Weekly Horoscope 2025: ಫೆಬ್ರವರಿ ನಾಲ್ಕನೇ ವಾರ ಈ ರಾಶಿಯ ಕಷ್ಟಗಳು ಮಾಯ, ಹೆಜ್ಜೆ ಹೆಜ್ಜೆಗೂ ಅದೃಷ್ಟ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಬಹುಳ ಚೌತಿಯಿಂದ ದಶಮಿಯವರೆಗೆ.

ಅಂದರೆ 17.02.25 ರಿಂದ 23.02.25 ವರೆಗೆ

ಈ ವಾರದ ಚಂದ್ರನ ಸಂಚಾರ ಹಸ್ತಾ ನಕ್ಷತ್ರದಿಂದ ಮೂಲಾ ನಕ್ಷತ್ರದವರೆಗೆ.

Weekly Horoscope In Kannada From February 17 To February 23 2025

ಮೇಷರಾಶಿ:

12 ನೇ ಮನೆಯಲ್ಲಿ ಶುಕ್ರ, ಹನ್ನೊಂದನೇ ಮನೆಯಲ್ಲಿ ಸೂರ್ಯ ಶನಿ ಬುಧ, ಎರಡನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಒಳ್ಳೆಯ ಸೂಚನೆಗಳು ಸಿಗುವ ಸಮಯ. ಬದುಕನ್ನು ಕಟ್ಡಿಕೊಳ್ಳುವ ಸಮಯ.‌ ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಮಯ. ಹೊಸ ಅವಕಾಶಗಳು ಗೋಚರಿಸುವ ಸಮಯ.

Weekly Horoscope In Kannada From February 17 To February 23 2025

ವೃಷಭರಾಶಿ:

ಹನ್ನೊಂದನೇ ಮನೆಯಲ್ಲಿ ಶುಕ್ರ, ರಾಹು ಇದು ಬಹುದೊಡ್ಡ ಬಲ ನಿಮಗೆ. ಹಣದ ಹರಿವು‌ ಉತ್ತಮವಾಗಿದೆ. ಚಿನ್ನ ಬೆಳ್ಳಿ ಖರೀದಿ ಯೋಗ ಇದೆ. ಹತ್ತನೇ ಮನೆಯಲ್ಲಿ ಸೂರ್ಯ ಶಾನಿ ಬುಧ ಕೇಂದ್ರ ತ್ರಿಕೋಣಾಧಿಪತಿ ಯೋಗ ಆಗಿದೆ. ಇದರಿಂದಲೂ ನಿಮಗೆ ಶುಭಫಲಗಳು ದೊರೆಯುತ್ತದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಪ್ರಮೋಷನ್ ಸಿಗಬಹುದು. ವೇತನ ಹೆಚ್ಚಳಕ್ಕೂ ಅವಕಾಶ ಇದೆ. ಇನ್ನೂ ಹೆಚ್ಚಿನ ಶುಭಫಲಗಳು ದೊರೆಯುತ್ತದೆ

Weekly Horoscope In Kannada From February 17 To February 23 2025

ಮಿಥುನರಾಶಿ:

ಈಗ ನಿಮಗೆ ಕೊಂಚ ಏರುಪೇರಿನ ಸಮಯ. ಮಕ್ಕಳಿಗಾದರೆ ಅಭ್ಯಾಸದ ಒತ್ತಡ ಇರುತ್ತದೆ. ವಯಸ್ಕರಿಗೆ ಹಣಕಾಸಿನ‌ ಒತ್ತಡ ಇರುತ್ತದೆ. ವೃತ್ತಿಯಲ್ಲಿ ಒತ್ತಡ, ಮನೆಯಲ್ಲಿ ಕುಟುಂಬದ ವಿಷಯಗಳಲ್ಲಿ ಒತ್ತಡ ಇರುತ್ತದೆ. ಜಾಗ ಬದಲಾವಣೆಯ ಸೂಚನೆ ಇದೆ. ಈಗಾಗಲೇ ಆಗಿದ್ರೆ ತಲೆ ಕೆಡಿಕೊಳ್ಳಬೇಡಿ. ಸಮಸ್ಯೆಗಳ ಪರಿಹಾರಕ್ಕೆ ಸುಲಭ ಮಾರ್ಗ ಹುಡುಕಿ. ಒತ್ತಡಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ

Weekly Horoscope In Kannada From February 17 To February 23 2025

ಕಟಕರಾಶಿ:

ಒಂಬತ್ತನೇ ಮನೆಯಲ್ಲಿ ಶುಕ್ರ, ಎಂಟನೇ ಮನೆಯಲ್ಲಿ ಬುಧ ಸೂರ್ಯ ಶನಿ, ಲಾಭಸ್ಥಾನದಲ್ಲಿ ಗುರು ಸಮಯ ಚೆನ್ನಾಗಿ ಇದೆ. ಕೆಲವೇ ದಿನಗಳಲ್ಲಿ ಅಷ್ಠಮದಲ್ಲಿರುವ ಶನಿ ಬಿಟ್ಟು ಹೋಗುತ್ತಾನೆ ಇದರಿಂದ ನಿಮಗೆ ದೊಡ್ಡ ನಿರಾಳತೆ ಸಿಗುತ್ತದೆ. ಮುಂದೆ ಬರುವ ದಿನಗಳು ನಿಮಗೆ ಉತ್ಸಾಹ ಉಲ್ಲಾಸ ತಂದುಕೊಡುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಈಗ ತಂತಾನೇ ಪರಿಹಾರ ಮಾರ್ಗ ಗೋಚರಿಸುತ್ತದೆ.

Weekly Horoscope In Kannada From February 17 To February 23 2025

ಸಿಂಹರಾಶಿ:

ಏಳನೇ ಮನೆಯಲ್ಲಿ ಇರುವ ಸೂರ್ಯ ಶನಿ ಮತ್ತು ಬುಧ ನಿಮ್ಮ ರಾಶಿಯನ್ನು ನೋಡುತ್ತಾರೆ. ಇದರಲ್ಲಿ ಶುಭ ಅಶುಭ ಎರಡೂ ಫಲಗಳೂ ಇವೆ. ರಾಶ್ಯಾಧಿಪತಿ ಸೂರ್ಯ ಹಾಗೂ ಧನಾಧಿಪತಿ ಬುಧ ಇಬ್ಬರೂ ನಿಮ್ಮ ರಾಶಿಯನ್ನು ನೋಡುವುದು ಶುಭಕರ. ಮನಸ್ಸಿಗೆ ಉಲ್ಲಾಸ ದೈಹಿಕ ಆರೋಗ್ಯ ಸಿಗುತ್ತದೆ. ‌ಶನಿ ದೃಷ್ಟಿಸುವುದರಿಂದ ಮಾನಸಿಕ ಹಿಂಸೆ, ಅಸಮಾಧಾನ ಕೋಪ ಹೆಚ್ಚಾಗುತ್ತದೆ. ಕೆಲವು ದಿನಗಳು ಕಳೆದ ಮೇಲೆ ಗುರುಬಲ ಬರುವುದರಿಂದ ಕೊಂಚಮಟ್ಟಿಗೆ ಪರಿಹಾರ ದೊರೆಯುತ್ತದೆ. ಆದರೂ ಒತ್ತಡಗಳು ಇವೆ ನಿಭಾಯಿಸಿಕೊಳ್ಳಿ.

Weekly Horoscope In Kannada From February 17 To February 23 2025

ಕನ್ಯಾರಾಶಿ:

ಈಗ ಗುರು ಒಂಬತ್ತನೇ ಮನೆಯಲ್ಲಿ ಇದ್ದಾನೆ . ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ಒಳ್ಳೆಯ ಹೆಸರು ಹಣ ಕೀರ್ತಿ ನಿಮಗೆ ದೊರೆಯುತ್ತದೆ. ಆರನೇ ಮನೆಯಲ್ಲಿ ಶನಿ ಸೂರ್ಯ ಇರುವುದು ಬಹಳ ಲಾಭಕರ. ಮುಂದಿನ‌ ದಿನಗಳಲ್ಲಿ ಕೊಂಚ ಕಠಿಣ ಸವಾಲುಗಳು ಎದುರಾಗುತ್ತದೆ. ಎಚ್ಚರಿಕೆಯಿಂದ ವ್ಯವಹರಿಸಿ.‌ ಯಾವುದನ್ನೂ ಸುಲಭವಾಗಿ ಅಳೆಯಬೇಡಿ. ಜಾಗ್ರತೆ ಇರಲಿ.

Weekly Horoscope In Kannada From February 17 To February 23 2025

ತುಲಾರಾಶಿ:

ಗುರುಬಲ ಶನಿಬಲ ಈಗ ಹತ್ತಿರದಲ್ಲೇ ಇರುವುದರಿಂದ ಏನೂ ಭಯ ಬೇಡ. ನೀವು ಯೋಜಿಸಿದ ಕೆಲಸಗಳೆಲ್ಲ ಕಾರ್ಯಗತವಾಗುತ್ತದೆ. ಸ್ವಲ್ಪ ಸಹಿಸಿಕೊಳ್ಳಿ. ಈಗ ತತ್ಕಾಲಕ್ಕೆ ಕೊಂಚ ಒತ್ತಡಗಳು ಎದುರಾದರೂ ಎದೆಗುಂದಬೇಡಿ. ವೃತ್ತಿಯಲ್ಲಿ ಬಡ್ತಿ, ವೇತನ ಹೆಚ್ಚಳ, ನಾನಾ ವಿಧದಲ್ಲಿ ಧನಾಗಮನ, ಯಾವುದಾದರೂ ಒತ್ತಡಗಳಿಂದ ಬಿಡುಗಡೆ ಹೀಗೆ ನಿಮಗೆ ಅನುಕೂಲಕರ ಪರಿಸ್ಥಿತಿ ಯ ದೊಡ್ಡ ಯಾದಿಯೇ ಇದೆ. ಕೊಂಚಕಾಲ ತಾಳ್ಮೆ ವಹಿಸಿ ನಿರೀಕ್ಷಿಸಿ.

Weekly Horoscope In Kannada From February 17 To February 23 2025

ವೃಶ್ಚಿಕರಾಶಿ:

ಈಗ ಸಂಪೂರ್ಣ ಗುರುಬಲ‌ ಇದ್ದರೂ ಪಂಚಮ ಶನಿಯ ಪ್ರಭಾವಕ್ಕೆ ಸಿಕ್ಕಿದ್ದೀರಿ. ಪಂಚಮ‌ ಶನಿ ನಿಮಗೆ ಒತ್ತಡಗಳನ್ನು ಕೊಡುತ್ತದೆ. ಸತಾಯಿಸುತ್ತದೆ. ಹಣಕಾಸು, ಪದವಿ ಅಧಿಕಾರ ಕೌಟುಂಬಿಕ ಸೌಖ್ಯ ಎಲ್ಲದಕ್ಕೂ ಧಕ್ಕೆ ಬರುತ್ತದೆ. ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಕುಟುಂಬದ ಆರೋಗ್ಯಕ್ಕೆ ಧಕ್ಕೆ ಬರಬಹುದು. ಮನೆ ದೇವರನ್ನು ಪ್ರಾರ್ಥನೆ ಮಾಡಿ. ಮುಂದಿನ ದಿನಗಳು ಸವಾಲುಗಳನ್ನು ಒಡ್ಡುತ್ತದೆ. ಈಗಿನಿಂದಲೇ ಮನೋಬಲ‌ ಬೆಳೆಸಿಕೊಳ್ಳಿ.

Weekly Horoscope In Kannada From February 17 To February 23 2025

ಧನಸ್ಸುರಾಶಿ:

ರಾಹು ನಾಲ್ಕನೇ ಮನೆಯಲ್ಲಿ ಹಾಗೂ ಗುರು ಆರನೇ ಮನೆಯಲ್ಲಿ‌ ಇರುವುದರಿಂದ ಆರೋಗ್ಯಕ್ಕೆ ಸಮಸ್ಯೆ ಇರುತ್ತದೆ. ಮೂತ್ರದ ಸೋಂಕು, ಮೂತ್ರದಲ್ಲಿ ಕಲ್ಲು, ಶ್ವಾಸಕೋಶದ ಸಮಸ್ಯೆ, ಆಸ್ತಮಾ ಮುಂತಾದ ಕಾಯಿಲೆಗಳು‌ ಉಲ್ಬಣಿಸಬಹುದು. ಸರಿಯಾದ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಿ. ಸುಖಸ್ಥಾನದಲ್ಲಿ ರಾಹು ಇರುವುದರಿಂದ ಮನಸ್ಸಿನ ನೆಮ್ಮದಿ ಗೆ ಭಂಗ.‌ ಕೆಲವೇ ದಿನಗಳಲ್ಲಿ ರಾಹು ಮೂರನೇ ಮನೆಗೆ ಬಂದು, ಗುರು ಏಳನೇ ಮನೆಗೆ ಪ್ರವೇಶಮಾಡಿದಾಗ ನಿಮ್ಮ ಸಮಸ್ಯೆಗಳು ಹಗುರವಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

Weekly Horoscope In Kannada From February 17 To February 23 2025

ಮಕರರಾಶಿ:

ನಿಮಗೆ ಈಗ ಗುರುಬಲ ರಾಹುಬಲ ಇದೆ. ಸಾಡೆಸಾತಿ ಯ ಶನಿ ಇನ್ನೇನು ಬಿಡುಗಡೆಯಾಗಿ‌ ಮೂರನೇ ಮನೆಗೆ ಪ್ರವೇಶವಾದಾಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆದು ಜೀವನ ಸುಗಮ ಆಗುತ್ತದೆ.‌ ಹೊಸ ಕೆಲಸ ಸಿಗುವುದು ಅಥವಾ ಕೆಲಸಕ್ಕೆ ಪ್ರಯತ್ನ ಪಡುತ್ತಿರುವ ಕಡೆ ನಿಮ್ಮ ಪರವಾಗಿ ಸೂಚನೆ ಸಿಗುವುದು, ಯಾವುದಾದರೂ ಹಣ ನಿಮಗೆ ಬರಬೇಕಾಗಿದ್ದಲ್ಲಿ ಈಗ ಹೆಚ್ಚಿನ ಪ್ರಯತ್ನ‌ಇಲ್ಲದೆ ಬರುತ್ತದೆ. ಶೇರ್ಸ್ ನಲ್ಲಿ ಹಣ ಹೂಡಿದ್ದರೆ ಅಧಿಕ ಲಾಭ ದೊರೆಯುತ್ತದೆ. ಮನೆಯಲ್ಲ ಮಂಗಳಕಾರ್ಯ ನಡೆಯುವ ಸೂಚನೆ ಸಿಗುತ್ತದೆ.

Weekly Horoscope In Kannada From February 17 To February 23 2025

ಕುಂಭರಾಶಿ:

ಸಧ್ಯದಲ್ಲೇ ಗುರುಬಲ ಬರಲಿದೆ. ಆದರೆ ಈಗಿನ ಪರಿಸ್ಥಿತಿ ಯಲ್ಲಿ ಒತ್ತಡಗಳು ಹೆಚ್ಚು. ಒಂದಾದ ಮೇಲೊಂದರಂತೆ ಪೆಟ್ಡುಗಳು ಬೀಳುತ್ತಿವೆ. ಖರ್ಚುಗಳು ಹಿಡಿತಕ್ಕೇ ಸಿಗುತ್ತಿಲ್ಲ. ವೃತ್ತಿಯಲ್ಲಿ ಮನೆಯಲ್ಲಿ ನಿಮಗೆ ಊಹೆಗೆ ನಿಲುಕದ ಬದಲಾವಣೆಗಳನ್ನು ಕಾಣುವಿರಿ. ಎಲ್ಲ ಕಷ್ಟಗಳಿಗೂ ಒಂದು‌ ಕೊನೆ ಇರುತ್ತದೆ. ಮುಂದೆ ದಿನಗಳು ತುಂಬಾ ಆರಾಮದಾಯಕವಾಗಿದೆ.

Weekly Horoscope In Kannada From February 17 To February 23 2025

ಮೀನರಾಶಿ:

ಮೀನರಾಶಿಯಲ್ಲೇ ರಾಹು ಇರುವುದರಿಂದ ಕಿವಿಮೂಗು ಕಣ್ಣಿನ ತೊಂದರೆಗಳು ಕಾಣಿಸಬಹುದು. ಜೋಪಾನವಾಗಿ ನೋಡಿಕೊಳ್ಳಿ. ಗುರುಬಲ ಬರಲು ಇನ್ನೂ ಒಂದು ವರ್ಷ ಕಾಯಬೇಕು. ಮನೆಯವರ ಆರೋಗ್ಯಕ್ಕೆ ತೊಂದರೆ ಬರಬಹುದು. ಒಂದು ಗಮನ ಇರಲಿ. ಯಾವುದೂ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಡಿ. ಯಾವುದರಲ್ಲೂ ಹಣ ಹೂಡಬೇಡಿ. ಸಾಲಕೊಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+