12 Zodiac: ಇಂದಿನಿಂದ ಶನಿಯ ಹಿಮ್ಮುಖ ಚಲನೆ:ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕರ್ಮದ ಫಲ ನೀಡುವವರು ಎಂದು ಹೇಳಲಾಗುತ್ತದೆ. ಜುಲೈ 27ರಿಂದ ಶನಿ ಗ್ರಹವು ಮೀನ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಪ್ರಾರಂಭಿಸಲಿದೆ. ಈ ಹಿಮ್ಮುಖ ಚಲನೆಯು ಡಿಸೆಂಬರ್ 11 ರವರೆಗೆ ಅಂದರೆ ಸುಮಾರು 138 ದಿನಗಳವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ, ಶನಿಯ ಹಿಮ್ಮುಖ ಚಲನೆಯಿಂದಾಗಿ ಅನೇಕ ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಆಗಲಿವೆ. ಶನಿ ಗ್ರಹದೊಂದಿಗೆ ಸೂರ್ಯನ ರಾಶಿಯಲ್ಲಿನ ಬದಲಾವಣೆಗಳು, ಗುರುವಿನ ಚಲನೆ ಮತ್ತು ರಾಹು-ಕೇತುವಿನ ಸಂಚಾರವು ಈ ದೀರ್ಘ ಅವಧಿಯಲ್ಲಿ ಕೆಲವು ರಾಶಿಯವರ ವೈಯಕ್ತಿಕ ಜೀವನದ ಮೇಲೆ ಆಳವಾದ ಪರಿಣಾಮ ಬೀರಲಿದೆ. ಈ ಗ್ರಹಗಳ ಸಂಯೋಜನೆ ಮತ್ತು ಬದಲಾವಣೆಗಳು ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಸಂಬಂಧಗಳು ಮತ್ತು ಆರೋಗ್ಯ ವಿಷಯಗಳಲ್ಲಿ ಪ್ರಮುಖ ತಿರುವುಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಮೇಷ ರಾಶಿ (Aries)

ಮೇಷ ರಾಶಿಯವರಿಗೆ ಶನಿಯು 12ನೇ ಮನೆಯಲ್ಲಿ, ಅಂದರೆ ಖರ್ಚಿನ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಈ ಅವಧಿಯಲ್ಲಿ, ನಿಮ್ಮ ಹಣಕಾಸಿನ ವೆಚ್ಚಗಳನ್ನು ಬಹಳ ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ. ವಿದೇಶ ಪ್ರವಾಸಗಳು ಅಥವಾ ವ್ಯವಹಾರಕ್ಕಾಗಿ ದೂರದ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುವ ಅವಕಾಶಗಳಿದ್ದರೂ, ಕೆಲವು ಅಡೆತಡೆಗಳು ಮತ್ತು ಅನಿರೀಕ್ಷಿತ ವೆಚ್ಚಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಮಾನಸಿಕ ಹಾಗೂ ದೈಹಿಕ ಒತ್ತಡ ಹೆಚ್ಚಾಗುವ ಸೂಚನೆಗಳು ಸಹ ಇವೆ.

12 Zodiac

ವೃಷಭ ರಾಶಿ (Taurus)

ವೃಷಭ ರಾಶಿಯವರಿಗೆ ಶನಿ ಏಕದಶದಲ್ಲಿ ಅಂದರೆ ಲಾಭದ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದರ್ಥ. ಈ ಅವಧಿಯಲ್ಲಿ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ, ಈ ಲಾಭ ನಿರೀಕ್ಷಿಸಿದಷ್ಟು ವೇಗವಾಗಿ ಬರದೆ ಇರಬಹುದು. ನಿಮ್ಮ ಹಳೆಯ ಹೂಡಿಕೆಗಳು ನೀವು ಹಿಂದೆ ಮಾಡಿದ ಕಠಿಣ ಪರಿಶ್ರಮವು ಈ ಅವಧಿಯಲ್ಲಿ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ವ್ಯಾಪಾರ ಪಾಲುದಾರರು ಅಥವಾ ಹಿತೈಷಿಗಳೊಂದಿಗೆ ಅನಗತ್ಯ ಘರ್ಷಣೆಗಳು ಉಂಟಾಗದಂತೆ ಬಹಳ ಜಾಗರೂಕರಾಗಿ ಇರುವ ಅವಶ್ಯಕತೆ ಇದೆ. ತಮ್ಮ ವೃತ್ತಿಜೀವನದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡುತ್ತಿರುವವರಿಗೆ ಡಿಸೆಂಬರ್ ವೇಳೆಗೆ ಸಕಾರಾತ್ಮಕ ಸುದ್ದಿಗಳು ಸಿಗಬಹುದು.

ಮಿಥುನ ರಾಶಿ (Gemini)

ಹತ್ತನೇ ಮನೆಯಲ್ಲಿ ಅಂದರೆ ಕರ್ಮದಲ್ಲಿ ಶನಿ ಹಿಮ್ಮೆಟ್ಟುವುದರಿಂದ ಮಿಥುನ ರಾಶಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮುಂಬರುವ ದಿನಗಳಲ್ಲಿ ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಕೆಲಸದ ಹೊರೆ ಬಹಳಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳಿಂದ ತೀವ್ರ ಒತ್ತಡ ಕೊಡುವ ಸಾಧ್ಯತೆ ಇದೆ. ಅಲ್ಲದೆ ಸಮರ್ಪಣೆ ಮತ್ತು ತಾಳ್ಮೆಯಿಂದಾಗಿ ಭವಿಷ್ಯದಲ್ಲಿ ಉತ್ತಮ ಮನ್ನಣೆ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮಾನಸಿಕ ಶಾಂತಿ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕರ್ಕಾಟಕ ರಾಶಿ (Cancer)

ಕರ್ಕಾಟಕ ರಾಶಿಯವರಿಗೆ 9ನೇ ಮನೆಯಲ್ಲಿ ಅಂದರೆ ಅದೃಷ್ಟ ಸ್ಥಾನದಲ್ಲಿ ಶನಿಯ ಸಂಚಾರ ಇಂದಿನಿಂದ ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕಠಿಣ ಪರಿಶ್ರಮವು ನಿಮ್ಮನ್ನು ರಕ್ಷಿಸುತ್ತದೆ. ಉನ್ನತ ವ್ಯಾಸಂಗ ಮಾಡಲು ಅಥವಾ ವಿದೇಶಿ ಪ್ರಯತ್ನಗಳನ್ನು ಕೈಗೊಳ್ಳಲು ಬಯಸುವ ವಿದ್ಯಾರ್ಥಿಗಳು ಯಶಸ್ವಿಯಾಗಲಿದ್ದಾರೆ. ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿ ಇರುವ ಅವಶ್ಯಕತೆ ಇದೆ. ದೂರ ಪ್ರಯಾಣ ಮಾಡುವಾಗ ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಸಿಂಹ ರಾಶಿ (Leo)

ಇನ್ನು ಸಿಂಹ ರಾಶಿಯವರಿಗೆ ಶನಿಯು 8ನೇ ಮನೆಯಲ್ಲಿ ಸಂಚಾರದಲ್ಲಿದ್ದಾನೆ. ಈ ಸಮಯದಲ್ಲಿ, ಪ್ರತಿ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ವಿಶೇಷವಾಗಿ, ಹಣಕಾಸಿನ ವ್ಯವಹಾರಗಳಲ್ಲಿ, ಇತರರಿಗೆ ಸಾಲ ನೀಡುವಾಗ ಅಥವಾ ಹೊಸ ಹೂಡಿಕೆ ಮಾಡುವಾಗ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಯಿರುವುದರಿಂದ, ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು. ಅನುವಂಶಿಕ ಆಸ್ತಿಯ ಬಗ್ಗೆ ಅಥವಾ ಒಡಹುಟ್ಟಿದವರ ನಡುವೆ ಭಿನ್ನಾಭಿಪ್ರಾಯಗಳು ಏಳಬಹುದು. ಪ್ರತಿಕೂಲ ಸಂದರ್ಭಗಳಲ್ಲಿ, ಕೋಪವನ್ನು ನಿಯಂತ್ರಿಸುವುದು ಉತ್ತಮ ಎಂದು ಹೇಳಲಾಗಿದೆ.

ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರಿಗೆ ಮಿಶ್ರ ಫಲ ಇರಲಿದೆ. 7ನೇ ಮನೆಯಲ್ಲಿ ಶನಿಯ ಹಿಮ್ಜುಖ ಚಲನೆಯಿಂದಾಗಿ ಕನ್ಯಾ ರಾಶಿಯವರ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಪತಿ ಮತ್ತು ಪತ್ನಿಯ ನಡುವೆ ಸಣ್ಣ ವಿಷಯಗಳಿಗೂ ಮನಸ್ತಾಪ ಮೂಡುವ ಸಾಧ್ಯತೆ ಇದೆ. ಇಬ್ಬರೂ ಕುಳಿತು ಶಾಂತವಾಗಿ ಮಾತನಾಡಿ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬಹುದು. ದೊಡ್ಡ ಹಣಕಾಸಿನ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಸರಿಯಾಗಿ ಯೋಚಿಸುವುದು ಬಹಳ ಮುಖ್ಯವಾಗಿರಲಿದೆ.

ತುಲಾ ರಾಶಿ (Libra)

ಶನಿಯು 6ನೇ ಮನೆಯಲ್ಲಿ, ಅಂದರೆ ಶತ್ರು ಸ್ಥಾನದಲ್ಲಿ, ತುಲಾ ರಾಶಿಯವರಿಗೆ ಹಿಮ್ಮುಖವಾಗಿದ್ದಾನೆ. ಇದು ಅವರಿಗೆ ತುಂಬಾ ಅನುಕೂಲಕರ ಮತ್ತು ಅದೃಷ್ಟದ ಅವಧಿಯಾಗಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಬಹಳ ಬೇಗನೆ ಪೂರ್ಣಗೊಳ್ಳುತ್ತವೆ. ಹೊಸ ವ್ಯವಹಾರ ಅಥವಾ ಹೊಸ ಆದಾಯದ ಮೂಲ ಹುಟ್ಟಿಕೊಳ್ಳುವುದು. ವಿಶೇಷ ಪ್ರತಿಭೆಗೆ ಕೆಲಸದ ಸ್ಥಳದಲ್ಲಿ ಸರಿಯಾದ ಮನ್ನಣೆ ಸಿಗುತ್ತದೆ. ಹಳೆಯ ಸಾಲಗಳು ಕ್ರಮೇಣ ತೀರುತ್ತವೆ ನಿಮ್ಮ ಮೇಲಿನ ಆರ್ಥಿಕ ಒತ್ತಡವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಆಗಲಿದೆ.

ವೃಶ್ಚಿಕ ರಾಶಿ (Virgo)

ವೃಶ್ಚಿಕ ರಾಶಿಯವರಿಗೆ ಶನಿ ಗ್ರಹವು 5ನೇ ಮನೆಯಲ್ಲಿ, ಅಂದರೆ ಶಿಕ್ಷಣ ಮತ್ತು ಮಕ್ಕಳ ಮನೆಯಲ್ಲಿ ಸಂಚಾರ ಮುಂದುವರಿಸುತ್ತದೆ. ಮುಂದಿನ ಕೆಲವು ತಿಂಗಳುಗಳು ವಿದ್ಯಾರ್ಥಿಗಳಿಗೆ ಸಮಯ ಕಠಿಣವಾಗಿರಲಿದೆ. ಪ್ರೇಮ ವ್ಯವಹಾರಗಳಲ್ಲಿ ಸಣ್ಣ ವಿಷಯಗಳಿಗೆ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಮಕ್ಕಳ ಉತ್ತಮ ಭವಿಷ್ಯ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳ ಬಗೆಗಿನ ಆಲೋಚನೆಗಳು ಹೆಚ್ಚಾಗಲಿವೆ. ಹೆಚ್ಚಿನ ಅಪಾಯವಿರುವ ಷೇರು ಮಾರುಕಟ್ಟೆ ಅಥವಾ ಊಹಾತ್ಮಕ ವ್ಯವಹಾರಗಳಿಂದ ಸಂಪೂರ್ಣವಾಗಿ ದೂರವಿರುವುದು ಉತ್ತಮ.

ಧನು ರಾಶಿ (Sagitarius)

ಈ ಅವಧಿಯಲ್ಲಿ, ಕೆಲವೊಮ್ಮೆ ಕುಟುಂಬ ಅಶಾಂತಿ ಎದುರಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಭೂಮಿ ಅಥವಾ ಹೊಸ ವಾಹನ ಖರೀದಿಸುವ ವಿಷಯದಲ್ಲಿ ಅನಗತ್ಯ ಕಾನೂನು ತೊಡಕುಗಳು ಉಂಟಾಗಬಹುದು. ನಿಮ್ಮ ವೃತ್ತಿಜೀವನದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ಕೆಲಸದ ಒತ್ತಡವನ್ನು ಮನೆಗೆ ತರದಂತೆ ನೋಡಿಕೊಳ್ಳುವ ಮೂಲಕ ನೀವು ಕುಟುಂಬ ಸದಸ್ಯರೊಂದಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ನೀವು ತಪ್ಪಿಸಬಹುದಾಗಿದೆ.

ಮಕರ ರಾಶಿ (Capricorn)

ಮಕರ ರಾಶಿಯವರಿಗೆ ಶನಿಯು 3ನೇ ಮನೆಯಲ್ಲಿ, ಅಂದರೆ ಬಲಶಾಲಿ ಮನೆಯಲ್ಲಿ ಹಿಮ್ಮುಖವಾಗಿದ್ದಾನೆ. ಇದು ನಿಮಗೆ ಸಾಕಷ್ಟು ಮಾನಸಿಕ ಉತ್ಸಾಹ ಮತ್ತು ಹೊಸ ಧೈರ್ಯವನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸುತ್ತದೆ. ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳು ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗುತ್ತವೆ. ಒಡಹುಟ್ಟಿದವರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವ್ಯವಹಾರದ ಮೇಲಿನ ಸಣ್ಣ ಪ್ರವಾಸಗಳು ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ತಂದುಕೊಡುವ ನಿರೀಕ್ಷೆ ಇದೆ.

ಕುಂಭ ರಾಶಿ (Aquarius)

ಕುಂಭ ರಾಶಿಯವರಿಗೆ, ಶನಿಯು ಎರಡನೇ ಮನೆಯಲ್ಲಿ, ಅಂದರೆ ಹಣದ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಸಮಯದಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಗಮನಾರ್ಹವಾಗಿ ಸುಧಾರಿಸುತ್ತದೆ. ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಪ್ರಮುಖ ಕಾರ್ಯಗಳು ಮತ್ತು ಯೋಜನೆಗಳು ಈಗ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಜೀವನದ ವಿಷಯದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಲು ಅತ್ಯುತ್ತಮ ಅವಕಾಶಗಳಿವೆ. ದೀರ್ಘಕಾಲದ ಆಸ್ತಿ ವಿವಾದಗಳು ಅಥವಾ ಕುಟುಂಬದಲ್ಲಿನ ಇತರ ಸಮಸ್ಯೆಗಳು ಬಗೆಹರಿಯುತ್ತವೆ.

ಮೀನ ರಾಶಿ (Pisces)

ಈ ರಾಶಿಯವರಿಗೆ ಸಹ ಈ ಅವಧಿಯಲ್ಲಿ ಮಿಶ್ರ ಫಲ ಇರಲಿದೆ. ಶನಿಯು ತನ್ನದೇ ಆದ ರಾಶಿಯಲ್ಲಿ ಅಂದರೆ ಮೊದಲ ಮನೆಯಲ್ಲಿ ಹಿಮ್ಮುಖ ಸಂಚನೆಯಲ್ಲಿದ್ದಾನೆ. ಈ 138 ದಿನಗಳವರೆಗೆ, ನಿಮ್ಮ ವೈಯಕ್ತಿಕ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು. ಸೋಮಾರಿತನವನ್ನು ಸಂಪೂರ್ಣವಾಗಿ ಬಿಡಬೇಕು. ಈ ಹಂತವು ಜೀವನದಲ್ಲಿ ಪ್ರಮುಖ ಪ್ರಬುದ್ಧತೆಯನ್ನು ಸಾಧಿಸಲು ಮತ್ತು ವಾಸ್ತವಗಳನ್ನು ಅರಿತುಕೊಳ್ಳಲು ಸಹಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+