Weekly Horoscope: ಈ ವಾರ ಅದೃಷ್ಟ ದೇವಿ ಕೈ ಹಿಡಿಯುವ ರಾಶಿಗಳಿವು?

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರಮಾಸದ ಚೈತ್ರ ಬಹುಳ ದ್ವಾದಶಿಯಿಂದ ವೈಶಾಖ ಶುದ್ಧ ಪಂಚಮಿಯವರೆಗೆ.‌

ಈ ವಾರದ ಚಂದ್ರನ ಸಂಚಾರ ಉತ್ತರಾಭಾದ್ರದಿಂದ ಪುನರ್ವಸು ನಕ್ಷತ್ರದವರೆಗೆ.

05/05/2024-11/05/2024 ವಾರ ಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮೇ 05ರಿಂದ ಮೇ 11 ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

Weekly Horoscope In Kannada From May 05 To May 11 2024

ಮೇಷ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಬಂದಿದೆ. ಇನ್ನು ಒಂದು ವರ್ಷ ನಿಮಗೆ ಅನೇಕ ವಿಷಯಗಳಲ್ಲಿ ಲಾಭ ಇದೆ. ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.‌ ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿಯಲ್ಲಿ ಬಡ್ತಿ ಇದೆ. ಸಾಮಾಜಿಕ ಸ್ಥಾನಮಾನ ಗೌರವ ಸಿಗುತ್ತದೆ. ಉನ್ನತ ಅಧಿಕಾರ ಪ್ರಾಪ್ತಿ‌ಇದೆ. ಕೌಟುಂಬಿಕ ಸುಖಶಾಂತಿ ಇದೆ.

Weekly Horoscope In Kannada From May 05 To May 11 2024

ವೃಷಭ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರುಬಲ ಇಲ್ಲ. ನಿಮ್ಮ ರಾಶಿಯಲ್ಲೇ ಗುರು ಇರುವುದು ನಿಮಗೆ ಕೊಂಚ ಒತ್ತಡಗಳನ್ನು ಕೊಡುತ್ತದೆ. ರಾಹುಬಲ ಇರುವುದರಿಂದ ಅಷ್ಟೇನೂ ತೊಂದರೆ ಇಲ್ಲ. ಹಣದ ಹರಿವು ಉತ್ತಮವಾಗಿದೆ. ಶನಿ ಹತ್ತನೇ ಮನೆಯಲ್ಲಿ ಇರುವುದು ವೃತ್ತಿಭದ್ರತೆಯನ್ನು ಕೊಡುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಇದೆ. ಪ್ರವಾಸ ಹೋಗುವ ಅವಕಾಶ ಇದೆ.

Weekly Horoscope In Kannada From May 05 To May 11 2024

ಮಿಥುನ ರಾಶಿಯ ವಾರ ಭವಿಷ್ಯ

ಗುರು 12ನೇ ಮನೆಗೆ ಬಂದಿದ್ದಾನೆ. ನಿಮ್ಮ ವೃತ್ತಿ ಸ್ಥಾನಾಧಿಪತಿ ಗುರು 12 ನೇ ಮನೆಗೆ ಬಂದಿರುವುದರಿಂದ ವೃತ್ತಿಯಲ್ಲಿ ಒಂದು ಬದಲಾವಣೆ ಇದೆ. ನಾಲ್ಕರಲ್ಲಿ ಕೇತು ಇರುವುದು ತಾಯಿಗೆ ಒತ್ತಡ ತೋರಿಸುತ್ತದೆ. ಹತ್ತರಲ್ಲಿ ರಾಹು ಇರುವುದು ರಾಸಾಯನಿಕ/ ವೈದ್ಯ ವೃತ್ತಿಯವರಿಗೆ ಯಶಸ್ಸು ಕೊಡುತ್ತದೆ. ಈಗ ಮಧ್ಯಮ ಜೀವನ.‌ ಕೆಲವು ಕೆಲಸಗಳು ಇದ್ದಲ್ಲಿ ಇರುತ್ತದೆ ಮುಂದೆ ಸಾಗುವುದಿಲ್ಲ. ಬೇಜಾರಾಗಬೇಡಿ.

Weekly Horoscope In Kannada From May 05 To May 11 2024

ಕಟಕ ರಾಶಿಯ ವಾರ ಭವಿಷ್ಯ

ಇಷ್ಟು ದಿನ ಗುರುಬಲ ಇಲ್ಲದೇ ಬಹಳ ತಾಪತ್ರಯ ಅನುಭವಿಸಿದ್ದೀರಿ. ಈಗ ಗುರುಬಲ ಬಂದಿದೆ. ಸಾಲಗಳಲ್ಲಿ ಸಿಕ್ಕಿರುತ್ತೀರಿ ಈಗ ಸಾಲ ತೀರಿಸುವ ಅವಕಾಶ ಇದೆ. ಮೂರನೇ ಮನೆಯಲ್ಲಿ ಕೇತು ಹಾಗೂ ಲಾಭದಲ್ಲಿ ಗುರು ಇಬ್ಬರೂ ನಿಮಗೆ ಹಣದ ಹರಿವನ್ನು ಉತ್ತಮ ಪಡಿಸುತ್ತಾರೆ. ಅರ್ಹರಿಗೆ ವಿವಾಹಯೋಗ ಇದೆ. ಕೆಲಸದಲ್ಲಿ ಬಡ್ತಿ‌ಇದೆ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ.

Weekly Horoscope In Kannada From May 05 To May 11 2024

ಸಿಂಹ ರಾಶಿಯ ವಾರ ಭವಿಷ್ಯ

ನಿಮಗೆ ವೈರುಧ್ಯಗಳು ಈಗಾಗಲೇ ಅನುಭವಕ್ಕೆ ಬಂದಿರಬಹುದು. ನೀವು ಅಂದುಕೊಂದ್ದೇ ಒಂದು ಆಗುವುದೇ ಒಂದು. ಮಾಡ ಹೊರಟ ಕೆಲಸ ಅದು ಮತ್ತೇನೋ ಎಡವಟ್ಟಾಗುವುದು. ಹಣಕಾಸಿನ ಖರ್ಚು ಬಹಳ ಇರುತ್ತದೆ. ವೃತ್ತಿಯಲ್ಲಿ ದಿಢೀರನೆ ಸಮಸ್ಯೆಗಳು ಉದ್ಭವ ಆಗುತ್ತದೆ. ಕೌಟುಂಬಿಕವಾಗಿಯೂ ಅಶಾಂತಿ.‌ ಮನೆಯವರೇ ನಿಮ್ಮನ್ನು ನಂಬದ ಪರಿಸ್ಥಿತಿ ಏರ್ಪಡುತ್ತದೆ. ದೌರ್ಬಲ್ಯಗಳಿಗೆ ವಶರಾಗಬೇಡಿ.

Weekly Horoscope In Kannada From May 05 To May 11 2024

ಕನ್ಯಾ ರಾಶಿಯ ವಾರ ಭವಿಷ್ಯ

ಆಕಾಶವೇ ಈಗ ನಿಮ್ಮ ಕೈಯಲ್ಲಿದೆ. Sky is the limit ಎನ್ನುವಂತೆ ನಿಮಗೆ ಈಗ ಎದುರು ತಿರುಗುವ ಯಾವ ಸಂದರ್ಭ ಇಲ್ಲ. ಕೆಲಸ ಬದಲಿಸಬೇಕೆಂದರೆ ಈಗ ಸಕಾಲ. ವಿವಾಹಕ್ಕೂ ಈಗ ಸಕಾಲ. ಒಳ್ಳೆಯ ಸಂಗತಿಗಳು ಈಗಾಗಲೇ ನಿಮ್ಮ ಅನುಭವಕ್ಕೆ ಬಂದಿರುತ್ತದೆ. ಹಣಕಾಸಿನ ಹರಿವು ಬಹಳ ಉತ್ತಮವಾಗಿದೆ. ಆರೋಗ್ಯ ಚೆನ್ನಾಗಿದೆ. ಶತ್ರುಗಳ ಕಾಟ ಇಲ್ಲ. ನಿಮ್ಮ ಮಾತಿಗೆ ಬೆಲೆ ಇದೆ. ಗೌರವ ಮರ್ಯಾದೆಗಳು ದೊರೆಯುವ ಸಮಯ.

Weekly Horoscope In Kannada From May 05 To May 11 2024

ತುಲಾ ರಾಶಿಯ ವಾರ ಭವಿಷ್ಯ

ಈಗ ಗುರು ಅಷ್ಠಮದಲ್ಲಿ ಇದ್ದಾನೆ. ಪಂಚಮ‌ಶನಿ ಬೇರೆ ಇದೆ. ಆರೋಗ್ಯ ಜೋಪಾನ. ನಡೆಯುವಾಗ ಎಡವುವುದು ಎಡವಿದ್ದೇ ನೆಪವಾಗಿ ಕಾಲಿಗೆ ಗಾಯ, ಗಾಡಿ ಓಡಿಸುವಾಗ ಬೀಳುವುದು, ಮಹಡಿ ಮೆಟ್ಡಿಲು ಹತ್ತಿಳಿಯುವಾಗ ಕಾಲು ಉಳುಕುವುದು ಹೀಗೆಲ್ಲ ಇರುತ್ತದೆ. ಜಾಗ್ರತೆಯಿಂದ ಇರಿ.‌ ರಾಹುಬಲ ಇರುವುದರಿಂದ ಹೆಚ್ಚಿನ ಅಪಾಯ ಇಲ್ಲವಾದರೂ ನಿಮ್ಮ‌ಎಚ್ಚರಿಕೆಯಲ್ಲಿ ಇದ್ದರೆ ಒಳ್ಳೆಯದು. ‌ಹಣದ ಹರಿವು ಉತ್ತಮವಾಗಿದೆ. ‌ಬಂಧುಗಳಲ್ಲಿ ಮನಸ್ತಾಪ, ವೃಥಾ ಮನಸ್ಸಿಗೆ ಕಿರಿಕಿರಿ, ಅವಮಾನ ಮುಂತಾದವು ಇರುತ್ತದೆ. ಯಾರೊಂದಿಗೂ ಅನಗತ್ಯ ವಾದ ವಿವಾದ ಬೇಡ.

Weekly Horoscope In Kannada From May 05 To May 11 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಮನಸ್ಸಿಗೆ ನೆಮ್ಮದಿ ಇಲ್ಲದೇ ಕಳೆದ ವರ್ಷದಿಂದ ಕಷ್ಟ ಪಟ್ಡಿದ್ದೀರಿ. ಈಗ ಶುಭಕಾಲ ಬಂದಿದೆ. ಇನ್ನೆಲ್ಲಾ ಒಳ್ಳೆಯ ಸಂಗತಿಗಳೇ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿಇದೆ. ಹೊಸ ನೌಕರಿ ಸಿಗುತ್ತದೆ. ಮನೆಯಲ್ಲಿ ಸಂತೋಷ ಸಂಭ್ರಮಗಳ ಉತ್ಸವ.‌ ಬಂಧು ಬಳಗದೊಂದಿಗೆ ಭೇಟಿ ಸಂಭ್ರಮ ಎಲ್ಲವೂ ಇದೆ. ನೀವು ಯೋಜನೆ ರೂಪಿಸಿದ ಕೆಲಸಗಳು ಈಗ ಮುಂದುವರೆಯುತ್ತದೆ. ಯಾವುದೇ ಅಡ್ಡಿ ಆತಂಕ ಇಲ್ಲದೆ ಕೆಲಸ ಮುಂದೆ ಸಾಗುತ್ತದೆ. ಒಡವೆ ವಸ್ತ್ರ ಖರೀದಿ ಯೋಗ ಇದೆ. ಹೊಸ ವಾಹನ ಕೊಳ್ಳುವಿರಿ.

Weekly Horoscope In Kannada From May 05 To May 11 2024

ಧನಸ್ಸು ರಾಶಿಯ ವಾರ ಭವಿಷ್ಯ

ಈಗ ಗುರುಬಲ ಕಡಿಮೆಯಾಯಿತು ನಿಮಗೆ. ಗುರು ಆರನೇ ಮನೆ ಪ್ರವೇಶ ಮಾನಸಿಕ ಕಿರುಕುಳಕ್ಕೆ ಕಾರಣವಾಗುತ್ತದೆ. ನಿಮ್ಮ ಸಮೀಪವರ್ತಿಗಳಿಂದಲೇ ನಿಮಗೆ ಮುಖಭಂಗ ಆಗಬಹುದು. ಜಾಗ್ರತೆಯಿಂದ ಇರಿ. ಆದಷ್ಟು ನಿಮ್ಮ ಗುರುಗಳ ಪ್ರಾರ್ಥನೆ ಮಾಡಿ ಅನುಗ್ರಹ ಪಡೆದುಕೊಳ್ಳಿ.‌ ಹಣಕಾಸಿಗೆ ತೊಂದರೆ ಆಗದಿದ್ದರೂ ಕೊಂಚ ಮುಗ್ಗರಿಸುವಂತೆ ಆಗುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದು ಕೂಡ ಸುಖಸಂತೋಷಕ್ಕೆ ಅಡ್ಡಿ. ತಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಅಥವಾ ನೀವು ತಾಯಿಯೊಂದಿಗೆ ಸಂಘರ್ಷ ಮಾಡಿಕೊಳ್ಳಬಹುದು.

Weekly Horoscope In Kannada From May 05 To May 11 2024

ಮಕರ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಅದೃಷ್ಟವೋ ಅದೃಷ್ಟ. ಭಾಗ್ಯಗಳ ಬಾಗಿಲು ತೆರೆಯುವಂತ ಸಮಯ. ಬಹಳ ಒಳ್ಳೆಯ ಕಾಲ. ಏನಾದರೂ ಶುಭ ಸುದ್ದಿ ಕಂಡುಬರುತ್ತದೆ. ಒಂದೇನು ಹತ್ತಾರು ಶುಭಸುದ್ದಿಗಳನ್ನು ಬರಮಾಡಿಕೊಳ್ಳುವಿರಿ. ಸಾಡೆಸಾತಿ ಶನಿ ಪ್ರಭಾವದಿಂದ ಕಂಗೆಟ್ಟಿದ್ದ ನಿಮಗೆ ಎಲ್ಲ ಸಂಕಷ್ಟಗಳೂ ಕಳೆದು ಈಗ ಜೀವನದಲ್ಲಿ ಹರ್ಷ ಸಂಭ್ರಮ ಉಕ್ಕುತ್ತದೆ. ಒಂದು ಭದ್ರವಾದ ನೆಲೆ ಸಿಗುತ್ತದೆ. ಸೂರ್ಯನಂತೆ ಪ್ರಜ್ವಲಿಸುತ್ತೀರಿ. ನಿಮ್ಮ ದಾರಿ ಇನ್ನು ಹೂವ ಹಾಸಿಗೆಯಾಗಲಿದೆ.

Weekly Horoscope In Kannada From May 05 To May 11 2024

ಕುಂಭ ರಾಶಿಯ ವಾರ ಭವಿಷ್ಯ

ಕೊಂಚ ಸಂಕಷ್ಟದ ಸಮಯ. ನಾಲ್ಕನೇ ಮನೆಯ ಗುರು ಪದವಿ ಭ್ರಷ್ಟತೆಯನ್ನೂ ಮಾನಸಿಕ ಕಿರುಕುಳವನ್ನು ಕೊಡುತ್ತಾನೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸುತ್ತದೆ. ಹೊಸದಾಗಿ ಸಮಸ್ಯೆಗಳು ಆಗಬಹುದು ಅಥವಾ ಇರುವ ಸಮಸ್ಯೆ ಉಲ್ಬಣವಾಗಬಹುದು. ರಾಜಕೀಯ ನಾಯಕರಿಗೆ ಬಹಳ ಏರಿಳಿತಗಳು ಇವೆ. ಅವಮಾನ‌ಗಳಾಗಬಹುದು.‌ ನಿಮ್ಮವರಿಂದಲೇ ನಿಮಗೆ ತೊಂದರೆಗಳು ಎದುರಾಗಬಹುದು. ಹಣದ ಖರ್ಚೂ ಇದೆ. ಜಾಗ್ರತೆಯಿಂದ ಸಂಭಾಳಿಸಿಕೊಳ್ಳಿ. ತಪ್ಪು ಎನಿಸಿದ್ದು ಮಾಡಲು ಹೋಗಬೇಡಿ.‌ ಆದಷ್ಟು ನಡೆನುಡಿಯಲ್ಲಿ ಪ್ರಾಮಾಣಿಕತೆ ಇರಲಿ.

Weekly Horoscope In Kannada From May 05 To May 11 2024

ಮೀನ ರಾಶಿಯ ವಾರ ಭವಿಷ್ಯ

ಕುಂಭರಾಶಿಗಿಂತ ಭಿನ್ನವೇನಲ್ಲ ನಿಮ್ಮ ಪರಿಸ್ಥಿತಿ. ‌ನಿಮಗೂ ಕಷ್ಟಕಾಲವೇ.‌ ನೀವು ಊಹಿಸದೇ ಇದ್ದ ಸಂಕಟಗಳು ಎದುರಾಗುತ್ತದೆ. ಬಂಧುಗಳ ನಡುವೆ ಕೆಟ್ಟ ಹೆಸರು ಅವಮಾನ‌ ಮುಂತಾದವನ್ನು ಎದುರಿಸಬೇಕಾಗುತ್ತದೆ. ಹಣದ ಹರಿವು ಕ್ಷೀಣವಾಗಿದೆ. ರಾಜಕೀಯ ನಾಯಕರಿಗೆ ಪದವಿ ಕಳೆದುಕೊಳ್ಳುವ ಯೋಗ. ಆದಷ್ಟು ಜಾಗ್ರತೆಯಿಂದ ಮುಂದಡಿ ಇಡಿ.‌ ಆರೋಗ್ಯ ಜೋಪಾನ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+