Sravana Masa 2024: ಶುರುವಾಗಿದೆ ಶ್ರಾವಣ ಮಾಸ.. ಈ 6 ರಾಶಿಯವರಿಗೆ ಹಣದ ಆಗಮನ..
ಧಾರ್ಮಿಕ ಗ್ರಂಥಗಳ ಪ್ರಕಾರ ಶ್ರಾವಣ ಮಾಸವನ್ನು ಅತ್ಯಂತ ಮಂಗಳಕರ ಮಾಸವೆಂದು ಪರಿಗಣಿಸಲಾಗಿದೆ. ಈ ತಿಂಗಳು ವಿಶೇಷವಾಗಿ ಶಿವನಿಗೆ ಮಂಗಳಕರವೆನ್ನಲಾಗುತ್ತದೆ. ಶ್ರಾವಣ ಮಾಸ ಜುಲೈ 22ರಂದು ಆರಂಭವಾಗಿದೆ ಆಗಸ್ಟ್ 19ರಂದು ಕೊನೆಗೊಳ್ಳುತ್ತದೆ.
ಶಿವನ ಭಕ್ತರು ಈ ಅವಧಿಯಲ್ಲಿ ದೇವಾಲಯಗಳು ಮತ್ತು ಮನೆಗಳಲ್ಲಿ ಪೂಜೆಗಳನ್ನು ಮಾಡುತ್ತಾರೆ. ತಮ್ಮ ಜೀವನದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಗಾಗಿ ಶಿವನನ್ನು ಪ್ರಾರ್ಥಿಸುತ್ತಾರೆ. ಈ 6 ರಾಶಿಗಳ ಜೀವನದಲ್ಲಿ ಶಿವನು ಉದ್ಯೋಗಾವಕಾಶಗಳು ಮತ್ತು ಹಣ ಸೇರಿದಂತೆ ಎಲ್ಲಾ ಸಂಪತ್ತನ್ನು ನೀಡುತ್ತಾನೆ. ಹಾಗಾದರೆ ಈ ರಾಶಿಗಳಲ್ಲಿ ಯಾವ ರಾಶಿಯವರು ಶ್ರಾವಣ ಮಾಸದಲ್ಲಿ ಅದೃಷ್ಟವನ್ನು ಪಡೆಯಲಿದ್ದಾರೆ ಎಂದು ತಿಳಿಯೋಣ.

ವೃಷಭ ರಾಶಿ
ಈ ಶ್ರಾವಣ ಮಾಸ ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ವೃಷಭ ರಾಶಿ ಅವರ ಸಂತೋಷ ಹೆಚ್ಚಾಗುತ್ತದೆ. ಧನಲಾಭ ಪ್ರಾಪ್ತಿಯಾಗಲಿದೆ. ಸಾಮಾಜದಲ್ಲಿ ಮೆಚ್ಚುಗೆ ಹೆಚ್ಚಲಿದೆ. ಶಿವನ ಕೃಪೆಯಿಂದ ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಬಯಸಿದ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ.

ಸಿಂಹ ರಾಶಿ
ಶ್ರಾವಣ ಮಾಸ ಸಿಂಹ ರಾಶಿಯವರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ. ಹಳೆಯ ಹೂಡಿಕೆಗಳು ನಿಮಗೆ ಲಾಭವನ್ನು ತರುತ್ತವೆ. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಉತ್ತಮ ಆದಾಯ ಪಡೆಯುವ ನಿರೀಕ್ಷೆ ಇದೆ. ನವ ವಿವಾಹಿತರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಶ್ರಾವಣ ಮಾಸ ಅದೃಷ್ಟದ ಮಾಸವಾಗಲಿದೆ. ವ್ಯಾಪಾರದಲ್ಲಿ ವೃದ್ಧಿಯಾಗುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ಬಡ್ತಿ ಸಿಗಲಿದೆ. ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಇತರರಿಗಿಂತ ಮೊದಲು ನಿಮ್ಮನ್ನು ಗೌರವಿಸಲಾಗುತ್ತದೆ.

ತುಲಾ ರಾಶಿ
ಈ ಶ್ರಾವಣ ಮಾಸ ಈ ತುಲಾ ರಾಶಿಯವರಿಗೆ ಉತ್ತಮ ಮಾಸವಾಗಲಿದೆ.. ಶಿವ ಮತ್ತು ಪಾರ್ವತಿಯ ಆಶೀರ್ವಾದದಿಂದ ತುಲಾ ರಾಶಿ ಅವರು ಸಂತೋಷ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ.

ಧನು ರಾಶಿ
ಧನು ರಾಶಿಯವರ ವೃತ್ತಿಜೀವನ ವಿಸ್ತಾರವಾಗಲಿದೆ. ಈ ವರ್ಷ ಶ್ರಾವಣ ಮಾಸದಲ್ಲಿ ಅದೃಷ್ಟ ಹೆಚ್ಚಲಿದೆ. ಕೆಲಸದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ಮಕರ ರಾಶಿ
ಶ್ರಾವಣ ಮಾಸದಲ್ಲಿ ಮಕರ ರಾಶಿಯ ಅಶುಭಗಳು ದೂರವಾಗಿ ನಾನಾ ರೀತಿಯ ಲಾಭಗಳು ಸಿಗಲಿವೆ. ಮುಂಬರುವ ದಿನಗಳಲ್ಲಿ ವ್ಯಾಪಾರ ವ್ಯವಹಾರ ಮಾಡುವವರು ಯಶಸ್ವಿಯಾಗುತ್ತಾರೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ. ಮಕ್ಕಳ ಮೂಲಕ ಸಂತೋಷದ ಸಂಗತಿಗಳು ನಡೆಯುತ್ತವೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications