ಶ್ರಾವಣದಲ್ಲಿ ಎರಡು ಗ್ರಹಣ: ಶಿವ ಪೂಜೆ, ಉಪವಾಸದ ಮೇಲಾಗುವ ಪರಿಣಾಮವೇನು? ಅನುಸರಿಸಬೇಕಾದ ಮುನ್ನೆಚ್ಚರಿಕೆ ಯಾವುವು?
ಬೆಂಗಳೂರು: ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ವರ್ಷ ಆಗಸ್ಟ್ ೧೩ ರಿಂದ ಆರಂಭವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ತಿಂಗಳು ಶಿವನ ಆರಾಧನೆ, ಜಲಾಭಿಷೇಕ, ರುದ್ರಾಭಿಷೇಕ ಮತ್ತು ಶ್ರಾವಣ ಸೋಮವಾರದ ಉಪವಾಸಕ್ಕೆ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಶಿವನ ಭಕ್ತರು ಈ ತಿಂಗಳು ಪೂರ್ತಿ ಶಿವನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ. ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಮನಸ್ಸಿನ ಆಸೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಈ ವರ್ಷ, ಶ್ರಾವಣ ಮಾಸದಲ್ಲಿ ಎರಡು ಪ್ರಮುಖ ಖಗೋಳ ಘಟನೆಗಳು ನಡೆಯಲಿವೆ. ಹೌದು, ಶ್ರಾವಣ ಮಾಸದ ಆರಂಭದಲ್ಲಿಯೇ ಗ್ರಹಣ ಗೋಚರಿಸಲಿದೆ. ಸೂರ್ಯಗ್ರಹಣವಾಗಿ ೧೫ ದಿನಗಳ ಅಂತರದಲ್ಲಿ ಚಂದ್ರ ಗ್ರಹಣವೂ ಗೋಚರಿಸುವುದರಿಂದ ಈ ಬಾರಿ ಎರಡೂ ಗ್ರಹಣಗಳು ಶ್ರಾವಣ ಮಾಸದಲ್ಲಿ ಘಟಿಸುತ್ತದೆ.
ಸೂರ್ಯ ಮತ್ತು ಚಂದ್ರ ಗ್ರಹಣಗಳು ಯಾವಾಗ ಸಂಭವಿಸುತ್ತವೆ? ಮತ್ತು ಶ್ರಾವಣ ಮಾಸದ ಆಚರಣೆಗಳ ಮೇಲೆ ಈ ಗ್ರಹಣಗಳು ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವುದನ್ನು ನೋಡೊಣ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ 12, 2026ರ ಅಮಾವಾಸ್ಯೆಯಂದು ಸೂರ್ಯಗ್ರಹಣ ಗೋಚರಿಸಿದರೆ ಆಗಸ್ಟ್ 28, 2026 ರಂದು ಚಂದ್ರಗ್ರಹಣ ಸಂಭವಿಸುತ್ತದೆ. ಗ್ರಹಣವನ್ನು ಯಾವತ್ತೂ ಶುಭ ಎಂದು ಪರಿಗಣಿಸುವುದಿಲ್ಲ. ಇನ್ನು ಶ್ರಾವಣ ಮಾಸದಲ್ಲಿ ಪೂಜೆ, ಪುನಸ್ಕಾರಗಳು ಹೆಚ್ಚಾಗಿಯೇ ನಡೆಯುತ್ತವೆ. ಹಾಗಾಗಿ ಈ ಗ್ರಹಣಗಳು ಶ್ರಾವಣ ಮಾಸದ ಉಪವಾಸಗಳು, ಪ್ರಾರ್ಥನೆಗಳು ಮತ್ತು ಶಿವನ ಆರಾಧನೆಯ ಮೇಲೆ ಪರಿಣಾಮ ಬೀರುತ್ತವೆಯೇ ಎನ್ನುವುದು ಸದ್ಯಕ್ಕೆ ಜನರನ್ನು ಕಾಡುವ ಪ್ರಶ್ನೆಯಾಗಿರುತ್ತದೆ.
ಭಾರತದಲ್ಲಿ ಪರಿಣಾಮ ಬೀರುತ್ತದೆಯೇ?
ಜ್ಯೋತಿಷಿಗಳ ಪ್ರಕಾರ, ಈ ವರ್ಷ ಸಂಭವಿಸುವ ಎರಡೂ ಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ. ಶಾಸ್ತ್ರಗಳ ಪ್ರಕಾರ, ಭಾರತದಲ್ಲಿ ಗೋಚರಿಸದ ಗ್ರಹಣಕ್ಕೆ ಸೂತಕ ಅವಧಿ ಮಾನ್ಯವಾಗಿರುವುದಿಲ್ಲ. ಆದರೆ, ಗ್ರಹಣದ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು. ಮತ್ತೊಂದೆಡೆ, ಈ ಗ್ರಹಣಗಳು ಧಾರ್ಮಿಕ ಆಚರಣೆಗಳು, ದೇವಾಲಯ ಪೂಜಾ ವ್ಯವಸ್ಥೆಗಳು, ಜಲಾಭಿಷೇಕ, ರುದ್ರಾಭಿಷೇಕ ಅಥವಾ ನಮ್ಮಲ್ಲಿ ಆಚರಿಸುವ ಶ್ರಾವಣ ಸೋಮವಾರದ ಉಪವಾಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ದೇವಾಲಯದ ಬಾಗಿಲುಗಳು ತೆರೆದಿರುತ್ತವೆ
ಆಗಸ್ಟ್ 12 ರಂದು ಸೂರ್ಯ ಗ್ರಹಣವು ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. ಆದರೆ, ಆಗಸ್ಟ್ 28 ರಂದು ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ, ಭಕ್ತರು ಯಾವುದೇ ಹಿಂಜರಿಕೆಯಿಲ್ಲದೆ ಶಿವನಿಗೆ ತಮ್ಮ ನಿಯಮಿತ ಪೂಜೆ, ಅಭಿಷೇಕ ಮತ್ತು ಉಪವಾಸವನ್ನು ಮಾಡಬಹುದು. ದೇವಾಲಯದ ಬಾಗಿಲುಗಳು ಎಂದಿನಂತೆ ತೆರೆದಿರುತ್ತವೆ ಮತ್ತು ಎಲ್ಲಾ ಧಾರ್ಮಿಕ ಚಟುವಟಿಕೆಗಳು ಎಂದಿನಂತೆ ಮುಂದುವರಿಯುತ್ತವೆ.
ಧಾರ್ಮಿಕ ಗ್ರಂಥಗಳು ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ನಿರ್ದಿಷ್ಟ ನಿಯಮಗಳನ್ನು ಉಲ್ಲೇಖಿಸುತ್ತವೆ. ಆದರೆ ಈ ನಿಯಮಗಳು ಪ್ರಾಥಮಿಕವಾಗಿ ಗ್ರಹಣ ಗೋಚರಿಸುವ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತವೆ. ಭಾರತದಲ್ಲಿ, ಗ್ರಹಣವು ಅಗೋಚರವಾಗಿರುವುದರಿಂದ, ಯಾವುದೇ ಸೂತಕ ಅವಧಿಯೂ ಇರುವುದಿಲ್ಲ. ಹಾಗಾಗಿ ಯಾವುದೇ ರೀತಿಯ ಧಾರ್ಮಿಕ ನಿರ್ಬಂಧಗಳು ಅನ್ವಯಿಸುವುದಿಲ್ಲ.
ಶಿವನನ್ನು ಪೂಜಿಸುವುದು ಅತ್ಯಂತ ಶುಭಕರ
ಶ್ರಾವಣ ಮಾಸ ಪೂರ್ತಿ ಶಿವನನ್ನು ಪೂಜಿಸಲು ಅತ್ಯಂತ ಶುಭಕರವಾಗಿರುತ್ತದೆ. ಭಕ್ತರು ಸೋಮವಾರದಂದು ಶೃದ್ಧಾ ಭಕ್ತಿಯಿಂದ ಉಪವಾಸ ಆಚರಿಸಬೇಕು. ಶಿವಲಿಂಗಕ್ಕೆ ನೀರು, ಹಾಲು, ಬಿಲ್ವಪತ್ರೆ ಮತ್ತು ಧಾತುರಾವನ್ನು ಅರ್ಪಿಸಬೇಕು. ಶಿವ ಪೂಜೆಯ ಸಮಯದಲ್ಲಿ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ. ಇದು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ತರುತ್ತದೆ.


Click it and Unblock the Notifications
