ನಿಮ್ಮ ಜನ್ಮರಾಶಿಯ 'ಸೀಕ್ರೆಟ್ ಸೂಪರ್‌ಪವರ್' ಏನು? ನಿಮಗೇ ಗೊತ್ತಿಲ್ಲದ ನಿಮ್ಮ ವಿಶೇಷ ಶಕ್ತಿಯಿದು!
ಸೀತೆಯನ್ನು ಹುಡುಕಲು ವಾನರರ ದಂಡು ಹೊರಟಿತ್ತು. ಸಮುದ್ರದ ದಡದಲ್ಲಿ ನಿಂತು, ಅತ್ತ ದೂರದಲ್ಲಿರುವ ಲಂಕೆಗೆ ಹೋಗಲು ದಾರಿ ಕಾಣದೆ ದಿಗ್ಭ್ರಾಂತವಾಗಿತ್ತು. ಆ ಹೊತ್ತಿಗೆ ಜಾಂಬವಂತ, ಸುಮ್ಮನೆ ಕುಳಿತಿದ್ದ ಹನುಮಂತನನ್ನು ಸಮೀಪಿಸಿ, "ನೀನೇ ಕಲಿ ಹನುಮ. ನಮ್ಮವರಲ್ಲಿ ನಿನ್ನಷ್ಟು ಶಕ್ತಿವಂತ ಯಾರೂ ಇಲ್ಲ. ನೀನು ಮನಸ್ಸು ಮಾಡಿದರೆ ಲಂಕೆಗೆ ಹಾರಿ ತಲುಪಿ ಸೀತೆಯನ್ನು ಕಂಡು ಬರಬಹುದು" ಎಂದು ಹೇಳಿ ಎಚ್ಚರಿಸುತ್ತಾನೆ. ಹನುಮನಿಗೆ ಅವನ ಶಕ್ತಿಯೇ ಜಾಂಬವಂತ ಎಚ್ಚರಿಸುವವರೆಗೆ ತಿಳಿದಿರಲಿಲ್ಲ.
ಹಾಗೇ ನಾವೂನೂ. ಕೆಲವರಿಗೆ ಮಾತಾಡುವ, ಪಾಡ್‌ಕಾಸ್ಟ್ ಮಾಡುವ, ಇನ್ನು ಕೆಲವರಿಗೆ ವಿಡಿಯೊ ಮಾಡುವ, ಭವಿಷ್ಯ ಹೇಳುವ.. ಹೀಗೆ ನಾನಾ ಶಕ್ತಿ ಇರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ವಿಶಿಷ್ಟ ಶಕ್ತಿ ಇರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಅದು ಕಣ್ಣಿಗೆ ಕಾಣುವುದಿಲ್ಲ. ಆದರೆ ನಮ್ಮ ನಿರ್ಧಾರಗಳು, ಸಂಬಂಧಗಳು, ಕೆಲಸದ ಶೈಲಿ ಮತ್ತು ಜೀವನದ ದೃಷ್ಟಿಕೋನದಲ್ಲಿ ಅದು ವ್ಯಕ್ತವಾಗುತ್ತದೆ. ಜನ್ಮರಾಶಿಯ ಆಧಾರದ ಮೇಲೆ ನಿಮ್ಮೊಳಗೆ ಯಾವ ವಿಶೇಷ ಗುಣ ಹೆಚ್ಚು ಪ್ರಬಲವಾಗಿದೆ ಎಂದು ನೋಡೋಣ.

ಮೇಷ (Aries)
ಇವರ ಸೀಕ್ರೆಟ್ ಸೂಪರ್‌ಪವರ್, ಮೊದಲ ಹೆಜ್ಜೆ ಇಡುವ ಧೈರ್ಯ. ಇತರರು ಯೋಚಿಸುತ್ತಿರುವಾಗ ಮೇಷ ರಾಶಿಯವರು ಕೆಲಸ ಆರಂಭಿಸುತ್ತಾರೆ. ಹೊಸ ಅವಕಾಶಗಳನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ. ತಂಡದಲ್ಲಿ ಎಲ್ಲರೂ ಹಿಂದೆ ಸರಿದರೂ, ಮೊದಲಾಗಿ ಮುಂದೆ ಬರುವ ಗುಣ ಇವರದು.
ವೃಷಭ (Taurus)
ಸೂಪರ್‌ಪವರ್ ಸ್ಥಿರತೆ. ಸಮಸ್ಯೆ ಬಂದಾಗ ಆತಂಕಕ್ಕೆ ಒಳಗಾಗದೆ ಶಾಂತವಾಗಿ ಯೋಚಿಸುವ ಶಕ್ತಿ ವೃಷಭ ರಾಶಿಯವರ ಬಲ. ಒಮ್ಮೆ ಗುರಿ ನಿಗದಿಯಾದರೆ ಅದನ್ನು ತಲುಪುವವರೆಗೂ ಸುಲಭವಾಗಿ ಕೈ ಬಿಡುವುದಿಲ್ಲ.
ಮಿಥುನ (Gemini)
ಇವರ ಬಲ ಎಂದರೆ ಸಂವಹನ ಕಲೆ. ಜನರೊಂದಿಗೆ ಬೇಗ ಬೆರೆಯುವುದು, ಹೊಸ ವಿಷಯಗಳನ್ನು ಕಲಿಯುವುದು ಮತ್ತು ಮಾತಿನ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದು ಇವರ ವಿಶೇಷತೆ. ಬದಲಾವಣೆಗೆ ಬೇಗ ಹೊಂದಿಕೊಳ್ಳುವ ಗುಣವೂ ಇವರಲ್ಲಿದೆ.
ಕಟಕ (Cancer)
ಇವರ ಸೀಕ್ರೆಟ್ ಪವರ್ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ. ಯಾರಿಗೂ ಹೇಳದೆ ಇರುವ ನೋವನ್ನೂ ಕೆಲವೊಮ್ಮೆ ಕಟಕ ರಾಶಿಯವರು ಗುರುತಿಸಬಲ್ಲರು ಎಂದು ಜ್ಯೋತಿಷ್ಯ ಹೇಳುತ್ತದೆ. ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸ್ವಭಾವ ಇವರದ್ದು.
ಸಿಂಹ (Leo)
ಇವರ ಸೀಕ್ರೆಟ್ ಶಕ್ತಿ ಪ್ರೇರಣೆ ನೀಡುವ ಸಾಮರ್ಥ್ಯ. ಸಿಂಹ ರಾಶಿಯವರು ಇರುವ ಜಾಗದಲ್ಲಿ ಆತ್ಮವಿಶ್ವಾಸದ ವಾತಾವರಣ ನಿರ್ಮಾಣವಾಗುತ್ತದೆ. ನಾಯಕತ್ವ ವಹಿಸುವುದು, ಇತರರನ್ನು ಉತ್ತೇಜಿಸುವುದು ಮತ್ತು ಜವಾಬ್ದಾರಿ ಹೊರುವುದು ಇವರ ಸಹಜ ಗುಣ.
ಕನ್ಯಾ (Virgo)
ಇವರು ಸಣ್ಣ ತಪ್ಪನ್ನೂ ಗುರುತಿಸುವ ಶಾರ್ಪ್ ಕಣ್ಣುಗಳನ್ನು ಹೊಂದಿರುತ್ತಾರೆ. ಇತರರು ಗಮನಿಸದ ವಿವರಗಳನ್ನು ಕನ್ಯಾ ರಾಶಿಯವರು ಗಮನಿಸುತ್ತಾರೆ. ಯೋಜನೆ ರೂಪಿಸುವುದು, ವ್ಯವಸ್ಥಿತವಾಗಿ ಕೆಲಸ ಮಾಡುವುದು ಮತ್ತು ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಹುಡುಕುವುದು ಇವರ ಬಲ.
ತುಲಾ (Libra)
ಇವರ ರಹಸ್ಯ ಶಕ್ತಿ ಏನೆಂದರೆ ಸಮತೋಲನ ಕಾಪಾಡುವ ಕಲೆ. ಎರಡು ಜನರ ನಡುವೆ ಭಿನ್ನಾಭಿಪ್ರಾಯ ಬಂದಾಗ ಮಧ್ಯಸ್ಥಿಕೆ ವಹಿಸಿ ಪರಿಹಾರ ಕಂಡುಕೊಳ್ಳುವ ಗುಣ ತುಲಾ ರಾಶಿಯವರಲ್ಲಿದೆ. ನ್ಯಾಯ ಮತ್ತು ಸಮಾನತೆಯ ಭಾವನೆ ಇವರ ನಿರ್ಧಾರಗಳಲ್ಲಿ ಕಾಣಿಸುತ್ತದೆ.
ವೃಶ್ಚಿಕ (Scorpio)
ಇವರ ಒಳಗಿನ ಶಕ್ತಿಯೆಂದರೆ ಅಚಲ ಮನೋಬಲ. ಕಷ್ಟಗಳು ಬಂದರೂ ಸುಲಭವಾಗಿ ಸೋಲೊಪ್ಪದ ಮನಸ್ಥೈರ್ಯ ವೃಶ್ಚಿಕ ರಾಶಿಯವರ ವಿಶೇಷತೆ. ಒಂದು ಗುರಿ ಇಟ್ಟರೆ ಅದನ್ನು ಸಾಧಿಸಲು ಸಂಪೂರ್ಣ ಶ್ರಮ ಹಾಕುತ್ತಾರೆ.
ಧನು (Sagittarius)
ಇವರ ಸೀಕ್ರೆಟ್ ಸೂಪರ್‌ಪವರ್ ಹೊಸ ದಾರಿಗಳನ್ನು ಹುಡುಕುವ ಮನಸ್ಸು. ಕಲಿಯುವುದು, ಪ್ರವಾಸ ಮಾಡುವುದು, ಹೊಸ ಅನುಭವಗಳನ್ನು ಸ್ವೀಕರಿಸುವುದು ಧನು ರಾಶಿಯವರ ಸ್ವಭಾವ. ಸವಾಲುಗಳನ್ನು ಅವಕಾಶವಾಗಿ ನೋಡುವ ದೃಷ್ಟಿಕೋನ ಇವರನ್ನು ವಿಭಿನ್ನರನ್ನಾಗಿ ಮಾಡುತ್ತದೆ.
ಮಕರ (Capricorn)
ಇವರು ಗುರಿಯತ್ತ ನಿರಂತರ ಪ್ರಯಾಣ ಮಾಡುವವರು. ಮಕರ ರಾಶಿಯವರು ತಕ್ಷಣದ ಯಶಸ್ಸಿಗಿಂತ ದೀರ್ಘಕಾಲದ ಸಾಧನೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮ ಇವರ ಪ್ರಮುಖ ಶಕ್ತಿಗಳು.
ಕುಂಭ (Aquarius)
ಇವರು ಯಾವಾಗಲೂ ಹೊಸ ರೀತಿಯಲ್ಲಿ ಯೋಚಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಎಲ್ಲರೂ ಒಂದೇ ದಾರಿಯಲ್ಲಿ ಯೋಚಿಸುತ್ತಿದ್ದರೆ, ಕುಂಭ ರಾಶಿಯವರು ಹೊಸ ದಾರಿಯನ್ನು ಹುಡುಕುತ್ತಾರೆ. ವಿಭಿನ್ನ ಆಲೋಚನೆಗಳು, ಹೊಸ ತಂತ್ರಜ್ಞಾನ ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ.
ಮೀನ (Pisces)
ಇವರ ಸೀಕ್ರೆಟ್ ಸೂಪರ್‌ಪವರ್ ವಿಶಿಷ್ಟ ಕಲ್ಪನೆ ಮತ್ತು ಸಹಾನುಭೂತಿ. ಮೀನ ರಾಶಿಯವರು ಸೃಜನಶೀಲತೆಯಲ್ಲಿ ಮುಂದಿರುತ್ತಾರೆ ಎಂದು ಜ್ಯೋತಿಷ್ಯ ಹೇಳುತ್ತದೆ. ಸಂಗೀತ, ಸಾಹಿತ್ಯ, ಚಿತ್ರಕಲೆ ಅಥವಾ ಸೃಜನಾತ್ಮಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ಈ ರಾಶಿಯಲ್ಲಿ ಹೆಚ್ಚಿರಬಹುದು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗುಣವೂ ಇವರಲ್ಲಿದೆ.


Click it and Unblock the Notifications
