ಜ್ಯೋತಿಷ್ಯ ಸಲಹೆ: ಭವಿಷ್ಯದಲ್ಲಿ ಕೆಡುಕಿದ್ದರೆ ಪರಿಹಾರ ತಿಳಿಸಿ...

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಭವಿಷ್ಯದ ಬಗ್ಗೆ ನಿಮಗಿರುವ ಪ್ರಶ್ನೆಗಳನ್ನು ಕಳಿಸಿದರೆ ಒನ್ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಉತ್ತರ ನೀಡುತ್ತಾರೆ ಎಂದು ತಿಳಿಸಲಾಗಿತ್ತು. ಆ ನಂತರ ಅನೇಕ ಓದುಗರು ತಮ್ಮ ಪ್ರಶ್ನೆಗಳನ್ನು ಕಳುಹಿಸಿದ್ದರು. ಆ ಪೈಕಿ ಆಯ್ದ 2 ಪತ್ರಕ್ಕೆ ಜ್ಯೋತಿಷಿಗಳು ಉತ್ತರಿಸಿದ್ದಾರೆ.

ಅಂದಹಾಗೆ ನೀವು ಕೂಡ ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ astrology.kannada@oneindia.co.in ಮೂಲಕ ಕಳುಹಿಸಿದರೆ, ಆಯ್ದ ಪ್ರಶ್ನೆಗಳಿಗೆ ಪರಿಹಾರ ಸಹಿತವಾಗಿ ಜ್ಯೋತಿಷಿಗಳು ಉತ್ತರ ನೀಡುತ್ತಾರೆ.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ

Vedic astrolgy Solution to questions asked by Oneindia Kannada readers

ಪ್ರಶ್ನೆ: ನನಗೀಗ 21 ವರ್ಷ. ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕಿದೆ. ನನ್ನ ಜನ್ಮ ದಿನಾಂಕ 16/03/1996. ನನ್ನ ಜಾತಕದಲ್ಲಿರುವ ಒಳ್ಳೆಯದು ಹಾಗೂ ಕೆಟ್ಟದಿದ್ದರೆ ಆ ಬಗ್ಗೆ ತಿಳಿಸಿ. ಒಂದು ವೇಳೆ ಕೆಟ್ಟದ್ದು ಇದ್ದರೆ ಅದಕ್ಕೆ ಪರಿಹಾರವನ್ನೂ ತಿಳಿಸಿಕೊಡಿ.
ಉತ್ತರ: ನಮಸ್ಕಾರ,
ನೀವು ಕೊಟ್ಟ ಮಾಹಿತಿ ಪ್ರಕಾರ ನಿಮ್ಮ ನಕ್ಷತ್ರ ಶ್ರವಣ 3ನೇ ಪಾದ, ಮಕರ ರಾಶಿ ಹಾಗೂ ಮೇಷ ಲಗ್ನ ಆಗುತ್ತದೆ. ಗುರು ಹಾಗೂ ರಾಹು ಸ್ಥಾನದಿಂದ ನೋಡಿದಾಗ ನಿಮ್ಮ ಜಾತಕ ಚನ್ನಾಗಿದೆ. ಹಾಗೆಯೇ ಶನಿ ಹಾಗೂ ರವಿ ಗ್ರಹದ ಸ್ಥಿತಿ ನೋಡಿದಾಗ ಚನ್ನಾಗಿಲ್ಲ. ಒಟ್ಟಿನಲ್ಲಿ ಶುಭಾಶುಭ ಫಲಗಳ ಸಮ್ಮಿಶ್ರಣದಿಂದ ನಿಮ್ಮ ಜಾತಕ ಕೂಡಿದೆ.

06/05/2025ನೇ ಇಸವಿಯ ತನಕ ನಿಮಗೆ ರಾಹು ದಶೆ ನಡೆಯುತ್ತದೆ. ಆ ಕಾರಣ ನಿಮ್ಮ ನಿತ್ಯ ಜೀವನ ಹಾಯಾಗಿ ಇರುತ್ತದೆ. ಚೆನ್ನಾಗಿ ಕುರುಕುಲು ತಿಂಡಿಗಳನ್ನು ತಿನ್ನುವುದು, ಜಾಸ್ತಿ ಓಡಾಡುವುದು ನಿಮಗೆ ಇಷ್ಟವಾಗಬಹುದು. ಆದರೆ ಆರೋಗ್ಯ ರೀತಿಯಿಂದ ಅದು ದುಷ್ಪರಿಣಾಮ ಬೀರುವುದು ಖಚಿತ.

ನಿಮಗೆ ಇನ್ನೂ ಹಣದ ಬೆಲೆ ಗೊತ್ತಾಗ ಬೇಕಿದೆ. ಹಣವನ್ನು ಹಿತ- ಮಿತವಾಗಿ ಬಳಸಿ. ಲಗ್ನ ಸಪ್ತಮಾಧಿಪತಿ ಶುಕ್ರನಾಗಿದ್ದು, ಲಗ್ನದಲ್ಲಿಯೇ ಇದ್ದು ಸಪ್ತಮ ನೋಡುತ್ತಿರುವುದರಿಂದ ಪ್ರೀತಿ- ಪ್ರೇಮ ಇತ್ಯಾದಿಗಳಲ್ಲಿ ಸುಲಭವಾಗಿ ಬೀಳುತ್ತೀರಿ. ನಿಮ್ಮ ಜಾತಕದಲ್ಲಿ ಬುಧ ಹಾಗೂ ಗುರು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಹೆಚ್ಚಿನ ವಿದ್ಯೆ ಅಥವಾ ಉನ್ನತ ವ್ಯಾಸಂಗ ಮಾಡುವತ್ತ ಚಿಂತಿಸಿದರೆ ಉತ್ತಮ.

ಎಲ್ಲಕ್ಕೂ ಮುಂಚೆ ಹಠ, ಸಿಟ್ಟು ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಅಥವಾ ಅದೇ ಹಠವನ್ನು ಓದಿನಲ್ಲಿ ತೋರಿಸಿ ಯಶಸ್ಸು ಪಡೆಯಿರಿ. ಶುಭವಾಗಲಿ.

ಮದುವೆ ಮುರಿದಿದೆ, ಕೆಲಸ ಕಳೆದುಕೊಂಡಿದ್ದೀನಿ, ನನ್ನ ಭವಿಷ್ಯ ಹೇಗಿದೆ?
ಪ್ರಶ್ನೆ: ನನ್ನ ಜನ್ಮ ದಿನಾಂಕ 26ನೇ ಮೇ, 1979. ನನ್ನ ಮದುವೆ ಮುರಿದು ಬಿದ್ದಿದೆ (ಆಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ, ಕೆಲಸ ಕಳೆದುಕೊಂಡಿದ್ದೀನಿ, ತಂದೆಯನ್ನು ಕಳೆದುಕೊಂಡಿದ್ದೀನಿ. ಹಣಕಾಸಿನ ಸ್ಥಿತಿ ತುಂಬ ಕೆಟ್ಟದಾಗಿದೆ. ನನಗೆ ಮತ್ತೆ ವಿವಾಹ ಆಗುತ್ತಾ, ಹೊಸ ಕೆಲಸ ಸಿಗುತ್ತಾ ತಿಳಿಸಿ.
ಉತ್ತರ: ಉಮೇಶ ಅವರೇ ನೀವು ಕೊಟ್ಟ ಮಾಹಿತಿ ಪ್ರಕಾರ ನಿಮ್ಮದು ರೋಹಿಣಿ ನಕ್ಷತ್ರ 3ನೇ ಪಾದ, ವೃಷಭ ರಾಶಿ ಹಾಗೂ ವೃಶ್ಚಿಕ ಲಗ್ನ ಆಗುತ್ತದೆ. ನಿಮ್ಮ ಜಾತಕದಲ್ಲಿ ಲಗ್ನ ಸಪ್ತಮಾಧಿಪತಿ ಶುಕ್ರ (ಶುಭ ಗ್ರಹ) ಲಗ್ನಾತ್ ಷಷ್ಠದಲ್ಲಿ ಇದ್ದರೆ, ಚಂದ್ರ ಸಪ್ತಮಾಧಿಪತಿ ಕುಜ ಸ್ವಸ್ಥಾನದಲ್ಲಿ ಇದ್ದರೂ ಸಹ ಚಂದ್ರನಿಂದ ವ್ಯಯದಲ್ಲಿ ಇದ್ದಾನೆ. ಇದರ ಫಲವಾಗಿ ನಿಮ್ಮ ದಾಂಪತ್ಯ ಜೀವನ ವಿಚ್ಚೇದನದ ಹಂತಕ್ಕೆ ತಲುಪಿದೆ.

ಈಗಲೂ ಕಾಲ ಮಿಂಚಿಲ್ಲ ನಿಮ್ಮ ದಾಂಪತ್ಯ ಸರಿ ಮಾಡಿಕೊಳ್ಳಿ. ಇನ್ನೊಂದು ಮದುವೆ ಕನಸು ಬೇಡ. ನಿಮ್ಮ ಜಾತಕದ ಪ್ರಕಾರ ನಿಮಗೆ ಇನ್ನೂ 2 ವರ್ಷ ನಾಲ್ಕು ತಿಂಗಳು ಅಷ್ಟಮ ಶನಿ ಪ್ರಭಾವ ಬಾಕಿ ಇದೆ. 16-8-2018ರಂದು ಶುಕ್ರಾದಿತ್ಯ ಭುಕ್ತಿ ಸಂಧಿ ಸಹ ಇದೆ. ಆದುದರಿಂದ 2019ನೇ ಇಸವಿಯ ಮಧ್ಯ ಭಾಗದ ತನಕ ಬಹಳ ಎಚ್ಚರದಿಂದ ಇರಬೇಕು.

ಆದರೆ, ಈ ವರ್ಷ ಸೆಪ್ಟೆಂಬರ್ ತನಕ ನಿಮಗೆ ಗುರುಬಲ ಇರುವುದರಿಂದ ಅಷ್ಟರೊಳಗೆ ಉತ್ತಮವಾದ ಇನ್ನೊಂದು ಉದ್ಯೋಗ ಹುಡುಕಿಕೊಂಡು ದಾಂಪತ್ಯ ವಿರಸವನ್ನೂ ಹೇಗಾದರೂ ಸರಿ ಮಾಡಿಕೊಳ್ಳಿ. ಕಷ್ಟವಾದರೂ ಪರವಾಗಿಲ್ಲ ಶನಿ ಶಾಂತಿ ಹವನ ಮಾಡಿಸಿ. ಮೊದಲು ಶ್ರೀ ಕ್ಷೇತ್ಯ್ರ ಧರ್ಮಸ್ಥಳದ ಸನಿಹದಲ್ಲಿ ನೆಲೆಸಿರುವ ಸೌತಡ್ಕಾ ಮಹಾಗಣಪತಿ ದರ್ಶನ ಮಾಡಿ ಅಲ್ಲಿ ಸ್ವಾಮಿಗೆ ಅರ್ಚನೆ ಮಾಡಿಸಿ.

ಆ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನದೀ ಸ್ನಾನ ಹಾಗೂ ಮೂಲ ಗರ್ಭ ಗುಡಿಯ ಹತ್ತಿರ ತೀರ್ಥಸ್ನಾನ ಮಾಡಿ, ಮಂಜುನಾಥನ ದರ್ಶನ ಮಾಡಿ. ಆ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸಹ ನದೀ ಸ್ನಾನ ಮಾಡಿ, ದೇವರ ದರ್ಶನ ಮಾಡಿ. ಈ ಎಲ್ಲ ದೈವ ಸಾನ್ನಿಧ್ಯಗಳಲ್ಲಿ ಉತ್ತಮ ಉದ್ಯೋಗ ಪ್ರಾಪ್ತಿಗಾಗಿ ಹಾಗೂ ನಿಮ್ಮ ದಾಂಪತ್ಯ ಸರಿ ಹೋಗಬೇಕೆಂದು ಪ್ರಾರ್ಥ ಮಾಡಿಕೊಳ್ಳಿ. ಶುಭವಾಗಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the suggestions, solution given by Astrologer Pandit Vittal Bhat to Oneindia Kannada readers questions.
Please Wait while comments are loading...