• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ರಾಶಿಯ ಚಿಹ್ನೆಯ ಪ್ರಕಾರ ಗುಣ- ಸ್ವಭಾವ ತಿಳಿದುಕೊಳ್ಳಿ

By ಪಂಡಿತ್ ಶಂಕರ್ ಭಟ್
|

ನಿಮ್ಮ ರಾಶಿಯ ಚಿಹ್ನೆಗೂ ನಿಮ್ಮ ಗುಣ ಸ್ವಭಾವಕ್ಕೂ ಸಂಬಂಧ ಇರುತ್ತಾ? ಹೇಗೆ ನಿಮ್ಮ ನಕ್ಷತ್ರಕ್ಕೂ ಹಾಗೂ ನಿಮ್ಮ ಗುಣಾವಳಿಗೂ ನಂಟಿರುತ್ತದೋ ಅದೇ ರೀತಿ ರಾಶಿ ಚಕ್ರದಲ್ಲಿ ಇರುವ ಚಿಹ್ನೆಗಳಿಗೂ ವ್ಯಕ್ತಿತ್ವಕ್ಕೂ ಸಂಬಂಧ ಇದ್ದೇ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವುದೇ ವ್ಯಕ್ತಿಯ ಲಗ್ನ ಆತನ ದೇಹ ಪ್ರಕೃತಿಯನ್ನು ಮತ್ತು ಸ್ವಭಾವವನ್ನು ಸೂಚಿಸುತ್ತದೆ.

   ದಿನ ಭವಿಷ್ಯ - Astrology 25-09-2019 - Your Day Today

   ಮತ್ತೂ ಮುಂದುವರಿದು ಹೇಳಬೇಕು ಅಂದರೆ, ಲಗ್ನದಲ್ಲಿ ಯಾವ ಗ್ರಹ ಇದೆ ಮತ್ತು ಲಗ್ನಕ್ಕೆ ಯಾವ ಗ್ರಹಗಳ ದೃಷ್ಟಿ ಇದೆ ಎಂಬುದನ್ನು ಸಹ ನೋಡಿ ಒಬ್ಬ ವ್ಯಕ್ತಿಯ ಬಗ್ಗೆ ಹಲವು ವಿಚಾರಗಳನ್ನು ತೀರ್ಮಾನ ಮಾಡಬಹುದು. ಯಾರ ಜತೆಗೆ ಪಾರ್ಟನರ್ ಷಿಪ್ ಮಾಡಬಹುದು? ಯಾರಿಗೆ ಅಹಂ ಜಾಸ್ತಿ? ಯಾರು ಹುಂಬರು? ಹೀಗೆ ಬಹಳ ಸುಲಭಕ್ಕೆ ಕಂಡು ಹಿಡಿಯುವ ಅವಕಾಶ ಇದೆ.

   ಮೂಲಾ ನಕ್ಷತ್ರದಲ್ಲಿ ಹುಟ್ಟಿದವರ ಯೋಗಾಯೋಗ, ಶಾಂತಿ-ಪರಿಹಾರಗಳು

   ಹ್ಞಾಂ, ಒಂದು ಮಾತು ನೆನಪಿರಲಿ. ಇದು ಮೇಲ್ಮಟ್ಟದಲ್ಲಿ ಹೇಳಬಹುದಾದದ್ದೇ ವಿನಾ ಜಾತಕ ಪರಾಮರ್ಶೆ ಮಾಡಿ, ಭವಿಷ್ಯ ನುಡಿಯುವುದು ಅತ್ಯುತ್ತಮ ವಿಧಾನ. ಆದರೂ ಎಷ್ಟೋ ಸಲ ಕೆಲವೇ ನಿಮಿಷದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡಬೇಕಾದ ಸಂದರ್ಭ ಎದುರಾಗುತ್ತದೆ. ಆಗ ನಿಮಗೆ ಈ ಲೇಖನ ಖಂಡಿತಾ ಉಪಯೋಗಕ್ಕೆ ಬರುತ್ತದೆ.

   ಮೇಷ: ಹೋರಾಟ ಸ್ವಭಾವವೇ ಹೆಗ್ಗುರುತು

   ಮೇಷ: ಹೋರಾಟ ಸ್ವಭಾವವೇ ಹೆಗ್ಗುರುತು

   ಟಗರು ಚಿಹ್ನೆಯ ಮೇಷ ರಾಶಿಯವರಿಗೆ ತಮ್ಮ ನಂಬಿಕೆಯನ್ನು ಅಲುಗಾಡಿಸುವಂಥ ಪ್ರಶ್ನೆಗಳು, ಉತ್ತರಗಳು ಬಂದರೆ ನಖಶಿಖಾಂತ ಸಿಟ್ಟು ಬರುತ್ತದೆ. ಇವರೆಷ್ಟು ಹಟವಾದಿಗಳು ಅಂದರೆ, ಅದೆಂಥ ದೊಡ್ಡ ಬಂಡೆಯಾದರೂ ತಲೆಯಲ್ಲೇ ಪುಡಿ ಮಾಡಿ ಸಿದ್ಧ ಎಂದು ನಿಂತು ಬಿಡುತ್ತಾರೆ. ಯಾರಾದರೂ, ಇದು ನಿನ್ನಿಂದ ಆಗಲ್ಲ, ಬೇಡ ಅಂತ ಹೇಳಿದರೆ, ಕೇಳಬೇಕಲ್ಲ ಟಗರು? ಗುದ್ದುವುದನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ತನ್ನ ಸುತ್ತಲಿನವರ ಮೇಲೆ ಹಿಡಿತ ಸಾಧಿಸುವುದಕ್ಕೆ ಸದಾ ಯತ್ನಿಸುವ ಇವರಿಗೆ, ಸೋಲು ಎದುರಾಗುವ ಸಂದರ್ಭ ಬಂದರೆ ಬಹಳ ಹತಾಶರಾಗಿ ಬಿಡುತ್ತಾರೆ. ಚೇತರಿಸಿಕೊಳ್ಳುವುದಕ್ಕೆ ತುಂಬ ಸಮಯ ಬೇಕು. ಹೇಳಿಕೆ ಮಾತು, ಇನ್ನೊಬ್ಬರ ಮಾತನ್ನು ಒಬ್ಬರೇ ಇರುವಾಗ ಬಹಳ ಯೋಚಿಸಿ, ಜಾರಿಗೆ ತರುವ ಇವರು, ಹೆಚ್ಚಿನ ಪಕ್ಷ ದಾರಿ ತಪ್ಪಿ, ನಷ್ಟ ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ದೊಡ್ಡ ಗುರಿಯನ್ನು ಸಣ್ಣ ಸಣ್ಣದಾಗಿ ಮಾಡಿಕೊಂಡು ನಿಧಾನವಾಗಿ ಗಮ್ಯ ತಲುಪುವ ಟಗರುಗಳು ಕೂಡ ನೋಡಲು ಸಿಗುತ್ತವೆ. ಹೋರಾಟ ಸ್ವಭಾವವೇ ಇವರ ಹೆಗ್ಗುರುತು.

   ಮೇಷ ರಾಶಿಯವರ ಗುಣ-ಸ್ವಭಾವ, ಅದೃಷ್ಟ ರತ್ನ, ದಿನಾಂಕ, ದೇವತೆಗಳು

   ವೃಷಭ: ಕೆಲ ಬಾರಿ ವೇದಾಂತಿ, ಕೆಲ ಬಾರಿ ಕ್ರಾಂತಿಕಾರಿ

   ವೃಷಭ: ಕೆಲ ಬಾರಿ ವೇದಾಂತಿ, ಕೆಲ ಬಾರಿ ಕ್ರಾಂತಿಕಾರಿ

   ಎತ್ತು ಚಿಹ್ನೆಯ ವೃಷಭ ರಾಶಿಯವರು ಶ್ರಮ ಜೀವಿಗಳು. ಆದರೆ ಸಮಸ್ಯೆ ಏನೆಂದರೆ, ಇವರು ಪಡುವ ಶ್ರಮದ ಬಹುಪಾಲು ಶ್ರೇಯ ಮತ್ತೊಬ್ಬರ ಪಾಲಾಗುತ್ತದೆ. ದುಡಿಯುವ ಭರದಲ್ಲಿ ಅಕ್ಕಪಕ್ಕ ಏನಾಗುತ್ತಿದೆ ಎಂದು ಕೂಡ ಯೋಚಿಸದ ಇವರು ಅಂಥ ಅಪಾಯಕಾರಿಯೂ ಅಲ್ಲ. ಕೆಲ ಬಾರಿ ವೇದಾಂತಿಗಳಂತೆಯೂ ಮತ್ತೆ ಕೆಲ ಬಾರಿ ಕ್ರಾಂತಿಕಾರಿಗಳಂತೆಯೂ ಕಾಣಿಸಿಕೊಳ್ಳುವ ವೃಷಭವು ಸದಾ ಮರದ ತಂಪಾದ ನೆರಳನ್ನು ಹುಡುಕುತ್ತಾ ಇರುತ್ತದೆ. ಬಹುತೇಕ ಸಂದರ್ಭದಲ್ಲಿ ಕಂಫರ್ಟ್ ಜೋನ್ ನಲ್ಲೇ ಉಳಿದುಬಿಡುವ ಇವರು, ತೀರಾ ಮಹತ್ವಾಕಾಂಕ್ಷಿಗಳು, ಆಡಂಬರದ ಜೀವನ ಬಯಸುವವರು ಆಗಿರುವುದಿಲ್ಲ. ಸ್ವಭಾವತಃ ತಾಯಿ ಹೃದಯದವರಾಗಿರುತ್ತಾರೆ. ಸಂಗಾತಿ, ಮಕ್ಕಳು, ಕುಟುಂಬ ಇಷ್ಟು ನೆಮ್ಮದಿ ಆಗಿದ್ದು ಬಿಟ್ಟರೆ ಇವರು ಇಂಥ ರಸ್ತೆಯಲ್ಲಿ ವಾಸವಿದ್ದರು. ಇದು ಇವರ ಮನೆಯಂತೆ ಎಂಬುದು ಕೂಡ ಗೊತ್ತಾಗದಂತೆ ಇದ್ದು ಬಿಟ್ಟಿರುತ್ತಾರೆ. ಆದರೆ ಅದು ಹೇಗೋ ಇನ್ನೊಬ್ಬರಿಗೆ ಜಾಮೀನಾಗಿ ನಿಂತು, ಒಂದಲ್ಲಾ ಒಂದು ಸಂದರ್ಭದಲ್ಲಿ ಕೈಯಿಂದ ದುಡ್ಡು ಕಳೆದುಕೊಳ್ಳುವ ಸಂದರ್ಭ ಬರುತ್ತದೆ.

   ವೃಷಭ ರಾಶಿಯವರ ಗುಣ, ಸ್ವಭಾವ, ಕಡ್ಡಾಯವಾಗಿ ಮಾಡಿಸಬೇಕಾದ ಶಾಂತಿಗಳು

   ಮಿಥುನ: ಗ್ಯಾನ ಬಂದ ಗಿರಾಕಿ

   ಮಿಥುನ: ಗ್ಯಾನ ಬಂದ ಗಿರಾಕಿ

   ಇವರು ಒಳ್ಳೆಯವರಾ, ಕೆಟ್ಟವರಾ? ಸ್ವಾರ್ಥಿಗಳಾ, ಮತ್ತೊಬ್ಬರಿಗೆ ಸಹಾಯ ಮಾಡುವವರಾ? ಬುದ್ಧಿವಂತರಾ, ದಡ್ಡರಾ? ಹೀಗೆ ಬಹಳ ಗೊಂದಲ ಹುಟ್ಟಿಸುವ ವ್ಯಕ್ತಿತ್ವದವರು. ನೇರವಂತಿಕೆ ಬಹಳ ಮುಖ್ಯ ಅಂತ ಭಾವಿಸಿ ತಾವಾಗಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಇವರು, ಕೆಲ ಬಾರಿ ವಯಸ್ಸಿಗೆ ಮೀರಿದ ಪ್ರಬುದ್ಧರಂತೆಯೂ ಮತ್ತೆ ಕೆಲ ಬಾರಿ ಬಾಲಿಶರಾಗಿಯೂ ಕಾಣಿಸಿಕೊಳ್ಳುತ್ತಾರೆ. ಮೊದಲೇ ಹೇಳಿದಂತೆ ಗೊಂದಲಕ್ಕೆ ಕೊನೆ ಎಂಬುದು ಇರುವುದಿಲ್ಲ. ಅದೆಂಥ ವ್ಯಕ್ತಿಗಳಿದ್ದರೂ ಇವರಿಗೆ ಬಹಳ ಬೇಗ ಬೋರ್ ಆಗಿ ಬಿಡುತ್ತಾರೆ. ಈ ಪೈಕಿ ಎಷ್ಟೋ ಮಂದಿಗೆ ಸ್ವತಃ ಹೆಂಡತಿ ಅಥವಾ ಗಂಡನೇ ಬೋರಾಗುವುದು ಉಂಟು. ಏಕಾಂಗಿಯಾಗಿ ಇವರು ಇರಲು ಬಯಸಿದರೆ ಇವರಷ್ಟಕ್ಕೆ ಬಿಡುವುದು ಅತ್ಯುತ್ತಮ. ಕೆಲವು ಬಾರಿ ಇವರ ಲೆಕ್ಕಾಚಾರ, ಜುಗ್ಗತನ ಸಹಿಸುವುದು ಅಸಾಧ್ಯ ಎನಿಸುತ್ತದೆ. ಕೆಲವು ಸಲ ಕುಟುಂಬದವರಿಗೆ ಮಾತ್ರರ್ ದುಡ್ಡಿನ ಮುಖ ನೋಡದೆ ಹೇಗೆಂದರೆ ಹಾಗೆ ಖರ್ಚು ಮಾಡುತ್ತಾರೆ. ಒಟ್ಟಾರೆ ಇವರೊಂಥರಾ ಗ್ಯಾನ ಬಂದ ಗಿರಾಕಿ.

   ಮಿಥುನ ರಾಶಿಯ ಅದ್ಭುತ ಶಕ್ತಿ ಬಗ್ಗೆ ನಿಮಗೆಷ್ಟು ಗೊತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

   ಕರ್ಕಾಟಕ: ಈ ಏಡಿ ಚುರುಕು-ಮೆಣಸಿನಕಾಯಿ

   ಕರ್ಕಾಟಕ: ಈ ಏಡಿ ಚುರುಕು-ಮೆಣಸಿನಕಾಯಿ

   ಈ ಏಡಿ ಬಲು ಚುರುಕು. ಏನನ್ನಾದರೂ ಗಮನಿಸುತ್ತಾ ಇರುತ್ತದೆ. ಯಾವುದಾದರೂ ವಿಚಾರ ಅಗತ್ಯ ಬಂದಾಗ ಬಳಸಿಕೊಳ್ಳಲು ಸಿದ್ಧವಿರುವ ಚುರುಕು-ಮೆಣಸಿನಕಾಯಿ. ನಾಲಗೆ ಬಿರುಸು. ಆದರೆ ಆರೋಗ್ಯದಲ್ಲಿ ಏನಾದರೂ ಸಣ್ಣ-ಪುಟ್ಟ ಸಮಸ್ಯೆಯಾದರೂ ಸದಾ ಕಾಡುತ್ತದೆ. ಬಹಳ ಲೆಕ್ಕಾಚಾರ ಜಾಸ್ತಿ. ಗಂಡಿರಲಿ, ಹೆಣ್ಣಿರಲಿ ಸ್ವಚ್ಛಂದವಾಗಿ ಇರಲು ಬಯಸುತ್ತಾರೆ. ಯಾವುದೇ ಸಂಗತಿ, ವಿಷಯಗಳ ಬಗ್ಗೆ ಆಳವಾದ, ನಿಖರವಾದ ಮಾಹಿತಿ ತಿಳಿದುಕೊಳ್ಳಬೇಕು ಅನ್ನೋದು ಇವರ ಅಭಿಲಾಷೆ. ಆದರೆ ಇವರ ಪ್ರತಿಭೆಯನ್ನು ಆರಂಭದ ಹಂತದಲ್ಲಿ ಗುರುತಿಸುವವರು ಇರುವುದಿಲ್ಲ. ಹಲವರಿಗೆ ಯಶಸ್ಸು ಸಿಗುವುದು ಬಹಳ ನಿಧಾನ ಆಗುತ್ತದೆ. ಏಕೆಂದರೆ, ತುಂಬ ಸಂದರ್ಭದಲ್ಲಿ ಇವರು ಡೆಡ್ ಲೈನ್ ನೊಳಗೆ ಕೆಲಸ ಮಾಡುವುದಿಲ್ಲ. ಇನ್ನೂ ಕೆಲ ಸಲ ಯಾರಿಂದ ಇವರಿಗೆ ಪ್ರಮೋಷನ್ ಮತ್ತೊಂದು ಆಗಬೇಕೋ ಅವರ ಜತೆಗೆ ಜಗಳ ಮಾಡಿಕೊಂಡಿರುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಲೆಕ್ಕಾಚಾರದಲ್ಲಿ ಹೆಜ್ಜೆಗಳನ್ನು ಇಟ್ಟರೆ ಯಶಸ್ಸನ್ನು ಬೇಗ ದಕ್ಕಿಸಿಕೊಳ್ಳಬಹುದು.

   ಸಿಂಹ: ಬಾಯಿಗೆ ಸಿಕ್ಕಿ ಬದುಕುವುದು ಕಷ್ಟ

   ಸಿಂಹ: ಬಾಯಿಗೆ ಸಿಕ್ಕಿ ಬದುಕುವುದು ಕಷ್ಟ

   ಈ ಸಿಂಹಕ್ಕೆ ಎಲ್ಲೇ ಹೋದರೂ ಮರ್ಯಾದೆ, ಸೌಕರ್ಯ, ಸವಲತ್ತು, ಸುಖ, ನಿದ್ರೆ, ರುಚಿಕಟ್ಟಾದ ಊಟ, ತನ್ನದೇ ಪಾಳೇಪಟ್ಟು ಬೇಕು. ಹೀಗೆ ಬೇಕುಗಳು ಬೆಳೆಯುತ್ತಾ ಹೋಗುತ್ತದೆ ವಿನಾ ನಿಲ್ಲುವುದಿಲ್ಲ. ಇವರ ಅಹಂಗೆ ಹೊಡೆತ ಬಿದ್ದರೆ ಇಡೀ ವಾತಾವರಣವನ್ನೇ ಹಾಳುಗೆಡುವಿ ಬಿಡುತ್ತಾರೆ. ಚಿನ್ನ, ರನ್ನ ಅಂತ ಕೆಲಸ ಮಾಡಿಸಿಕೊಳ್ಳಬೇಕೇ ವಿನಾ ಜೋರು- ಜಬರ್ದಸ್ತು ಉಪಯೋಗಕ್ಕೆ ಬರುವುದಿಲ್ಲ. ಈ ರಾಶಿಯವರಲ್ಲಿ ಗಂಡಸರು ಆಲಸಿಗಳಾಗಿರುತ್ತಾರೆ. ಯಾವುದಾದರೂ ಕಂಪೆನಿಗಳಲ್ಲಿ ಬಾಸ್ ಆದವರು ತಾವಾಗಿಯೇ ಎಷ್ಟು ಸಮಯ ರಜಾ ಬೇಕೋ ತೆಗೆದುಕೊಳ್ಳಿ ಅಂದುಬಿಟ್ಟರೆ, ತಿಂಗಾಳುನುಗಟ್ಟಲೆ ರಜಾ ಕೇಳುವಂಥ ಆಸಾಮಿಗಳು ಇವರು. ಇವರು ಕೆಲಸ ಮಾಡುವುದು ಕೂಡ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕೇ ಆಗಿರುತ್ತದೆ. ಏಕಾಂತವನ್ನು ಬಹುವಾಗಿ ಇಷ್ಟಪಡುವ ಈ ರಾಶಿಯವರಿಗೆ ಸಂಬಂಧಿಕರು, ಅಪ್ಪ-ಅಮ್ಮನ ಜತೆಗೆ ಇರುವುದು ಕೂಡ ಎಷ್ಟೋ ಸಲ ಇಷ್ಟವಾಗುವುದಿಲ್ಲ. ತನಗೆ ಬೇಕಾದಾಗ ಅವರು ಎದುರಿಗೆ ಸಿಕ್ಕರೆ ಸಾಕು ಎಂದು ಯೋಚಿಸುವ ಜಾಯಮಾನದವರು. ಇವರ ಬಾಯಿಗೆ ಸಿಕ್ಕಿ ಬದುಕುವುದು ಕಷ್ಟ.

   2019ರ ವರ್ಷ ಭವಿಷ್ಯ; ತುಲಾ ರಾಶಿಯಿಂದ ಮೀನ ರಾಶಿವರೆಗೆ

   ಕನ್ಯಾ: ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಲು ಬಯಸುತ್ತಾರೆ

   ಕನ್ಯಾ: ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಲು ಬಯಸುತ್ತಾರೆ

   ಯಾವುದರಿಂದಲೂ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ ಅನ್ನೋ ರಾಶಿ ಇದ್ದರೆ ಅದು ಕನ್ಯಾ ರಾಶಿ. ಇವರ ಉದ್ದಕ್ಕೂ ಬಂಗಾರ ಸುರಿದು ಓಲೈಸಿಕೊಳ್ಳಲು ಯತ್ನಿಸಿದರೆ, ಅದರಲ್ಲೊಂದು ತುಂಡು ಐಬು ಎನ್ನುವ ಜನ ಇವರು. ಹಾಗಂತ ಇವರ ಗುಣ ಸರಿಯಿಲ್ಲ ಅಂತಲ್ಲ. ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕು. ಎದುರು ಮನೆ ಹುಡುಗನ ಹೇರ್ ಸ್ಟೈಲ್ ಸರಿಯಿಲ್ಲ ಅಂದರೆ ಎರಡು ದಿನ ಬೇಜಾರು ಮಾಡಿಕೊಂಡು ಓಡಾಡುವ ಜನ ಇವರು. ರಸ್ತೆ ಮೇಲೆ ಇವರು ಓಡಾಡದೆ ಇರುವುದು ಬಹಳ ಉತ್ತಮ. ಜೀವನದಲ್ಲಿ ಇವರಿಗೆ ಇರುವಷ್ಟು ದೂರುಗಳು ಯಾರಿಗೂ ಇರುವುದಿಲ್ಲ. ಮತ್ತು ಅವುಗಳಲ್ಲಿ ಇವರಿಗೆ ಸಂಬಂಧವೇ ಇಲ್ಲದ, ಯೋಚನೆ ಮಾಡುವ ಅಗತ್ಯವೇ ಇರದ ವಿಚಾರಗಳೂ ಸಿಕ್ಕಾಪಟ್ಟೆ ಇರುತ್ತವೆ. ಇವರ ನೆನಪಿನ ಶಕ್ತಿ, ಬುದ್ಧಿವಂತಿಕೆ ಭಾರೀ ಅಪಾಯಕಾರಿ. ಎಲ್ಲಿ ನೆನಪಿಗೆ ಬರಬಾರದೋ, ಸುಮ್ಮನಿರಬೇಕೋ ಅಲ್ಲಿ ಸರಿಯಾಗಿ ಮಾತನಾಡಿ ಎಷ್ಟೋ ಸಲ ತಾವು ಅಪಾಯ ತಂದುಕೊಳ್ಳುತ್ತಾರೆ. ಇತರರಿಗೂ ಅಪಾಯ ತರುತ್ತಾರೆ.

   ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?

   ತುಲಾ: ಸ್ವೀಟಿಗೆ ಸ್ವೀಟು, ಏಟಿಗೆ ಏಟು

   ತುಲಾ: ಸ್ವೀಟಿಗೆ ಸ್ವೀಟು, ಏಟಿಗೆ ಏಟು

   ಒಂದಿಡೀ ದಿನ ಯಾವುದಕ್ಕೂ ಯಾವುದನ್ನೂ ಹೋಲಿಸದೆ, ತಮ್ಮನ್ನು ಇತರರ ಜತೆ ಹೋಲಿಸದೆ ಒಟ್ಟಾರೆ ಹೋಲಿಕೆಯೇ ಮಾಡದೆ ಕಳೆದು ಬಿಟ್ಟರೆ ಅವರು ತುಲಾ ರಾಶಿಯೇ ಅಲ್ಲ. ಯಾವುದಾದರೂ ತೀರಾ ಅಗತ್ಯ ಸಂದರ್ಭದಲ್ಲಿ ಅವರಿಗೆ ಕೈ ಕೊಟ್ಟವರು ಈ ಜನ್ಮದಲ್ಲಿ ಮತ್ತೊಂದು ಸಹಾಯ ತುಲಾ ರಾಶಿಯವರಿಂದ ಅಪ್ಪಿ ತಪ್ಪಿಯೂ ಪಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ತಕ್ಕಡಿ. ನೀನು ಕೊಟ್ಟ ಎರಡು ಸ್ವೀಟಿಗೂ ಪ್ರತಿಯಾಗಿ ಎರಡು ಸ್ವೀಟು. ನಾಲ್ಕು ಏಟಿಗೂ ತಿರುಗಿ ನಾಲ್ಕೇಟು. ಲೆಕ್ಕ ಬಿಡುವ ಜನರಲ್ಲ ಇವರು. ಭಯಂಕರ ವಾಸ್ತವವಾದಿಗಳು. ನೀನೇನು ಧರ್ಮಕ್ಕೆ ಮಾಡಬೇಡ ಅಥವಾ ಧರ್ಮಕ್ಕೆ ಮಾಡಿಲ್ಲ ಅನ್ನೋದು ಇವರ ಘೋಷವಾಕ್ಯ. ಅದನ್ನು ಇವರು ವಾಸ್ತವ ಎಂದು ಕರೆಯುತ್ತಾರೆ. ಏಕೆಂದರೆ, ಇವರು ಕೂಡ ಯಾರಿಂದಲೂ ಸುಖಾಸುಮ್ಮನೆ ಸಹಾಯ ಪಡೆಯಲ್ಲ. ಅಲ್ಲಿಂದ ಅಲ್ಲೇ ಲೆಕ್ಕ ಚುಕ್ತಾ. ಈಗ ಪಡೆದ ಐವತ್ತು ಪೈಸೆಗೆ ಐದು ವರ್ಷದ ನಂತರ ಹತ್ತು ರುಪಾಯಿ ಏಕೆ ಕೊಡಬೇಕು ಎಂದು ಯೋಚಿಸುವ ಜಾಣರಿವರು.

   ದೀರ್ಘಾಯುಷ್ಯ ಯೋಗದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

   ವೃಶ್ಚಿಕ: ಆಕಾಶದ ಆಚೆಗೂ ಇಣುಕುವ ಚೇಳು

   ವೃಶ್ಚಿಕ: ಆಕಾಶದ ಆಚೆಗೂ ಇಣುಕುವ ಚೇಳು

   ನಿಮಗೆ ಈ ರಾಶಿಯ ಶತ್ರುಗಳಿದ್ದರೆ ಬಹಳ ಬೇಗ ಅವರ ಜತೆ ಸಂಧಾನ ಮಾಡಿಕೊಂಡು ಬಿಡಿ. ಏಕೆಂದರೆ, ಇವರು ಬದುಕುವುದಕ್ಕೂ ಬಿಡಲ್ಲ, ಸಾಯುವುದಕ್ಕೂ ಬಿಡಲ್ಲ ಎಂದು ಗೋಳು ಹುಯ್ದುಕೊಳ್ಳುವುದರಲ್ಲಿ ನಿಸ್ಸೀಮರು. ಇವರ ಪೈಕಿ ಬಹಳ ಮಂದಿ ಸಿಟ್ಟನ್ನು ಕಾರಿಕೊಂಡು ಬಿಡುತ್ತಾರೆ. ಓಹ್, ಅಲ್ಲಿಗೆ ಮುಗಿಯಿತು ಅಂದುಕೊಳ್ಳಬೇಡಿ. ಏಕೆಂದರೆ, ಅಲ್ಲಿಗೆ ನಿಮ್ಮ ಬಗ್ಗೆ ಅವರ ಮನಸಿನಲ್ಲಿ ಒಂದು ಅಭಿಪ್ರಾಯ ಮೂಡಿತು ಅಂತ ಅರ್ಥ. ಇವರ ಟೀಕೆ-ಟಿಪ್ಪಣಿಯಿಂದ ಜಗತ್ತಿನಲ್ಲಿ ಯಾವುದೂ ಹೊರತಲ್ಲ. ತಂದೆ- ತಾಯಿ ಆದರೂ ಮಕಮಕ ಬೈಯ್ಯುವ ಜನ ಇವರು. ಹಾಗಂತ ಇವರು ಬಹಳ ಶಿಸ್ತು ಅಂತೇನಲ್ಲ. ನನ್ನನ್ನು ಹೀಗೇ ಒಪ್ಪಿಕೊಳ್ಳಬೇಕು. ಬೇರೆಯವರನ್ನು ನಾನು ಸಹಿಸಲ್ಲ ಅನ್ನೋ ಜನ ಇವರು. ಏನು ಸಾಧಿಸಬೇಕು ಅಂತಿದೀಯಾ ಅಂತ ಇವರನ್ನು ಕೇಳಲೇಬಾರದು. ಏಕೆಂದರೆ, ದಿನಾ ಒಂದೊಂದು ಮೆಟ್ಟಿಲನ್ನು ಆಕಾಶಕ್ಕೆ ಕಟ್ಟಿಕೊಂಡು ಹೋಗುವ ಇವರು, ಅದರಾಚೆಗೂ ಇಣುಕುವ ಅವಕಾಶ ಸಿಕ್ಕರೆ ಸೈ ಅಂತಾರೆ.

   ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?

   ಧನು: ಗುರು ಹಾಗೂ ದೈವ ಭಕ್ತಿ ಹೆಚ್ಚು

   ಧನು: ಗುರು ಹಾಗೂ ದೈವ ಭಕ್ತಿ ಹೆಚ್ಚು

   ನನ್ನನ್ನು ಯಾರಾದರೂ ಪ್ರೀತಿಸಿ, ಮುದ್ದು ಮಾಡಿ, ನೀನೇ ಎಲ್ಲ ಎನ್ನುತ್ತಾರಾ ಎಂದು ಕಾಯುವ ಜನ ಇವರು. ಆ ಕಾರಣಕ್ಕೆ ಎಲ್ಲದಕ್ಕೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದಕ್ಕೂ ಮುಂಚೆ ತಮ್ಮ ಪ್ರಾಮುಖ್ಯತೆ ತಿಳಿಸುವುದಕ್ಕೆ ಕಲಿತ ವಿದ್ಯೆಗಳನ್ನೆಲ್ಲ ಖರ್ಚು ಮಾಡುತ್ತಾರೆ. ಇವರು ಅಸಾಧ್ಯ ಅಂತ ಅನ್ನಿಸುವ ಹಾಗೆ ಮಾಡುತ್ತಾರೆ. ಆ ನಂತರ ಗಟ್ಟಿಯಾಗಿ ಹಿಡಿದುಕೊಂಡರೆ, ಅವರಾಗಿಯಂತೂ ಬಿಡುವುದಿಲ್ಲ. ಹಾಗಂತ ಎಲ್ಲರೂ ಇವರ ಆಯ್ಕೆ ಅಲ್ಲ. ಜನರಲ್ಲಿ ಕ್ವಾಲಿಟಿ ಹುಡುಕುವ ಆಸಾಮಿಗಳು ಇವರು. ನಾಲ್ಕು ಜನರ ಮಧ್ಯೆ ನನ್ನ ಸ್ನೇಹಿತರು ಅಥವಾ ಸ್ನೇಹಿತೆ ಅಂತ ಪರಿಚಯ ಮಾಡಿಕೊಳ್ಳುವ ಮಟ್ಟಿಗೆ ಇದ್ದರೆ ಮಾತ್ರ ಅಂಥವರ ಜತೆ ಸ್ನೇಹ ಮಾಡುತ್ತಾರೆ. ಇವರದು ಸ್ವಲ್ಪ ಮಟ್ಟಿಗೆ ಅನುಕೂಲಸಿಂಧು ದೈವ ಭಕ್ತಿ, ಮಾತೃ ಭಕ್ತಿ, ಪಿತೃ ಭಕ್ತಿ, ಗುರು ಭಕ್ತಿ ಆಗಿರುತ್ತದೆ. ಆಯಾ ಸನ್ನಿವೇಶಕ್ಕೆ ತಕ್ಕ ಹಾಗೆ ಅವುಗಳನ್ನು ಬಳಸಿಕೊಳ್ಳುತ್ತಾರೆ. ಇವರ ಪೈಕಿ ಹಲವರಿಗೆ ಗುರು ಹಾಗೂ ದೈವ ಭಕ್ತಿ ಹೆಚ್ಚಾಗಿರುತ್ತದೆ.

   ಮಕರ: ತನಗೆ ಬೇಕಾದ ವಾತಾವರಣ ಸೃಷ್ಟಿಸಿಕೊಳ್ಳುವಲ್ಲಿ ಬುದ್ಧಿವಂತ ಮೊಸಳೆ

   ಮಕರ: ತನಗೆ ಬೇಕಾದ ವಾತಾವರಣ ಸೃಷ್ಟಿಸಿಕೊಳ್ಳುವಲ್ಲಿ ಬುದ್ಧಿವಂತ ಮೊಸಳೆ

   ಇದು ಸುಲಭಕ್ಕೆ ಊಹೆಗೆ ಸಿಗದ ಮೊಸಳೆ. ಅದೇನು ನಿದ್ದೆಯೋ ನಾಟಕವೋ ಅಥವಾ ಬೂಟಾಟಿಕೆಯೋ ತಿಳಿಯುವುದೇ ಇಲ್ಲ. ಆದರೆ ತನಗೆ ಏನು ಬೇಕೋ ಅಂಥದ್ದೊಂದು ವಾತಾವರಣ ಸೃಷ್ಟಿಗೆ ಏನು ಬೇಕೋ ಅವೆಲ್ಲವನ್ನೂ ಮಾಡುತ್ತಾ ಇರುತ್ತದೆ. ಈ ರಾಶಿಯವರು ಯಾರಿಗಾದರೂ ಮೋಸ ಮಾಡಲೇ ಬೇಕು ಎಂದು ನಿರ್ಧರಿಸಿದರೆ ಮುಗಿಯಿತು, ಅವರನ್ನು ವಂಚಿಸಿಯೇ ವಂಚಿಸುತ್ತಾರೆ. ಸಂಬಂಧಗಳ ವಿಚಾರದಲ್ಲಿ ಸ್ವಾರ್ಥ ಹೆಚ್ಚಾಗಿರುತ್ತದೆ. ತನ್ನ ಕುಟುಂಬ, ಸ್ನೇಹಿತರು, ಆಪ್ತ ಬಂಧುಗಳು ಎಂಬ ವಲಯ ಬಿಟ್ಟು ಆಚೆ ಯೋಚಿಸದ ಜನ ಇವರು. ಕೆಲ ಬಾರಿಯಂತೂ ಬಹಳ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ದುಡ್ಡು, ಸ್ಥಾನಮಾನ, ಗೌರವ, ಅಧಿಕಾರದ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ ಎಂದು ನಿರ್ಲಿಪ್ತವಾಗಿ ಇರುವಂತೆ ಕಾಣುವ ಮೊಸಳೆ ಒಳಗೊಳಗೆ ಅದನ್ನು ಬಯಸುತ್ತಿರುತ್ತದೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಿರುತ್ತದೆ. ಒಂಟಿತನ ಹೆಚ್ಚಾಗಿ ಬಯಸುವ ಈ ಜನಕ್ಕೆ ದೈವ ಭಕ್ತಿಯ ರೀತಿ ಬೇರೆ ರೀತಿಯಲ್ಲಿರುತ್ತದೆ. ಕೆಲವರು ದೊಡ್ಡ ಪ್ರಮಾಣದಲ್ಲಿ ದಾನ-ಧರ್ಮಗಳನ್ನು ಮಾಡುತ್ತಾರೆ.

   ಕುಂಭ: ಹಲವು ಗುಣಗಳ ಮಿಶ್ರಣ

   ಕುಂಭ: ಹಲವು ಗುಣಗಳ ಮಿಶ್ರಣ

   ಸಿಟ್ಟಾಗಿರಬಹುದು, ಪ್ರೀತಿ ಆಗಿರಬಹುದು, ಕೊನೆಗೆ ಲೈಂಗಿಕ ತೃಪ್ತಿಯೇ ಇರಬಹುದು ಪೂರ್ಣವಾಗದ ಹೊರತು, ಸಂತೃಪ್ತಿ ದೊರಕದ ಹೊರತು ಬಿಡುವ ಜಾಯಮಾನ ಇವರದಲ್ಲ. ಯಾವುದಕ್ಕೂ ತೀವ್ರತೆ ಇರುವಂತೆ ತೋರಿಸಿಕೊಳ್ಳದ, ಎಲ್ಲವನ್ನೂ ದಕ್ಕಿಸಿಕೊಳ್ಳುವ ಪೂರ್ಣ ಕುಂಭ ಇದು. ಇವರ ಅಹಂಕಾರವು ಸಿಂಹ ರಾಶಿಗಿಂತ ಭಿನ್ನವಾಗಿ ಇರುತ್ತದೆ. ಸಿಂಹವಾದರೂ ಒಂದು ಸಲ ಅಂದು, ಆಡಿ ಸುಮ್ಮನಾಗಿ ಬಿಡುತ್ತದೆ. ಆದರೆ ಇವರು ಜೀವನಪೂರ್ತಿ ಸಿಕ್ಕ ಎಲ್ಲ ಅವಕಾಶದಲ್ಲೂ ಹಣಿಯುತ್ತಲೇ ಇರುತ್ತಾರೆ. ಸಾಧನೆ ಮತ್ತೊಂದು ಅಂತೆಲ್ಲ ತುಂಬ ತಲೆ ಕೆಡಿಸಿಕೊಳ್ಳದ ಇವರಿಗೆ ತಮ್ಮ ಸಂಸಾರ ಜೀವನದ ಸಮತೋಲನ ಬಹಳ ಮುಖ್ಯ. ಇಲ್ಲಿ ಇನ್ನೊಂದು ಮುಖ್ಯ ವಿಚಾರ ತಿಳಿಸಬೇಕು. ಕುಂಭ ರಾಶಿಯವರಲ್ಲಿ ಹಲವು ರಾಶಿಗಳ ಮಿಶ್ರಣವನ್ನು ಗಮನಿಸಬಹುದು. ಲೆಕ್ಕಾಚಾರ, ಜುಗ್ಗತನ, ಸಣ್ಣ ಬುದ್ದಿ, ವಿನಯವಂತಿಕೆ, ದೊಡ್ಡವರು, ಗುರು-ಹಿರಿಯರಿಗೆ ಗೌರವ ಹೀಗೆ ಹಲವು ಒಳ್ಳೆ ಹಾಗೂ ಕೆಟ್ಟ ಗುಣಗಳ ಮಿಶ್ರಣ ಇವರಲ್ಲಿ ಇರುತ್ತದೆ.

   ಮೀನ: ಯಾವ ಏಟಿಗೂ ಸಿಗದ ಚೂಟಿ ಮೀನು

   ಮೀನ: ಯಾವ ಏಟಿಗೂ ಸಿಗದ ಚೂಟಿ ಮೀನು

   ಅವನು ಬಿಡು ಯಾವ ಏಟಿಗೂ ಸಿಗಲ್ಲ ಅನ್ನೋ ಮಾತು ನೀವು ಕೇಳಿದ್ದರೆ ಅದು ಮೀನ ರಾಶಿಯವರಿಗೆ ಸರಿಯಾಗಿ ಒಪ್ಪುತ್ತದೆ. ಇವರ ಉತ್ತರಗಳೂ ಹಾಗೇ ಇರುತ್ತವೆ. ಎಷ್ಟೋ ಸಲ ಒಮ್ಮೆ ಇವರ ಮಾತು ಅರ್ಥವೇ ಆಗುವುದಿಲ್ಲ. ಅಥವಾ ಅದಕ್ಕೆ ತಮಗೆ ಬೇಕಾದಂತೆ ತಿರುಗಿಸಬಹುದಾದ ಅರ್ಥ ಕೊಟ್ಟು ಮಾತನಾಡಿರುತ್ತಾರೆ. ತಮ್ಮ ಬುದ್ಧಿ, ವಿದ್ಯೆ ಬಗ್ಗೆ ವಿಪರೀತವಾಗಿ ನಂಬುತ್ತಾರೆ. ಅಪರೂಪದಲ್ಲಿ ವಿದ್ಯೆ ಇಲ್ಲದಿದ್ದರೆ, ಒಂದು ವಿಶೇಷವಾದ ಕೌಶಲವನ್ನು ಸಂಪಾದಿಸಿರುತ್ತಾರೆ. ಅದು ಉಳಿದವರಿಗೆ ಇರಬಾರದು, ತಾವು ಸದಾ ಬೇಡಿಕೆಯಲ್ಲಿ ಇರಬೇಕು ಆ ಥರ ಕೌಶಲ ಅದಾಗಿರುತ್ತದೆ. ಭವಿಷ್ಯವನ್ನು ತುಂಬ ಚೆನ್ನಾಗಿ ಗುರುತಿಸಬಲ್ಲ ಇವರು, ಬಹಳ ಕ್ಷೇತ್ರಗಳಲ್ಲಿ ಯಶಸ್ಸು ಕಾಣುತ್ತಾರೆ. 'ಅವನು ಏನೂಂತ ನನಗೆ ಗೊತ್ತಿಲ್ಲವಾ? ಅವಳೇನು ಅಂತ ನನಗೆ ಗೊತ್ತು' ಎಂಬಂಥ ಇವರ ಧೋರಣೆಯಿಂದಾಗಿ ಹಲವು ಅವಕಾಶ ಕಳೆದುಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಗುಟ್ಟಾಗಿ ಮಾಡಬಲ್ಲ ಇವರು, ಬಹಳ ಸಲ ಸಣ್ಣ ಸಣ್ಣ ಆಮಿಷಗಳಿಗೆ ಬಲಿಯಾಗಿ ದೊಡ್ಡ ಅವಕಾಶಗಳನ್ನು ಕಳೆದುಕೊಂಡು ಬಿಡ್ತಾರೆ.

   English summary
   There are 12 zodiac sign in astrology. Aries to Pisces each contain separate sign. What it represents? How it impacts on nature and characteristics of person explained here according to vedic astrology.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X