Yearly Prediction 2025: ಮುಂಬರುವ ವರ್ಷ ಮೇಷ ರಾಶಿಯವರಿಗೆ ಹೇಗಿದೆ? ವಿದ್ಯಾಶಂಕರಾನಂದ ಗುರೂಜಿ ನುಡಿದ ಭವಿಷ್ಯವಾಣಿ
2025ನೇ ವರ್ಷ ಆಗಮಿಸಲಿದೆ. 2025ನೇ ವಾರ್ಷಿಕ ಜಾತಕದಲ್ಲಿ ಅನೇಕ ಗ್ರಹಗಳು ಹಾಗೂ ನಕ್ಷತ್ರಪುಂಜಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಅವುಗಳ ಸ್ಥಾನ ಬದಲಾವಣೆ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾದರೆ ಯಾವ ಗ್ರಹಗಳ ಹಾಗೂ ನಕ್ಷತ್ರಪುಂಜಗಳ ಸ್ಥಾನದಿಂದ ಯಾವ ರಾಶಿಯವರಿಗೆ ಮುಂಬರುವ ವರ್ಷ ಶುಭವಾಗಿದೆ ಎಂದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ನುಡಿದಿದ್ದಾರೆ. ಮೊದಲನೇಯದಾಗಿ ಮೇಷ ರಾಶಿ 2025 ವರ್ಷ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
ಮೇಷ ರಾಶಿ ವರ್ಷ ಭವಿಷ್ಯ 2025
ಮುಂಬರುವ ವರ್ಷದಲ್ಲಿ ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ ಪ್ರಮುಖಗಳ ಗ್ರಹ ಸ್ಥಿತಿಗಳ ಬದಲಾವಣೆಗಳಾಗುತ್ತವೆ. ಇದರಿಂದಾಗಿ ಮೇಷ ರಾಶಿಯವರು ಗುರು ಹಾಗೂ ಶನಿ ಬಲ ಎರಡನ್ನೂ ಕಳೆದುಕೊಳ್ಳುತ್ತದೆ. ಮೇ ತಿಂಗಳಿನಲ್ಲಿ ರಾಹು ಕೇತುಗಳ ಬದಲಾವಣೆಯಿಂದ ಕೊಂಚ ಲಾಭ ನಿರೀಕ್ಷೆ ಮಾಡಬಹುದು. ಆದರೆ ಹೆಚ್ಚಿನ ಲಾಭದ ನಿರೀಕ್ಷೆ ಇಟ್ಟುಕೊಳ್ಳಲು ಆಗುವುದಿಲ್ಲ. ಹಾಗಾಗಿ ಮೇಷ ರಾಶಿಯವರು ಮೇ ತಿಂಗಳಲ್ಲಿ ಗುರು ಬಲ ಕಳೆದುಕೊಳ್ಳುವರು. ಇದಲ್ಲದೆ ಮಾರ್ಚ್‌ನಲ್ಲಿ ಮೇಷ ರಾಶಿಯವರಿಗೆ ಸಾಡೇಸಾತ್ ಪ್ರಾರಂಭದ ಹಂತ ಕೂಡ ಶುರುವಾಗಲಿದೆ.

ಹೀಗಾಗಿ ಮೇಷ ರಾಶಿಯವರಿಗೆ ಮಾರ್ಚ್ ತಿಂಗಳಿನವರೆಗೂ ಸಹ ಶುಭಫಲಗಳನ್ನು ಎದುರುಸುವಿರಿ. ಇದಾದ ಬಳಿಕ ವೃತ್ತಿ ಜೀವನದಲ್ಲಿ ಒಂದಿಷ್ಟು ಸಮಸ್ಯೆಗಳನ್ನು ಎದುರಾಗುತ್ತವೆ. ಉದ್ಯೋಗದಲ್ಲಿ ಏರಿಳಿತ, ವ್ಯಾಪಾರದಲ್ಲಿ ನಷ್ಟ, ವಿಪರೀತ ದೈಹಿಕ ತೊಂದರೆಗಳನ್ನು ನೀವು ಅನುಭವಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು, ಮನಸ್ತಾಪಗಳು, ಜಂಜಾಟಗಳು ಶುರುವಾಗುತ್ತವೆ. ಜೊತೆಗೆ ಪ್ರಮೋಷನ್, ಬಡ್ತಿ ನಿಲ್ಲುತ್ತದೆ. ಎಲ್ಲವೂ ಒಂದು ರೀತಿ ಗಂಟಾಗಿ ಉಳಿದುಕೊಳ್ಳುತ್ತದೆ. ತುಂಬಾ ಕಾರ್ಯಕ್ಷೇತ್ರದಲ್ಲಿ ಅಪಮಾನಗಳನ್ನು ಎದುರಿಸುವ ಸಂದರ್ಭ ಕೂಡ ಉಂಟಾಗುತ್ತದೆ.
ಹಾಗಂತ ಮೇಷ ರಾಶಿಯವರು ಭಯಪಡುವ ಅವಶ್ಯಕತೆ ಇಲ್ಲ. ಕೊನೆಯಲ್ಲಿ ಕೆಲ ಪರಿಹಾರಗಳನ್ನು ನೀಡಲಾಗಿದೆ. ಅವುಗಳನ್ನು ಚಾಚೂತಪ್ಪದೆ ಅನುಸರಿಸಿದರೆ ನಿಮ್ಮ ಜೀವನದಲ್ಲಿ ಸಾಡೇಸಾತ್ ಪ್ರಭಾವ ಕಡಿಮೆಯಾಗುತ್ತದೆ. ಜೊತೆಗೆ ಅದರಿಂದ ಉಂಟಾಗುವ ಸಮಸ್ಯೆಗಳ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಹಾಗಾದರೆ 2025ನೇ ವರ್ಷ ಭವಿಷ್ಯದಲ್ಲಿ ಮೇಷ ರಾಶಿಯವರ ಆರ್ಥಿಕ, ಕೌಟುಂಬಿಕ, ಶಿಕ್ಷಣ, ವೃತ್ತಿ ಜೀವನ ಹೇಗಿದೆ ಎನ್ನುವುದನ್ನು ತಿಳಿಯೋಣ. ಇದಕ್ಕೂ ಮೊದಲು ಮೇಷ ರಾಶಿಯವರ ಮೇಲೆ ಸಾಡೇಸಾತ್ ಪ್ರಭಾವದ ಬಗ್ಗೆ ತಿಳಿಯೋಣ.
ಮೇಷ ರಾಶಿಯವರಿಗೆ ಸಾಡೇಸಾತ್ ಪ್ರಭಾವ
ಮೇಷ ರಾಶಿಯವರು ನಿಮ್ಮ ಜಾತಕವನ್ನು ಒಮ್ಮೆ ಪರಿಶೀಲನೆ ಮಾಡಬೇಕಾಗಿರುವುದು ತುಂಬಾ ಮುಖ್ಯ. ಯಾಕೆಂದರೆ ನಿಮ್ಮ ಜಾತಕದಲ್ಲಿ ಇದು ಎಷ್ಟನೇ ಸಾಡೇಸಾತ್ ಎಂದು ತಿಳಿದುಕೊಳ್ಳಬೇಕು. ಈ ಬಾರಿ ಬರುವ ಸಾಡೇಸಾತ್ ನಿಮ್ಮ ಜಾತಕದಲ್ಲಿ ಮೊದಲನೇ ಅಥವಾ ಮೂರನೇ ಸಾಡೇಸಾತ್ ಆಗಿದ್ದರೆ ನಿಮಗೆ ತುಂಬಾ ಸಮಸ್ಯೆಗಳು ಇರುತ್ತದೆ. ಇದು ಎರಡನೇ ಸಾಡೇಸಾತ್ ಆಗಿದ್ದರೆ ಅದು ನಿಮಗೆ ಸಮಸ್ಯೆಗಳನ್ನು ಮಾಡುವುದಿಲ್ಲ. ಎರಡನೇ ಸಾಡೇಸಾತ್ ಕೊಂಬು ಶನಿ ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಸಮಸ್ಯೆ ಮಾಡಲಾರದು. ಹೀಗಾಗಿ ಇದು ಎಷ್ಟನೇ ಸಾಡೇಸಾತ್ ಎನ್ನುವುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ವಿಶೇಷವಾಗಿ ಶನಿಯ ಸ್ವಂತ ರಾಶಿಗಳಾದ ಮಕರ ಮತ್ತು ಕುಂಭ ರಾಶಿಯವರಿಗೆ ಅತಿ ಹೆಚ್ಚು ಸಾಡೇಸಾತ್‌ನ ಪೀಡೆ ಇರುವುದಿಲ್ಲ. ಹೀಗಾಗಿ ನಾವು ಸಾಡೇಸಾತ್ ಅಂದರೆ ಹೆದರಿಕೊಳ್ಳುವುದು ಬೇಡ. ಧೈರ್ಯವಾಗಿರುವುದು ಮುಖ್ಯವಾಗುತ್ತದೆ. ಮತ್ತೊಬ್ಬರನ್ನು ನೋಡಿ ನೀವು ಬದುಕುವುದನ್ನು ಬಿಟ್ಟುಬಿಡಿ. ದೇವರು ಕೊಟ್ಟಿರುವುದರಲ್ಲಿ ಸಮಾಧಾನವಾಗಿ ಜೀವನ ಮಾಡಬೇಕು. ಹಾಗಾದರೆ 2025ರಲ್ಲಿ ಮೇಷ ರಾಶಿಯವರ ಆರ್ಥಿಕ ಜೀವನ ಹೇಗಿದೆ ಎಂದು ತಿಳಿಯೋಣ.
ಆರ್ಥಿಕ ಜೀವ
2025ನೇ ವರ್ಷದಲ್ಲಿ ಮೇಷ ರಾಶಿಯವರ ಆರ್ಥಿಕ ಜೀವನ ತುಂಬಾ ಉತ್ತಮವಾಗಿರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಮುಂಬರುವ ವರ್ಷ ಮೇಷ ರಾಶಿಯವರಿಗೆ ಉತ್ತಮವಾಗಿಲ್ಲ. ಶುಕ್ರ ಸಂಚಾರ ಮೇಷ ರಾಶಿಯವರಿಗೆ ಹಣಕಾಸಿನ ತೊಂದರೆಯನ್ನು ನೀಡುತ್ತಾನೆ. ವ್ಯಯ, ಭಾಗ್ಯಧಿಪತಿಯಾದ ಶುಕ್ರನು ಮೇಷ ರಾಶಿಯವರಿಗೆ ಹನಕಾಶಿನ ವಿಷಯದಲ್ಲಿ ಅನಾನುಕೂಲ ಮಾಡುತ್ತಾನೆ. ಹೀಗಾಗಿ ಸಾಲ, ಖರ್ಚು ಹಿಡಿತದಲ್ಲಿ ಇಟ್ಟುಕೊಳ್ಳಿ. ಹೆಚ್ಚು ಹಣ ವ್ಯಯಮಾಡುವುದನ್ನು ತಪ್ಪಿಸಿ. ಇದಕ್ಕೆ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅದನ್ನು ಅನುಸರಿಸಿದರೆ ಸಮಸ್ಯೆಗಳಿಂದ ದೂರವಿರಬಹುದು.
ಶಿಕ್ಷಣ ಜೀವನ
ಇನ್ನೂ 2025ನೇ ವರ್ಷದಲ್ಲಿ ಮೇಷ ರಾಶಿಯವರ ಶಿಕ್ಷಣ ಕುಂಟಿತವಾಗಲಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳು ಮೇಷ ರಾಶಿಯವರ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ತುಂಬಾ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಕೊಂಚ ಎಡವುತ್ತಾರೆ. ಮುಂಬರುವ ವರ್ಷ ವಿದ್ಯಾಭಂಗ ಯೋಗ ಉಂಟಾಗುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವವರು ಏಪ್ರಿಲ್ ಒಳಗೆ ಮುಗಿಸಿಕೊಳ್ಳಿ. ಇದಾದ ನಂತರ ಸಮಯ ಉತ್ತಮವಾಗಿಲ್ಲ ಎಂದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ನುಡಿದಿದ್ದಾರೆ.
ಕೌಟುಂಬಿಕ ವಿಚಾರ
ಇನ್ನೂ ಮೇಷ ರಾಶಿಯವರ ಕುಟುಂಬ ಜೀವನ ಮುಂಬರುವ ವರ್ಷ ಅಷ್ಟೊಂದು ಉತ್ತಮವಾಗಿಲ್ಲ. ಕುಟುಂಬ ಸದಸ್ಯರ ನಡುವ ಸಮಸ್ಯೆ ಇರುತ್ತದೆ. ನೀವು ಏನೇ ಮಾಡಿದರೂ ತಪ್ಪು ಕಂಡು ಹಿಡಿಯುತ್ತಾರೆ. ಯಾವುದರಲ್ಲೂ ನೆಮ್ಮದಿ ಇರುವುದಿಲ್ಲ. ಪ್ರೀತಿ ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಇರುತ್ತವೆ. ಪ್ರೀತಿಸಿದವರನ್ನು ಕಳೆದುಕೊಳ್ಳುವಿರಿ. ಯಾವುದೇ ಏಳಿಗೆ ಇರುವುದಿಲ್ಲ. ಪ್ರೇಮ ವಿವಾಹಕ್ಕೆ ಈ ಸಮಯದಲ್ಲಿ ಪ್ರಯತ್ನ ಮಾಡಬೇಡಿ. ಸಂಸಾರದಲ್ಲಿ ತೊಂದರೆ ತಾಪತ್ರೆಯಗಳು ಹೆಚ್ಚಾಗುತ್ತವೆ. ಹೀಗಾಗಿ ತಾಳ್ಮೆಯಿಂದ ವರ್ತಿಸಿ.
ಆರೋಗ್ಯ
ಇನ್ನೂ ಮೇಷ ರಾಶಿಯವರ ಆರೋಗ್ಯ ಕೂಡ ಮುಂಬರುವ ವರ್ಷ ಉತ್ತಮವಾಗಿರುವುದಿಲ್ಲ. ಸಣ್ಣ ಆರೋಗ್ಯ ಸಮಸ್ಯೆಗಳು ತುಂಬಾ ಬಾದಿಸುತ್ತವೆ. ಹೀಗಾಗಿ ಜಾಗರೂಕರಾಗಿರಿ. ಅತಿಯಾದ ನಿದ್ರೆ ಮಾಡುವಿರಿ. ಸೋಮಾರಿತನ ಮನೆ ಮಾಡುತ್ತದೆ. ಹೀಗಾಗಿ ಸ್ವಲ್ಪ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಇದಕ್ಕೆಲ್ಲಾ ಪರಿಹಾರಗಳನ್ನು ಈಗ ತಿಳಿಯೋಣ.
ಪರಿಹಾರಗಳು:-
ಮೇಷ ರಾಶಿಯವರಿಗೆ 2025ನೇ ವರ್ಷದಲ್ಲಿ ಗುರು ಮತ್ತು ಶನಿ ಬಲ ಇಲ್ಲ. ಹೀಗಾಗಿ ಮೂರು ನಕ್ಷತ್ರದವರು ಕೆಲ ಪರಿಹಾರಗಳನ್ನು ಮಾಡಬೇಕಾಗುತ್ತದೆ. ಹಾಗಾದರೆ ಆ ಸರಳ ಪರಿಹಾರಗಳು ಯಾವುವು ಎಂದು ತಿಳಿಯೋಣ.
*ಅಶ್ವಿನಿ ನಕ್ಷತ್ರದವರು ಪ್ರತಿ ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡುವುದು ಒಳ್ಳೆಯದು.
*ಭರಣಿ ನಕ್ಷತ್ರದವರು ಪ್ರತೀ ಶುಕ್ರವಾರ ದುರ್ಗಾ ದೇವಿ ದೇವಸ್ಥಾನಕ್ಕೆ ಹೋಗಿ, ದುರ್ಗಾ ಚಾಲೀಸ್ ಪಠಿಸುವುದು ಒಳ್ಳೆಯ ಫಲ ನೀಡುತ್ತದೆ.
*ಕೃತಿಕಾ ನಕ್ಷತ್ರದವರು ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಪ್ರತೀ ಮಂಗಳವಾರದ ದಿವಸ ಸಂಜೆ ಹೋಗಿ ಪ್ರಾರ್ಥನೆ ಮಾಡಿ.
ಈ ಮೂರು ನಕ್ಷತ್ರದವರು ಸಾದ್ಯವಾದರೆ ಐದು ಅರಳಿ ಮರವನ್ನು ನೆಟ್ಟು ಪೋಷಣೆ ಮಾಡಿ. ಇದು ಹೇಗೆ ಬೆಳೆಯುತ್ತೋ ನಿಮ್ಮ ಸಮಸ್ಯೆಗಳು ಅದೇ ರೀತಿಯಾಗಿ ನಾಶವಾಗುತ್ತವೆ. ಜೊತೆಗೆ ಪ್ರಕೃತಿಯನ್ನು ಉಳಿಸಿದಂತಾಗುತ್ತದೆ. ಜೊತೆಗೆ ನಿಮ್ಮ ಮುಂದಿನ ಜೀವನದ ಬೆಳಕನ್ನೂ ಸಹ ಹೆಚ್ಚಿಸುತ್ತಾ ಹೋದಂತಾಗುತ್ತದೆ.












Click it and Unblock the Notifications