Venus Direct 2025: ಮೀನ ರಾಶಿಯಲ್ಲಿ ಶುಕ್ರ ನೇರ 2025: ಈ ರಾಶಿಯವರ ಸಂಪತ್ತು, ಸಮೃದ್ಧಿ ಹೆಚ್ಚಳ
ಸೌಂದರ್ಯ, ಪ್ರೀತಿ, ಕಲೆ, ಸೌಕರ್ಯ, ಸಂಪತ್ತು ಮತ್ತು ವೈಭವವನ್ನು ಸಂಕೇತಿಸುವ ಗ್ರಹವಾದ ಶುಕ್ರ ಕಾಲಕಾಲಕ್ಕೆ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಈ ಅವಧಿಯಲ್ಲಿ ಕೆಲವೊಮ್ಮೆ ಗ್ರಹಗಳು ಹಿಮ್ಮುಖ ಮತ್ತು ನೇರವಾಗಿ ಸಾಗುತ್ತವೆ. ಏಪ್ರಿಲ್ 13ರಂದು ಬೆಳಿಗ್ಗೆ 6:31ಕ್ಕೆ ಭಾನುವಾರ ಶುಕ್ರ ಗ್ರಹ ಮೀನ ರಾಶಿಯಲ್ಲಿ ನೇರವಾಗಿ ಸಾಗುತ್ತದೆ. ಶುಕ್ರ ನೇರ ಸಂಚಾರದ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಕಂಡು ಬರಲಿದೆ. ಹಾಗಾದರೆ ಯಾವ ರಾಶಿಗೇನು ಫಲ ಎಂದು ಈಗ ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಜನರಿಗೆ ಶುಕ್ರನ ನೇರ ಚಲನೆಯು ಪ್ರಯೋಜನಕಾರಿಯಾಗಲಿದೆ. ಮೀನ ರಾಶಿಯಲ್ಲಿ ಶುಕ್ರ ನೇರವಾಗಿರುವುದರಿಂದ ವ್ಯವಹಾರದಲ್ಲಿ ಬೆಳವಣಿಗೆಯ ಸಾಧ್ಯತೆಗಳಿವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಪ್ರಗತಿಯ ಸಾಧ್ಯತೆ ಇದೆ. ಮನೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯಬಹುದು.
ಶುಕ್ರ ನೇರ ಸಂಚಾರದಿಂದಾಗಿ ಕರ್ಕಾಟಕ ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆಯನ್ನು ಗಮನಿಸಬಹುದು. ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲಿದ್ದ ಆರೋಪಗಳು ದೂರವಾಗಿ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗಲಿದೆ. ಜವಬ್ದಾರಿಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗಲಿದೆ.

ತುಲಾ ರಾಶಿ
ತುಲಾ ರಾಶಿಯ ಜನರಿಗೆ ಶುಕ್ರನ ನೇರ ಚಲನೆಯು ಪ್ರಯೋಜನಕಾರಿಯಾಗಲಿದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದು ನಿಮ್ಮ ಪ್ರಗತಿಗೆ ದಾರಿ ದೀಪವಾಗಲಿದೆ. ಬಡ್ತಿಯ ಬಗ್ಗೆ ಚರ್ಚೆ ನಡೆಯಲಿದೆ. ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ನೀವು ವಾದಗಳಿಂದ ದೂರವಿರುವುದು ಉತ್ತಮ. ನಿಮ್ಮ ಮಾತನ್ನು ಜನ ಆಲಿಸುತ್ತಾರೆ. ನಿಮ್ಮ ಮಾತಿನಂತೆ ನಡೆದುಕೊಳ್ಳುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ಧಾರ್ಮಿಕ ಪ್ರವಾಸಗಳು ಯಶಸ್ವಿಯಾಗುತ್ತವೆ. ನೀವು ಎಲ್ಲೋ ಹೊರಗೆ ಹೋಗಲು ಯೋಜಿಸಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಸಂಗಾತಿಯೊಂದಿಗೆ ಪರಸ್ಪರ ಸಮನ್ವಯತೆ ಹೆಚ್ಚಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇರಲಿದೆ.

ಕುಂಭ ರಾಶಿ
ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ನೀವು ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ಇದು ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.
ಇನ್ನೂ ಉದ್ಯಮಿಗಳಿಗೂ ಸಮಯ ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಆದಾಯ ಹೆಚ್ಚಳದ ಬಗ್ಗೆ ಚರ್ಚೆ ನಡೆಯಬಹುದು. ನಿಮ್ಮ ಕೆಲಸದಲ್ಲಿ ನೀವು ಸಾಕಷ್ಟು ಹೆಸರು ಮಾಡುವಿರಿ. ಆದರೆ ಯಾರನ್ನೂ ಅವಮಾನಿಸಬೇಡಿ. ಎಲ್ಲರನ್ನು ಗೌರವದಿಂದ ಕಾಣುವುದು ಒಳ್ಲೆಯದು.












Click it and Unblock the Notifications