Sun Transit in Nakshatra 2024: ಸೂರ್ಯನ ನಕ್ಷತ್ರ ಸಂಕ್ರಮಣ: ಆಗಸ್ಟ್ 2ರಿಂದ ಈ 3 ರಾಶಿಯವರ ಜೀವನ ಅದ್ಭುತ
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯನು ಧೈರ್ಯ, ಅಧಿಕಾರ, ಆತ್ಮ, ಗೌರವ, ಸಂತೋಷ, ಸಮೃದ್ಧಿಯ ಅಂಶವಾಗಿದೆ. ರಾಶಿಗಳಲ್ಲಿ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದೆ. ಅದು ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಹಾಗೇ ಕಾಲಕಾಲಕ್ಕೆ ನಕ್ಷತ್ರವನ್ನೂ ಬದಲಾಯಿಸುತ್ತಾನೆ.
ಸದ್ಯ ಸೂರ್ಯ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆಗಸ್ಟ್ 2 ನಂತರ ಸೂರ್ಯನು ಬುಧದ ಆಶ್ಲೇಷಾ ನಕ್ಷತ್ರಕ್ಕೆ ಹೋಗುತ್ತದೆ. ಸೂರ್ಯ ಆಶ್ಲೇಷಾ ನಕ್ಷತ್ರ ಸಂಕ್ರಮಣದಿಂದಾಗಿ ಅದರ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ.
ಆಗಸ್ಟ್ 16ರವರೆಗೆ ಸೂರ್ಯನು ಈ ಆಶ್ಲೇಷಾ ನಕ್ಷತ್ರದಲ್ಲಿ ಇರುತ್ತದೆ. ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಲ್ಲಿ ಆಶ್ಲೇಷಾ ನಕ್ಷತ್ರ 9ನೇ ನಕ್ಷತ್ರವಾಗಿದೆ. ಇದರ ಅಧಿಪತಿ ಬುಧ. ಈ ನಕ್ಷತ್ರವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಬುದ್ಧಿವಂತಿಕೆ ಮತ್ತು ಅಂತಃಪ್ರಜ್ಞೆಯ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಸೂರ್ಯನು ಆಶ್ಲೇಷಾ ನಕ್ಷತ್ರಕ್ಕೆ ಹೋಗುವುದರಿಂದ ಅದೃಷ್ಟವನ್ನು ಪಡೆಯುವ ರಾಶಿಚಕ್ರದ ಜನರು ಯಾರೆಂದು ಈಗ ನೋಡೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಸೂರ್ಯನ ಈ ನಕ್ಷತ್ರ ಸಂಕ್ರಮಣವು ತುಂಬಾ ಪ್ರಯೋಜನಕಾರಿಯಾಗಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ.
ವೃತ್ತಿಗೆ ಸಂಬಂಧಿಸಿದಂತೆ ಇದು ಉತ್ತಮ ಸಮಯವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಳವಾಗಲಿದೆ. ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯುವ ಸಾಧ್ಯತೆ ಇದೆ. ಉದ್ಯಮಿಗಳು ತಮ್ಮ ಪ್ರತಿಸ್ಪರ್ಧಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ. ಹೂಡಿಕೆಯಿಂದ ಅಧಿಕ ಲಾಭ ಸಿಗಲಿದೆ. ಬಹಳಷ್ಟು ಹಣವನ್ನು ಉಳಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ಆರೋಗ್ಯವೂ ಉತ್ತಮವಾಗಿರುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸೂರ್ಯನ ನಕ್ಷತ್ರ ಸಂಚಾರ ಶುಭಕರವಾಗಿರುತ್ತದೆ. ಮುಖ್ಯವಾಗಿ ಈ ರಾಶಿ ಜನರು ತಮ್ಮ ವೃತ್ತಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲದಿಂದಾಗಿ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ಕೆಲಸಕ್ಕೆ ಸಂಬಂಧಿಸಿ ಸಾಕಷ್ಟು ಪ್ರಯಾಣ ಮಾಡಬೇಕಾಗಬಹುದು.
ಈ ಪ್ರವಾಸ ಉತ್ತಮ ಆರ್ಥಿಕ ಲಾಭವನ್ನು ತರುತ್ತದೆ. ಜೀವನ ಸುಖಮಯವಾಗಿರುತ್ತದೆ. ಬುದ್ಧಿವಂತಿಕೆಯಿಂದ ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಸೂರ್ಯನ ಸಂಚಾರ ಅದ್ಭುತವಾಗಿರುತ್ತದೆ. ಅದಕ್ಕೂ ವೃತ್ತಿಪರವಾಗಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಹೀಗಾಗಿ ಕೆಲಸ ನಿಮಿತ್ತ ವಿದೇಶಕ್ಕೆ ತೆರಳುವ ಆಸೆ ಇದ್ದರೆ ಅದು ಈಡೇರುತ್ತದೆ. ನೀವು ಅಂದುಕೊಮಡ ಗುರಿಯನ್ನು ಸಾಧಿಸುವಿರಿ. ವ್ಯವಹಾರದಲ್ಲಿ ಯಶಸ್ವಿಯಾಗುತ್ತೀರಿ.
ನೀವು ವಿದೇಶದಿಂದ ಉತ್ತಮ ಹಣವನ್ನು ಗಳಿಸುವ ಅವಕಾಶವನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಜಂಟಿ ಉದ್ಯಮಗಳನ್ನು ಮಾಡುವ ಜನರು ಯಶಸ್ಸು ಕಾಣುವರು. ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications