Shasha, Malavya Yoga 2024: ವಿಜಯದಶಮಿಯಂದು 2 ರಾಜಯೋಗಗಳು: ಈ ರಾಶಿಗೆ ಕೋಟ್ಯಾಧಿಪತಿಯಾಗುವ ಯೋಗ
ಒಂಬತ್ತು ದಿನಗಳ ಪೂಜೆಯ ನಂತರ ಬರುವ ಈ ವಿಜಯದಶಮಿ ಹಬ್ಬ ಬಹಳ ವಿಶೇಷವಾಗಿದೆ. ಈ ಬಾರಿಯ ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 12 ರಂದು ಆಚರಿಸಲಾಗುತ್ತದೆ. ಈ ದಿನ ಎರಡು ಮಂಗಳಕರ ಯೋಗಗಳು ರೂಪಗೊಳ್ಳುತ್ತವೆ. ಒಂದು ಶಶರಾಜಯೋಗ ಮತ್ತೊಂದು ಮಾಲವ್ಯ ರಾಜಯೋಗ. ವಿಜಯದಶಮಿಯಂದು ರೂಪಗೊಳ್ಳುವ ಈ ಯೋಗಗಳ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀಳಲಿದೆ.
ಸುಮಾರು 30 ವರ್ಷಗಳ ನಂತರ ಈ ಯೋಗಗಳು ರೂಪಗೊಳ್ಳುತ್ತಿವೆ. ಈ ಎರಡು ರಾಜಯೋಗಗಳ ಪ್ರಭಾವ ಎಲ್ಲ ರಾಶಿಯವರಲ್ಲೂ ಕಂಡು ಬಂದರೂ ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ. ಅಂದಹಾಗೆ ಶನಿ ಕುಂಭರಾಶಿಯಲ್ಲಿ ಶಶರಾಜಯೋಗವನ್ನು ಸೃಷ್ಟಿಸಿದರೆ, ಶುಕ್ರ ತುಲಾ ರಾಶಿಯಲ್ಲಿ ಮಾಲವ್ಯ ರಾಜಯೋಗವನ್ನು ರೂಪಿಸುತ್ತಾನೆ. ಹಾಗಾದರೆ ಈ ಯೋಗಗಳಿಂದ ಯಾವ ರಾಶಿಯವರ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯೋಣ.

ವೃಷಭ ರಾಶಿ
ಶಶ ರಾಜಯೋಗ ಮತ್ತು ಮಾಲವ್ಯ ರಾಜಯೋಗ ವೃಷಭ ರಾಶಿಯವರಿಗೆ ದಸಾರ ಹಬ್ಬದಿಂದ ಸಾಕಷ್ಟು ಸೌಲಭ್ಯವನ್ನು ಒದಗಿಸಲಿದೆ. ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ. ಸಂಬಂಧಿಕರು ಒಂದಾಗುವ ಸಮಯವಿದು. ಮನೆಯಲ್ಲಿ ಸಂಪತ್ತು ದಾಂಡವ ಆಡುತ್ತದೆ. ದುರ್ಗಾ ದೇವಿಯ ಆಶೀರ್ವಾದಿಂದ ವೃಷಭ ರಾಶಿಯವರ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಇದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಎಲ್ಲಾ ಆಸೆಗಳು ಈಡೇರುತ್ತವೆ. ವೃಷಭ ರಾಶಿಯವರ 10ನೇ ಮನೆಯಲ್ಲಿ ಶನಿ ದೇವನಿದ್ದು, ಶುಕ್ರನು 6ನೇ ಮನೆಯಲ್ಲಿರುತ್ತಾನೆ. ಇದು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ನೀಡುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅಂದುಕೊಂಡ ಫಲಿತಾಂಶಗಳನ್ನು ಪಡೆಯುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಶಶ ರಾಜಯೋಗ ಮತ್ತು ಮಾಲವ್ಯ ರಾಜಯೋಗ ಮಂಗಳಕರ ಫಲ ನೀಡಲಿದೆ. ತುಲಾ ರಾಶಿಯವರಿಗೆ ಶ್ರೀಮಂತಿಗೆ ಹೆಚ್ಚಾಗಲಿದೆ. ಧನದೇವತೆ ಒಲಿಯಲಿದ್ದಾಳೆ. ದುರ್ಗಾ ದೇವಿಯ ಅನುಗ್ರಹವನ್ನು ನೀವು ಪಡೆಯುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಬ್ಬದ ತಯಾರಿಯಲ್ಲಿ ಇರುವ ಈ ರಾಶಿಯವರಿಗೆ ದಸರಾ ಆನಂದವನ್ನು ನೀಡುತ್ತದೆ.
ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಹಣಕಾಸಿನ ಸ್ಥಿತಿಯಲ್ಲಿ ಅನಿರೀಕ್ಷಿತ ಸುಧಾರಣೆ ಕಂಡುಬರಲಿದೆ. ಈ ಸಮಯದಲ್ಲಿ ಸಾಲದಿಂದ ಮುಕ್ತರಾಗುವಿರಿ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಕೆಲಸ ಸಿಗುತ್ತದೆ. ಪ್ರೇಮಿಗಳಿಗೆ ಅದ್ಭುತ ಸಮಯ ಇದಾಗಿದೆ. ಮನೆಯಲ್ಲಿ ನಿಮ್ಮ ಪ್ರೇಮದ ಬಗ್ಗೆ ಪ್ರಸ್ತಾಪ ಮಾಡಬಹುದು. ದಾಂಪತ್ಯ ಜೀವನ ಮಧುರವಾಗಿರುತ್ತದೆ. ತುಲಾ ರಾಶಿಯವರ 5ನೇ ಮನೆಯಲ್ಲಿ ಶನಿ ಮತ್ತು 1 ನೇ ಶುಕ್ರ ಮನೆಯಲ್ಲಿ ಸಾಗಲಿದೆ.

ಮಕರ ರಾಶಿ
ಶಶ ರಾಜಯೋಗ ಮತ್ತು ಮಾಲವ್ಯ ರಾಜಯೋಗ ಮಕರ ರಾಶಿಯವರಿಗೆ ಉತ್ತಮವಾಗಿದೆ. ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುತ್ತವೆ. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಆರ್ಥಿಕ ಸ್ಥಿತಿಯಲ್ಲಿ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣಲಿವೆ. ವ್ಯಾಪಾರಿಗಳಿಗೆ ಧನಲಾಭ ದೊರೆಯಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ.
ಶತ್ರುಗಳ ಕಾಟ ದೂರವಾಗಲಿದೆ. ಸಮಸ್ಯೆಗಳು ದೂರವಾಗಲಿವೆ. ಕೊಟ್ಟ ಸಾಲ ವಾಪಸ್ ಬರಲಿದೆ. ಹಣ ಸಂಪಾದನೆಗೆ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನಿಮಗೆ ಸಾಧಿಸುವ ಅವಕಾಶ ಸಿಗಲಿದೆ. ಶ್ರಮಕ್ಕೆ ತಕ್ಕ ಫಲ ಪಡೆಯುವ ಸಮಯವಿದು. ಶನಿಯು ಮಕರ ರಾಶಿ 2ನೇ ಮನೆಯಲ್ಲಿ ಮತ್ತು ಶುಕ್ರ 10 ನೇ ಮನೆಯಲ್ಲಿ ಸಾಗಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications