Shukra Gochara: ಇಂದಿನಿಂದ ಈ ರಾಶಿಯವರಿಗೆ ಅದೃಷ್ಟ: ಎಲ್ಲದರಲ್ಲೂ ಯಶಸ್ಸು, ಹಣ ಸಂಪತ್ತು ಯೋಗ
Shukra Gochara in Tula: ಜ್ಯೋತಿಷ್ಯದ ಪ್ರಕಾರ ಶುಕ್ರ ಪ್ರೀತಿ, ಸಂಬಂಧಗಳು, ಸೌಂದರ್ಯ, ಆಕರ್ಷಣೆ ಮತ್ತು ವೈವಾಹಿಕ ಜೀವನದ ಸುಖಕ್ಕೆ ಕಾರಣ. ಹಾಗಾಗಿ ಶುಕ್ರನ ರಾಶಿ ಬದಲಾವಣೆ ಪ್ರೀತಿ, ಮದುವೆ ಮತ್ತು ಸಂಬಂಧಗಳ ವಿಷಯಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿರುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶುಕ್ರ ಸೆಪ್ಟೆಂಬರ್ 2 ರಂದು ಅಂದರೆ ಇವತ್ತು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಇದೇ ರಾಶಿಯಲ್ಲಿ ನವೆಂಬರ್ 5 ರವರೆಗೆ ಇರಲಿದ್ದಾನೆ.
ತುಲಾ ರಾಶಿ ಶುಕ್ರನ ಸ್ವಂತ ರಾಶಿ (Shukra Gochara in Tula). ತುಲಾ ರಾಶಿಯ ಅಧಿಪತ್ಯ ಶುಕ್ರನದ್ದೇ. ಇದರಿಂದಾಗಿ ಈ ಬಾರಿಯ ಶುಕ್ರ ಸಂಚಾರ ಬಹಳ ಮುಖ್ಯ ಮತ್ತು ವಿಶೇಷ. ಜ್ಯೋತಿಷಿಗಳ ಪ್ರಕಾರ, ಶುಕ್ರನು ತನ್ನ ಸ್ವಂತ ರಾಶಿಯಾದ ತುಲಾ ರಾಶಿಗೆ ಬಂದಾಗ ಮಹಾಪುರುಷ ರಾಜಯೋಗ ರೂಪುಗೊಳ್ತಾ ಇದೆ. ಇದರಿಂದ ಸಂಪತ್ತು, ವೈಭವ ಮತ್ತು ಐಶ್ವರ್ಯ ಹೆಚ್ಚಾಗುವುದು. ಸಾಮಾಜಿಕ ಗೌರವ-ಪ್ರತಿಷ್ಠೆ ಹೆಚ್ಚಾಗುವುದು. ಸಂಬಂಧಗಳು ಸುಧಾರಿಸುವುದು.

ಮಹಾಪುರುಷ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ (Mahapurusha Yoga):
ವೃಷಭ ರಾಶಿ (Taurus): Shukra Gochara in Tula
ವೃಷಭ ರಾಶಿಯ ಅಧಿಪತಿ ಕೂಡಾ ಶುಕ್ರ. ಹಾಗಾಗಿ ಶುಕ್ರ ಅಂಚಾರದಿಂದ ಈ ರಾಶಿಯವರಿಗೆ ಶುಭ ಫಲಗಳು ಸಿಗುವುದು. ಭೂಮಿ, ಮನೆ ಅಥವಾ ವಾಹನ ಖರೀದಿಸುವ ಯೋಗವಿದೆ. ಮನಸ್ಸಿನ ಆಸೆಗಳು ಈಡೇರುವುದು. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುವುದು. ಬಡ್ತಿ ಸಿಗಬಹುದು ಅಥವಾ ಹೊಸ ಕೆಲಸ ಸಿಗಬಹುದು. ಎದುರಾಗಿರುವ ತೊಂದರೆಗಳು ನಿವಾರಣೆಯಾಗಲಿವೆ. ವ್ಯಾಪಾರ-ವಹಿವಾಟು ವಿಸ್ತರಿಸುವ ಯೋಗವಿದೆ.
ಮಿಥುನ ರಾಶಿ (Gemini)
ಮಿಥುನ ರಾಶಿಯವರ ಕನಸು ನನಸಾಗುವ ಕಾಲ ಇದು. ಗುರಿ ತಲುಪುವಲ್ಲಿ ಯಶಸ್ವಿಯಾಗುವಿರಿ. ಪ್ರಭಾವಿ ವ್ಯಕ್ತಿ ಭೇಟಿಯಿಂದ ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಉದ್ಯೋಗಿಗಳಿಗೆ ಪ್ರಮೋಷನ್ ಸಿಗುವುದರ ಜೊತೆಗೆ ಆದಾಯ ಹೆಚ್ಚಾಗಲಿದೆ. ಯವುದೇ ಕೆಲಸ ಶುರು ಮಾಡಿದರೂ ಯಶಸ್ಸು ಸಿಗುವುದು. ಮಾನಸಿಕ ನೆಮ್ಮದಿ ಹೆಚ್ಚಾಗುವುದು. ಹಣಕಾಸಿನ ಲಾಭವಾಗುವುದು. ಆದಾಯ ಗಳಿಕೆಗೆ ಹೊಸ ಅವಕಾಶ ಸಿಗುವುದು.
ಧನು ರಾಶಿ (Sagittarius)
ಧನು ರಾಶಿಯ 11 ನೇ ಮನೆಯಲ್ಲಿ ಶುಕ್ರ ಸಂಚಾರ ನಡೆಯಲಿದೆ. ಶುಕ್ರನ ಪ್ರಭಾವದಿಂದ ಆಕಸ್ಮಿಕ ಧನಲಾಭವಾಗಬಹುದು. ಹೊರಗೆ ಉಳಿದಿದ್ದ ಹಣ ಮತ್ತೆ ಕೈ ಸೇರುವುದು. ಗೌರವ-ಪ್ರತಿಷ್ಠೆ ಹೆಚ್ಚಾಗುವುದು. ಉದ್ಯೋಗಸ್ಥರಿಗೆ ಹೊಸ ಹೊಸ ಅವಕಾಶಗಳು ಸಿಗುವುದು. ವಿದೇಶಕ್ಕೆ ಹೋಗುವ ಅವಕಾಶವೂ ಸಿಗಬಹುದು. ಆತ್ಮವಿಶ್ವಾಸ ಹೆಚ್ಚಾಗುವುದು. ಪ್ರೇಮ ಸಂಬಂಧಗಳು ಸುಧಾರಿಸುವುದು.
ಮಕರ ರಾಶಿ (Capricorn)
ಮಕರ ರಾಶಿಯವರ 10ನೇ ಮನೆಗೆ ಶುಕ್ರನ ಪ್ರವೇಶ ಆಗ್ತಾ ಇದೆ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ನಿಮ್ಮ ಮಾತಿನ ಮೂಲಕ ಎದುರಿಗಿರುವವರನ್ನು ಆಕರ್ಷಿಸುವಿರಿ.
ವೃಶ್ಚಿಕ ರಾಶಿ (Scorpio)
ತುಲಾ ರಾಶಿಯ 12 ನೇ ಮನೆಯಲ್ಲಿ ಶುಕ್ರನ ಸಂಚಾರ ಇರುವುದು. ಈ ಸಮಯದಲ್ಲಿ ಕೆಲವು ಅಚ್ಚರಿ ನಿಮ್ಮ ಜೀವನದಲ್ಲಿ ನಡೆಯಬಹುದು. ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುವುದು. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ವ್ಯಾಪಾರ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.
ಶುಕ್ರನ ಕೃಪೆ ಪಡೆಯಲು ಏನು ಮಾಡಬೇಕು
ಜಾತಕದಲ್ಲಿ ಶುಕ್ರನ ಸ್ಥಾನವನ್ನು ಬಲಪಡಿಸಲು ಶುಕ್ರವಾರ ಮೊಸರು ದಾನ ಮಾಡಬೇಕು. ಶುಕ್ರವಾರ ಉಪವಾಸ ಮಾಡುವುದರಿಂದ ಶುಕ್ರನ ಶುಭ ಪ್ರಭಾವ ಹೆಚ್ಚಾಗುವುದು. ಶುಕ್ರವಾರ ಲಕ್ಷ್ಮೀ ದೇವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸುವುದರಿಂದಲೂ ಹೆಚ್ಚಿನ ಶುಕ್ರನ ಅಶುಭ ಫಲ ಕಡಿಮೆಯಾಗುವುದು.


Click it and Unblock the Notifications
