Sun Mars Conjunction In Libra 2023: ಸೂರ್ಯ ಮಂಗಳ ಸಂಯೋಗ: ಅ.18 ರಿಂದ ಈ ರಾಶಿಗಿದೆ ಲಕ್ಷ್ಮಿ ದೇವಿಯ ಕೃಪೆ
ಗ್ರಹಗತಿಗಳು ಬದಲಾದಂತೆಲ್ಲಾ ಹನ್ನೆರಡು ರಾಶಿಗಳ ಮೇಲೆ ಅದರ ಪರಿಣಾಮ ಬೀರುತ್ತವೆ. ಪ್ರತಿಯೊಂದು ನವಗ್ರಹಗಳು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತವೆ. ಕೆಲವೊಮ್ಮೆ ಇತರ ಗ್ರಹಗಳ ಜೊತೆಯಲ್ಲಿ ಪ್ರಯಾಣಿಸುತ್ತವೆ. ಹಾಗೆ ಸಂಚರಿಸಿದಾಗ ಎಲ್ಲ ರಾಶಿಯವರಲ್ಲೂ ಇದರ ಪ್ರಭಾವ ಕಾಣಿಸುತ್ತದೆ. ಹೀಗೆ ಅಕ್ಟೋಬರ್ 18 ರಂದು ನವಗ್ರಹಗಳ ಅಧಿಪತಿಯಾದ ಸೂರ್ಯ ಮತ್ತು ಮಂಗಳ ಒಟ್ಟಿಗೆ ಸಂಚರಿಸಲಿದ್ದಾರೆ.
ಅಕ್ಟೋಬರ್ 18 ರಂದು ಸೂರ್ಯ ಹಾಗೂ ಮಂಗಳ ರಾಶಿಯಲ್ಲಿ ಸಂಚರಿಸಲಿವೆ. ಈಗಾಗಲೇ ಅಕ್ಟೋಬರ್ ತಿಂಗಳ ಆರಂಭದಲ್ಲಿ ಮಂಗಳ ಗ್ರಹ ತುಲಾ ರಾಶಿಯನ್ನು ಪ್ರವೇಶಿಸಿದೆ. ಇದರೊಂದಿಗೆ ಅಕ್ಟೋಬರ್ 18ರಂದು ಸೂರ್ಯನು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದಾಗಿ ತುಲಾ ರಾಶಿಯಲ್ಲಿ ಸೂರ್ಯ ಮತ್ತು ಮಂಗಳ ಗ್ರಹಗಳ ಸಂಯೋಗ ಉಂಟಾಗುತ್ತದೆ.
ಸೂರ್ಯ ಮತ್ತು ಮಂಗಳ ಸ್ನೇಹಿ ಗ್ರಹಗಳಾಗಿರುವುದರಿಂದ ರಾಶಿಗಳ ಮೇಲಿನ ಇದರ ಪರಿಣಾಮ ಸ್ವಲ್ಪ ಉತ್ತಮವಾಗಿರುತ್ತದೆ. ವಿಶೇಷವಾಗಿ 3 ರಾಶಿಚಕ್ರದ ಜನರು ಈ ಸಂಯೋಜನೆಯಿಂದಾಗಿ ಹಠಾತ್ ಹಣದ ಹರಿವು ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಕನ್ಯಾ ರಾಶಿ
ಕನ್ಯಾರಾಶಿಯ 2ನೇ ಮನೆಯಲ್ಲಿ ಸೂರ್ಯನ ಮಂಗಳ ಸಂಯೋಗ ನಡೆಯಲಿದೆ. ಈ ಕಾರಣದಿಂದಾಗಿ ಕನ್ಯಾ ರಾಶಿಯವರು ಈ ಅವಧಿಯಲ್ಲಿ ಹಠಾತ್ ಹಣದ ಹರಿವನ್ನು ಪಡೆಯುತ್ತಾರೆ. ಬಹಳ ದಿನಗಳಿಂದ ಅಂಟಿಕೊಂಡಿದ್ದ ಹಣ ಕೈಗೆ ಬರಲಿದೆ. ಮಾತಿನ ಮೇಲೆ ಪ್ರಭಾವ ಹೆಚ್ಚಾಗುವುದು. ನಿಮ್ಮ ಮಾತಿನ ಮೂಲಕ ನೀವು ಅನೇಕ ವಿಷಯಗಳನ್ನು ಸಾಧಿಸುವಿರಿ. ಕಚೇರಿಯಲ್ಲಿನ ದಕ್ಷತೆಗಾಗಿ ನೌಕರರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಸಮಾಜದಲ್ಲಿ ಮೌಲ್ಯವನ್ನು ಹೆಚ್ಚಲಿದೆ. ಮಾಧ್ಯಮ ಮತ್ತು ಮಾರ್ಕೆಟಿಂಗ್ ಕ್ಷೇತ್ರದ ಜನರು ಲಾಭವನ್ನು ಪಡೆಯುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯ 3ನೇ ಮನೆಯಲ್ಲಿ ಸೂರ್ಯ ಮಂಗಳ ಸಂಯೋಗ ಸಂಭವಿಸುತ್ತದೆ. ಹೀಗಾಗಿ ಸಿಂಹ ರಾಶಿಯವರ ಧೈರ್ಯ ಮತ್ತು ಶೌರ್ಯವು ಈ ಸಂಯೋಜನೆಯ ಅವಧಿಯಲ್ಲಿ ಹೆಚ್ಚಾಗುತ್ತದೆ. ನೀವು ಶತ್ರುಗಳ ವಿರುದ್ಧ ಜಯ ಗಳಿಸುವಿರಿ. ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಮತ್ತು ಪ್ರೀತಿ ಹೆಚ್ಚಾಗುತ್ತದೆ. ವಿದೇಶಿ ಸಂಬಂಧಿತ ಕೆಲಸಗಳಿಗೆ ಈ ಅವಧಿಯು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದೆ.

ಧನು ರಾಶಿ
ಧನು ರಾಶಿಯ 11ನೇ ಮನೆಯಲ್ಲಿ ಸೂರ್ಯನ ಮಂಗಳ ಸಂಯೋಗ ನಡೆಯಲಿದೆ. ಈ ಕಾರಣದಿಂದಾಗಿ ಧನು ರಾಶಿಯವರ ಆದಾಯದಲ್ಲಿ ದೊಡ್ಡ ಏರಿಕೆಯಾಗಲಿದೆ. ಕೆಲವು ಜನರು ಹೊಸ ಆದಾಯದ ಮೂಲಗಳನ್ನು ಪಡೆಯಬಹುದು. ವಿದೇಶಕ್ಕೆ ಹೋಗಲು ಬಯಸುವವರಿಗೆ ಅವಕಾಶಗಳು ಸಿಗುತ್ತವೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ಪಡೆಯಬಹುದು. ಮಕ್ಕಳ ಮೂಲಕ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುವಿರಿ. ಷೇರುಪೇಟೆ, ಲಾಟರಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications