Taurus Horoscope 2024: ವೃಷಭ ರಾಶಿ ವಾರ್ಷಿಕ ಭವಿಷ್ಯ: ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬಲ, ಸಂಬಂಧಗಳಲ್ಲಿ ಸಮಸ್ಯೆ!

ಹೊಸ ವರ್ಷಕ್ಕೆ ನಾವೆಲ್ಲಾ ಕಾಲಿಡುತ್ತಿದ್ದೇವೆ. 2024ನೇ ವರ್ಷ ಹೇಗಿರಲಿದೆ ಎನ್ನುವ ಬಗ್ಗೆ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಮುಂಬರುವ ವರ್ಷ ವೃಷಭ ರಾಶಿಯವರಿಗೆ ಹೇಗಿರಲಿದೆ ಎನ್ನುವುದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವಿದೆ.

ಹಾಗಾದರೆ ವೃಷಭ ರಾಶಿಯವರ ಕೌಟುಂಬಿಕ ಜೀವನ, ವೈವಾಹಿಕ ಜೀವನ, ಪ್ರೇಮ, ಶಿಕ್ಷಣ, ಉದ್ಯೋಗ, ಆರೋಗ್ಯ, ವ್ಯಾಪಾರ, ವೃತ್ತಿ, ಆರ್ಥಿಕ ಸ್ಥಿತಿ, ಸಂಪತ್ತು ಮತ್ತು ಲಾಭಗಳು, ಮಕ್ಕಳ ಭವಿಷ್ಯ, ವಾಹನ ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ತಿಳಿಯೋಣ.

Taurus Horoscope 2024 in Kannada: Vrushaba Rashi Varshika Bhavishya 2023, Vrushaba Yearly Predictions

ವೃಷಭ ರಾಶಿ ಭವಿಷ್ಯ 2024

ವೃಷಭ ರಾಶಿ ಭವಿಷ್ಯ 2024ರ ಪ್ರಕಾರ, ಗುರು ವೃಷಭ ರಾಶಿಯ ಹನ್ನೆರಡನೇ ಮನೆಯಲ್ಲಿ ಉಳಿಯುತ್ತದೆ. ಇದರಿಂದ ವೃಷಭ ರಾಶಿಯವರಿಗೆ ಹೊಸ ವರ್ಷದಲ್ಲಿ ಖರ್ಚುಗಳು ಹೆಚ್ಚಾಗುತ್ತವೆ. ಹೊಸ ವರ್ಷದಲ್ಲಿ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಮತ್ತು ಒಳ್ಳೆಯ ಕೆಲಸಗಳಲ್ಲಿ ತೊಡಗಿರುವಿರಿ. ಮೇ 1ರ ನಂತರ ಗುರು ವೃಷಭ ರಾಶಿಯಲ್ಲಿ ಸಾಗಲಿದೆ. ಆಗ ಈ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.

ಸಾಮಾಜಿಕ ಸ್ಥಾನಮಾನ

ಯೋಗಕಾರಕ ಗ್ರಹ ಶನಿ ವೃಷಭ ರಾಶಿಯ ಹತ್ತನೇ ಮನೆಯಲ್ಲಿ ವರ್ಷವಿಡೀ ಇರುವ ಕಾರಣ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ಇದಕ್ಕೆ ತಕ್ಕಂತೆ ಉತ್ತಮ ಪ್ರತಿಫಲವನ್ನು ಪಡೆಯುತ್ತೀರಿ. ಅದೃಷ್ಟದ ಬೆಂಬಕದಿಂದಾಗಿ ನಿಮ್ಮ ವೃತ್ತಿಜೀವನದಲ್ಲಿ ರಾಜಯೋಗದ ಪರಿಣಾಮವನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ರಾಹು ವರ್ಷವಿಡೀ ನಿಮ್ಮ ಹನ್ನೊಂದನೇ ಮನೆಯಲ್ಲಿ ಉಳಿಯುತ್ತದೆ. ಸಾಮಾಜಿಕವಾಗಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಸ್ನೇಹಿತರು ಮತ್ತು ಸಾಮಾಜಿಕ ವಲಯವು ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ಪ್ರೇಮ ಜೀವನ

ಈ ವರ್ಷದ ಆರಂಭದಲ್ಲಿ ವೃಷಭ ರಾಶಿಯವರ ಪ್ರೀತಿಯ ಸಂಬಂಧಗಳಲ್ಲಿ ಏರಿಳಿತಗಳು ಇರಬಹುದು. ವರ್ಷವಿಡೀ ಕೇತು ನಿಮ್ಮ ಐದನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ಪ್ರೀತಿಪಾತ್ರರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು. ಈ ನಡುವೆ ಶುಕ್ರ ಗ್ರಹ ನಿಮ್ಮ ಸಂಬಂಧವನ್ನು ಉತ್ತಮವಾಗಿಡಲು ಪ್ರಯತ್ನಿಸುತ್ತದೆ. ನಿಮ್ಮ ಸಂಬಂಧದ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳಬೇಕು.

Taurus Horoscope 2024 in Kannada: Vrushaba Rashi Varshika Bhavishya 2023, Vrushaba Yearly Predictions

ವೃತ್ತಿ ಜೀವನ

ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಲಾಭವನ್ನು ಪಡೆಯುತ್ತೀರಿ. ಈ ವರ್ಷ ಉತ್ತಮ ಪ್ರಗತಿಯ ಸಾಧ್ಯತೆಗಳಿವೆ. ಮಾರ್ಚ್ ನಿಂದ ಏಪ್ರಿಲ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು. ವರ್ಷದ ಆರಂಭದಲ್ಲಿ ವೃಷಭ ರಾಶಿಯ ಏಳನೇ ಮನೆಯಲ್ಲಿ ಬುಧ ಮತ್ತು ಶುಕ್ರ, ಹನ್ನೆರಡನೇ ಮನೆಯಲ್ಲಿ ಗುರು, ಹತ್ತನೇ ಮನೆಯಲ್ಲಿ ಶನಿ ಮತ್ತು ಹನ್ನೊಂದನೇ ಮನೆಯಲ್ಲಿ ರಾಹು ವ್ಯಾಪಾರಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಾರೆ.

ಶೈಕ್ಷಣಿಕ ಜೀವನ

ಮುಂಬರುವ ವರ್ಷದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಕೆಲವು ವಿಶೇಷ ವಿಷಯಗಳ ಮೇಲೆ ನಿಮ್ಮ ಹಿಡಿತ ಬಲಗೊಳ್ಳುತ್ತದೆ. ನಿಮ್ಮ ಕಠಿಣ ಪರಿಶ್ರಮ ಮಾತ್ರ ನಿಮ್ಮ ಕೈ ಹಿಡಿಯಲು ಸಾಧ್ಯ. ಹೀಗಾಗಿ ಹೆಚ್ಚು ಶ್ರಮ ಪಡುವುದು ಉತ್ತಮ.

ಆರ್ಥಿಕ ಜೀವನ

ವೃಷಭ ರಾಶಿಯವರು ಹೊಸ ವರ್ಷ ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತಲೇ ಇರುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವರ್ಷದ ಆರಂಭದಲ್ಲಿ ನೀವು ರಹಸ್ಯ ಹಣವನ್ನು ಗಳಿಸುವ ಅವಕಾಶಗಳನ್ನು ಪಡೆಯಬಹುದು. ಆದರೆ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ.

ಕುಟುಂಬ ಜೀವನ

ಇನ್ನೂ ಹೊಸ ವರ್ಷದಲ್ಲಿ ವೃಷಭ ರಾಶಿಯವರ ಕುಟುಂಬ ಜೀವನವನ್ನು ನೋಡಿದರೆ, ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಆದರೆ ನಿಮ್ಮ ಕುಟುಂಬದ ಹಿರಿಯರಲ್ಲಿ ಆರೋಗ್ಯ ಸಮಸ್ಯೆಗಳು ಎದುರಿಸಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

ಆರೋಗ್ಯ

ಆರೋಗ್ಯದ ದೃಷ್ಟಿಯಿಂದ ವರ್ಷದ ಆರಂಭವು ದುರ್ಬಲವಾಗಿರುತ್ತದೆ. ಐದನೇ ಮನೆಯಲ್ಲಿ ಕೇತು, ಹನ್ನೆರಡನೇ ಮನೆಯಲ್ಲಿ ಗುರು, ಎಂಟನೇ ಮನೆಯಲ್ಲಿ ಮಂಗಳ ಮತ್ತು ಸೂರ್ಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ವರ್ಷದ ಮಧ್ಯದಲ್ಲಿ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆಯ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+