆಯೇ ಸ್ತ್ರೀಯರ ಪತಿ ಚಿಂತನೆಯನ್ನು ಮಾಡಬೇಕು.

ಹೀಗಿರುವಾಗ ಸ್ತ್ರೀ ಜಾತಕದಲ್ಲಿ ಎಂಟನೆ ಭಾವದಲ್ಲಿ ಪಾಪ ಗ್ರಹರಿದ್ದು, ಅದನ್ನು ಸರಿ ಮಾಡಿ ನೋಡದೆ ವಿವಾಹ ಮಾಡಿದಲ್ಲಿ ಆ ಸ್ತ್ರೀ ನಂತರ ವೈಧವ್ಯವನ್ನು ಅನುಭವಿಸಬೇಕಾಗುತ್ತದೆ. ಇನ್ನು ಗಂಡನ ಜಾತಕದಲ್ಲಿ ಆಯುಷ್ಯ ಗಟ್ಟಿ ಇದ್ದರೆ ಕಾರಣಾಂತರಗಳಿಂದ ಗಂಡನಿಂದ ದೂರ ಇರ ಬೇಕಾಗುವುದು ಅಥವಾ ವಿವಾಹ ವಿಚ್ಛೇದನ ಪಡೆದು ಮರು ಮದುವೆಯ ಬಗ್ಗೆ ಚಿಂತಿಸುವ ಪರಿಸ್ಥಿತಿಗಳು ಉಧ್ಭವಿಸುತ್ತವೆ.[ಸಿನಿಮಾ ಲೋಕದ ಸೋಲು-ಗೆಲುವು ಮತ್ತು ಜ್ಯೋತಿಷ್ಯ]

ಇಲ್ಲಿ ಸ್ತ್ರೀ ಜಾತಕವನ್ನೇ ಪ್ರಧಾನವಾಗಿ ಗಮನಿಸಿದರೆ ಸಪ್ತಮದಲ್ಲಿ ಕ್ರೂರ ಗ್ರಹಗಳಿಂದ ವಿಧವಾ ಯೋಗವಾದರೆ, ಅದೇ ಭಾವದಲ್ಲಿ ಬಲಹೀನ ಪಾಪ ಗ್ರಹಗಳು ಇದ್ದರೆ ಪತಿಯಿಂದ ತ್ಯಜಿಸುವಂತಾಗುತ್ತಾಳೆ! "ಲಗ್ನೆ ಕುಟುಂಬೆ ದಾರೆ ವಾ ಪಾಪಖೇಚರ ಸಂಯುತೆ, ದಾರೆಶೆ ನೀಚ ಮುಡಾರೌ ಕಳತ್ರ ತ್ರಮಾದಿಶೇತ್" ಎಂದು ಪ್ರಶ್ನ ಮಾರ್ಗಂ ಗ್ರಂಥದಲ್ಲಿ ಉಲ್ಲೇಖವಾಗಿರುವ ಇನ್ನೊಂದು ಶ್ಲೋಕವು ಸಹ ಗಮನಾರ್ಹ!

ಈ ಶ್ಲೋಕದ ಅರ್ಥ ಜನ್ಮ ಲಗ್ನದಲ್ಲಾಗಲಿ, ಎರಡನೇ ಭಾವದಲ್ಲಾಗಲಿ, ಏಳನೇ ಭಾವದಲ್ಲಾಗಲಿ ಪಾಪಗ್ರಹಗಳಿದ್ದು, ಸಪ್ತಮಾಧಿಪತಿ ನೀಚ ಭಾವದಲ್ಲಿಯಾಗಲಿ ಅಥವಾ ಮೌಢ್ಯದಿಂದ ಕೂಡಿದ್ದು ಅಂದರೆ ರವಿಯೊಂದಿಗೆ ಅಸ್ತವಾಗಿದ್ದರೆ ಅಥವಾ ಶತ್ರು ಕ್ಷೇತ್ರ ಸ್ಥಿತನಾಗಿದ್ದರೆ ಮೂರು ಬಾರಿ ವಿವಾಹ ಯೋಗ ಇರುತ್ತದೆ!!ಜ್ಯೋತಿಷಿಗಳ ಸಂಪರ್ಕ ಸಂಖ್ಯೆ 9845682380.

ಮುಂದುವರಿಯುವುದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Remarriage is not at all an option for anyone, except inevitable situation. Which planet or planetary position responsible for remarraige, astrologer Pandit Vittal Bhat explains.
Please Wait while comments are loading...