ವೈಶಾಖ ಮಾಸದ ವಾರದ ಪಂಚಾಂಗ: ಏ. 26ರಿಂದ ಮೇ 2
ವೈಶಾಖ ಮಾಸದ ಏ.26ರಿಂದ ಮೇ 2ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಏ. 26. ರವಿವಾರ : ಪುಷ್ಯಾ ನಕ್ಷತ್ರ. ಔಷಧೋಪಚಾರ ಆರಂಭಿಸಲು ಮತ್ತು ಭೂಮಿಪೂಜೆಗೆ ಶುಭಕರ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಏ. 27. ಸೋಮವಾರ : ಆಶ್ಲೇಷಾ. ದೂರ ಪ್ರಯಾಣದಿಂದ ತುಂಬಾ ಶುಭಕರ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಏ. 28. ಮಂಗಳವಾರ : ಮಘಾ. ಭರಣಿ ಮಳೆ ಆರಂಭ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಏ. 29. ಬುಧವಾರ : ಪೂರ್ವಾಫಾಲ್ಗುಣಿ. ಏಕಾದಶಿ. ದೂರ ಪ್ರಯಾಣದಿಂದ ಲಾಭ. [ಸೋಂಬೇರಿಗಳು ಪೂರ್ವ ಫಾಲ್ಗುಣಿ ನಕ್ಷತ್ರದವರು]
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಏ. 30. ಗುರುವಾರ : ಉತ್ತರಾಫಾಲ್ಗುಣಿ. ದೇವರ ಮನೆಯಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮತ್ತು ಉದ್ಯೋಗದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಶುಭದಿನ. ದೂರ ಪ್ರಯಾಣದಿಂದ ಕುಟುಂಬಕ್ಕೆ ಶುಭಕರ. [ಉದ್ಯೋಗ ಭಾಗ್ಯ ಉತ್ತರಫಾಲ್ಗುಣಿ ನಕ್ಷತ್ರಕ್ಕೆ!]
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಮೇ 1. ಶುಕ್ರವಾರ : ಹಸ್ತಾ. ಕಾರ್ಮಿಕರ ದಿನಾಚರಣೆ. ಮೇ ತಿಂಗಳಾರಂಭ. ಹೊಸ ಫ್ಯಾಕ್ಟರಿ ಆರಂಭಿಸಲು ಮತ್ತು ದೇವರ ಮನೆಯಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಹಾಗೂ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಶುಭದಿನ. ದೂರ ಪ್ರಯಾಣದಿಂದ ಸಂತಸ ಮತ್ತು ಲಾಭ. ['ಅಭಯಹಸ್ತ' ನೀಡುವ ಹಸ್ತಾ ನಕ್ಷತ್ರದವರು]
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಮೇ 2. ಶನಿವಾರ : ಹಸ್ತಾ. ವಾಹನದ ಬಿಡಿಭಾಗಗಳ ಖರೀದಿಗೆ ಉತ್ತಮ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ರವಿವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ರವಿವಾರ, ಗುರುವಾರ, ಶುಕ್ರವಾರ, ಶನಿವಾರ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಎಲ್ಲ ಕೆಲಸ ಕಾರ್ಯ ಮಾಡಿಕೊಳ್ಳುವುದು ಉತ್ತಮ.
ಈ ವಾರದ ಗ್ರಹಗತಿ : ಮೇಷ: ರವಿ+ಬುಧ+ಮಂಗಳ. ವೃಷಭ: ಶುಕ್ರ. ಕರ್ಕ: ಗುರು+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.












Click it and Unblock the Notifications