Weekly Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭ, ದೊಡ್ಡ ಕನಸು ನನಸಾಗುವ ಅದೃಷ್ಟದ ವಾರ
ಜ್ಯೋತಿಷ್ಯದ ಪ್ರಕಾರ, ಹೊಸ ವಾರವು ಅನೇಕ ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಗ್ರಹಗಳು ಮತ್ತು ನಕ್ಷತ್ಜಗಳ ಚಲನೆಯಿಂದಾಗಿ, ಈ ವಾರ ಕೆಲವು ರಾಶಿಯವರ ಅದೃಷ್ಟ ಬೆಳಗುವುದು.ಇದೀಗ ಶ್ರಾವಣ ಮಾಸವೂ ಪ್ರಾರಂಭವಾಗಿದೆ. ಈ ವಾರ ಯಾರ ಜೀವನದಲ್ಲಿ ಯಾವ ರೀತಿ ಬದಲಾವಣೆಗಳಾಗಲಿವೆ ಎನ್ನುವುದುನ್ನು ನೋಡುವುದಾದರೆ...
ಮೇಷ ರಾಶಿ (Aries):
ಮೇಷ ರಾಶಿಯವರಿಗೆ ಹೊಸ ವಾರವು ಉತ್ತಮವಾಗಿರಲಿದೆ. ಈ ವಾರ, ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸಲು ಹೊಸ ಅವಕಾಶಗಳು ಸಿಗುವುದು. ವೃತ್ತಿಜೀವನದಲ್ಲಿ ನಿಮ್ಮ ಕೆಲಸಕ್ಕೆ ಹೊಸ ಮನ್ನಣೆ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಸಂಗಾತಿಯೊಂದಿಗಿನ ಮನಸ್ತಾಪ ಕೊನೆಯಾಗುವುದು. ಸಂಬಂಧದಲ್ಲಿನ ಮಾಧುರ್ಯ ಹೆಚ್ಚಾಗುವುದು.

ವೃಷಭ ರಾಶಿ (Taurus):
ಈ ವಾರ ಖರ್ಚನ್ನು ನಿಯಂತ್ರಿಸಬೇಕಾಗುವುದು. ಹಣದ ತೊಂದರೆ ಎದುರಾಗಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಆದರೆ ವ್ಯಾಪಾರಸ್ಥರಿಗೆ ಉತ್ತಮ ಅವಕಾಶ ಸಿಗುವುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯವು ಉತ್ತಮವಾಗಿರುವುದು.
ಮಿಥುನ ರಾಶಿ (Gemini):
ಈ ವಾರ ಹಣಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಆದರೆ ಆತುರಕ್ಕೆ ಬಿದ್ದು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ವೃತ್ತಿಜೀವನದಲ್ಲಿ ಹೊಸ ಯೋಜನೆ ಅಥವಾ ಉದ್ಯೋಗಾವಕಾಶ ಸಿಗುವುದು. ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚಾಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು.
ಕರ್ಕಾಟಕ ರಾಶಿ (Cancer):
ಈ ವಾರ ಆರ್ಥಿಕವಾಗಿ ತೃಪ್ತಿಕರವಾಗಿರಬಹುದು. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುವ ಸಾಧ್ಯತೆಯಿದೆ. ಮೇಲಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುವುದು. ಪ್ರಗತಿಗೆ ಅವಕಾಶಗಳಿವೆ. ಸಂಬಂಧದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಬಹುದಿನಗಳ ಕನಸು ನನಸಾಗುವ ವಾರ ಇದು.
ಸಿಂಹ ರಾಶಿ (Leo):
ತಾಳ್ಮೆಯಿಂದಲೇ ಹೊಸ ವಾರವನ್ನು ಆರಂಭಿಸುವಿರಿ. ಈ ಅವಧಿಯಲ್ಲಿ ಖರ್ಚುಗಳು ಹಠಾತ್ ಆಗಿ ಹೆಚ್ಚುವುದು. ವಾರದ ಬಜೆಟ್ ಪೂರ್ತಿ ತಲೆಕೆಳಗಾಗಬಹುದು. ನಿಮ್ಮ ವೃತ್ತಿಜೀವನದಲ್ಲಿ ನಾಯಕತ್ವದ ಗುಣಗಳು ಎದ್ದು ಕಾಣುವುದು. ದೊಡ್ಡ ಜವಾಬ್ದಾರಿ ಸಿಗಬಹುದು. ಆರೋಗ್ಯ ಸಾಮಾನ್ಯವಾಗಿಯೇ ಇರುವುದು.
ಕನ್ಯಾ ರಾಶಿ (Virgo):
ಕನ್ಯಾ ರಾಶಿಯವರಿಗೆ ಈ ವಾರ ತೃಪ್ತಿಕರವಾಗಿರುವುದು. ಈ ವಾರ ಹಣದ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುವುದು. ಹೊಸ ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಅದರ ಬಗ್ಗೆ ಯೋಚಿಸಿ.ಆರೋಗ್ಯ ಉತ್ತಮವಾಗಿರುವುದು.
ತುಲಾ ರಾಶಿ (Libra):
ಈ ವಾರ ತುಲಾ ರಾಶಿಯವರಿಗೆ ಹೊಸ ಅವಕಾಶಗಳು ಬರಬಹುದು. ವೃತ್ತಿಜೀವನದಲ್ಲಿ ಪ್ರಮುಖ ಜನರನ್ನು ಭೇಟಿಯಾಗಬಹುದು. ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಈ ಸಮಯ ಅನುಕೂಲಕರವಾಗಿರುವುದು. ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನಿಮಗೆ ಅವಕಾಶ ಸಿಗುವುದು. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.
ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯವರಿಗೆ ಈ ವಾರ ಫಲಪ್ರದವಾಗಿರುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಕೆಲಸದಲ್ಲಿ ಮೇಲಧಿಕಾರಿಗಳಿಂದ ಪ್ರಮುಖ ಜವಾಬ್ದಾರಿ ಸಿಗಬಹುದು. ವ್ಯವಹಾರದಲ್ಲಿ ಲಾಭವಾಗುವುದು. ಮುಂದೆ ಹಿಂದೆ ಯೋಚಿಸದೆ ಹಣಕಾಸಿನ ವಹಿವಾಟುಗಳಿಗೆ ಇಳಿಯಬೇಡಿ. ತಾಳ್ಮೆಯಿಂದಿರಿ. ಆರೋಗ್ಯದತ್ತ ಗಮನ ಹರಿಸಿ.
ಧನು ರಾಶಿ (Sagitarius):
ಧನು ರಾಶಿಯವರಿಗೆ ಈ ವಾರ ರೋಮಾಂಚಕಾರಿಯಾಗಿರುವುದು. ಹೊಸ ಉದ್ಯೋಗವನ್ನು ಪ್ರಾರಂಭಿಸಲು ಉತ್ತಮ ಅವಕಾಶ ಸಿಗುವುದು. ವಿದೇಶದಲ್ಲಿ ಕೆಲಸ ಮಾಡುವವರಿಗೆ ಲಾಭವಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಠಾತ್ ಆಗಿ ವೆಚ್ಚಗಳು ಎದುರಾಗುವುದು. ಪ್ರೇಮ ಸಂಬಂಧಗಳಲ್ಲಿ ಸಂತೋಷದ ವಾತಾವರಣವಿರುವುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗುವುದು. ಈ ವಾರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದು.
ಮಕರ ರಾಶಿ (Capricorn):
ಈ ವಾರ ವೃತ್ತಿಜೀವನದಲ್ಲಿ ಸ್ಥಿರತೆ ಮತ್ತು ಪ್ರಗತಿ ಇರುವುದು. ಕಚೇರಿಯಲ್ಲಿ ನಿಮಗೆ ಪ್ರಮುಖ ಜವಾಬ್ದಾರಿ ಸಿಗಬಹುದು. ವ್ಯವಹಾರದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ಸಿಗುವುದು. ಅಪಾಯಕಾರಿ ಹೂಡಿಕೆಗಳಿಂದ ದೂರ ಇದ್ದರೆ ಒಳ್ಳೆಯದು. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುವುದು. ವಿವಾಹಿತರಿಗೆ ಸಂಗಾತಿಯಿಂದ ಬೆಂಬಲ ಸಿಗುವುದು.
ಕುಂಭ ರಾಶಿ (Aquarius) :
ಕುಂಭ ರಾಶಿಯವರಿಗೆ ಈ ವಾರ ಹೊಸ ಆರಂಭ. ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮ ಅವಕಾಶ. ವ್ಯವಹಾರದಲ್ಲಿ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಸಹೋದ್ಯೋಗಿಗಳಿಂದ ಸಹಾಯ ಸಿಗುವುದು. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಕೆಲವು ಅನಿರೀಕ್ಷಿತ ವೆಚ್ಚಗಳು ಎದುರಾಗಬಹುದು.
ಮೀನ ರಾಶಿ (Pisces):
ಈ ವಾರ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಯಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಹೊಸ ಯೋಜನೆ ಅಥವಾ ಜವಾಬ್ದಾರಿ ಸಿಗಬಹುದು. ವ್ಯವಹಾರದಲ್ಲಿರುವವರಿಗೆ ಹೊಸ ವಹಿವಾಟುಗಳಿಂದ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆದರೆ ಸಾಲ ನೀಡುವಾಗ ಅಥವಾ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ.


Click it and Unblock the Notifications
