5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ
ಐದು ರಾಜ್ಯಗಳ ಮತದಾನ ಮುಗಿದಿದ್ದು, ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ಮೇ 2) ಸಂಜೆಯ ಹೊತ್ತಿಗೆ ಎಲ್ಲಿ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲು ಮದ್ರಾಸ್ ಹೈಕೋರ್ಟ್ ಸೂಚಿಸಿರುವುದರಿಂದ, ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಹಲವು ಷರತ್ತನ್ನು ವಿಧಿಸಿದೆ. ವಿಜಯೋತ್ಸವ ಮಾಡ ಕೂಡದು ಎಂದು ಹೇಳಿದೆ.
ಮತಗಟ್ಟೆ ಸಮೀಕ್ಷೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ, ಪುದುಚೇರಿಯಲ್ಲಿ ಬಿಜೆಪಿ, ಕೇರಳದಲ್ಲಿ ಎಲ್ಡಿಎಫ್, ಅಸ್ಸಾಂನಲ್ಲಿ ಬಿಜೆಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬಹುತೇಕ ಟಿಎಂಸಿ ಗೆಲುವು ಸಾಧಿಸಲಿದೆ ಎನ್ನುವ ಫಲಿತಾಂಶ ಹೊರಬಿದ್ದಿದೆ.
ಉತ್ತರ ಭಾರತ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಐದು ರಾಜ್ಯಗಳ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಗೆಲುವು ಸಿಗಬಹುದು ಎನ್ನುವುದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿದಿದ್ದಾರೆ. ಕೋವಿಡ್ ವಿಚಾರದಲ್ಲಿ ಇವರ ಭವಿಷ್ಯ ನಿಜವಾದ ಉದಾಹರಣೆಗಳಿವೆ:

140-160 ಸೀಟ್ ಅನ್ನು ಬಿಜೆಪಿ ಗೆಲ್ಲಲಿದೆ. ಈ ಮಾತನ್ನು ಮತ್ತೆ ಪುನರುಚ್ಚಿಸುತ್ತೇನೆ
ಪಶ್ಚಿಮ ಬಂಗಾಳದ ಎಕ್ಸಿಟ್ ಪೋಲ್ ಯಾವುದೇ ರೀತಿ ಇರಲಿ, ಅಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಯ ಸರಕಾರ. 140-160 ಸೀಟ್ ಅನ್ನು ಬಿಜೆಪಿ ಗೆಲ್ಲಲಿದೆ. ಈ ಮಾತನ್ನು ಮತ್ತೆಮತ್ತೆ ನಾನು ಪುನರುಚ್ಚಿಸುತ್ತೇನೆ. ನಂದಿಗ್ರಾಮದಲ್ಲಿ ಒಂದು ವೇಳೆ ಮಮತಾ ಬ್ಯಾನರ್ಜಿ ಸೋತರೆ, ಟಿಎಂಸಿ ಐವತ್ತರಿಂದ ಅರವತ್ತು ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಸಿನ್ಹಾ ಭವಿಷ್ಯ ನುಡಿದಿದ್ದಾರೆ.

ನನ್ನ ಭವಿಷ್ಯ ಸತ್ಯವಾಗಲಿ, ಸುಳ್ಳಾಗಲಿ, ಪಲಾಯನ ಮಾಡುವುದಿಲ್ಲ
"ಪಶ್ಚಿಮ ಬಂಗಾಳಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ, ಅಲ್ಲಿನ ಜನರು ಮಮತಾ ಸರಕಾರದ ವಿರುದ್ದ ಆಕ್ರೋಶವನ್ನು ಹೊಂದಿದ್ದಾರೆ. ಮೇ ಎರಡರಂದು ಮತ್ತೆ ನಾನು ನಿಮ್ಮ ಮುಂದೆ ಬರುತ್ತೇನೆ. ನನ್ನ ಭವಿಷ್ಯ ಸತ್ಯವಾಗಲಿ, ಸುಳ್ಳಾಗಲಿ, ಪಲಾಯನ ಮಾಡುವುದಿಲ್ಲ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ" ಎಂದು ಕೆ.ಎಂ.ಸಿನ್ಹಾ ಹೇಳಿದ್ದಾರೆ. (ಚಿತ್ರದಲ್ಲಿ : ಕೆ.ಎಂ.ಸಿನ್ಹಾ)

ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಮತ್ತೆ ಗೆಲುವು
ಇನ್ನು ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಮತ್ತೆ ಗೆಲುವು ಸಾಧಿಸಲಿದೆ. ಮತಗಟ್ಟೆ ಸಮೀಕ್ಷೆಯ ಪ್ರಕಾರ ಇಲ್ಲಿ ಎಡಪಕ್ಷಗಳು ಗೆಲ್ಲಲಿದೆ. ಇನ್ನು, ಪುದುಚೇರಿಯಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಕೆ.ಎಂ.ಸಿನ್ಹಾ ತಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿದಿದ್ದಾರೆ.

ಎಐಎಡಿಎಂಕೆ ನೇತೃತ್ವದ ಎನ್ಡಿಕೆ ಮೈತ್ರಿಕೂಟದ ಮೇಲೆ ಜನರಿಗೆ ಒಲವಿಲ್ಲ
ಅಸ್ಸಾಂನಲ್ಲಿ ಬಿಜೆಪಿ ಗೆಲ್ಲಲಿದೆ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಗೆಲುವು ಸಾಧಿಸಲಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮೇಲೆ ಜನರಿಗೆ ಒಲವಿಲ್ಲ. ಹಾಗಾಗಿ, ಇಲ್ಲಿ ಜಯಲಲಿತಾ ಅವರ ಪಕ್ಷ ಅಧಿಕಾರದಿಂದ ಇಳಿಯಬೇಕಾಗಿದೆ ಎಂದು ತಮ್ಮ ಕುಂಡಲಿ ಎಕ್ಸ್ ಪರ್ಟ್ ಯೂಟ್ಯೂಬ್ ಚಾನೆಲ್ ಮೂಲಕ ಸಿನ್ಹಾ ಭವಿಷ್ಯ ನುಡಿದಿದ್ದಾರೆ.











Click it and Unblock the Notifications