Sun Moon Conjunction 2025: ಸೂರ್ಯ ಚಂದ್ರ ಸಂಯೋಗ- ಈ ರಾಶಿಯವರ ನಿಂತು ಹೋದ ಕೆಲಸ ಪುನ: ಆರಂಭ- ಅಧಿಕ ಲಾಭ
ಒಂದು ನಿಗದಿತ ಸಮಯದ ನಂತರ ಪ್ರತಿಯೊಂದು ಗ್ರಹ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತದೆ. ಎರಡು ಗ್ರಹಗಳು ಒಂದು ರಾಶಿಯಲ್ಲಿ ಒಟ್ಟಿಗೆ ನೆಲೆಗೊಂಡಾಗ ಅದನ್ನು ಸಂಯೋಗ ಎಂದು ಕರೆಯಲಾಗುತ್ತದೆ. ಗ್ರಹಗಳ ಸಂಚಾರ ರಾಶಿಗಳ ಮೇಲೆ ಆಳವಾದ ಪರಿಣಾಮ ಬೀರುವಂತೆಯೇ, ಸಂಯೋಗದಿಂದಾಗಿಯೂ ಜನರ ಜೀವನದ ಮೇಲೆ ಅದೇ ರೀತಿಯ ಪರಿಣಾಮ ಉಂಟಾಗಲಿದೆ.
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮ, ಗೌರವ, ಶಕ್ತಿಯನ್ನು ನೀಡುವವನೆಂದು ಪರಿಗಣಿಸಲಾಗುತ್ತದೆ. ಹಾಗೇಯೇ ಚಂದ್ರನನ್ನು ಮನಸ್ಸು, ಸಂತೋಷವನ್ನು ನಿಯಂತ್ರಿಸುವ ಗ್ರಹ ಎನ್ನಲಾಗುತ್ತದೆ. ಈ ಎರಡೂ ಗ್ರಹಗಳು ವೃಷಭ ರಾಶಿಯಲ್ಲಿ ಸಂಯೋಗವಾಗಲಿವೆ.
ಏಪ್ರಿಲ್ 27ರಂದು ಬೆಳಗಿನ ಜಾವ 03:38ಕ್ಕೆ ಚಂದ್ರನು ವೃಷಭ ರಾಶಿಗೆ ಸಾಗುತ್ತಾನೆ. ಅಲ್ಲಿ ಅದು ಏಪ್ರಿಲ್ 29ರಂದು ಬೆಳಗಿನ ಜಾವ 02:53ರವರೆಗೆ ಇರುತ್ತದೆ. ಹಾಗೇ ಏಪ್ರಿಲ್ 27ರಂದು ಬೆಳಗಿನ ಜಾವ ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಮಾಡಲಿದೆ. ಹೀಗೆ ವೃಷಭ ರಾಶಿಯಲ್ಲಿ ಸೂರ್ಯ ಚಂದ್ರರ ಸಂಯೋಗ ನಡೆಯಲಿದೆ. ಸೂರ್ಯ ಮತ್ತು ಚಂದ್ರರ ಸಂಯೋಗ ಶುಭ ಪರಿಣಾಮ ಬೀರುವ ಮೂರು ರಾಶಿಗಳ ಬಗ್ಗೆ ಈಗ ತಿಳಿಯೋಣ.
ರಾಶಿಗಳ ಮೇಲೆ ಸೂರ್ಯ ಚಂದ್ರ ಸಂಯೋಗ ಪರಿಣಾಮ

ಮೇಷ ರಾಶಿ
ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಸೂರ್ಯ ಮತ್ತು ಚಂದ್ರನ ಸಂಯೋಗದಿಂದ ಲಾಭವಾಗುವ ಸಾಧ್ಯತೆಯಿದೆ. ಯುವಕರು ಬುದ್ಧಿಶಕ್ತಿಯಿಂದ ಅಂದುಕೊಂಡ ಉದ್ಯೋಗ ಪಡೆಯುತ್ತಾರೆ. ಶ್ರದ್ಧೆಯಿಂದ ಅಧ್ಯಯನ ಮಾಡಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಸಾಧ್ಯತೆ ಹೆಚ್ಚು.
ಉದ್ಯೋಗದಲ್ಲಿರುವ ಜನರು ಉತ್ಸಾಹದಿಂದ ಕೆಲಸ ಮಾಡಿ ಸೈ ಎನಿಸಿಕೊಳ್ಳುತ್ತಾರೆ. ತಮ್ಮ ಬಾಸ್ ಮುಂದೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಉದ್ಯಮಿಗಳ ಜಾತಕದಲ್ಲಿ ಸಂಪತ್ತು ಗಳಿಸುವ ಸಾಧ್ಯತೆಗಳಿವೆ. ದಂಪತಿಗಳ ನಡುವೆ ಸಮಸ್ಯೆಗಳಿದ್ದರೆ, ಮಾತನಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ.

ಕರ್ಕಾಟಕ ರಾಶಿ
ಸೂರ್ಯ ಮತ್ತು ಚಂದ್ರರ ಸಂಯೋಗ ಕರ್ಕ ರಾಶಿಯ ಜನರ ಮೇಲೆ ಶುಭ ಪರಿಣಾಮ ಬೀರುತ್ತದೆ. ಯುವಕರು ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾರೆ. ಒಂಬತ್ತು ಗ್ರಹಗಳ ಆಶೀರ್ವಾದದಿಂದ ಉದ್ಯೋಗದಲ್ಲಿರುವ ಜನರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಒಂಟಿ ಜನರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಏಪ್ರಿಲ್ ತಿಂಗಳಲ್ಲಿ ಸಂಬಂಧ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ವಿವಾಹಿತರು ತಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಹಳೆಯ ಹೂಡಿಕೆಗಳಿಂದ ಉದ್ಯಮಿಗಳು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಇದಲ್ಲದೆ ಯಾವುದೇ ಕೆಲಸವು ದೀರ್ಘಕಾಲದವರೆಗೆ ಬಾಕಿ ಇದ್ದರೆ, ಅದು ಕೂಡ ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳಲಿದೆ.

ಧನು ರಾಶಿ
ಮೇಷ ಮತ್ತು ಕರ್ಕ ರಾಶಿಯವರ ಜೊತೆಗೆ, ಸೂರ್ಯ ಮತ್ತು ಚಂದ್ರರ ಸಂಯೋಗವು ಧನು ರಾಶಿಯವರ ಮೇಲೂ ಶುಭ ಪರಿಣಾಮ ಬೀರುತ್ತದೆ. ಉದ್ಯೋಗದಲ್ಲಿರುವವರ ಕೆಲಸದಿಂದ ಮೇಲಾಧಿಕಾರಿಗಳು ಸಂತೋಷಪಡುತ್ತಾರೆ.
ಏಪ್ರಿಲ್ ತಿಂಗಳಲ್ಲಿ ನಿಮ್ಮ ಸಂಬಳ ಹೆಚ್ಚಾಗುವ ನಿರೀಕ್ಷೆಯಿದೆ. ಉದ್ಯಮಿಗಳ ಜಾತಕದಲ್ಲೂ ಸಹ ಸಂಪತ್ತು ಗಳಿಸುವ ಸಾಧ್ಯತೆ ಇದೆ. ದಂಪತಿಗಳ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.












Click it and Unblock the Notifications