Malavya Rajyog 2024: ಶುಕ್ರನಿಂದ ಸೃಷ್ಟಿಯಾದ ಮಾಲವ್ಯ ರಾಜಯೋಗ: ಮುಂದಿನ 12 ದಿನಗಳು ಈ 3 ರಾಶಿಗಳಿಗೆ ಸೂಪರ್
ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಒಂದೇ ರಾಶಿಯಲ್ಲಿ ಹಲವಾರು ಗ್ರಹಗಳು ಸಂಚಾರ ಮಾಡಿದಾಗ ಶುಭ ಹಾಗೂ ಅಶುಭ ಯೋಗಗಳು ಹುಟ್ಟಿಕೊಳ್ಳುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಬೀಳಲಿದೆ.
ಅಂದಹಾಗೆ ಶುಕ್ರನನ್ನು ಅಸುರರ ಗುರು ಎಂದು ವೈದಿಕ ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಈ ಶುಕ್ರನು ವೃಷಭ ಮತ್ತು ತುಲಾ ರಾಶಿಗಳಿಗೆ ಅಧಿಪತಿಯಾಗಿದ್ದು ತಿಂಗಳಿಗೊಮ್ಮೆ ರಾಶಿಗಳನ್ನು ಬದಲಾಯಿಸುತ್ತಾನೆ. ಈ ಶುಕ್ರ ಪ್ರಸ್ತುತ ತನ್ನದೇ ಆದ ವೃಷಭ ರಾಶಿಯಲ್ಲಿ ಸಂಚರಿಸುತ್ತಿದೆ. 1 ವರ್ಷದ ನಂತರ ಶುಕ್ರನು ವೃಷಭರಾಶಿಗೆ ತೆರಳಿದ್ದು ಮಾಲವ್ಯ ರಾಜಯೋಗ ಉಂಟಾಗುತ್ತದೆ.
ಈ ರಾಜಯೋಗ ಶುಭ ಯೋಗವಾಗಿದೆ. ಈ ಯೋಗದ ಕಾರಣದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಅದೃಷ್ಟದ ಕೃಪೆಯೊಂದಿಗೆ ಯಶಸ್ಸು ಸಾಧಿಸಲಾಗುತ್ತದೆ. ಈ ಯೋಗದ ಪ್ರಭಾವವನ್ನು ಎಲ್ಲಾ ರಾಶಿಗಳಲ್ಲಿ ನೋಡಬಹುದಾದರೂ, 3 ರಾಶಿಗಳು ತುಂಬಾ ಅದೃಷ್ಟಶಾಲಿಯಾಗಲಿವೆ. ಹಾಗಾದರೆ ಈಗ ಶುಕ್ರನಿಂದ ರೂಪುಗೊಂಡ ಮಾಲವ್ಯ ರಾಜಯೋಗದಿಂದ ಮುಂದಿನ 12 ದಿನಗಳು ಯಾವ ರಾಶಿಯವರಿಗೆ ಅದ್ಭುತವಾಗಿರುತ್ತದೆ ಎಂದು ನೋಡೋಣ.

ವೃಷಭ ರಾಶಿ
ವೃಷಭ ರಾಶಿಯ ಮೊದಲ ಮನೆಯನ್ನು ಶುಕ್ರ ಸಂಕ್ರಮಿಸುವುದರಿಂದ ಮಾಲವ್ಯ ರಾಜಯೋಗ ರೂಪುಗೊಂಡಿದೆ. ಇದು ಈ ರಾಶಿಗಳ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಅವಿವಾಹಿತರಿಗೆ ಅಂದುಕೋಂಡ ಸಂಗಾತಿ ದೊರೆಯಲಿದ್ದಾರೆ.
ಆದಾಯದಲ್ಲಿ ಹೆಚ್ಚಳ ಸಾಧ್ಯತೆ ಇದೆ. ಅದೇ ಸಮಯದಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯೊಂದಿಗಿನ ಸಾಮರಸ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಮಾಲವ್ಯ ರಾಜಯೋಗ ಮಂಗಳಕರವಾಗಿರುತ್ತದೆ. ಆದಾಯದ ಮನೆಯಲ್ಲಿ ಶುಕ್ರನಿದ್ದು, ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ಕೆಲವರು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು.
ಹೊಸ ಆಲೋಚನೆಗಳಿಂದ ವ್ಯಾಪಾರಿಗಳು ಭವಿಷ್ಯದಲ್ಲಿ ಅಪಾರ ಲಾಭವನ್ನು ಪಡೆಯುತ್ತಾರೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಿಂದ ಉತ್ತಮ ಲಾಭ ಸಿಗಲಿದೆ.

ಸಿಂಹ ರಾಶಿ
ಸಿಂಹ ರಾಶಿಯ 10 ನೇ ಮನೆಯಲ್ಲಿ ಶುಕ್ರನು ಮಾಲವ್ಯ ರಾಜಯೋಗವನ್ನು ಸೃಷ್ಟಿಸುತ್ತಾನೆ. ಹೀಗಾಗಿ ಈ ರಾಶಿಚಕ್ರದವರು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ.
ಉದ್ಯೋಗಿಗಳಿಗೆ ಕಚೇರಿಯಲ್ಲಿ ಅನಿರೀಕ್ಷಿತ ಲಾಭ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ತಂದೆಯಿಂದ ಸಂಪೂರ್ಣ ಬೆಂಬಲ ಪಡೆಯುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications