ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಮರುವಿವಾಹ ದೋಷಕ್ಕೆ ಹೀಗಿದೆ ಪರಿಹಾರ

ಜಾತಕದಲ್ಲಿ ಮರುಮದುವೆ ದೋಷವಿದ್ದರೆ ಪರಿಹಾರ ಏನು ಮಾಡಬೇಕು ಎಂಬುದನ್ನು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ವಿವರಿಸಿದ್ದಾರೆ.

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ಒಮ್ಮೆ ವಿದುರತ್ವ, ವೈಧವ್ಯ ಅಥವಾ ವಿಚ್ಛೇದನ ಪಡೆದ ಸ್ತ್ರೀ ಅಥವಾ ಪುರುಷ ಮರುಮದುವೆ ಆಗ ಬಯಸಿದಲ್ಲಿ ಜಾತಕಗಳನ್ನು ಸರಿ ಮಾಡಿ, ಪರಿಶೀಲಿಸಿ ಮದುವೆ ಆಗಬೇಕು. ಏಕೆಂದರೆ ಜಾತಕದಲ್ಲಿ ಯಾವುದೇ ದೋಷ ಸ್ತ್ರೀಗೆ ಇಲ್ಲದೆ ಗಂಡನ ಜಾತಕದ ದೋಷದಿಂದಾಗಿ ವಿಚ್ಛೇದನ ಆಗಿದ್ದರೆ ಹಾಗೂ ಅಂತಹ ಸ್ತ್ರೀ ಜಾತಕದಲ್ಲಿ ದ್ವಿತೀಯ, ಅಷ್ಟಮದಲ್ಲಿ ಶುಭ ಗ್ರಹಗಳಿದ್ದರೆ ಸೌಮಂಗಲ್ಯ ಯೋಗ ಇರುತ್ತದೆ.

ಆದುದರಿಂದ ಮರು ಮದುವೆ ಆಗುವಾಗ ಉತ್ತಮ ಜಾತಕದ ಪುರುಷನನ್ನು ಆರಿಸಿಕೊಳ್ಳಬೇಕು. ಇನ್ನು ಪರಿಹಾರಗಳ ವಿಷಯಕ್ಕೆ ಬಂದಾಗ ಮರುಮದುವೆ ಆಗಲು ಬಯಸುವವರು ಕೇವಲ ಹೆಸರು ಬಲ ಅಥವಾ ಜನ್ಮ ನಕ್ಷತ್ರದ ಆಧಾರದ ಮೇಲೆ ಗುಣ- ಕೂಟ ಅಷ್ಟೇ ನೋಡದೆ ಗಂಡು- ಹೆಣ್ಣಿನ ಜಾತಕ ಪರಿಶೀಲಿಸ ಬೇಕು.[ಜ್ಯೋತಿಷ್ಯ: ಮರುವಿವಾಹ ಯಾರಿಗೆ, ಯಾಕೆ ಆಗುತ್ತದೆ?]

Homa

ಅಲ್ಲಿ ಸಪ್ತಮ ಹಾಗೂ ಅಷ್ಟಮ ಭಾವದಲ್ಲಿ ಇರುವ ಪಾಪ ಗ್ರಹಗಳ ಮಾಹಿತಿ ತಿಳಿದು, ಆ ಗ್ರಹಗಳಿಗೆ ಶಾಂತಿ ಹವನವನ್ನು ಆಚರಿಸಬೇಕು, ಹಾಗೂ ಮೂರುಸಲ ವಿವಾಹ ಯೋಗ ಇರುವವರು ತಪ್ಪದೇ ಕದಳಿ ವಿವಾಹ ಅಥವಾ ಕುಂಭ ವಿವಾಹ ಮಾಡಿಸಿಕೊಳ್ಳ ಬೇಕು. ಯಾವುದೇ ದೇವತಾರಾಧನೆ ಪರಿಹಾರಗಳನ್ನು ಆಚರಿಸದೆ ಮರುಮದುವೆಯ ಬಗ್ಗೆ ಚಿಂತನೆ ಸಹ ಮಾಡದಿರಿ![ಜ್ಯೋತಿಷ್ಯ: ಎಲ್ಲ ವಿಧದ ಭಯ ನಿವಾರಣೆಗಾಗಿ ದೈವಿಕ ಉಪಾಯ]

ಮರುಮದುವೆಯ ಇನ್ನೊಂದು ಮೂಲ ಉದ್ದೇಶ ಮನಶ್ಶಾಂತಿ. ಆದುದರಿಂದ ನೀವು ವೃಶ್ಚಿಕ ರಾಶಿಯವರಲ್ಲದಿದ್ದರೆ, ಶುಕ್ಲ ಪಕ್ಷದಲ್ಲಿ ಹುಟ್ಟಿದವರು ಹಾಗೂ ಜಾತಕದಲ್ಲಿ ಚಂದ್ರ ಜನ್ಮ ಲಗ್ನದಿಂದ 3, 5, 9 ಅಥವಾ 11ನೆಯ ಮನೆಯಲ್ಲಿ ಇದ್ದು, ಆರನೇ, ಎಂಟನೇ ಅಥವಾ ಹನ್ನೆರಡನೇ ಮನೆಯ ಅಧಿಪತಿ ಅಲ್ಲದಿದ್ದರೆ ಉತ್ತಮ ಗುಣಮಟ್ಟದ ಮುತ್ತನ್ನು ಶನಿವಾರ ಹಾಗೂ ಭಾನುವಾರ ಪೂಜೆ ಮಾಡಿ ಸೋಮವಾರ ಮುಂಜಾನೆ ಉಂಗುರದ ಬೆರಳಿಗೆ ಧರಿಸುವುದರಿಂದ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು.[ಜ್ಯೋತಿಷ್ಯ: ನನಗೆ ಆಗಿಬರುವುದು ಉದ್ಯೋಗವೋ ವ್ಯಾಪಾರವೋ?]

ಇನ್ನು ಮರುಮದುವೆಯ ಚಿಂತನೆಗಳನ್ನು ಮಾಡುತ್ತಿರುವವರು ಜಾತಕ ಪರಿಶೀಲನೆ ಅಷ್ಟೇ ಅಲ್ಲದೆ ಪ್ರಶ್ನ ಶಾಸ್ತ್ರದ ಮುಖಾಂತರ ಅಗೋಚರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ನಂತರ ವಿವಾಹ ಆಗುವುದು ಉತ್ತಮ. ಪ್ರಶ್ನ ಶಾಸ್ತ್ರದ ಮುಖಾಂತರವೇ ಗಂಡು- ಹೆಣ್ಣಿನ ನಡುವೆ ಆ ಋಣಾನುಬಂಧ ಎಷ್ಟರ ಮಟ್ಟಿಗೆ ಇದೆಯೆಂದು ತಿಳಿಯುವುದು. ಹೆಚ್ಚಿನ ಮಾಹಿತಿಗಾಗಿ ಮೊ 9845682380 ಸಂಪರ್ಕಿಸಬಹುದು.

English summary
Solution to remarriage dosham in horoscope explains by astrologer Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X