ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ ರಾಶಿಯವರಿಗೆ ಸಿಗುವುದು ಹೊಸ ಅವಕಾಶ, ಒಲಿದು ಬರುವುದು ಉನ್ನತ ಸ್ಥಾನಮಾನ
Aries: ಜ್ಯೋತಿಷ್ಯದ ಪ್ರಕಾರ ಸೂರ್ಯನು ಆತ್ಮವಿಶ್ವಾಸ, ನಾಯಕತ್ವ, ಚೈತನ್ಯ ಮತ್ತು ಜೀವನ ದಿಕ್ಕನ್ನು ಪ್ರತಿನಿಧಿಸುತ್ತಾನೆ. ಸೂರ್ಯನು ರಾಶಿಯನ್ನು ಬದಲಾಯಿಸಿದಾಗ, ಇದನ್ನು ಸೂರ್ಯ ಸಂಚಾರ ಅಥವಾ ಸೂರ್ಯ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನ ಸಂಚಾರ ಅಥವಾ ರಾಶಿ ಪರಿವರ್ತನೆ ಸಾಮೂಹಿಕ ಶಕ್ತಿಯನ್ನು ಬದಲಾಯಿಸುತ್ತದೆ. ಇದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ, ಪರಿಸ್ಥಿತಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಮೇಲೆಯೂ ಪ್ರಭಾವ ಬೀರುತ್ತದೆ.
ಸೂರ್ಯನು ಮೇಷ ರಾಶಿಯಲ್ಲಿರುವಾಗ ವಿಶೇಷವಾಗಿ ಶಕ್ತಿಶಾಲಿಯಾಗಿರುತ್ತಾನೆ. ಯಾಕೆಂದರೆ ಮೇಷ ರಾಶಿಯ ಅಧಿಪತಿ ಮಂಗಳ. ಮೇಷ, ರಾಶಿಚಕ್ರದ ಮೊದಲ ರಾಶಿಯಾಗಿದೆ. ಇದು ಹೊಸ ಆರಂಭ, ಉಪಕ್ರಮ ಮತ್ತು ಧೈರ್ಯವನ್ನು ಸಂಕೇತಿಸುತ್ತದೆ. ಹಾಗಾಗಿ ಸೂರ್ಯ ಮೇಷ ರಾಶಿಯಲ್ಲಿರುವ ಅವಧಿಯು ಎಲ್ಲಾ ದ್ವಾದಶ ರಾಶಿಗಳಿಗೂ ಬಹಳ ಮುಖ್ಯವಾಗಿರುತ್ತದೆ.

ಮೇಷ ರಾಶಿ
Aries: ಸೂರ್ಯ ಇದೇ ರಾಶಿಯಲ್ಲಿ ಇರುವುದರಿಂದ ನೀವು ಹೆಚ್ಚು ಕ್ರಿಯಾಶೀಲರಾಗಿ ಇರುತ್ತೀರಿ. ಹೆಚ್ಚು ನಿರ್ಣಾಯಕ, ಮಹತ್ವಾಕಾಂಕ್ಷೆಯ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿರುತ್ತೀರಿ. ಯಾವ ಕೆಲಸದಲ್ಲಿಯೂ ಹಿಂಜರಿಕೆ ಇರುವುದಿಲ್ಲ. ತಮ್ಮ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಮುಖ ನಿರ್ಧಾರ ಮಾಡುವಿರಿ. ನಿಮ್ಮ ನಿರ್ಧಾರದ ಮೇಲೆ ಅಚಲ ನಂಬಿಕೆಯಿರುವುದು. ಧೈರ್ಯದಿಂದ ಮುಂದುವರೆಯುವಿರಿ. ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳಲು ಹೊಸ ಅವಕಾಶಗಳು ಸಿಗುವುದು.
ಪರಿಹಾರ : ಪ್ರತಿ ದಿನ ಬೆಳಿಗ್ಗೆ ಸೂರ್ಯನಿಗೆ ನೀರು ಅರ್ಪಿಸಿ. ನೀವು ಏನು ಮಾಡಬೇಕು ಅಂದುಕೊಂಡಿರುವಿರೋ ಆ ಕೆಲಸ ಮಾಡಿ ಮುಗಿಸುವ ನಿರ್ಧಾರ ಮಾಡಿಕೊಳ್ಳಿ.
ವೃಷಭ ರಾಶಿ
ಮೇಷ ರಾಶಿಯಲ್ಲಿನ ಸೂರ್ಯ ಸಂಚಾರವು ವೃಷಭ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆತ್ಮಾವಲೋಕನ ಮತ್ತು ಹೊಸ ಆರಂಭಗಳಿಗೆ ಸಿದ್ಧತೆ ಮಾಡಿಕೊಳ್ಳುವಿರಿ. ಆತುರಪಡುವ ಬದಲು ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆಗ ಹೊಸ ಕೆಲಸ ಆರಂಭಿಸಬಹುದು. ಮನಸ್ಸಿನ ಗೊಂದಲವನ್ನು ನಿವಾರಿಸಲು ಧ್ಯಾನ ಮಾಡುವುದು ಅಥವಾ ದಿನಚರಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಮಿಥುನ ರಾಶಿ
ಸಾಮಾಜಿಕ ಚಟುವಟಿಕೆ ಹೆಚ್ಚಾಗುವುದು. 2026ರಲ್ಲಿನ ಸೂರ್ಯ ಹೊಸ ಸ್ನೇಹ, ಸಹಯೋಗ ಮತ್ತು ದೀರ್ಘಾವಧಿಯ ಗುರಿಗಳನ್ನು ಬೆಂಬಲಿಸುವನು. ಪಾಲುದಾರಿಕೆಯಲ್ಲಿ ಮಾಡುವ ಕೆಲಸಕ್ಕೆ ಯಶಸ್ಸು ಸಿಗುವುದು. ಸಮಾನ ಮನಸ್ಸಿನ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ. ಒಳ್ಳೆಯ ಕೆಲಸಗಳ ಕುರಿತ ಚರ್ಚೆಗಳಲ್ಲಿ ಭಾಗವಹಿಸಿ.
ಕರ್ಕಾಟಕ ರಾಶಿ
ವೃತ್ತಿಜೀವನದ ಬೆಳವಣಿಗೆ ಒಂದು ಪ್ರಮುಖ ವಿಷಯವಾಗುತ್ತದೆ. ಸೂರ್ಯ ಸಂಚಾರವು ನಾಯಕತ್ವದ ಅವಕಾಶಗಳನ್ನು ಒದಗಿಸುತ್ತದೆ. ನಿಮ್ಮ ಕೆಲಸಕ್ಕೆ ಮಾತಿಗೆ ಮನ್ನಣೆ ಸಿಗುವುದು. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗುವುದು. ವೃತ್ತಿಪರ ನಿರ್ಧಾರಗಳತ್ತ ಗಮನಹರಿಸಿ. ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಿ.
ಸಿಂಹ ರಾಶಿ
ಸೂರ್ಯ ಸಂಚಾರದಿಂದ ಸಿಂಹ ರಾಶಿಯವರ ಉತ್ಸಾಹ, ಸೃಜನಶೀಲತೆ ಮತ್ತು ಸಾಹಸ ಪ್ರವೃತ್ತಿ ಹೆಚ್ಚಾಗುವುದು. ಪ್ರಯಾಣ, ಕಲಿಕೆ ಅಥವಾ ಹೊಸ ಅನುಭವಗಳು ಅಭಿವೃದ್ಧಿಗೆ ಕಾರಣವಾಗುವುದು. ನಿಮ್ಮ ಪರಿಧಿಯನ್ನು ವಿಸ್ತರಿಸಲು ಇದು ಉತ್ತಮ ಸಮಯ. ಹೊಸದನ್ನು ಕಲಿಯಲು ಅಥವಾ ವಿಭಿನ್ನ ದೃಷ್ಟಿಕೋನವನ್ನು ಅನ್ವೇಷಿಸಲು ಪ್ರಯತ್ನಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರ ಜೀವನದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗುವುದು. ಹಣಕಾಸು ಯೋಜನೆ ಮತ್ತು ವೈಯಕ್ತಿಕ ಬೆಳವಣಿಗೆ ಮುಖ್ಯವಾಗುತ್ತದೆ. ಹಣವನ್ನು ಉಳಿಸುವ ಕ್ರಮವನ್ನು ಪಾಲಿಸಿ. ದೀರ್ಘಕಾಲೀನ ಸ್ಥಿರತೆಯತ್ತ ಗಮನಹರಿಸಿ.
ತುಲಾ ರಾಶಿ
ಹೊಸ ಪಾಲುದಾರಿಕೆಗೆ ಅವಕಾಶ ಸಿಗಬಹುದು. ಅಸ್ತಿತ್ವದಲ್ಲಿರುವ ಸಂಬಂಧಗಳಲ್ಲಿ ಸ್ಪಷ್ಟತೆ ಸಿಗುವುದು. ಮಾತುಕತೆ ಮತ್ತು ಯಾವ ರೀತಿ ನಿಮ್ಮ ಮಾತು ಇರುವುದು ಎನ್ನುವುದು ಇಲ್ಲಿ ಬಹಳ ಮುಖ್ಯ. ಮುಕ್ತ ಸಂವಹನವನ್ನು ಅಭ್ಯಾಸ ಮಾಡಿಕೊಳ್ಳಿ. ತಕ್ಷಣ ಪ್ರತಿಕ್ರಿಯಿಸುವ ಅಭ್ಯಾಸವನ್ನು ಬಿಟ್ಟು ಬಿಡಿ.
ವೃಶ್ಚಿಕ ರಾಶಿ
ಸೂರ್ಯ ಸಂಚಾರ ವೃಶ್ಚಿಕ ರಾಶಿಯವರ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ದೈನಂದಿನ ದಿನಚರಿಯ ಮೇಲೆ ಗಮನ ಹರಿಸಿ. ಮೇಷ ರಾಶಿಯಲ್ಲಿರುವ ಸೂರ್ಯ ಶಿಸ್ತು ಮತ್ತು ಸ್ವಯಂ ಸುಧಾರಣೆಯನ್ನು ಪ್ರೋತ್ಸಾಹಿಸುತ್ತಾನೆ. ಆರೋಗ್ಯಕರ ಅಭ್ಯಾಸ ಅಥವಾ ರಚನಾತ್ಮಕ ದಿನಚರಿಯನ್ನು ಪ್ರಾರಂಭಿಸಿ.
ಧನು ರಾಶಿ
ಸೂರ್ಯ ಸಂಚಾರದ ಸಮಯದಲ್ಲಿ ಧನು ರಾಶಿಯವರಿಗೆ ಸೃಜನಶೀಲತೆ ಮತ್ತು ಪ್ರಣಯ ಹೆಚ್ಚಾಗುತ್ತದೆ. ಇದು ಸ್ಫೂರ್ತಿ ಮತ್ತು ಸ್ವಯಂ ಅಭಿವ್ಯಕ್ತಿಗೆ ಅವಕಾಶಗಳಿಂದ ತುಂಬಿದ ಸಂತೋಷದಾಯಕ ಹಂತವಾಗಿದೆ. ಸೃಜನಶೀಲ ಚಟುವಟಿಕೆಗಳು ಅಥವಾ ಹವ್ಯಾಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ.
ಮಕರ ರಾಶಿ
ಮಕರ ರಾಶಿಯವರು ಮನೆ, ಕುಟುಂಬ ಮತ್ತು ಭಾವನಾತ್ಮಕ ಭದ್ರತೆಯ ಮೇಲೆ ಗಮನ ಹರಿಸಬಹುದು. ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಾಯವಾಗುವುದು. ಕುಟುಂಬದೊಂದಿಗೆ ಸಮಯವನ್ನು ಕಳೆಯಿರಿ ಅಥವಾ ನಿಮ್ಮ ವಾಸಸ್ಥಳವನ್ನು ಅಚ್ಚು ಕಟ್ಟಾಗಿ ಇಟ್ಟುಕೊಳ್ಳಿ.
ಕುಂಭ ರಾಶಿ
ಮೇಷ ರಾಶಿಯಲ್ಲಿನ ಸೂರ್ಯ ಸಂಚಾರವು ಹೊಸ ಆಲೋಚನೆಗಳನ್ನು ಹುಟ್ಟಿ ಹಾಕುತ್ತದೆ. ಸಣ್ಣ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ನಿಮ್ಮ ಮನಸ್ಸಿನ ವಿಚಾರಗಳನ್ನು ಬರೆದಿಟ್ಟುಕೊಳ್ಳಿ ಮತ್ತು ಉತ್ಪಾದಕ ಸಂಭಾಷಣೆಗಳ ಮೇಲೆ ಕಾರ್ಯನಿರ್ವಹಿಸಿ.
ಮೀನ ರಾಶಿ
ಸೂರ್ಯ ಸಂಚಾರ ಮೀನ ರಾಶಿಯವರು ಹಣಕಾಸು ಮತ್ತು ಸ್ವ-ಮೌಲ್ಯದ ಮೇಲೆ ಗಮನ ಹರಿಸಬಹುದು. ಪ್ರಾಯೋಗಿಕ ಯೋಜನೆ ಮತ್ತು ವೈಯಕ್ತಿಕ ಮೌಲ್ಯದಲ್ಲಿ ವಿಶ್ವಾಸ ಹೆಚ್ಚಾಗುವುದು. ಹಣಕಾಸಿನ ಗುರಿಗಳನ್ನು ಹೊಂದಿಸಿ ಮತ್ತು ಹಠಾತ್ ಖರ್ಚು ಮಾಡುವುದನ್ನು ತಪ್ಪಿಸಿ.
ಈ ಸೂರ್ಯ ಸಂಚಾರವು ಯಾವುದಕ್ಕೆ ಸೂಕ್ತವಾಗಿದೆ?
* ಹೊಸ ಯೋಜನೆಗಳನ್ನು ಪ್ರಾರಂಭಿಸುವುದು
* ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು
* ವೈಯಕ್ತಿಕ ಗುರಿಗಳನ್ನು ಅನುಸರಿಸುವುದು
* ನಾಯಕತ್ವ ವಹಿಸಿಕೊಳ್ಳುವುದು
* ಸೂರ್ಯ ಸಂಚಾರದಿಂದಾಗಿ ಮೇಷ ರಾಶಿಯ ಶಕ್ತಿಯು ಪ್ರತಿಯೊಬ್ಬರನ್ನು ನಿರ್ಭಯವಾಗಿ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications