Weekly Horoscope: ಈ ರಾಶಿಗಳಿಗೆ ಗುರು ಬಲದಿಂದ ಸುವರ್ಣ ಕಾಲ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ಏಕಾದಶಿಯಿಂದ ಬಹುಳ ತದಿಗೆಯವರೆಗೆ.
ಈ ವಾರದ ಚಂದ್ರನ ಸಂಚಾರ ಹಸ್ತಾ ನಕ್ಷತ್ರದಿಂದ ಮೂಲಾದವರೆಗೆ.
19/05/2024-25/05/2024 ವಾರ ಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮೇ 19ರಿಂದ ಮೇ 25ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ
ಗುರುಬಲ ಇದ್ದು ಎಲ್ಲ ಕೆಲಸಗಳೂ ಸಲೀಸಾಗಿ ನಡೆಯುತ್ತದೆ. ಮನಸ್ಸಿಗೆ ಸಂತೋಷ, ಆನಂದ ವಿಹಾರ, ಸುಖಭೋಜನ ಎಲ್ಲವೂ ಇದೆ. ನಿಮ್ಮ ಮಾತಿಗೆ ಬೆಲೆ ಇದೆ. ಆತ್ಮೀಯ ವರ್ಗದಲ್ಲಿ ನಿಮ್ಮ ಮಾತು ನಡೆಯುತ್ತದೆ. ಸರ್ಕಾರಿ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಶನಿ ಲಾಭ ಸ್ಥಾನದಲ್ಲಿ ಇದ್ದು ಯಥೇಚ್ಛವಾಗಿ ಧನಲಾಭ ಕೊಡುತ್ತಾನೆ.

ವೃಷಭ ರಾಶಿಯ ವಾರ ಭವಿಷ್ಯ
ಗುರು ನಿಮ್ಮ ರಾಶಿಯಲ್ಲೇ ಇರುವುದು ಒತ್ತಡಕ್ಕೆ ಕಾರಣವಾದರೂ ಶುಕ್ರನೂ ನಿಮ್ಮ ರಾಶಿಯಲ್ಲಿ ಇರುವುದು ತುಂಬಾ ಶುಭಫಲಗಳನ್ನು ನೀಡುತ್ತದೆ. ಶುಭಕಾರ್ಯಕ್ಕೆ ಹಣ ಖರ್ಚಾಗುತ್ತದೆ. ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುತ್ತೀರಿ. ರಾಹು ಲಾಭಸ್ಥಾನದಲ್ಲಿ ಇದ್ದು ಧನಲಾಭ ಕೊಡುತ್ತಾನೆ.

ಮಿಥುನ ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲ ಸ್ವಲ್ಪ ಆರೋಗ್ಯ ಸಮಸ್ಯೆ ಆಗಬಹುದು ಜಾಗ್ರತೆಯಿಂದ ಇರಿ. ವೃಥಾ ಅಲೆದಾಟ, ದೈಹಿಕ ಶ್ರಮ ಇರುತ್ತದೆ. ನಿದ್ರಾಹೀನತೆ ಇರುತ್ತದೆ. ತಾಯಿಗೆ ಒತ್ತಡ ಇರುತ್ತದೆ. ಲಾಭಸ್ಥಾನದಲ್ಲಿ ಬುಧ ಇರುವುದು ನಿಮಗೆ ಸ್ವಲ್ಪಮಟ್ಟಿಗೆ ನಿರಾಳತೆಯನ್ನು ಕೊಡುತ್ತದೆ. ಧನಲಾಭ ಆಗುತ್ತದೆ.

ಕಟಕ ರಾಶಿಯ ವಾರ ಭವಿಷ್ಯ
ಗುರುಬಲ ಇದೆ. ಭಯಬೇಡ. ಏನೇ ತೊಂದರೆ ಇದ್ದರೂ ಜಯಿಸಿ ಪಾರಾಗುತ್ತೀರಿ. ಪ್ರತಿಕ್ಷಣವೂ ಗುರುವಿನ ಅನುಗ್ರಹ ನಿಮ್ಮನ್ನು ಕಾಪಾಡುತ್ತದೆ. ತೀರ್ಥಯಾತ್ರೆ, ವಿಹಾರ, ಪ್ರವಾಸ ಮೊದಲಾದ ಮನಸ್ಸಿಗೆ ಹಿತ ಕೊಡುವ ಸಂಗತಿಗಳು ಇವೆ. ಅರ್ಹರಿಗೆ ವಿವಾಹ ನಿಷ್ಕರ್ಷೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಶುಭ. ವಿದೇಶ ಪ್ರಯಾಣ ಯೋಗ ಇದೆ. ವೃತ್ತಿಯಲ್ಲಿ ಯಶಸ್ಸು ಇದೆ.

ಸಿಂಹ ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲದಿರುವುದು ಮಾನಸಿಕ ಕಿರಿಕಿರಿ ಮತ್ತು ಚಿಂತೆಗೆ ಕಾರಣವಾಗುತ್ತದೆ. ನಿಮ್ಮ ಹತ್ತಿರದವರಿಂದಲೇ ವಿರೋಧ ಅನುಭವಿಸುತ್ತೀರಿ. ಹಣಕಾಸಿನ ಏರುಪೇರು ಇರುತ್ತದೆ. ವೃತ್ತಿಯಲ್ಲಿ ಒತ್ತಡ ಮೇಲಧಿಕಾರಿಗಳ ಕಿರುಕುಳ ಇರುತ್ತದೆ. ತುಂಬಾ ಸಮಾಧಾನವಾಗಿ ಮುಂದುವರೆಯಿರಿ. ಯಾವುದೇ ತೀರ್ಮಾನ ಯೋಚಿಸಿ ತೆಗೆದುಕೊಳ್ಳಿ. ತ್ವರಿತ ತೀರ್ಮಾನ ಒಳ್ಳೆಯದಲ್ಲ.

ಕನ್ಯಾ ರಾಶಿಯ ವಾರ ಭವಿಷ್ಯ
ಶನಿಬಲ ಹಾಗೂ ಗುರುವಿನ ಅನುಗ್ರಹ ಉತ್ತಮವಾಗಿದೆ. ಅಂದುಕೊಂಡ ಕೆಲಸಗಳು ಸರಸರನೆ ನೆರವೇರುತ್ತದೆ. ಅಡೆತಡೆಗಳು ಮಾಯವಾಗುತ್ತದೆ. ಅರ್ಹರಿಗೆ ವಿವಾಹದ ಪ್ರಸ್ತಾಪ ಬರಲಿದೆ. ಹಣದ ಹರಿವು ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಶುಭವಿದೆ. ವಿದೇಶ ಪ್ರವಾಸ ಯೋಗ ಇದೆ. ಅನಾರೋಗ್ಯ ಇರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಇದೆ

ತುಲಾ ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲದ ನಿಮಗೆ ಈಗ ರಾಹುಬಲ ಮಾತ್ರವೇ ಇದೆ. ಹೋರಾಡುವ ಹುಮ್ಮಸ್ಸು ಪರಾಕ್ರಮವನ್ನು ರಾಹು ಕೊಡುತ್ತಾನೆ. ಪಂಚಮ ಶನಿ ಕೊಂಚ ಕಳವಳವನ್ನು ಕೊಡುತ್ತಾನೆ. ಹಣಕಾಸಿನ ಕೊರತೆ ಕಾಣುತ್ತದೆ. ಆದರೂ ರಾಹುಬಲದಿಂದ ಸಂಭಾಳಿಸಿಕೊಳ್ಳುತ್ತೀರಿ. ಆರೋಗ್ಯ ಜೋಪಾನ. ಯಾವುದಾದರೂ ಹಳೆಯ ಸಮಸ್ಯೆಗಳು ಈಗ ಉಲ್ಬಣಿಸಬಹುದು. ಎಂಟನೇ ಮನೆಯಲ್ಲಿ ಗುರು ಇದ್ದರೂ ನಿಮ್ಮ ರಾಶಿಯ ಅಧಿಪತಿ ಶುಕ್ರನೂ ಇರುತ್ತಾನೆ. ಆದ್ದರಿಂದ ಕೊಂಚ ನಿರಾಳತೆ ಲಭಿಸಲಿದೆ. ನಿಮಗೆ ಕೊಂಚ ಹಠದ ಸ್ವಭಾವ ಇದರಿಂದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ತಾಳ್ಮೆಯಿಂದ ಯೋಚಿಸಿ ಹಾಗೂ ಎಡಬಲ ನೋಡಿಕೊಂಡು ಮುಂದುವರೆಯಿರಿ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಕಳೆದ ವರ್ಷವೆಲ್ಲ ಗುರುಬಲ ಇಲ್ಲದೆ ಒದ್ದಾಡಿದ್ದೀರಿ. ಅನೇಕ ನೋವು ಅಪಮಾನಗಳನ್ನು ಸಂಕಟಗಳನ್ನು ಎದುರಿಸಿದ್ದೀರಿ. ಈಗ ಗುರುಬಲ ಇದೆ. ನಿಮ್ಮ ಕನಸಿಗಳೆಲ್ಲ ನನಸಾಗುವ ಸಮಯ. ನೆನೆಗುದಿಗೆ ಬಿದ್ದ ಕೆಲಸಗಳೆಲ್ಲ ಈಗ ಚುರುಕಾಗುತ್ತದೆ. ಐದನೇ ಮನೆಯಲ್ಲಿ ರಾಹುಕುಜ ಇರುವುದು ಮಕ್ಕಳಿಂದ ವಿರೋಧ ತೋರಿಸುತ್ತದೆ. ಮಕ್ಕಳೊಡನೆ ವಾದ ಜಗಳ ಬೇಡ. ನೀವು ಸಹನೆ ವಹಿಸಿದರೆ ಮುಂದೆ ಎಲ್ಲವೂ ತಾನೇತಾನಾಗಿ ಸರಿ ಹೋಗುತ್ತದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇಲ್ಲದಿರುವುದರಿಂದ ಆರೋಗ್ಯದ ಕಡೆ ತುಂಬ ಗಮನ ಕೊಡಬೇಕು. ಹಣಕಾಸಿನ ಮುಗ್ಗಟ್ಟು ಇಲ್ಲದಿದ್ದರೂ ಮಾನಸಿಕ ಕಿರಿಕಿರಿ ಇರುತ್ತದೆ. ಶನಿ ಮೂರನೇ ಮನೆಯಲ್ಲಿ ಬಲಿಷ್ಠನಾಗಿದ್ದು ಧನಲಾಭ ಕಾರ್ಯ ಸಿದ್ಧಿ ಕೊಡುತ್ತಾನೆ. ಆರನೇ ಮನೆಯಲ್ಲಿ ಸೂರ್ಯ ಇರುವುದು ಸ್ವಲ್ಪ ಮಟ್ಟಿಗೆ ಉತ್ತಮ ಫಲ. ಸರ್ಕಾರದಿಂದ ಕೆಲಸಗಳಾಗಬೇಕಿದ್ದರೆ ಸುಲಭ. ನಾಲ್ಕನೇ ಮನೆಯಲ್ಲಿ ರಾಹು ಇರುವುದು ಕೊಂಚ ನಿದ್ರಾಹೀನತೆ, ವೃಥಾ ಅಲೆದಾಟ ಇರುತ್ತದೆ. ತಾಯಿಯ ಆರೋಗ್ಯಕ್ಕೆ ಧಕ್ಕೆ.

ಮಕರ ರಾಶಿಯ ವಾರ ಭವಿಷ್ಯ
ಗುರುಬಲ ಇದೆ. ಮನಸ್ಸಿಗೆ ಖುಷಿ ಇದೆ. ನೀವು ನಿರೀಕ್ಷೆ ಮಾಡಿದ್ದ ಕೆಲಸಗಳು ಈಗ ನೆರವೇರುತ್ತದೆ. ಹಿಂದೆ ಮಾಡಿದ್ದ ಒಳ್ಳೆಯ ಕೆಲಸಗಳು ಈಗ ಫಲಕೊಡುತ್ತದೆ. ಹೊಸ ನೌಕರಿ, ವಿದೇಶ ಪ್ರಯಾಣ, ಉನ್ನತ ವ್ಯಾಸಂಗ ಎಲ್ಲವೂ ಇದೆ. ನಿಮ್ಮ ಮನಸ್ಸಿಗನುಗುಣವಾಗಿ ಸಂಗತಿಗಳು ನಡೆಯುತ್ತದೆ. ಅರ್ಹರಿಗೆ ವಿವಾಹ ಯೋಗ ಇದೆ. ಪದವಿ ಅಧಿಕಾರ ಪ್ರಾಪ್ತಿ ಇದೆ. ಆರೋಗ್ಯ ಸುಧಾರಿಸುತ್ತದೆ.

ಕುಂಭ ರಾಶಿಯ ವಾರ ಭವಿಷ್ಯ
ನೀವು ಮೊದಲು ಎಚ್ಚರಿಕೆ ವಹಿಸಬೇಕಾದ್ದು ಆರೋಗ್ಯ. ಗುರು ನಾಲ್ಕನೇ ಮನೆಯಲ್ಲಿ ಇರುವುದು ಆರೋಗ್ಯಕ್ಕೆ ಏರುಪೇರು ಇದೆ. ಇನ್ನು ಮೂರರಲ್ಲಿ ಬುಧ ನಾಲ್ಕರಲ್ಲಿ ಶುಕ್ರ ಶುಭಫಲ ಕೊಡುತ್ತಾರೆ. ಕೊಂಚ ಮಟ್ಟಿಗೆ ರಿಲೀಫ್. ಸಾಡೆಸಾತಿಯ ಪ್ರಭಾವ ಇರುವುದರಿಂದ ಹಣಕಾಸಿನ ಖರ್ಚು ಹೆಚ್ಚಾಗಿಯೇ ಇರುತ್ತದೆ. ಎರಡನೇ ಮನೆಯಲ್ಲಿ ರಾಹು ಕುಟುಂಬದ ಶಾಂತಿ ನೆಮ್ಮದಿ ಗೆ ಕಿರಿಕಿರಿ ಉಂಟುಮಾಡುತ್ತಾನೆ. ಮನೆದೇವರ ದರ್ಶನ ಮಾಡಿ ಸಾಧು ಸಂತರಿಗೆ ದಾನಧರ್ಮ ಮಾಡಿ.

ಮೀನ ರಾಶಿಯ ವಾರ ಭವಿಷ್ಯ
ನಿಮಗೂ ಕುಂಭರಾಶಿಗೂ ಹೆಚ್ಚು ವ್ಯತ್ಯಾಸ ಇಲ್ಲ. ನಿಮಗೂ ಹಣದ ಅಡಚಣೆ, ಮಾನಸಿಕ ಅಶಾಂತಿ ಬಂಧುಗಳಲ್ಲಿ ವಿರೋಧ ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ. ಕೊಂಚ ಸಂಭಾಳಿಸಿಕೊಂಡು ಹೋಗಬೇಕು. ವೃತ್ತಿಯಲ್ಲಿ ಕೂಡ ಏರಿಳಿತಗಳು ಇವೆ. ಆದಷ್ಟು ಎಲ್ಲರೊಂದಿಗೆ ಸಮಾಧಾನದಿಂದ ವ್ಯವಹರಿಸಿ. ಎರಡನೇ ಮನೆಯಲ್ಲಿ ಬುಧ ಅಲ್ಪಮಟ್ಟದ ಧನಸಹಾಯ ನೀಡುತ್ತಾನೆ. ಮೂರನೇ ಮನೆಯ ಸೂರ್ಯ ಕೊಂಚ ಶಕ್ತಿಪರಾಕ್ರಮ ಕೊಡುತ್ತಾನೆ. ಬುಧ ಸೂರ್ಯ ಇಬ್ಬರೂ ಈಗ ನಿಮಗೆ ಅನುಕೂಲರು.












Click it and Unblock the Notifications