Weekly Horoscope 2025: ಮಾರ್ಚ್ ಆರಂಭದ ವಾರ ಈ ರಾಶಿಗೆ ಅದೃಷ್ಟವೋ ಅದೃಷ್ಟ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಬಹುಳ ದಶಮಿಯಿಂದ ಫಾಲ್ಗುಣ ಶುಕ್ಲ ತದಿಯವರೆಗೆ.
ಅಂದರೆ 23.02.25 ರಿಂದ 02.03.25 ವರೆಗೆ ಈ ವಾರದ ಚಂದ್ರನ ಸಂಚಾರ ಮೂಲಾ ನಕ್ಷತ್ರದಿಂದ ಉತ್ತರಾಭಾದ್ರದವರೆಗೆ

ಮೇಷ ರಾಶಿ:
ಲಾಭಸ್ಥಾನದಲ್ಲಿ ಶನಿ, ಸೂರ್ಯ ಬುಧ ಇದ್ದು ಸಮಯ ಅನುಕೂಲಕರವಾಗಿದೆ. ಲಾಭ ಸ್ಥಾನದಲ್ಲಿ ಯಾವ ಗ್ರಹ ಇದ್ದರೂ ಲಾಭವನ್ನೇ ಕೊಡುತ್ತಾನೆ. ಎರಡನೇ ಮನೆಯಲ್ಲಿ ಗುರು ಉತ್ತಮ ಅವಕಾಶಗಳು ಸಿಗುವಂತೆ ಮಾಡುತ್ತಾನೆ. ಮನೆಯಲ್ಲಿ ಶುಭಕಾರ್ಯದ ವಾತಾವರಣ ಇರುತ್ತದೆ. ಪಿತೃಕಾರಕ ಗ್ರಹ ಸೂರ್ಯ ಶನಿಯ ಜೊತೆ ಇರುವುದರಿಂದ ತಂದೆಯ ಆರೋಗ್ಯ ಗಮನಿಸಿ.

ವೃಷಭ ರಾಶಿ:
ರಾಶಿಯಲ್ಲೇ ಗುರು ಕೊಂಚ ಒತ್ತಡಗಳನ್ನು ಕೊಡುತ್ತಾನೆ ಆದರೆ ಲಾಭಸ್ಥಾನದ ರಾಹು ಧನಮೂಲವನ್ನು ವೃದ್ಧಿಸುತ್ತಾನೆ. ಯಾವುದೋ ಹಳೆಯ ಬಾಕಿ ತೀರಿಸುವ ಅವಕಾಶ ಒದಗಿಬರುತ್ತದೆ. ಋಣಸಂದಾಯ ಮಾಡುತ್ತೀರಿ. ತಾತ್ಕಾಲಿಕವಾಗಿ ಹಣ ಕೈಬಿಟ್ಟು ಹೋದರೂ ಋಣಮುಕ್ತರಾದ ನಿರಾಳತೆಯಿಂದ ಮನಸ್ಸಿಗೆ ಸಮಾಧಾನ ಇದೆ. ಇನ್ನು ಕೆಲವೇ ದಿನಗಳಲ್ಲಿ ಶನಿಯ ಲಾಭಸ್ಥಾನದ ಪ್ರವೇಶ ನಿಮಗೆ ಶುಭಸಂಗತಿಗಳನ್ನು ನೀಡುತ್ತದೆ.

ಮಿಥುನ ರಾಶಿ:
ಒಂಬತ್ತರಲ್ಲಿ ಸೂರ್ಯ ಬುಧ ಶನಿ ದೂರ ಪ್ರಯಾಣವನ್ನು ಸೂಚಿಸುತ್ತಿದ್ದಾರೆ. ವೈಯುಕ್ತಿಕ ವಾಗಿ ಅಥವಾ ವೃತ್ತಿಪರವಾಗಿ ಬೇರೆ ಪ್ರದೇಶ/ ದೇಶಕ್ಕೆ ಹೋಗುವ ಅವಕಾಶ ಇದೆ. ಹತ್ತನೇ ಮನೆಯಲ್ಲಿ ಉಚ್ಛ ಶುಕ್ರ ವಾಹನದಿಂದ ಲಾಭ ಕೊಡಿಸುತ್ತಾನೆ. 12 ನೇ ಮನೆಯ ಗುರು ಸಹ ಅಲೆದಾಟ ಪ್ರಯಾಣವನ್ನು ಸೂಚಿಸುತ್ತಾನೆ. ದೇಶ ನೋಡು ಕೋಶ ಓದು ಎಂಬಂತೆ ಸುತ್ತಾಡುತ್ತಾ ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳಿ.

ಕಟಕ ರಾಶಿ:
ಎಂಟನೇ ಮನೆಯಲ್ಲಿ ಸೂರ್ಯ ಶನಿ ಬುಧ ಅಷ್ಟೇನೂ ಹಿತಕಾರಿಗಳಲ್ಲ. ಆದರೂ ಇನ್ನು ಕೆಲವೇ ದಿನಗಳಲ್ಲಿ ಶನಿಯ ಒಂಬತ್ತನೇ ಮನೆಯ ಪ್ರವೇಶದಿಂದ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ. ಈಗ ಕೇತು ಮೂರನೇ ಮನೆಯಲ್ಲಿದ್ದು ದೇಹಬಲ ಪರಾಕ್ರಮವನ್ನು ಹೆಚ್ಚಿಸುತ್ತಾನೆ. ಹಣದ ಹರಿವು ಉತ್ತಮವಾಗುತ್ತದೆ. ಮನಸ್ಸಿಗೆ ಧೈರ್ಯ ಒದಗಿ ಬರುತ್ತದೆ

ಸಿಂಹ ರಾಶಿ:
ಏಳನೇ ಮನೆಯಲ್ಲಿ ಬುಧ ಸೂರ್ಯ ಶನಿ ಇದ್ದು ಕೊಂಚ ಕಿರಿಕಿರಿಗಳು ಇರುತ್ತದೆ. ಆದರೂ ಬುಧಾದಿತ್ಯ ಯೋಗದಿಂದ ಮಾತಿಗೆ ಸಂಬಂಧಿಸಿದಂತೆ ನಿಮಗೆ ಧನಲಾಭ ಕೀರ್ತಿ ಲಭಿಸುತ್ತದೆ. ಯಾವುದೋ ಒಂದು ಸಿಕ್ಕಿ ಹಾಕಿಕೊಂಡಿದ್ದ ಹಣ ಸುಲಲಿತವಾಗಿ ನಿಮ್ಮ ಕೈಸೇರುತ್ತದೆ. ಹಣದ ವಿಷಯಕ್ಕೆ ಸಂಬಂಧಗಳನ್ನು ಕಳೆದುಕೊಳ್ಳಬೇಡಿ. ಸಂಬಂಧಗಳನ್ನು ಪ್ರೀತಿಯಿಂದ ಗೆಲ್ಲಿ. ಜವಾಬ್ದಾರಿಯಿಂದ ನಿಭಾಯಿಸಿ.

ಕನ್ಯಾ ರಾಶಿ:
ಸೂರ್ಯ ಶನಿ ಬುಧ ಇದ್ದು ಹಣದ ಹರಿವು ಉತ್ತಮವಾಗಿದೆ. ಆರೋಗ್ಯ ಸುಧಾರಿಸುತ್ತದೆ. ಗುರು ಸಹ ಒಂಬತ್ತನೇ ಮನೆಯಲ್ಲಿದ್ದು ಭಾಗ್ಯಗಳನ್ನು ಕೊಡುತ್ತಿದ್ದಾನೆ. ಪ್ರವಾಸಗಳನ್ನು ಮಾಡುತ್ತೀರಿ. ದೇವಕಾರ್ಯಗಳನ್ನು ಮಾಡುತ್ತೀರಿ. ಧನಾಗಮನ ಚೆನ್ನಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ ಯಶಸ್ಸು ಗಳಿಸುತ್ತಿರಿ. ಜನಗಳ ಗೌರವಕ್ಕೆ ಪಾತ್ರರಾಗುತ್ತೀರಿ.

ತುಲಾ ರಾಶಿ:
ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನಸ್ಸಿನ ಬಯಕೆಗಳೆವೂ ನೆರವೆರಲಿದೆ. ಗುರು ಹಾಗೂ ಶನಿ ಬಲ ಎರಡೂ ಸೇರಿ ನಿಮ್ಮನ್ಜು ಬಲಶಾಲಿಯಾಗಿಸುತ್ತದೆ. ಹಣಬಲ, ಜನಬಲ, ಅಧಿಕಾರಬಲ ಎಲ್ಲವೂ ಸಿಗಲಿದೆ. ಕೀರ್ತಿಪ್ರತಿಷ್ಠೆಗಳಿಗೆ ಭಾಜನರಾಗುತ್ತೀರಿ. ಈಗ ಐದನೇ ಮನೆಯಲ್ಲಿಇರುವ ಬುಧ ನಿಮಗೆ ಶುಭಫಲಗಳನ್ನು ಕೊಡುತ್ತಾನೆ. ಎಂಟರಲ್ಲಿರುವ ಗುರುವಿನಿಂದ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಚ್ಚರಿಕೆಯಿಂದ ಇರಿ.

ವೃಶ್ಚಿಕ ರಾಶಿ:
ಈಗ ಗುರುಬಲಇದೆ. ನೀವು ಎಣಿಸಿದ್ದ ಕೆಲಸಗಳೆಲ್ಲ ನಿರ್ವಿಘ್ನವಾಗಿ ನೆರವೇರುತ್ತದೆ. ಆದರೆ ಕೆಲವೇ ದಿನಗಳಲ್ಲಿ ಪಂಚಮಶನಿಯ ಪ್ರಭಾವಕ್ಕೆ ಒಳಗಾಗುತ್ತೀರಿ. ಇದು ನಿಮಗೆ ಸವಾಲುಗಳನ್ನು ಪರೀಕ್ಷೆಗಳನ್ನು ಒಡ್ಡಲಿದೆ. ಧೈರ್ಯವಾಗಿ ಎದುರಿಸಿ. ಮಾನಸಿಕ ಸಮತೋಲನ ಗಟ್ಡಿಇರಲಿ. ಈಗ ಬುಧ ನಾಲ್ಕನೆ ಮನೆಯಲ್ಲಿ ಶುಕ್ರ ಐದನೇ ಮನೆಯಲ್ಲಿ ಗುರು ಏಳನೇ ಮನೆಯಲ್ಲಿ ಇದ್ದು ನಿಮ್ಮ ಶುಭಫಲಗಳನ್ನು ಹೆಚ್ವಿಸುತ್ತಾರೆ. ವೃತ್ತಿಯಲ್ಲಿ ಯಶಸ್ಸು ಇದೆ. ಹಣಕಾಸು ಮೂಲ ಬಲವಾಗಿದೆ.

ಧನಸ್ಸು ರಾಶಿ:
ಮೂರನೇ ಮನೆಯಲ್ಲಿ ಬುಧ ಶನಿ ಸೂರ್ಯ ಇದ್ದು ಇಲ್ಲಿ ಕೇಂದ್ರತ್ರಿಕೋಣಾಧಿಪತಿ ಯೋಗ ಆಗಿದೆ. ಇದು ಬಹಳಷ್ಟು ಶುಭಫಲಗಳನ್ನು ಕೊಡುತ್ತದೆ.ಪರಾಕ್ರಮ ಸ್ಥಾನದಲ್ಲಿ ಮೂರು ಗ್ರಹಗಳ ಸಂಯೋಗ ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದು ಕೊಂಚ ತೊಂದರೆ ಎನಿಸಿದರೂ ರಾಹು ಕೆಲವೇ ತಿಂಗಳಲ್ಲಿ ಮೂರನೇ ಮನೆಗೆ ಬಂದು ನಿಮಗೆ ಅನುಕೂಲಕರ ಸಂಗತಿಗಳನ್ನು ಕೊಡುತ್ತಾನೆ. ಆರನೇ ಮನೆಯಲ್ಲಿ ಇರುವ ಗುರು ಮಾನಸಿಕವಾಗಿ ನಿಮ್ಮನ್ನು ದುರ್ಬಲಗೊಳಿಸುತ್ತಾನೆ. ಅಪವಾದಗಳು ಬರುತ್ತದೆ. ಹಣದ ಖರ್ಚು ಇರುತ್ತದೆ. ಮುಂದೆ ಗುರುಬಲ ಬರುವುದರಿಂದ ಈ ಕಷ್ಟಗಳು ತಾತ್ಕಾಲಿಕ. ಒಳ್ಳೆಯ ದಿನಗಳನ್ನು ಕಾಣುತ್ತೀರಿ ಹಾಗೂ ನಿಮ್ಮ ಜೀವನದಲ್ಲಿ ನಡೆಯುವ ಶುಭಘಟನೆಗಳಿಗೆ ಸಾಕ್ಷಿಯಾಗುತ್ತೀರಿ.

ಮಕರ ರಾಶಿ:
ಈಗ ಐದನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ರಾಹು ಇದ್ದು ಸಮಯ ಬಹಳ ಚೆನ್ನಾಗಿದೆ. ಅವಕಾಶಗಳು ಬರುವ ಸಮಯ. ನಾನಾ ವಿಧವಾದ ಶುಭಸಂಗತಿಗಳು ನಡೆಯಲಿದೆ. ಮನೆ ಕೊಳ್ಳುವುದು, ಗಾಡಿ ಖರೀದಿ ಮಾಡುವುದು, ಹೊಸ ನೌಕರಿ ಸಿಗುವುದು, ಇರುವ ನೌಕರಿಯಲ್ಲಿ ಸ್ಥಾನಮಾನಗಳು ಹೆಚ್ಚಾಗುವುದು ಮುಂತಾದ ಒಳ್ಳೆಯ ಸಂಗತಿಗಳಿಗೆ ಅವಕಾಶ ಇದೆ. ಮುಂದೆ ಶನಿಮೂರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಶುಭಫಲಗಳು ದೊರೆಯುತ್ತದೆ ಹಾಗೂ ಸಾಡೆಸಾತಿ ಶನಿಯಿಂದ ಮುಕ್ತಿ ಸಿಗುತ್ತದೆ.

ಕುಂಭ ರಾಶಿ:
ನಿಮ್ಮ ರಾಶಿಯಲ್ಲೇ ಮೂರು ಗ್ರಹಗಳುಇವೆ. ಬುಧ ಶನಿ ಸೂರ್ಯ. ಶನಿ ಸೂರ್ಯ ಶತ್ರುಗಳಾದರೂ ಬುಧನ ಜೊತೆ ಇರುವುದರಿಂದ ಇಬ್ಬರೂ ಶಾಂತವಾಗಿಯೇ ಇರುತ್ತಾರೆ.ಸಣ್ಣಪುಟ್ಟ ದೈಹಿಕ ಮಾನಸಿಕ ಕಿರಿಕಿರಿ ಇರುತ್ತದೆ. ಮೈಗ್ರೇನ್ ಇರುವವರಿಗೆ ಕೊಂಚ ಉಲ್ಬಣವಾಗಬಹುದು. ಶುಕ್ರ ಎರಡನೇ ಮನೆಯಲ್ಲಿ ಧನಲಾಭ ಕೊಡುತ್ತಾನೆ. ಇನ್ನು ಕೆಲವೇ ತಿಂಗಳಲ್ಲಿ ಗುರುಬಲ ಬರುವುದರಿಂದ ಯಾವುದೇ ಚಿಂತೆ ಬೇಡ. ಶನಿ ಸಹ ನಿಮ್ಮ ರಾಶಿ ಬಿಟ್ಟು ಮುಂದೆ ಸಾಗುವ ದಿನಗಳುದೂರವಿಲ್ಲ.

ಮೀನ ರಾಶಿ:
ನೀವು ಒಳ್ಳೆಯ ದಿನಗಳನ್ನು ಕಾಣಲು ಇನ್ನೂ ಕಾಯಬೇಕು. ನಿರೀಕ್ಷೆ ಇರಲಿ. ಧನಾತ್ಮಕ ಯೋಚನೆಗಳು ಸದಾ ಮನಸ್ಸಿನಲ್ಲಿ ಇರಲಿ. ನಿಮ್ಮ ರಾಶಿಯಲ್ಲೇ ಶುಕ್ರ ಇರುವುದರಿಂದ ಆರೋಗ್ಯ ಸಮಸ್ಯೆಗಳು ಇಳಿಮುಖವಾಗುತ್ತದೆ. ಸಾಡೆಸಾತಿ ಶನಿಯ ಒಂದುಭಾಗವನ್ನು ಪೂರೈಸಿದ್ದೀರಿ. ಇನ್ನುಮುಂದೆ ಖರ್ಚುಗಳು ಕಡಿಮೆಯಾಗುತ್ತದೆ. ಆದರೆ ಹೊಸ ಕೆಲಸಗಳು ಪ್ರಾರಂಭ ಆಗಲು ಅಡೆತಡೆಗಳಿವೆ. ಸಹನೆ ಇರಲಿ. ಯಾರೊಂದಿಗೂ ವಾದವಿವಾದ ಬೇಡ.












Click it and Unblock the Notifications