Vrishabha Bhavishya 2024: ವರ್ಷದ ಕೊನೆಯ ತಿಂಗಳಲ್ಲಿ ವೃಷಭ ರಾಶಿಗೆ ಹಿಂದೆಂದೂ ಕಾಣದ ಯೋಗ.. ಸಾಲ ತೀರಿಸಲು ಸಕಾಲ..
2024ನೇ ವರ್ಷದ ಕೊನೆಯ ತಿಂಗಳು ಡಿಸೆಂಬರ್ ಇನ್ನೇನು ದೂರವಿಲ್ಲ. ಈ ತಿಂಗಳು ಹಲವಾರು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಜೊತೆಗೆ 12 ರಾಶಿಗಳಿಗೆ ನಾನಾ ರೀತಿಯ ಫಲವನ್ನು ನೀಡುತ್ತವೆ. ಹಾಗಾದರೆ ಡಿಸೆಂಬರ್ ತಿಂಗಳ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಈ ಹಿಂದೆ ಡಿಸೆಂಬರ್ ತಿಂಗಳಲ್ಲಿ ಮೇಷ ರಾಶಿ ಭವಿಷ್ಯ ಹೇಗಿದೆ ಎನ್ನೋದನ್ನ ನಾವು ನೋಡಿದ್ದೇವೆ. ಈಗ ವೃಷಭ ರಾಶಿ ಡಿಸೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಇದಕ್ಕೂ ಮೊದಲು ಡಿಸೆಂಬರ್ ತಿಂಗಳಲ್ಲಿ ಬದಲಾಗುತ್ತಿರುವ ಗ್ರಹಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.
ಡಿಸೆಂಬರ್ ಗ್ರಹಗಳ ರಾಶಿ ಬದಲಾವಣೆ
ಡಿಸೆಂಬರ್ 2ರಂದು ಮಕರ ರಾಶಿಗೆ ಶುಕ್ರ ಪ್ರವೇಶ ಮಾಡುತ್ತಾನೆ. ಡಿಸೆಂಬರ್ 16ರಂದು ಧನು ರಾಶಿಗೆ ಸೂರ್ಯ ಪ್ರವೇಶವಾಗಲಿದೆ. ಇಲ್ಲಿಂದ ಧನುರ್ಮಾಸ ಆರಂಭವಾಗುತ್ತದೆ. ಇನ್ನೂ ಡಿಸೆಂಬರ್ 28ರಂದು ಶುಕ್ರ ಗ್ರಹ ಮತ್ತೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾ ಮಕರದಿಂದ ಕುಂಭಕ್ಕೆ ತನ್ನ ಸ್ಥಾನ ಪರಿವರ್ತನೆ ಮಾಡಲಿದ್ದಾನೆ. ಈ ಎಲ್ಲಾ ಗ್ರಹಗಳು ಡಿಸೆಂಬರ್ ತಿಂಗಳಲ್ಲಿ ಸ್ಥಾನ ಬದಲಾಯಿಸುತ್ತವೆ. ಈಗ ವೃಷಭ ರಾಶಿ ಡಿಸೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ನೋಡೋಣ.

ವೃಷಭ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ
ವೃಷಭ ರಾಶಿಯವರಿಗೆ ಡಿಸೆಂಬರ್ ತಿಂಗಳು ಆದಾಯಗಳು ಹೆಚ್ಚಾಗಿವೆ. ಖರ್ಚುಗಳು ಸ್ವಲ್ಪ ಕಡಿಮೆ ಆಗುತ್ತವೆ. ಉಳಿತಾಯ ಮಾಡಿಕೊಳ್ಳಲು ವೃಷಭ ರಾಶಿಯವರಿಗೆ ಒಂದಿಷ್ಟು ಅವಕಾಶಗಳು ಸಿಗುತ್ತೆ. ಕುಟುಂಬದಲ್ಲಿ ತುಂಬಾ ಸಂತಸ ವಾತಾವರಣ ಇರುತ್ತದೆ. ಕೌಂಟುಂಬಿಕ ಏಳಿಗೆ ಸಾಧ್ಯವಾಗಲಿದೆ. ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವಿರಿ. ಒಟ್ಟಾರೆಯಾಗಿ ಡಿಸೆಂಬರ್ ತಿಂಗಳು ವೃಷಭ ರಾಶಿಗೆ ಸಂತಸ ತಂದು ಕೊಡಲಿದೆ.
ಸಾಲಗಳನ್ನು ತೀರಿಸಿಕೊಳ್ಳಲು ಇದು ಸಕಾಲವಾಗಿದೆ. ತುಂಬಾ ಸಂತಸವಾದ ದಿನಮಾನಗಳನ್ನು ನೀವು ಈ ಡಿಸೆಂಬರ್ ತಿಂಗಳಲ್ಲಿ ನೋಡಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಅವಿವಾಹಿತ ಸಹೋದರ ಹಾಗೂ ಸಹೋದರಿಯರಿಗೆ ವಿವಾಹ ನಿಶ್ಚಯವಾಗುವಂತಹ ಸಾಧ್ಯತೆಗಳು ಈ ಮಾಸದಲ್ಲಿ ಇವೆ.
ಅನಿರೀಕ್ಷಿತವಾದ ಪ್ರಯಾಣಗಳು ಪ್ರವಾಸಗಳು ಉಂಟಾಗುತ್ತವೆ. ಸಿನಿಮಾ ಕಲಾವಿದರಿಗೆ ಅದೇ ರೀತಿ ಸಾಹಿತಿಗಳಿಗೆ, ವಿಜ್ಞಾನಿಗಳಿಗೆ, ಬರಹಗಾರರಿಗೆ ನಿಮ್ಮ ಕೆಲಸವನ್ನು ಗುರುತಿಸಿ ಗೌರವಿಸುವಂತಹ ದಿನವನ್ನು ಡಿಸೆಂಬರ್‌ನಲ್ಲಿ ಕಾಣಬಹುದು. ಎಕ್ಸಪೋರ್ಟ್ ವ್ಯವಹಾರ, ಗಾರ್ಮೆಂಟ್ ಬಿಸಿನೆಸ್ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ವಿದ್ಯಾ ಭವಿಷ್ಯ ತುಂಬಾ ಚೆನ್ನಾಗಿದೆ. ಅಂದುಕೊಂಡಿದ್ದನ್ನು ವಿದ್ಯಾರ್ಥಿಗಳು ಮಾಡುವಿರಿ, ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಹೀಗೆ ತುಂಬಾ ಅನುಕೂಲವಾಗುವ ಸಮಯ ಡಿಸೆಂಬರ್‌ನಲ್ಲಿ ಲಭಿಸಲಿದೆ.

ವೈವಾಹಿಕ ಜೀವನ
ಅವಿವಾಹಿತರಿಗೆ ವಿವಾಹ ಭಾಗ್ಯ, ವಿವಾಹಿತರಿಗೆ ಸಂತಾನ ಭಾಗ್ಯವಿದೆ. ಉದ್ಯೋಗ, ವ್ಯಾಪಾರ, ವೃತ್ತಿಯಲ್ಲಿ ತುಂಬಾ ದೊಡ್ಡ ಮಟ್ಟದ ಉತ್ತಮ ಬದಲಾವಣೆಗಳನ್ನು ನೀವು ಕಾಣುವಿರಿ. ಹೊಸದಾದ ಬದಲಾವಣೆಗಳು ಅಂದರೆ ನೂತನವಾಗಿ ಹೊಸ ಕೆಲಸ, ವ್ಯವಹಾರ ಆರಂಭಿಸಲು ಇದೊಂದು ಶುಭ ಸಮಯ ಅಂತನೇ ಹೇಳಬಹುದು. ಡಿಸೆಂಬರ್ ತಿಂಗಳಲ್ಲಿ ತುಂಬಾ ಶುಭ ಘಟನೆಗಳು ವೃಷಭ ರಾಶಿಯವರ ಜೀವನದಲ್ಲಿ ನಡೆಯಲಿವೆ.
ಮನಸ್ಸಿನಲ್ಲಿ ಇದ್ದ ಅಶಾಂತಿಗಳು ದೂರವಾಗುತ್ತವೆ. ದು:ಖಗಳು ಕರಗಿ ಹೋಗುತ್ತವೆ. ಶುಭ ಫಲಗಳಿಂದ ನಿಮಗೆ ಅಭಿವೃದ್ಧಿಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ನೆಲೆ ನಿಂತುಕೊಳ್ಳಲು ಅವಕಾಶಗಳು ಸಿಗಲಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗಕ್ಕಾಗಿ ವಿದೇಶಕ್ಕೆ ಹೋಗಬಹುದು. ವೈವಾಹಿಕ ಜೀವನದಲ್ಲಿ ಇರುವ ಅಡೆತಡೆಗಳು, ಸಮಸ್ಯೆಗಳು ದೂರವಾಗುತ್ತವೆ. ಏಳಿಗೆಯನ್ನು ನೋಡಲು ಸಾಧ್ಯವಾಗುತ್ತದೆ.

ಅದೃಷ್ಟ ಸಂಖ್ಯೆ ಯಾವುದು?
ಇನ್ನೂ ಡಿಸೆಂಬರ್‌ನಲ್ಲಿ ವೃಷಭ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುವ ದಿನಗಳು ಯಾವುವು ಅಂದರೆ 10,19, 20, 21 ಇವು ಅದೃಷ್ಟದ ದಿನಾಂಕಗಳು. ಡಿಸೆಂಬರ್ ಒಂದೇ ತಿಂಗಳಲ್ಲಿ ಎರಡು ಅಮವಾಸ್ಯೆಗಳು ಬರುತ್ತವೆ. ಬಹಳ ಶಕ್ತಿಯುತವಾದ ಅಮವಾಸ್ಯೆಗಳು ಇದಾಗಿದೆ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ತಂದು ಕೊಡುತ್ತದೆ.
ನಿಮ್ಮ ಜೀವನದಲ್ಲಿ ಅಭಿವೃದ್ಧಿ ವೃದ್ಧಿಯಾಗಲಿದೆ. ಮನುಷ್ಯನ ಕೆಟ್ಟ ದೃಷ್ಟಿಗಳು ಅಭಿವೃದ್ಧಿ ಆಗಲು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಡಿಸೆಂಬರ್ ತಿಂಗಳು ಅಂತ್ಯ ಹಾಡಲಿದೆ. ಒಟ್ಟಾರೆಯಾಗಿ ವೃಷಭ ರಾಶಿಯವರ ಡಿಸೆಂಬರ್ ತಿಂಗಳ ಭವಿಷ್ಯ ತುಂಬಾ ಅದ್ಭುತ ಫಲವನ್ನು ನೀಡಲಿದೆ.












Click it and Unblock the Notifications