Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ

ವಾಸ್ತು ಶಾಸ್ತ್ರವೆಂದರೆ ಮನೆ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ. ಅದು ನಮ್ಮ ದಿನ ನಿತ್ಯದ ಜೀವನ ಶೈಲಿಗೆ, ಆರ್ಥಿಕ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಸಂಬಂಧಿಸಿದೆ. ಎಷ್ಟೋ ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೂ ಆತ್ಮವಿಸ್ವಾದ ಕೊರತೆಯಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ವಿಫಲರಾಗುತ್ತಾರೆ. ತಜ್ಞರ ಪ್ರಕಾರ ಸರಿಯಾದ ವಾಸ್ತು ಶಾಸ್ತ್ರದ ಸಲಹೆಗಳನ್ನು ಅನುಸರಿಸದಿರುವುದರಿಂದ ಈ ತರಹದ ತೊಂದರೆಗಳನ್ನು ಅನುಭವಿಸುತ್ತಾರೆ. ಅದೆ ರೀತಿ ಸರಿಯಾದ ವಾಸ್ತು ಕ್ರಮಗಳನ್ನು ಅನುಸರಿಸಿದರೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಜೀವನದಲ್ಲಿ ನಾವು ಆರ್ಥಿಕವಾಗಿ ಕೂಡ ಬದಲಾವಣೆಗಳನ್ನು ಕಾಣಬಹುದು.

ಮೊದಲನೆಯದಾಗಿ ಹೇಳುವುದೇನೆಂದರೆ ನಾವು ಮೂಕ ಪ್ರಾಣಿಗಳಿಗೆ ನಾವು ಆಹಾರ ನೀಡುವುದು ಒಳ್ಳೆಯ ಅಭ್ಯಾಸ ಎಂದು ಹೇಳಲಾಗುತ್ತದೆ. ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದು, ನಾಯಿಗಳಿಗೆ ಬಿಸ್ಕತ್ತು ನೀಡುವುದು ಮತ್ತು ಹಸುಗಳಿಗೆ ಹುಲ್ಲು ತಿನ್ನುಸುವುದು ಇವೆಲ್ಲವೂ ಪುಣ್ಯಕಾರ್ಯಗಳಾಗಿದ್ದು ಇದರಿಂದ ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ದೇವರು ಪ್ರತಿಯೊಂದು ಜೀವಿಯಲ್ಲಿ ಇರುವನು ಎಂಬ ನಂಬಿಕೆ ಇದೆ ಹಾಗಾಗಿ ನಾವು ಮಾಡುವ ಕ್ರಿಯೆಗಳಿಂದ ನಮಗೆ ಸಕಾರಾತ್ಮಕ ಶಕ್ತಿಯ ಪರಿಣಾಮ ಬೀರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.

Vastu Tips

ಮನೆಯ ಒಳಗೆ ನಾವು ಮಾಡುವ ಚಿಕ್ಕ ಚಿಕ್ಕ ಬದಲಾವಣೆಗಳು ನಮಗೆ ಉತ್ತಮ ಫಲಿತಾಂಶ ನೀಡುತ್ತವೆ. ನೀವು ಅತೀ ಹೆಚ್ಚು ಸಮಯ ಕಳೆಯುವ ಕೋಣೆಯಲ್ಲಿ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಇಡುವುದು ಒಳ್ಳೆಯದು. ಅದೇ ರೀತಿ ಏಳು ಕುದುರೆಗಳಿರುವ ಚಿತ್ರವನ್ನು ಹಾಕುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಖಾಲಿ ಗೋಡೆಯ ಎದುರು ಕುಳಿತುಕೊಳ್ಳಬಾರದು. ಏಕೆಂದರೆ ಇದು ನಮ್ಮಲ್ಲಿ ನಕಾರಾತ್ಮಕ ಶಕ್ತಿಯ ಭಾವನೆಗಳನ್ನು ಉಂಟುಮಾಡುತ್ತದೆ.

ಇನ್ನಷ್ಟು ವಾಸ್ತು ಸಲಹೆಗಳು, ಮನೆಯಲ್ಲಿ ಶನಿಯ ಯಂತ್ರವನ್ನು ಇಡುವುದು ಮಂಗಳಕರ ಎಂದು ನಂಬಲಾಗಿದೆ. ಮನೆಯ ಮುಖ್ಯದ್ವಾರ ಬಾಗಿಲಿಗೆ ಹಸಿರು ಮೆಣಸಿನಕಾಯಿ ಮತ್ತು ನಿಂಬೆಹಣ್ಣನ್ನು ಕಟ್ಟುವುದರಿಂದ ದುಷ್ಟಶಕ್ತಿಗಳನ್ನು ದೂರ ಇಡುತ್ತದೆ ಎಂದು ಹೇಳಲಾಗುತ್ತದೆ. ಶನಿವಾರದಂದು ಎರಡು ಗೋಲ್ಢ್ ಫಿಷ್ ಗಳನ್ನು ಇಡುವುದು ಉತ್ತಮ ಮತ್ತು ಶುಭಕರ ಎಂದು ಪರಿಗಣಿಸಲಾಗುತ್ತದೆ.

ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ಸೂರ್ಯನಿಗೆ ನಮಸ್ಕಾರ ಮಾಡುವುದು ಮತ್ತು ಆದಿತ್ಯ ಹೃದಯಂ ಸ್ತೋತ್ರ ಹೇಳುವುದರಿಂದ ಮನಸ್ಸಿಗೆ ಶಕ್ತಿ ನೀಡುತ್ತದೆ ಹಾಗು ಸೂರ್ಯನಿಗೆ ನೀರು ಅರ್ಪಿಸುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸವು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಊಟವನ್ನು ಮಾಡುವಾಗ ನಾವು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಊಟಮಾಡುವುದು ಉತ್ತಮ ಎಂದು ತಜ್ಞರ ಸಲಹೆಯಾಗಿದೆ ಮತ್ತು ಮನೆಯ ಕಿಟಕಿಗಳನ್ನು ತೆರೆಯುವುದರಿಂದ ಮನೆಯ ಒಳಗೆ ಸಕಾರಾತ್ಮಕ ಶಕ್ತಿಯು ಪ್ರವೇಶಿಸುತ್ತದೆ. ಆದ್ದರಿಂದ ನಾವು ಆದಷ್ಟು ಕಿಟಕಿ ಮತ್ತು ಬಾಗಿಲುಗಳನ್ನು ತೆರೆಯುವುದು ಉತ್ತಮ.

ಈ ರೀತಿಯ ಸರಳ ವಾಸ್ತುಶಾಸ್ತ್ರದ ಸಲಹೆಗಳಿಂದ ನಾವು ಮೆನಯಲ್ಲಿ ಆತ್ಮವಿಶ್ವಾಸ, ನೆಮ್ಮದಿ, ಸಮೃದ್ದಿ ಮತ್ತು ಆರ್ಥಿಕ ಪ್ರಗತಿಯ ಯಶಸ್ಸಿನ ಹಾದಿಯಲ್ಲಿ ನಡೆಯಲು ನಮಗೆ ಸಹಾಯ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+