Weekly Horoscope 2025: ಮಾರ್ಚ್.16ರಿಂದ ಮಾ.23ರವರೆಗೆ ಅದ್ಭುತ ರಹಸ್ಯಗಳು ನಡೆಯುತ್ತೆ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಫಾಲ್ಗುಣ ಬಹುಳ ಬಿದಿಗೆಯಿಂದ ನವಮಿಯವರೆಗೆ ಅಂದರೆ 16.03.25ರಿಂದ 23.03.25ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಈ ವಾರದ ಚಂದ್ರನ ಸಂಚಾರ ಹಸ್ತಾ ನಕ್ಷತ್ರದಿಂದ ಪೂರ್ವಾಷಾಢದವರೆಗೆ ಇರುತ್ತದೆ.

ಮೇಷರಾಶಿ:
ಶುಕ್ರ, ರಾಹು, ಸೂರ್ಯ, ಬುಧ 12 ನೇ ಮನೆಯಲ್ಲಿ. ಹಣಕಾಸಿನ ಒಳಹರಿವು ಇದ್ದರೂ ಖರ್ಚುಗಳು ಬೇಕಾದಷ್ಡು ಬರುತ್ತದೆ. ದಿಢೀರ್ ನೆಂಟರ ಆಗಮನ ಖರ್ಚಿಗೆ ದಾರಿ. ಖರ್ಚಾದರೂ ಮನಸ್ಸು ಮನಸ್ಸು ಏಕತಾನತೆಯಿಂದ ಉಲ್ಲಾಸಗೊಳ್ಳುತ್ತದೆ. ಮೂರನೇ ಮನೆಯಲ್ಲಿ ಕುಜ ಪರಾಕ್ರಮವನ್ನು ಕೊಡುತ್ತಾನೆ. ಯಾವುದಕ್ಕೂ ಅಂಜುವುದಿಲ್ಲ. ಬಂದದೆಲ್ಲ ಬರಲಿ ಎಂದು ಧೈರ್ಯವಾಗಿ ಎದುರಿಸುತ್ತೀರಿ. ಆರರಲ್ಲಿ ಕೇತು ಎರಡನೇ ಮನೆಯಲ್ಲಿ ಗುರು ನಿಮಗೆ ಬೆಂಬಲವಾಗಿಇದ್ದಾರೆ.

ವೃಷಭರಾಶಿ:
ಲಾಭಸ್ಥಾನದಲ್ಲಿ ಶುಕ್ರ, ರಾಹು, ಸೂರ್ಯ, ಬುಧ ಸೇರಿಒಂದು ತಾತ್ಕಾಲಿಕ ರಾಜಯೋಗ ಆಗಿದೆ. ಇದರಿಂದ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಒತ್ತಡಗಳು ಇವೆ. ಸಂಘ ಸಂಭಾಳಿಸಿಕೊಳ್ಳಿ. ವಾರದ ಕೊನೆಯ ದಿನಗಳಲ್ಲಿ ಗಜಕೇಸರಿ ಯೋಗವಾಗಿ ಇನ್ನಷ್ಟು ಉತ್ತಮಫಲಗಳು ದೊರೆಯುತ್ತದೆ.

ಮಿಥುನರಾಶಿ:
ಹತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ. 12 ನೇ ಮನೆಯಲ್ಲಿ ಗುರು ಅಷ್ಟು ಶುಭಕಾರಕನಲ್ಲ. ಒತ್ತಡಗಳು, ಹಣಕಾಸಿನ ಖರ್ಚು, ನಿಂದೆ, ಅಪಾದನೆಗಳೂ ಬರುತ್ತದೆ. ಧೈರ್ಯವಾಗಿ ಇರಿ. ಎಲ್ಲವೂ ಕಾಲಕ್ರಮೇಣ ಹಗುರವಾಗಿ ಹಾರಿಹೋಗುತ್ತದೆ.

ಕಟಕರಾಶಿ:
ಹನ್ನೊಂದನೇ ಮನೆಯಲ್ಲಿ ಗುರು ತುಂಬಾ ಶುಭಫಲಗಳನ್ನು ಕೊಡುತ್ತಾನೆ. ಅಷ್ಠಮಶನಿಯ ಪ್ರಭಾವವೂ ಕಡಿಮೆಯಾಗಿದೆ. ಶನಿಶಾಂತಿ ಮಾಡಿಸಿ ಅಷ್ಠಮಶನಿಯಿಂದ ಪೂರ್ತಿ ಬಿಡುಗಡೆ ಪಡೆಯಿರಿ. ವಾರದ ಮಧ್ಯದಲ್ಲಿ ಏನೋ ಒಂದು ಒಳ್ಳೆಯ ಬದಲಾವಣೆ ನಡೆಯುತ್ತದೆ. ಇದು ನಿಮಗೆ ಅಭಿವೃದ್ಧಿ ಗೆ ಸೂಚಕವಾಗಿರುತ್ತದೆ. ನಿಮಗೆ ಉತ್ಸಾಹ ಕೊಡುತ್ತದೆ.

ಸಿಂಹರಾಶಿ:
ಗುರುಬಲ ಇಲ್ಲದ ನಿಮಗೆ ಕೊಂಚ ಇಕ್ಕಟ್ಟುಗಳು ಎದುರಾಗಬಹುದು. ಸರಾಗ ಬೆಳವಣಿಗೆಗೆ ಗೆ ಅಡ್ಡಿ. ಸ್ವಲ್ಪ ದಿನ ತಾಳಿಕೊಳ್ಳಿ. ಮುಂದೆ ಗುರುಬಲ ಬರುತ್ತದೆ. ಈಗ ಎಂಟನೇ ಮನೆಯಲ್ಲಿ ರಾಹುಸೂರ್ಯ ಶುಕ್ರ ಬುಧ ಇದ್ದಾರೆ. ಕೊಂಚ ಕಠಿಣ ಪರಿಸ್ಥಿತಿಗಳು ಎದುರಾಗುತ್ತದೆ. ಧೈರ್ಯವಾಗಿ ಎದುರಿಸಿ. ಹನ್ನೊಂದನೇ ಮನೆಯಲ್ಲಿ ಇರುವ ಕುಜನಿಂದ ಭೂಮಿಲಾಭ ಇದೆ. ಬೆಂಕಿಗೆ, ಶಸ್ತ್ರಾಸ್ತ್ರ ಗಳಿಗೆ ಸಂಬಂಧ ಪಟ್ಟ ವ್ಯಾಪಾರಿಗಳಿಗೆ ಲಾಭ ಇದೆ.

ಕನ್ಯಾರಾಶಿ:
ಗುರು ಒಂಬತ್ತನೇ ಮನೆಯಲ್ಲಿ ಇದ್ದು ಸಕಲಭಾಗ್ಯಗಳನ್ನೂ ಕೊಡುತ್ತಾನೆ. ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳಿದ್ದು ನೇರವಾಗಿ ನಿಮ್ಮ ರಾಶಿಯನ್ನು ನೋಡುವುದರಿಂದ ವಿಭಿನ್ನ ಫಲಗಳು ದೊರೆಯಲಿವೆ. ನಿಮ್ಮ ರಾಶಿಯಲ್ಲೇ ಕೇತು ಇದ್ದಾನೆ, ಹೊಟ್ಟೆಗೆ ಸಂಬಂಧ ಪಟ್ಟ, ಬ್ಯಾಕ್ಟೀರಿಯಾ ಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತದೆ. ಒಂಬತ್ತನೇ ಮನೆಯ ಗುರುವೊಬ್ಬನೇ ನಿಮಗೆ ಆಧಾರ. ಮುಂದೆ ರಾಹು ಆರನೇ ಮನೆಗೆ ಬಂದಾಗ ಒಳ್ಳೆಯ ಲಾಭ ಇದೆ.

ತುಲಾರಾಶಿ:
ಆರೋಗ್ಯ ಹಾಗೂ ಮನಃಶಾಂತಿ ಕಳೆದುಕೊಂಡು ಬಹಳ ಒದ್ದಾಡುತ್ತಿದ್ದೀರಿ. ನೌಕರಿಯಲ್ಲೂ ಕಷ್ಟ ಇದೆ. ಒತ್ತಡಗಳು ನಿಮ್ಮನ್ನು ಹೈರಾಣ ಮಾಡುತ್ತಿದೆ.ಭಯ ಬೇಡ. ಇನ್ನು ಕೆಲವೇ ದಿನಗಳಲ್ಲಿ ಶನಿಯ ಆರನೇ ಮನೆಯ ಪ್ರವೇಶ ಹಾಗೂ ಗುರುವಿನ ಭಾಗ್ಯಸ್ಥಾನದ ಪ್ರವೇಶ ನಿಮಗೆ ಅಚ್ಚರಿಯ ಬದಲಾವಣೆಗಳನ್ನು ತರುತ್ತದೆ. ನೀವು ಬಹುಕಾಲದಿಂದ ನಿರೀಕ್ಷೆಮಾಡುತ್ತಿದ್ದ ಅಭಿವೃದ್ಧಿ, ಸುಖ ಸಂತೋಷ ನಿರಾಳತೆ ನಿಮಗೆ ಸಿಗುತ್ತದೆ.

ವೃಶ್ಚಿಕರಾಶಿ:
ಈಗ ನಿಮಗೆ ಗುರುಬಲ ಇದೆ. ಐದನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ ಭಾಗ್ಯವನ್ನು ತರುತ್ತದೆ. ಕರೆಂಟ್, ಬೆಂಕಿ ಮತ್ತು ಇನ್ನಿತರ ಶಕ್ತಿ ಗಳಿಂದ ದೂರವಿರಿ. ಎಂಟನೇ ಮನೆಯಲ್ಲಿ ಕುಜ ಇರುವುದರಿಂದ ಶಕ್ತಿ ಉತ್ಪಾದನಾ ಘಟಕಗಳಿಂದ ತೊಂದರೆಯಾಗಬಹುದು. ವಾರದ ಮಧ್ಯದಲ್ಲಿ ನಿಮ್ಮ ರಾಶಿಯಲ್ಲೇ ಗಜಕೇಸರಿ ಯೋಗ ಆಗುತ್ತದೆ. ಇದರಿಂದ ನಿಮಗೆ ಶುಭಫಲಗಳು ಇವೆ.

ಧನಸ್ಸುರಾಶಿ:
ಆರನೇ ಮನೆಯಲ್ಲಿ ಗುರು ಆರೋಗ್ಯಕ್ಕೆ ತೊಂದರೆ ಕೊಡುತ್ತಾನೆ. ನೇಪಥ್ಯಕ್ಕೆ ಸರಿದಿದ್ದ ಅನಾರೋಗ್ಯ ಒಮ್ಮಲೇ ಉಲ್ಬಣಸಬಹುದು ಅಥವಾ ಹೊಸ ಸಮಸ್ಯೆಗಳಾಗಬಹುದು. ಮಾನಸಿಕ ಕಿರಿಕಿರಿಯೂ ಇರುತ್ತದೆ.ಸಾಲಗಾರರ ಕಾಟ, ಗಂಡಹೆಂಡಿರ ನಡುವೆ ವೈಮನಸ್ಸು ಹಣದ ಅಡಚಣೆ ಮೊದಲಾದ ಸಮಸ್ಯೆಗಳು ಎದುರಾಗುತ್ತೆ. ಎದೆಗುಂದಬೇಡಿ. ಶೀಘ್ರದಲ್ಲೇ ಗುರುಬಲ ಮತ್ತು ರಾಹುಬಲ ಬರುವುದರಿಂದ ಪರಿಸ್ಥಿತಿ ಸುಧಾರಿಸುತ್ತದೆ.

ಮಕರರಾಶಿ:
ಸಾಡೆಸಾತಿ ಯ ಅಂತಿಮ ಚರಣದಲ್ಲಿ ಇದ್ದೀರಿ. ಈ ತಿಂಗಳ ಕೊನೆಗೆ ಶನಿ ನಿಮ್ಮ ಬಿಟ್ಡು ಮುಂದಿನ ರಾಶಿಗೆ ಹೋಗುತ್ತಾನೆ. ಶನಿ ಮೂರನೆಯ ಮನೆಯ ಪ್ರವೇಶವಾದ ನಂತರ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಗುರುಬಲವೂ ಇದ್ದು ನೀವು ಅಂದುಕೊಂಡಿದ್ದ ಕೆಲಸ/ಯೋಜನೆಗಳೆಲ್ಲ ನೆರವೇರುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಹೊಸ ಅವಕಾಶಗಳು ಹುಡುಕಿ ಬರುತ್ತದೆ. ಭಾಗ್ಯದ ಬಾಗಿಲು ತೆರೆಯುತ್ತದೆ. ಈಗ ಮೂರನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಪರಾಕ್ರಮ ಸ್ಥಾನದಲ್ಲಿ ಒಂದು ರಾಜಯೋಗ ಆಗಿದೆ. ಇದು ನಿಮ್ಮನ್ನು ಆಪತ್ತುಗಳಿಂದ ಕಾಪಾಡುತ್ತದೆ. ಕೂದಲೆಳೆಯ ಅಂಚಿನಲ್ಲಿ ಅಪಾಯದಿಂದ ಪಾರಾಗುತ್ತೀರಿ. ಮನೆದೇವರ ಸ್ಮರಣೆ ಮಾಡಿ. ಅಗತ್ಯವಿದ್ದರೆ ಶನಿಜಪ ಮತ್ತು ಗುರು ಜಪ ಮಾಡಿಸಿ.

ಕುಂಭರಾಶಿ:
ಬಹಳ ಏರಿಳಿತಗಳನ್ನು ನೋಡಿದ್ದೀರಿ. ಇನ್ನೇನು ಪ್ರಪಾತಕ್ಕೆ ಬಿದ್ದೇಬಿಡ್ತೀರಿ ಎನ್ನುವುದರಲ್ಲಿ ಕಾಣದ ಶಕ್ತಿಯೊಂದು ಸರಕ್ಕನೆ ಬಂದು ಕಾಪಾಡಿದೆ. ಆಕ್ಷೇಪಣೆ, ವಿವಾದ ಸವಾಲು ಬಹಳ ಎದುರಿಸಿದ್ದೀರಿ ಈಗ ಎಲ್ಲರಿಗೂ ಉತ್ತರಕೊಡುವ ಕಾಲ ಬರಲಿದೆ. ಮುಂದೆ ಕೆಲವು ದಿನಗಳಲ್ಲಿ ಗುರುಬಲ ಬಂದಾಗ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಮನೆಯಲ್ಲಿ ಶುಭಸಂಗತಿಗಳು, ಸುಂದರ ಕ್ಷಣಗಳು ಬರುತ್ತದೆ. ಮುಂದೆ ಎಲ್ಲವೂ ಒಳ್ಳೆಯದಾಗಲಿದೆ. ವಿವಾದಗಳಿಂದ ಹೊರಬರುತ್ತೀರಿ.

ಮೀನರಾಶಿ:
ರಾಶಿಯಲ್ಲೇ ರಾಹು ಇರುವುದು ಕಣ್ಣು ಮೂಗು ಗಂಟಲು, ಚರ್ಮ ಮೊದಲಾದ ಸೂಕ್ಷ್ಮ ಭಾಗಗಳಿಗೆ ಅಲರ್ಜಿ ಅಥವಾ ತೊಂದರೆಯನ್ನು ಕೊಡುತ್ತದೆ. ಕಣ್ಣಿನ ಶಸ್ತ್ರಚಿಕಿತ್ಸೆ ಆಗಬಹುದು ಬ್ಯಾಕ್ಟೀರಿಯಾ ಸೋಂಕು ಆಗಬಹುದು. ಆರೋಗ್ಯದ ವಿಷಯದಲ್ಲಿ ಜಾಗ್ರತೆಯಿಂದ ಇರಿ. ಮುಂದೆ ಶುಕ್ರ ಬುಧ ಎರಡನೇ ಮನೆಗೆ ಬಂದಾಗ ಒಳ್ಳೆಯದಾಗುತ್ತದೆ. ರಾಹು ನಿಮ್ಮ ರಾಶಿಯಿಂದ ಕುಂಭರಾಶಿ ಗೆ ಪ್ರವೇಶವಾದಾಗ ನಿಮಗೆ ಬಿಗ್ ರಿಲೀಫ್ ಸಿಗಲಿದೆ.












Click it and Unblock the Notifications