ಕಟಕ ರಾಶಿ ಯುಗಾದಿ ವರ್ಷ ಭವಿಷ್ಯ; ಕಾಡಬಹುದು ವೈದ್ಯಕೀಯ ವೆಚ್ಚ, ಹಣಕಾಸು ವಿಚಾರದಲ್ಲಿ ಇರಲಿ ಎಚ್ಚರ
ಕಟಕ ರಾಶಿಯವರದ್ದು ಭಾವುಕ ಮನಸ್ಥಿತಿ. ಹೊರಗಿನಿಂದ ನೋಡುವವರಿಗೆ, ಮೇಲ್ನೋಟಕ್ಕೆ ಇವರದ್ದು ಕಠಿಣ ಹೃದಯ. ಆದರೆ ಆಳದಲ್ಲಿರುವ ಹೃದಯವಂತಿಕೆ ಅನುಭವಿಸಿದವರಿಗೇ ಗೊತ್ತು. ಪುನರ್ವಸು (4ನೇ ಪಾದ), ಪುಷ್ಯ (4 ಪಾದ) ಮತ್ತು ಆಶ್ಲೇಷ (4 ಪಾದ) ನಕ್ಷತ್ರಗಳಲ್ಲಿ ಜನಿಸಿದರು ಕಟಕ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 5, ಇವರಿಗೆ ಬಿಳಿ ಮತ್ತು ತಿಳಿ ನೀಲಿ ಶುಭ ಬಣ್ಣ, ಪಶ್ಚಿಮ ಶುಭ ದಿಕ್ಕು. ಈಶ್ವರನ ಆರಾಧನೆ ಕಟಕ ರಾಶಿಯವರಿಗೆ ಶ್ರೇಯಸ್ಕರ.
ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ: ಕಟಕ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.
ಕಟಕ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)
ಆದಾಯ: 11
ವ್ಯಯ: 12
ರಾಜಮರ್ಯಾದೆ: 4
ಅವಮಾನ: 5
ಪರಾಭವ ನಾಮ ಸಂವತ್ಸರವು ಕಟಕ ರಾಶಿಯವರಿಗೆ ಎಚ್ಚರಿಕೆ ಮತ್ತು ಆತ್ಮಪರಿಶೀಲನೆಯ ವರ್ಷವಾಗಿರುತ್ತದೆ. ಆದಾಯ ಸಮರ್ಪಕವಾಗಿದ್ದರೂ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದ ಅಗತ್ಯಗಳು, ಮನೆಮಾತಿನ ಕೆಲಸಗಳು ಅಥವಾ ವೈದ್ಯಕೀಯ ವೆಚ್ಚಗಳಿಂದ ಹಣಕಾಸು ಒತ್ತಡ ಕಾಣಬಹುದು. ಆದ್ದರಿಂದ ಹಣದ ವ್ಯವಹಾರಗಳಲ್ಲಿ ಜಾಗ್ರತೆ ಮತ್ತು ಯೋಜನೆ ಮುಖ್ಯ.

ಉದ್ಯೋಗ ಕ್ಷೇತ್ರದಲ್ಲಿ ಹೊಣೆಗಾರಿಕೆ ಹೆಚ್ಚಾಗಬಹುದು. ಮೇಲಧಿಕಾರಿಗಳ ಒತ್ತಡ ಅಥವಾ ಗುರಿ ಸಾಧನೆಗಾಗಿ ಹೆಚ್ಚು ಶ್ರಮ ಬೇಕಾಗಬಹುದು. ಸಹೋದ್ಯೋಗಿಗಳೊಂದಿಗೆ ಅರ್ಥಮಾಡಿಕೊಳ್ಳುವಿಕೆ ಅಗತ್ಯ. ವ್ಯಾಪಾರಸ್ಥರು ಹೊಸ ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕು. ಆಸ್ತಿ ಅಥವಾ ದಾಖಲೆ ಸಂಬಂಧಿತ ವ್ಯವಹಾರಗಳಲ್ಲಿ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳುವುದು ಒಳಿತು.
ಕುಟುಂಬದಲ್ಲಿ ಸಣ್ಣ ಮನಸ್ತಾಪಗಳು ಸಂಭವಿಸಬಹುದು. ದಾಂಪತ್ಯ ಜೀವನದಲ್ಲಿ ಸಹನೆ ಮತ್ತು ಸಂಭಾಷಣೆ ಮುಖ್ಯ. ಸ್ನೇಹಿತರ ಸಹಾಯದಿಂದ ಒಂದು ಪ್ರಮುಖ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಜೀರ್ಣಕ್ರಿಯೆ, ಎದೆ ಅಥವಾ ಮಾನಸಿಕ ಒತ್ತಡದ ಸಮಸ್ಯೆಗಳು ಕಾಣಬಹುದು; ನಿಯಮಿತ ವಿಶ್ರಾಂತಿ ಮತ್ತು ಧ್ಯಾನ ಸಹಾಯಕ.
ಧಾರ್ಮಿಕ ಕಾರ್ಯಗಳು, ದೇವಾಲಯ ದರ್ಶನ ಅಥವಾ ಜಪ-ತಪಗಳಿಂದ ಮನಶಾಂತಿ ಲಭಿಸುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಮುಂದುವರಿದರೆ ಸಂಕಷ್ಟಗಳು ಕ್ರಮೇಣ ಕಡಿಮೆಯಾಗುತ್ತವೆ. ತಾಳ್ಮೆ, ಸಮತೋಲನ ಮತ್ತು ಯೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳು ಈ ವರ್ಷವನ್ನು ಸುಗಮಗೊಳಿಸುತ್ತವೆ. ಒಟ್ಟಾರೆ ಸವಾಲುಗಳಿದ್ದರೂ ಆತ್ಮಸ್ಥೈರ್ಯದಿಂದ ಜಯ ಸಾಧಿಸಬಹುದಾದ ಸಂವತ್ಸರ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications