Get Updates
Get notified of breaking news, exclusive insights, and must-see stories!

ವಾಸ್ತು ಪ್ರಕಾರ ಬಾತ್‌ರೂಮ್‌ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಮೂಲೆಯೂ ವಿಶೇಷ ಮಹತ್ವವನ್ನು ಹೊಂದಿರುತ್ತವೆ. ವಾಸ್ತು ತಜ್ಞರ ಅಭಿಪ್ರಾಯದಂತೆ ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ವಾತಾವರಣ ಉಳಿಯುತ್ತದೆ. ಆದರೆ ಕೆಲವೊಮ್ಮೆ ಮನೆಗಳಲ್ಲಿ ಜಗಳಗಳು, ಮನಶಾಂತಿಯ ಕೊರತೆ ಮತ್ತು ಆರ್ಥಿಕ ಹಿನ್ನಡೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಾಸ್ತು ದೋಷವೂ ಒಂದು ಪ್ರಮುಖ ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ.

ಈ ಸಮಸ್ಯೆಗಳನ್ನು ನಿವಾರಿಸಲು ಬಾತ್‌ರೂಮ್ ಮತ್ತು ಟಾಯ್ಲೆಟ್‌ನಲ್ಲಿ ಉಪ್ಪನ್ನು ಇಡುವುದು ಉಪಯುಕ್ತವಾಗಿದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ಸ್ಥಳಗಳಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಿರುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಉಪ್ಪುನ್ನು ಬಾತ್‌ರೂಮ್ ಇಟ್ಟರೆ ಆ ನೆಗೆಟಿವ್ ಶಕ್ತಿಯನ್ನು ಹೀರಿಕೊಳ್ಳುವ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ.

Vastu Tips

ಹೇಗೆ ಬಳಸಬೇಕು?

ಸಮುದ್ರ ಉಪ್ಪನ್ನು ಒಂದು ಗಾಜಿನ ಪಾತ್ರೆಯಲ್ಲಿ ಹಾಕಿ ನೀರು ಬೀಳದ ಜಾಗ ಅಥವಾ ಬಾತ್‌ರೂಮ್‌ನ ಮೂಲೆಯಲ್ಲಿ ಇಡಬೇಕು. ಇತರ ಪಾತ್ರೆಗಳ ಬದಲು ಗಾಜಿನ ಪಾತ್ರೆಯನ್ನು ಬಳಸುವುದು ಒಳ್ಳೆಯದು. ಪ್ರತೀ ವಾರ ಉಪ್ಪನ್ನು ಬದಲಾಯಿಸಬೇಕು. ಹಳೆಯ ಉಪ್ಪನ್ನು ತೆಗೆದು ಅಥವಾ ನೀರಿನಲ್ಲಿ ಕರಗಿಸಿ ಆ ನೀರನ್ನು ಚೆಲ್ಲಬೇಕು.

Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ

ಲಾಭಗಳೇನು?

ಈ ವಿಧಾನದಿಂದ ಮನೆಯ ವಾತಾವರಣ ಸುಧಾರಿಸುತ್ತದೆ ಎಂದು ನಂಬಲಾಗಿದೆ. ಮನಶಾಂತಿ ಕೂಡ ಹೆಚ್ಚುತ್ತದೆ, ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಬಲವಾಗುತ್ತವೆ ಎಂದು ವಾಸ್ತು ತಜ್ಙರ ಅಭಿಪ್ರಾಯ ಆಗಿದೆ. ಉಪ್ಪು ತೇವವಾಗಿದ್ರೆ ಅದು ನೆಗೆಟಿವ್ ಎನರ್ಜಿ ಹೀರಿಕೊಂಡಿದೆ ಎಂಬ ಸೂಚನೆ ಸೂಚಿಸುತ್ತದೆ.

ಅದೇ ರೀತಿ, ಸ್ನಾನವನ್ನು ಮಾಡುವ ನೀರಿಗೆ ಸ್ವಲ್ಪ ಉಪ್ಪು ಸೇರಿಸುವುದರಿಂದ ನಮ್ಮ ದೇಹದಲ್ಲಿನ ನೆಗೆಟಿವ್ ಎನರ್ಜಿ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ

ವಾಸ್ತು ಪ್ರಕಾರ ಉಪ್ಪಿನ ಈ ಸರಳ ಉಪಾಯಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ವಾಸ್ತು ಶಾಸ್ತ್ರ ತಜ್ಞರು ಅಭಿಪ್ರಾಯಪಡುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+